ವಿರಾಜಪೇಟೆ ಜು.1 : ವಿರಾಜಪೇಟೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಮಹಾಸಭೆ, ಮಕ್ಕಳ ಪ್ರತಿಭಾ ಪುರಸ್ಕಾರ ಹಾಗೂ ವಾರ್ಷಿಕ ಪ್ರಶಸ್ತಿ
ಪ್ರದಾನ ಸಮಾರಂಭ ಜು.2 ರಂದು ವಿರಾಜಪೇಟೆಯಲ್ಲಿ ನಡೆಯಲಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಎ.ಎಸ್ ಮುಸ್ತಫ ತಿಳಿಸಿದ್ದಾರೆ.
ಜು.2 ರಂದು ಬೆಳಗ್ಗೆ 10.30 ಗಂಟೆಗೆ ವಿರಾಜಪೇಟೆಯ ಎ-ಟು-ಜೆಡ್ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ರೆಜಿತ್ ಕುಮಾರ್ ಗುಹ್ಯ ಅವರ ಅಧ್ಯಕ್ಷತೆಯಲ್ಲಿ ಮಹಾಸಭೆ ನಡೆಯಲಿದೆ. ಜಿಲ್ಲಾ ವೀಕ್ಷಕರಾಗಿ ಆನಂದ್ ಕೊಡಗು ಪಾಲ್ಗೊಳ್ಳಲಿದ್ದು, ಜಿಲ್ಲಾಧ್ಯಕ್ಷರಾದ ಬಿ.ಆರ್ ಸವಿತಾರೈ, ಪ್ರಧಾನ ಕಾರ್ಯದರ್ಶಿ ಬಾಚರಣಿಯಂಡ ಅನು ಕಾರ್ಯಪ್ಪ, ರಾಷ್ಟ್ರೀಯ ಸಮಿತಿ ಸದಸ್ಯರಾದ ಸುನಿಲ್ ಪೊನ್ನೇಟಿ, ರಾಜ್ಯ ಸಮಿತಿ ಸದಸ್ಯರಾದ ಟಿ.ಎನ್ ಮಂಜುನಾಥ್, ತಾಲ್ಲೂಕು ಸಂಘದ ಉಪಾಧ್ಯಕ್ಷ ಪುತ್ತಂ ಪ್ರದೀಪ್ ಭಾಗವಹಿಸಲಿದ್ದಾರೆ.
ಬೆಳಗ್ಗೆ 11 ಗಂಟೆಗೆ ಮಕ್ಕಳ ಪ್ರತಿಭಾ ಪುರಸ್ಕಾರ ಹಾಗೂ ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದ್ದು, ದತ್ತಿ ಪ್ರಶಸ್ತಿ ಸ್ಥಾಪಿಸಿರುವ ವಿರಾಜಪೇಟೆಯ ಪ್ರಗತಿ ಶಾಲೆಯ ವ್ಯವಸ್ಥಾಪಕ ಮಾದಂಡ ತಿಮ್ಮಯ್ಯ, ಸಿದ್ದಾಪುರದ ಸಮಾಜ ಸೇವಕ ಕೆ.ಯು.ಅಬ್ದುಲ್ ಮಜೀದ್, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕ ಕೋಲತಂಡ ರಘು ಮಾಚಯ್ಯ, ಜಿಲ್ಲಾಧ್ಯಕ್ಷರಾದ ಬಿ.ಆರ್ ಸವಿತಾ ರೈ ಸೇರಿದಂತೆ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಪ್ರತಿಭಾ ಪುರಸ್ಕಾರ: ಸದಸ್ಯರಾದ ಕೃಷ್ಣ ಅವರ ಮಕ್ಕಳಾದ ಎಂ.ಕೆ.ಜೀಶ್ಮ, ಎಂ.ಕೆ.ಜಸ್ಮಿತಾ, ರಜಿತ ಕಾರ್ಯಪ್ಪ ಅವರ ಮಗಳು ಕೆ.ಈಶಾನ್ವಿ, ಎ.ಎನ್ ವಾಸು ಅವರ ಮಗಳು ಸಮೃದ್ಧಿ ಎ.ವಿ, ಗಿರೀಶ್ ವಿ.ಕೆ ಅವರ ಮಗ ಅಗಿಲ್ ವಿ.ಜಿ, ಸುನಿಲ್ ಕೆ.ಎಸ್ ಅವರ ಮಗ ರೆನಿಲ್ ಕೆ.ಎಸ್ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುತ್ತಿದೆ. ಹಾಗೂ ತಾಲ್ಲೂಕು ಸಂಘದ ವಾರ್ಷಿಕ ಪ್ರಶಸ್ತಿಗೆ ಭಾಜನರಾಗಿರುವ ಸಂಘದ ಸದಸ್ಯರಾದ ಎ.ಎನ್ ವಾಸು, ರಜಿತಾ ಕಾರ್ಯಪ್ಪ, ಪುತ್ತಂ ಪ್ರದೀಪ್, ಆರ್. ಸುಬ್ರಮಣಿ ಮತ್ತು ಎಂ.ಎ ಕೃಷ್ಣ ಅವರಿಗೆ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.