ಮಡಿಕೇರಿ ಮೇ 25 : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಪುತ್ತೂರು ವಿಭಾಗ ಶಿಶಿಕ್ಷು ಅಧಿನಿಯಮ 1961 ರನ್ವಯ ಪೂರ್ಣ ಅವಧಿಯ ತಾಂತ್ರಿಕ ವೃತ್ತಿಯಲ್ಲಿ ತರಬೇತಿ ಪಡೆಯಲು ಇಚ್ಚಿಸುವ ಅಭ್ಯರ್ಥಿಗಳಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಪುತ್ತೂರು ವಿಭಾಗದಿದ ಮೆಕ್ಯಾನಿಕಲ್ ಡೀಸೆಲ್, ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್, ಎಲೆಕ್ಟ್ರೀಷಿಯನ್, ಮೋಟಾರ್ ಮೆಕ್ಯಾನಿಕ್ ವೆಹಿಕಲ್, ವೆಲ್ಡರ್, ಫಿಟ್ಟರ್ ಈ ಶಿಶಿಕ್ಷು ವೃತ್ತಿ ತರಬೇತಿಗೆ ಅರ್ಹ ಅಭ್ಯರ್ಥಿಗಳಿಂದ ಸಂದರ್ಶನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಜೂ. 8 ರಂದು ನೇರ ಸಂದರ್ಶನ ನಡೆಯಲಿದೆ.
ಐಟಿಐ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳಿಗೆ ನಿಯೋಜನೆಗೆ ಬಾಕಿ ಇರುವ ಖಾಲಿ ಸ್ಥಾನಗಳ ವಿವರ: ಮೆಕ್ಯಾನಿಕಲ್ ಡೀಸೆಲ್ (43 ಸ್ಥಾನ), ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್ (10 ಸ್ಥಾನ), ಎಲೆಕ್ಟ್ರೀಷಿಯನ್(20 ಸ್ಥಾನ), ಮೋಟಾರ್ ಮೆಕ್ಯಾನಿಕ್ ವೆಹಿಕಲ್ (19 ಸ್ಥಾನ), ವೆಲ್ಡರ್(05 ಸ್ಥಾನ), ಫಿಟ್ಟರ್(5 ಸ್ಥಾನ), ಪಾಸಾ(10 ಸ್ಥಾನ). ತರಬೇತಿ ಅವಧಿ ಒಂದು ವರ್ಷ ಆಗಿದೆ.
ಎಸ್ಸೆಸ್ಸೆಲ್ಸಿ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳಿಗೆ ನಿಯೋಜನೆಗೆ ಬಾಕಿ ಇರುವ ಖಾಲಿ ಸ್ಥಾನಗಳ ವಿವರ: ಮೆಕ್ಯಾನಿಕ್ ಡೀಸೆಲ್(32 ಸ್ಥಾನ), ತರಬೇತಿ ಅವಧಿ 2 ವರ್ಷ ಆಗಿದೆ.
ಅರ್ಜಿಯನ್ನು ಆಯೋಗದ ಅಂತರ್ಜಾಲ www.apprenticeshipindia.org ನಲ್ಲಿ ಆನ್‍ಲೈನ್ ಮೂಲಕ ನೋಂದಣಿ ಮಾಡುವುದು ಹಾಗೂ ನೋಂದಣಿ ಪ್ರತಿ ಸಲ್ಲಿಸುವುದು(ನೋಂದಣಿ ಪ್ರತಿ ಸಲ್ಲಿಸದೇ ಇರುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು).
