ವಿರಾಜಪೇಟೆ ಫೆ.8 : ವಿರಾಜಪೇಟೆ ಸಂತ ಅನ್ನಮ್ಮ ಪ್ರೌಢ ಶಾಲೆಯ ಎನ್.ಸಿ. ಸಿ ಹಾಗೂ ಇಕೋ ಕ್ಲಬ್ ಘಟಕದ ವಿದ್ಯಾರ್ಥಿಗಳು ಮೈಸೂರು ಜಿಲ್ಲೆಯ ಬೆಟ್ಟದ ಪುರದ ಬೆಟ್ಟಕ್ಕೆ ಚಾರಣವನ್ನು ಮಾಡಿದರು.
ಚಾರಣಕ್ಕೆ ಸಂತ ಅನ್ನಮ್ಮ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕರಾದ ರೆ. ಫಾ. ಐಸಾಕ್ ರತ್ನಕರ್ ರವರು ಆಶೀರ್ವಾದ ಮಾಡುವುದರ ಮೂಲಕ ಚಾಲನೆಯನ್ನು ನೀಡಿ ಶುಭ ಹಾರೈಸಿದರು. ಸಂತ ಅನ್ನಮ್ಮ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ಬೆನ್ನಿ ಜೋಸೆಫ್ ವಿದ್ಯಾರ್ಥಿಗಳಿಗೆ ಶುಭ ಕೋರಿದರು. ಒಟ್ಟು 52 ವಿದ್ಯಾರ್ಥಿಗಳು ಭಾಗವಹಿಸಿದ್ದ ಈ ಚಾರಣದಲ್ಲಿ ಬೆಟ್ಟದಪುರದ ಬೆಟ್ಟವನ್ನು 3, 600 ಮೆಟ್ಟಿಲುಗಳನ್ನು ಹತ್ತುವುದರ ಮೂಲಕ ವಿದ್ಯಾರ್ಥಿಗಳು ತಲುಪಿದರು. ಮತ್ತು ಚೋಳ ರಾಜ ವಂಶಸ್ಥರ ಕಾಲದ ಪ್ರಾಚೀನ ಸ್ಥಳಗಳ ಮಾಹಿತಿಯನ್ನು ಪಡೆದರು. ಹಾಗೂ ಬೆಟ್ಟದಲ್ಲಿ ಸ್ವಚ್ಛತಾ ಕಾರ್ಯವನ್ನು ನಡೆಸಿದರು. ಈ ಸಂದರ್ಭದಲ್ಲಿ ಎನ್.ಸಿ.ಸಿ. ಅಧಿಕಾರಿ ಅಬ್ದುಲ್ ಮುನೀರ್ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.










