ಮಡಿಕೇರಿ ಫೆ.9 : ಮಡಿಕೇರಿಯಿಂದ ಮೇಕೇರಿ ಮೂಲಕ ವಿರಾಜಪೇಟೆಗೆ ಹಾದು ಹೋಗುವ ಹೆದ್ದಾರಿ ಬದಿಯಲ್ಲಿ ಪ್ರತಿನಿತ್ಯ ಕಸದ ರಾಶಿ ಕಂಡು ಬರುತ್ತಿತ್ತು. ಇದರಿಂದ ಎಚ್ಚೆತ್ತುಕೊಂಡ ಮಡಿಕೇರಿ ನಗರಸಭೆ ಕಸ ವಿಲೇವಾರಿಗೊಳಿಸಿ, ಕಸ ಹಾಕಿದವರನ್ನು ಪತ್ತೆ ಹಚ್ಚಿ ದಂಡ ವಿಧಿಸಿದೆ.
ಚೀಲ ಮತ್ತು ಬಾಕ್ಸ್ಗಳಲ್ಲಿ ತ್ಯಾಜ್ಯ ತುಂಬಿಕೊoಡು ವಾಹನಗಳಲ್ಲಿ ತಂದು ರಸ್ತೆಯ ಬದಿಯಲ್ಲೇ ಕಸ ಸುರಿಯಲಾಗುತ್ತಿತ್ತು. ಮೆಡಿಕಲ್ ತ್ಯಾಜ್ಯ, ಮಾಂಸದ ಅಂಗಡಿಯ ತ್ಯಾಜ್ಯ, ಹೊಟೇಲ್‌ನ ಹಳಸಿದ ಆಹಾರ, ಪ್ಲಾಸ್ಟಿಕ್, ತಿಂಡಿ ಪೊಟ್ಟಣಗಳು, ಹಳೇ ಬಟ್ಟೆಗಳು ಸೇರಿದಂತೆ ಹಲವು ಬಗೆಯ ತ್ಯಾಜ್ಯ ಇಲ್ಲಿ ಪ್ರತಿನಿತ್ಯ ಕಂಡು ಬರುತ್ತಿತ್ತು.
ಗುರುವಾರ ಬೆಳಗ್ಗೆ 8 ಗಂಟೆಯಿAದಲೇ ನಗರಸಭೆಯ ಸಿಬ್ಬಂದಿಗಳು ಹಾಗೂ ಪೌರಕಾರ್ಮಿಕರು ರಸ್ತೆ ಬದಿಯ ತ್ಯಾಜ್ಯವನ್ನು ಶುಚಿಗೊಳಿಸಿ ಟ್ರಾö್ಯಕ್ಟ್ಟರ್ ಮೂಲಕ ವಿಲೇವಾರಿಗೊಳಿಸಿದರು. ಕೆಲವು ಕಸ ಚೀಲಗಳಲ್ಲಿ ಇದ್ದ ಅಂಗಡಿ ಬಿಲ್, ವಿದ್ಯುತ್ ಬಿಲ್, ಆನ್‌ಲೈನ್ ಆರ್ಡರ್‌ಗಳ ರಶೀದಿ, ಕೆಲ ಹೋಂಸ್ಟೇಗಳಿಗೆ ಸೇರಿದ ವಿಸಿಟಿಂಗ್ ಕಾರ್ಡ್ಗಳು, ಬಿಲ್ ಬುಕ್‌ಗಳ ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನಾಧರಿಸಿ ಕಸ ಹಾಕುತ್ತಿದ್ದವರನ್ನು ಪತ್ತೆ ಮಾಡಲಾಯಿತು. ಸ್ಥಳಕ್ಕೆ ಬರಮಾಡಿಕೊಂಡು 2 ಸಾವಿರ ರೂ. ದಂಡವನ್ನು ವಿಧಿಸಲಾಯಿತು.
22 ನೇ ವಾರ್ಡ್ ಸದಸ್ಯೆ ಸಬಿತಾ ಹಾಗೂ ನಗರಸಭೆ ಸಿಬ್ಬಂದಿಗಳು ಕಸ ಹಾಕುತ್ತಿರುವವರ ಕುರಿತು ಪಕ್ಕದಲ್ಲೇ ಇರುವ ಮೇಕೇರಿ ಗ್ರಾಮ ಪಂಚಾಯತ್‌ಗೆ ಮಾಹಿತಿ ನೀಡಿದರು.