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು www.apprenticeshipindia.org ನ ಹೋಮ್ ಪೇಜ್ ನಲ್ಲಿ ರಿಜಿಸ್ಟ್ರೇಷನ್-ಕ್ಯಾಂಡಿಡೇಟ್ ರಿಜಿಸ್ಟ್ರೇಷನ್‍ನಲ್ಲಿ ವಿವರವನ್ನು ಕಡ್ಡಾಯವಾಗಿ ನಮೂದಿಸುವುದು. ನಂತರ ಇ-ಮೇಲ್‍ನಲ್ಲಿ ಆಕ್ಟ್ರಿವೇಷನ್ ಮಾಡಿದ ನಂತರ ಇ-ಮೇಲ್ ಯೂಸರ್ ಐಡಿ ಮತ್ತು ಇ-ಮೇಲ್ ಪಾಸ್‍ವರ್ಡ್-ಲಾಗಿನ್ ಪಾಸ್‍ವರ್ಡ್ ಆಗಿರುತ್ತದೆ. ಲಾಗಿನ್ ಆದ ನಂತರ ಕ್ಯಾಂಡಿಡೇಟ್ ಡ್ಯಾಸ್‍ಬೋರ್ಡ್ ನಲ್ಲಿ ವಿವರ ನಮೂದಿಸುವುದು. ಪೂರ್ಣ ವಿವರ ನಮೂದಿಸಿ, ಸಂಬಂಧಿಸಿದ ದಾಖಲಾತಿಗಳನ್ನು ಅಪ್‍ಡೇಟ್ ಮಾಡಿ ತಮ್ಮ ಪ್ರೊಪೈಲ್‍ಗಳನ್ನು ಶೇ.100 ಪೂರ್ಣಗೊಳಿಸಿ ಅಂತಹ ಅರ್ಜಿಯನ್ನು ಮಾತ್ರ ಪರಿಗಣಿಸಲಾಗುವುದು. ಅಪೂರ್ಣ ವಿವರಗಳುಳ್ಳ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ.
ಶಿಶಿಕ್ಷುಗಳ ಆನ್‍ಲೈನ್ ನೊಂದಣಿಗೆ ಆಧಾರ್ ಕಾರ್ಡ್ ಹಾಗೂ ಎಸ್ಸೆಸ್ಸೆಲ್ಸಿ ಅಂಕಪಟ್ಟಿ ವಿವರಗಳು(ಹೆಸರು, ಹುಟ್ಟಿದ ದಿನಾಂಕ, ಪೋಷಕರ ಹೆಸರು) ಒಂದಕ್ಕೊಂದು ತಾಳೆಯಾಗಬೇಕು. ಇಲ್ಲವಾದಲ್ಲಿ ಆನ್‍ಲೈನ್ ನೋಂದಣಿಯಲ್ಲಿ ಅಡಚಣೆ ಉಂಟಾದರೆ ಸಂಸ್ಥೆ ಯಾವುದೇ ರೀತಿಯ ಹೊಣೆಗಾರಿಕೆ ಹೊಂದುವುದಿಲ್ಲ. ಅಭ್ಯರ್ಥಿಗಳು ರಿಜಿಸ್ಟ್ರೇಷನ್ ನಂತರ ತಮ್ಮ ಲಾಗಿನ್‍ನಲ್ಲಿ ಇ-ಕೆವೈಸಿ ಪೂರ್ಣಗೊಳಿಸುವುದು ಕಡ್ಡಾಯವಾಗಿದೆ ಮತ್ತು ಬ್ಯಾಂಕ್ ಡೀಟೈಲ್ಸ್‍ನ್ನು ಅಪಡೇಟ್ ಮಾಡಬೇಕಾಗಿದೆ.
ಶಿಶಿಕ್ಷುಗಳ ಕಾಯಿದೆ 1961 ರನ್ವಯ ಈಗಾಗಲೇ ಶಿಶಿಕ್ಷು ತರಬೇತಿ ಪಡೆದಿರುವವರು ಅರ್ಜಿ ಸಲ್ಲಿಸಲು ಅರ್ಹರಲ್ಲ. ಒಂದು ವೇಳೆ ಅಂತಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಲ್ಲಿ, ಅವರ ವಿರುದ್ದ ಪೊಲೀಸ್ ಮೊಕದ್ದಮೆ ದಾಖಲಿಸಲಾಗುವುದು. ಮೀಸಲಾತಿ ಪರಿಶಿಷ್ಟ ಜಾತಿ 1:8, ಪರಿಶಿಷ್ಟ ಪಂಗಡ 1:20, ಅಂಗವಿಕಲ ಪ್ರತಿ ಶತ 03 ಮತ್ತು ಮಾಜಿ ಸೈನಿಕ ಮಕ್ಕಳಿಗೆ ಪ್ರತಿಶತ 03 ನೀಡಲಾಗುವುದು. 2023 ರ ಮೇ, 19 ಕ್ಕೆ 18 ವರ್ಷ ತುಂಬಿರಬೇಕು. ಈಗಾಗಲೇ ಶಿಶಿಕ್ಷು ತರಬೇತಿ ಪಡೆದಿರುವವರು ಅರ್ಜಿ ಸಲ್ಲಿಸಲು ಅರ್ಹರಲ್ಲ.
