ಮಡಿಕೇರಿ ಮೇ : 30 ಚೆನೈನ ಕೇಂದ್ರೀಯ ಪಿಂಚಣಿ ಕಾರ್ಯಾಲಯದ ವತಿಯಿಂದ ನಗರದ ಮೈತ್ರಿ ಪೊಲೀಸ್ ಭವನದಲ್ಲಿ ಸ್ಪರ್ಶ್‍ಗೆ ವರ್ಗಾಯಿಸಲ್ಪಟ್ಟ ಮಿಲಿಟರಿ ಪಿಂಚಣಿ ಪಡೆಯುವ ಮಾಜಿ ಸೈನಿಕರು/ ಕುಟುಂಬ ಪಿಂಚಣಿದಾರರ ಕುಂದುಕೊರತೆ ನಿವಾರಣಾ ಕಾರ್ಯಕ್ರಮವು ಮಂಗಳವಾರ ನಡೆಯಿತು. ಹಾಗೂ ಈ ಕಾರ್ಯಕ್ರಮವು ಮೇ 31 ರಂದು ಕೂಡ ನಡೆಯಲಿದೆ.
ಬೆಂಗಳೂರು ಡಿಪಿಡಿಒ ವಿ.ಭುವನೇಶ್ವರಿ ಅವರು ಸ್ಪರ್ಶ್ ಹಾಗೂ ಸ್ಪರ್ಶ್‍ಗೆ ವರ್ಗಾಯಿಸಲ್ಪಟ್ಟ ಮಿಲಿಟರಿ ಪಿಂಚಣಿದಾರರು ಎದುರಿಸುತ್ತಿರುವ ಕುಂದುಕೊರತೆಗಳ ಕುರಿತು ಹಾಗೂ ಅವುಗಳ ನಿವಾರಣೆ ಕುರಿತು ಈ ಕಾರ್ಯಕ್ರಮದಲ್ಲಿ ಕೈಗೊಳ್ಳುವ ಕ್ರಮದ ಕುರಿತು ವಿವರಿಸಿದರು.
ಲೇ ಕರ್ನಲ್ ಕಿರಣ್ ಕುಮಾರ್ ಗೆಡೇಲಾ ಡಿಎಸ್‍ಸಿ ಕಣ್ಣೂರು, ಮೇಜರ್ ಬಾಲಸುಬ್ರವ್ಮಣ್ಯಂ, ಜಂಟಿ ನಿರ್ದೇಶರು, ಸೈನಿಕ ಕಲ್ಯಾಣ ಇಲಾಖೆ, ಮಡಿಕೇರಿ, ಮೇಜರ್ ಉಮೇದ್ ಸಿಂಗ್, ಎಎಸ್‍ಸಿ ಅಭಿಲೇಖಾಲಯ, ಬೆಂಗಳೂರು, ಲೆಫ್ಟಿನೆಂಟ್ ಅನುಜ್ ರಾಣಾ, ಡಿಎಸ್‍ಸಿ ಅಭಿಲೇಖಾಲಯ, ಇವರುಗಳು ಸದರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸ್ಪರ್ಶ್ ಹಾಗೂ ಈ ಕಾರ್ಯಕ್ರಮದ ಸದುಪಯೋಗ ಪಡೆಯಲು ಕೋರಿದರು.
ಈ ಕಾರ್ಯಕ್ರಮದಲ್ಲಿ ಸುಮಾರು ನೂರೈವತ್ತು ಮಿಲಿಟರಿ ಪಿಂಚಣಿದಾರರು ತಮ್ಮ ಕುಂದುಕೊರತೆಗಳನ್ನು ನೊಂದಾಯಿಸಿಕೊಂಡರು ಹಾಗೂ ಬಹುತೇಕ ಪಿಂಚಣಿದಾರರು ತಮ್ಮ ಸಮಸ್ಯೆಗಳನ್ನು ನಿವಾರಿಸಿಕೊಂಡು ಈ ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಂಡರು.
ಮಾಜಿ ಸೈನಿಕರು ಮತ್ತು ಅವರ ಅವಲಂಬಿತರು ಹಾಗೂ ಇತರೆ ಅಧಿಕಾರಿಗಳನ್ನು ನೋಡಲ್ ಅಧಿಕಾರಿ ಕೆ. ಸುನೀಲ್ ಕುಮಾರ್ ಸ್ವಾಗತಿಸಿದರು.