ಮಡಿಕೇರಿ ಆ.1 : ಕರಿಕೆಯಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ನೂತನ ಘಟಕವನ್ನು ರಚಿಸಲಾಗಿದ್ದು, ವಿಶ್ವಹಿಂದೂ ಪರಿಷತ್ ಅಧ್ಯಕ್ಷರಾಗಿ ಜಯಪ್ರಕಾಶ್ ಗುಡ್ಡೆಮನೆ, ಬಜರಂಗದಳ ಸಂಚಾಲಕರಾಗಿ ವಿನೋದ್ ಕುಮಾರ್ ನೇಮಕಗೊಂಡಿದ್ದಾರೆ.
ವಿಶ್ವಹಿಂದೂ ಪರಿಷತ್ ಕಾರ್ಯದರ್ಶಿಯಾಗಿ ಜಯಂತ್ ಪೆತ್ತಾಜೆ, ಬಜರಂಗದಳ ಸಹ ಸಂಚಾಲಕರಾಗಿ ರಕ್ಷಿತ್ ಕಂಡಿಗೆ, ವಿಶ್ವಹಿಂದೂ ಪರಿಷತ್ ಸೇವಾ ಪ್ರಮುಖ್ ಕೋಡಿ ಭಾರ್ಗವ ಜಯಪ್ರಕಾಶ್, ಸತ್ಸಂಗ ಪ್ರಮುಖ್ ರಾಜೇಶ್ ಚೆತ್ತುಕಾಯ, ಬಜರಂಗದಳ ಗೋರಕ್ಷಕ ಪ್ರಮುಖ್ ಪ್ರಸನ್ನ ಕುಮಾರ್, ಸುರಕ್ಷಾ ಪ್ರಮುಖ್ ದಿಲಿಪ್ ಕುಮಾರ್, ಅಖಾಡ ಪ್ರಮುಖ್ ಚೇತನ್ ಹುಲಿಮನೆ ಆಯ್ಕೆಯಾಗಿದ್ದಾರೆ.
ಕರಿಕೆ ವಿಎಸ್ಎಸ್ಎನ್ಎಲ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂತನ ಘಟಕಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಕಾರ್ಯಕ್ರಮವನ್ನು ಹಿರಿಯರಾದ ಕೋಡಿ ಪೊನ್ನಪ್ಪ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ವಿಶ್ವಹಿಂದೂ ಪರಿಷತ್ತಿನ ಸುಳ್ಯ ತಾಲೂಕಿನ ಅಧ್ಯಕ್ಷ ಸೋಮಶೇಖರ್ ಪೈಕ ಕರಿಕೆಯ ನೂತನ ಪದಾಧಿಕಾರಿಗಳಿಗೆ ಶಾಲು ಹೊದಿಸಿ ಜವಾಬ್ದಾರಿ ನೀಡಿದರು.
ಈ ಸಂದರ್ಭ ಸುಳ್ಯ ತಾಲೂಕಿನ ವಿಶ್ವ ಹಿಂದೂ ಪರಿಷತ್ ಸಹಕಾರ್ಯದರ್ಶಿ ಬಾನು ಪ್ರಕಾಶ್ ಪೆರುಮುಂಡ, ಸುಳ್ಯ ತಾಲೂಕಿನ ಬಜರಂಗದಳದ ಸಂಚಾಲಕ ಹರಿಪ್ರಸಾದ್ ಎಲಿಮಲೆ, ಪ್ರಮುಖರಾದ ಹೊಸ ಮನೆ ಹರೀಶ್ ಹಾಜರಿದ್ದರು. ಪ್ರದೀಪ್ ಕರಿಕೆ ಕಾರ್ಯಕ್ರಮವನ್ನು ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.