‘ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಆಧಾರ್ ಕಾರ್ಡ್ ಪ್ರತಿ-2, ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ-2, ಆಧಾರ್ ನಂಬರ್ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಬಗ್ಗೆ ಸಂಬಂಧಿಸಿದ ಬ್ಯಾಂಕ್‍ನಿಂದ ದೃಢೀಕರಣ ಪತ್ರ, ಇ-ಮೇಲ್ ಐಡಿ, ವಿದ್ಯಾರ್ಹತೆಯ ಮೂಲ ದಾಖಲಾತಿ ಮತ್ತು ಜೆರಾಕ್ಸ್ ಪ್ರತಿ ಹಾಗೂ ಜಾತಿ ಪ್ರಮಾಣ ಮತ್ತು ಮೂಲ ಪ್ರತಿಯೊಂದಿಗೆ ವಿಭಾಗೀಯ ನಿಯಂತ್ರಣಾಧಿಕಾರಿ, ಕರಾರಸಾಸಂ ನಿಗಮ, ವಿಭಾಗೀಯ ಕಚೇರಿ, ಪುತ್ತೂರು ವಿಭಾಗ, ಮುಕ್ರಂಪಾಡಿ, ದರ್ಬೆ ಅಂಚೆ, ಪುತ್ತೂರು, ದ.ಕ.ಜಿಲ್ಲೆ ಇಲ್ಲಿ ನೇರ ಸಂದರ್ಶನಕ್ಕೆ ಜೂ.8 ರಂದು ಹಾಜರಾಗುವಂತೆ ಪುತ್ತೂರು ವಿಭಾಗದ ಕ.ರಾ.ರ.ಸಾ.ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.’ ಹೆಚ್ಚಿನ ಮಾಹಿತಿಗೆ ಕೆಎಸ್‍ಆರ್‍ಟಿಸಿ ಮಡಿಕೇರಿ ಘಟಕದ ದೂ.ಸಂ.7760990817 ನ್ನು ಸಂಪರ್ಕಿಸಬಹುದು.
Breaking News
- *ವೀರ ಸೇನಾನಿಗಳನ್ನು ಅವಮಾನಿಸಿದವರನ್ನು ಗಡಿಪಾರು ಮಾಡದಿದ್ದರೆ ಕೊಡಗು ಬಂದ್ : ಜಬ್ಬೂಮಿ ಸಂಘಟನೆ ಎಚ್ಚರಿಕೆ*
- *ಹೊದ್ದೂರಿನ ಕಬ್ಬಡಕೇರಿ ಗ್ರಾಮದಲ್ಲಿ ಸ್ವಚ್ಛತಾ ಶ್ರಮದಾನ*
- *ಕೊಡಗು ಕೃಷಿ ವಿಜ್ಞಾನ ವೇದಿಕೆಯ ಬೆಳ್ಳಿ ಮಹೋತ್ಸವ : ನ.26 ರಂದು ರೈತ ಮೇಳ*
- *ಡಿ.1 ರಂದು ಗಾಳಿಬೀಡುವಿನಲ್ಲಿ ಬಾಣೆ ಹಬ್ಬ*
- *ನ.26 ರಂದು ಮಡಿಕೇರಿಯಲ್ಲಿ ಜಿಕೀರ್, ಜಾರಿ ಮತ್ತು ನಾತೆ-ರಸುಲ್” ಗಾಯನ*
- *ವಿಶ್ವಾಸ್ ವೆಂಕಟ್ ಗೆ ಟೇಬಲ್ ಟೆನ್ನಿಸ್ ನಲ್ಲಿ ರನ್ನರ್ ಪ್ರಶಸ್ತಿ*
- *ದೇಶ ದ್ರೋಹದ ಪ್ರಕರಣ ದಾಖಲಿಸಲು ಕೆ.ಜಿ.ಬೋಪಯ್ಯ ಆಗ್ರಹ*
- *ಬಿಜೆಪಿ, ಜೆಡಿಎಸ್ ಗೆ ಜನ ತಕ್ಕ ಪಾಠ ಕಲಿಸಿದ್ದಾರೆ : ಎಂ.ಎ.ಕಲೀಲ್ ಬಾಷ*
- *ಕೆವಿ ಎನ್ಸಿಸಿ ಕೆಡೆಟ್ ಗಳಿಂದ ಕಾಯ೯ಪ್ಪ ಪ್ರತಿಮೆ ಸ್ವಚ್ಛತೆ*
- *ಸೋಮವಾರಪೇಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಸಂಭ್ರಮಾಚರಣೆ*