ಮಡಿಕೇರಿ ಫೆ.23 : ಸೋಮವಾರಪೇಟೆ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನೆಯಲ್ಲಿ 3 ಅಂಗನವಾಡಿ ಕಾರ್ಯಕರ್ತೆಯರು, 12 ಅಂಗನವಾಡಿ ಸಹಾಯಕಿಯರ ಹುದ್ದೆಯನ್ನು ಭರ್ತಿ ಮಾಡಲು ಭೌತಿಕವಾಗಿ (ಅಪ್ ಲೈನ್) ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ/ಸಹಾಯಕಿಯರ ಹುದ್ದೆಯನ್ನು ಭರ್ತಿ ಮಾಡಲು ಅಂಗನವಾಡಿ ಕೇಂದ್ರಗಳಿಗೆ ಅರ್ಜಿಯನ್ನು ಭೌತಿಕವಾಗಿ (ಆಫ್-ಲೈನ್) ಮೂಲಕ ಆಹ್ವಾನಿಸಿ ಪ್ರಕಟಣೆ ಹೊರಡಿಸಲಾಗಿದೆ.
ಅಂಗನವಾಡಿ ಕಾರ್ಯಕರ್ತೆ ಹುದ್ದೆ ಖಾಲಿ ಇರುವ ಕೇಂದ್ರದ ಹೆಸರು: ನಂಜರಾಯ ಪಟ್ಟಣ ಗ್ರಾ.ಪಂ. ನಂಜರಾಯಪಟ್ಟಣ, ನಾಕೂರು ಶಿರಂಗಾಲ ಗ್ರಾ.ಪಂ.ಕಾನ್‍ಬೈಲ್ ಬೈಚನಳ್ಳಿ(ಮಿನಿ) ಮತ್ತು ಶಾಂತಳ್ಳಿ ಗ್ರಾ.ಪಂ. ಅಬ್ಬಿಮಠ ಬಾಚಳ್ಳಿ
ಅಂಗನವಾಡಿ ಸಹಾಯಕಿಯರ ಹುದ್ದೆ ಖಾಲಿ ಇರುವ ಕೇಂದ್ರದ ಹೆಸರು: ಗೌಡಳ್ಳಿ, ಅವರೆದಾಳು, ಕಿತ್ತೂರು, ಲಖನಿ, ಮೂವತ್ತೋಕ್ಲು, ಸೂರ್ಲಬ್ಬಿ, ಕೂಡ್ಲೂರು ಚೆಟ್ಟಳ್ಳಿ, ನಿಡ್ತಕೊಪ್ಪಲು, ಹೊಸಗುತ್ತಿಹೊಸಳ್ಳಿ, ಮೂದ್ರವಳ್ಳಿ, ಶನಿವಾರಸಂತೆಯ ಗುಂಡುರಾವ್ ಬಡಾವಣೆ 2 ಹಾಗೂ ಕುಶಾಲನಗರ ಪುರಸಭೆ ವ್ಯಾಪ್ತಿಯ ಬೈಚನಳ್ಳಿ.
ಆಫ್-ಲೈನ್ ಮೂಲಕ ಅರ್ಜಿ ಸಲ್ಲಿಸಲು ಮಾರ್ಚ್, 24 ಕೊನೆಯ ದಿನವಾಗಿದೆ. ಕಾರ್ಯಕರ್ತೆ ಹುದ್ದೆಗೆ ಪಿಯುಸಿ ತೇರ್ಗಡೆ ಹಾಗೂ ಸಹಾಯಕಿ ಹುದ್ದೆಗೆ ಎಸ್‍ಎಸ್‍ಎಲ್‍ಸಿ ತೇರ್ಗಡೆ ಹೊಂದಿರಬೇಕು. 19 ರಿಂದ 35 ವರ್ಷ ವಯೋಮಿತಿಯೊಳಗಿರುವ ಹೆಣ್ಣು ಮಕ್ಕಳು ಹಾಗೂ ಮಹಿಳಾ ಲಿಂಗತ್ವ ಅಲ್ಪಸಂಖ್ಯಾತರು ಹಾಗೂ ಅಂಗನವಾಡಿ ಕೇಂದ್ರಕ್ಕೆ ಒಳಪಟ್ಟ ಗ್ರಾಮ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಮಹಿಳಾ ಅಭ್ಯರ್ಥಿಗಳು ಮಾತ್ರ ಅರ್ಹರಾಗಿರುತ್ತಾರೆ.
ಅಂಗವಿಕಲ ಅಭ್ಯರ್ಥಿಗಳಿಗೆ ಕಾರ್ಯಕರ್ತೆ ಹುದ್ದೆಗೆ ಅರ್ಜಿ ಸಲ್ಲಿಸಲು ವಯೋಮಿತಿಯಲ್ಲಿ 10 ವರ್ಷಗಳ ಸಡಿಲಿಕೆ ಇರುತ್ತದೆ. ದೈಹಿಕ ಅಂಗವಿಕಲತೆಯ ಪ್ರಮಾಣವು ಶೇ.40 ಕ್ಕಿಂತ ಅಧಿಕವಿರಬಾರದು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿಯನ್ನು ಶಿಶು ಅಭಿವೃದ್ಧಿ ಯೋಜನಾ ಕಚೇರಿ ಸೋಮವಾರಪೇಟೆ ಇಲ್ಲಿ ಪಡೆದುಕೊಳ್ಳಬಹುದು. ಅರ್ಜಿಯನ್ನು ಭರ್ತಿ ಮಾಡಿ ಶಿಶು ಅಭಿವೃದ್ಧಿ ಯೋಜನಾ ಕಚೇರಿ, ಸೋಮವಾರಪೇಟೆ ಇಲ್ಲಿಗೆ ಕಚೇರಿ ವೇಳೆಯಲ್ಲಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಸೋಮವಾರಪೇಟೆ ಶಿಶು ಅಭಿವೃದ್ಧಿ ಯೋಜನಾ ಕಚೇರಿ 08276-282281 ದೂರವಾಣಿ ಸಂಖ್ಯೆಯನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಸೋಮವಾರಪೇಟೆ ಶಿಶು ಅಭಿವೃಧಿ ಯೋಜನಾಧಿಕಾರಿ ಅಣ್ಣಯ್ಯ ಅವರು ತಿಳಿಸಿದ್ದಾರೆ.















