ನಾಪೋಕ್ಲು ಜೂ.27 : ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಆಡಳಿತ ಮಂಡಳಿ ರಚನೆಗೆ ಚುನಾವಣೆ ನಡೆದಿದ್ದು, ಎಲ್ಲಾ ಸ್ಥಾನಗಳನ್ನು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆದ್ದುಕೊಂಡಿದ್ದಾರೆ.
13 ಸ್ಥಾನಗಳಿಗೆ 33 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಅಂತಿಮವಾಗಿ 26 ಮಂದಿ ಸ್ಪರ್ಧಾ ಕಣದಲ್ಲಿದ್ದರು. ಸಾಲಗಾರರ ಕ್ಷೇತ್ರದಲ್ಲಿ ಒಟ್ಟು 791 ಮತಗಳಿದ್ದು, ಅದರಲ್ಲಿ 751 ಮತಗಳು ಚಲಾವಣೆಯಾಗಿವೆ. ಸಾಲಗಾರರಲ್ಲದ ಕ್ಷೇತ್ರದಲ್ಲಿ ಒಟ್ಟು 376 ಮತಗಳಿದ್ದು, 313 ಮತಗಳು ಚಲಾವಣೆಯಾಗಿದೆ.
ಸಾಮಾನ್ಯ ಸಾಲಗಾರರ ಕ್ಷೇತ್ರದಿಂದ ಒಟ್ಟು ಆರು ಮಂದಿ ನಿರ್ದೇಶಕರ ಆಯ್ಕೆ ಆಗಬೇಕಿದ್ದು, ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಹಾಲಿ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ 534 ಮತಗಳನ್ನು, ಜಯರಾಮ ನಿಡ್ಯಮಲೆ 402 ಮತಗಳನ್ನು, ಧನಂಜಯ ಕೋಡಿ 346 ಮತಗಳನ್ನು, ಹೊನ್ನಪ್ಪ ಅಮೆಚೂರು 453 ಮತಗಳನ್ನು ,ಸೀತಾರಾಮ ಕದಿ ಕಡ್ಕ 388 ಮತಗಳನ್ನು ಅಶೋಕ ಪೆರುಮುಂಡ 478 ಮತಗಳನ್ನು ಪಡೆದುಕೊಂಡಿದ್ದಾರೆ.
ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಸುರೇಶ್ ಪೆರುಮುಂಡ, ದಯಾನಂದ ಪೆರುಮುಂಡ, ಗೌತಮ್ ಎಂ.ಎಸ್, ಚಿದಾನಂದ ಪೀಚೆ, ಜನಾರ್ದನ ನಾಯಕ ನಿಡ್ಯಮಲೆ, ಉಮೇಶ್ ಕುಂಬಳಕೇರಿ ಸೋಲನ್ನು ಅನುಭವಿಸಿದ್ದಾರೆ.
ಪರಿಶಿಷ್ಠ ಜಾತಿ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಪಿ.ಟಿ ಜಯರಾಮ 461 ಮತಗಳನ್ನು ಪಡೆದು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಪಿ.ಪಿ.ಹರೀಶ್ (246) ವಿರುದ್ಧ ಆಯ್ಕೆಯಾದರು.
ಮಹಿಳಾ ಸ್ಥಾನಕ್ಕೆ ಬಿಜೆಪಿ ಬೆಂಬಲಿಸಿ ಅಭ್ಯರ್ಥಿಗಳಾದ ವೈ.ಜೆ ಪುಷ್ಪಾವತಿ ಹಾಗೂ ಎನ್.ಪ್ರಮೀಳಾ ಆಯ್ಕೆಯಾಗಿದ್ದಾರೆ. ಇವರು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಎಂ.ಜಿ.ರೋಹಿಣಿ ಹಾಗೂ ಎಂ.ಸಿ.ಶೀಲಾ ಅವರನ್ನು ಪರಾಭವ ಗೊಳಿಸಿದರು.
ಹಿಂದುಳಿದ ವರ್ಗ ಎ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಕೆ.ಎಂ ಪ್ರದೀಪ್ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿದ್ದ ಪಿ.ಎಂ ಅಬೂಬಕರ್ ಅವರನ್ನು ಸೋಲಿಸಿ ಆಯ್ಕೆಯಾದರು.
ಹಿಂದುಳಿದ ವರ್ಗ ಬಿ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಡಿ.ಸಿ ದೀನರಾಜ್ ಹರಿಪ್ರಸಾದ್ ಬಿ.ಪಿ.ವಿರುದ್ಧ ಗೆಲುವು ಸಾಧಿಸಿದರು. ಸಾಲರಹಿತ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಬಿ.ಎಲ್ ಕಿರಣ್ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ನೇಮಿರಾಜ್ ಪಿ.ಎಚ್ ಅವರ ವಿರುದ್ಧ ಗೆಲುವು ಸಾಧಿಸಿದರು.
ವರದಿ : ದುಗ್ಗಳ ಸದಾನಂದ









