ಮಡಿಕೇರಿ ಆ.19 : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಪೊನ್ನಂಪೇಟೆ ಸ್ಥಳೀಯ ಸಂಸ್ಥೆ ಯ ವಾರ್ಷಿಕ ಮಹಾ ಸಭೆ ನಡೆಯಿತು.
ಸಭೆಯಲ್ಲಿ ಸಂಸ್ಥೆ ಯ ಅಧ್ಯಕ್ಷ ಕಾಳಿಮಡ ಮೋಟಯ್ಯ ಮಾತನಾಡಿ, ವಾರ್ಷಿಕ ಕ್ರಿಯಾಯೋಜನೆ ತಯಾರಿ ಅದರಂತೆ ಎಲ್ಲಾ ಶಾಲೆಗಳಲ್ಲಿ ದಳಗಳನ್ನು ತೆರೆದು ಚಟುವಟಿಕೆಗಳನ್ನು ಮಾಡಿಸಿ ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ಹೊರಹೊಮ್ಮಿಸುವ ಕೆಲಸಗಳನ್ನು ಮಾಡಬೇಕೆಂದು ಅಧ್ಯಕ್ಷ ಕಾಳಿಮಡ ಮೋಟಯ್ಯ ತಿಳಿಸದರು.
ಜಿಲ್ಲಾ ಸಂಘಟಕಿ ಮಾತನಾಡಿ ಹೆಚ್ಚು ಮಕ್ಕಳನ್ನು ಜಿಲ್ಲಾ ಪುರಸ್ಕಾರ ಮತ್ತು ರಾಜ್ಯ ಪುರಸ್ಕಾರ ಪರೀಕ್ಷೆಗೆ ಸಜ್ಜು ಗೊಳಿಸಬೇಕು. ತರಬೇತಿ ಆದವರು ಮುಂದುವರೆದ ತರಬೇತಿ ಪಡೆದು ಕೊಳ್ಳಬೇಕು ಎಂದು ತಿಳಿಸಿ. ಬೇಸಿಗೆ ಶಿಬಿರ ಮಾಡಿದ ಲಯನ್ಸ್ ಶಾಲೆ ಮತ್ತು ಕಾಪ್ಸ್ ಶಾಲೆಗಳಿಗೆ ಪ್ರಶಸ್ತಿ ಪತ್ರ ನೀಡಿದರು.
ಉಪಾಧ್ಯಕ್ಷ ಕಾಟಿಮಾಡ ಜಿಮ್ಮಿ ಅಣ್ಣಯ್ಯ ಮಾತನಾಡಿ, ಸಂಸ್ಥೆ ಉತ್ತಮವಾಗಿ ಬೆಳೆಯಲು ಎಲ್ಲರೂ ಸಹಕರಿಸಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಎಂದರು.
ಮತ್ತೋರ್ವ ಉಪಾಧ್ಯಕ್ಷ ಬೋಪಣ್ಣ ಮಾತನಾಡಿ, ಮಕ್ಕಳ ಮೇಳವನ್ನು ಉತ್ತಮವಾಗಿ ನಡೆಸಲು ಯೋಜನೆಯನ್ನು ಮಾಡಿ ಎಲ್ಲರ ಸಹಕಾರ ಪಡೆಯೋಣ ಎಂದು ಸಲಹೆ ನೀಡಿದರು.
ಸಭೆಯಲ್ಲಿ ಗೀತ ಗಾಯನ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಭಾಗವಹಿಸುವಂತೆ ಎಲ್ಲಾ ದಳ ನಾಯಕರು ಪ್ರಯತ್ನಿಸಬೇಕು, ರಾಷ್ಟೀಯ ಹಬ್ಬಗಳಲ್ಲಿ ಸ್ಕೌಟ್ ಗೈಡ್ ವಿದ್ಯಾರ್ಥಿಗಳು ಸಮವಸ್ತ್ರ ದೊಂದಿಗೆ ಭಾಗವಹಿಸಬೇಕು, ಎಲ್ಲಾ ಶಾಲೆಗಳಲ್ಲಿ ಕಡ್ಡಾಯವಾಗಿ ದಳಗಳನ್ನು ಪ್ರಾರಂಭ ಮಾಡುವುದು, ವಾರ್ಷಿಕ ಸಭೆ ಮತ್ತು ಸಂಸ್ಥೆ ಯ ಚಟುವಟಿಕೆಗಳ ಕ್ರಿಯಾಯೋಜನೆಯನ್ನು ಜುಲೈ ತಿಂಗಳಲ್ಲಿ ಮಾಡುವುದು, ಕೃಷಿ ನಡಿಗೆ ಕಾರ್ಯಕ್ರಮ ವನ್ನು ಎಲ್ಲಾ ಶಾಲೆ ಗಳಲ್ಲಿ ಮಾಡುವುದು, ದ್ವಿತೀಯ ಸೋಪಾನ ಪರೀಕ್ಷೆ ಗಳ ನ್ನು ಸೆಪ್ಟೆಂಬರ್ ತಿಂಗಳಲ್ಲಿ ಮಾಡುವುದು, ಶಿಕ್ಷಕರಿಗೆ ಪುನಃ ಚೇತನ ಕಾರ್ಯಾಗಾರ ಡಿಸೆಂಬರ್ ಅಂತ್ಯದೊಳಗೆ ನಡೆಸುವುದು, ಮಕ್ಕಳಿಗೆ ಪರೀಕ್ಷೆಗೆ ಪೂರ್ವಭಾವಿಯಾಗಿ ಕಾರ್ಯಾಗಾರವನ್ನು ಹಮ್ಮಿ ಕೊಳ್ಳುವುದು, ಮಕ್ಕಳ ಮೇಳ ಮಾಡುವ ಕುರಿತು ಚರ್ಚಿಸಿ ನಿರ್ಣಯ ಕೈಗೊಳ್ಳಲಾಯಿತು.
ಉಪಾಧ್ಯಕ್ಷ ಆಲಿರಾ ಸಾದುಲಿ , ಜಿಲ್ಲಾ ಸಂಘಟಕರಾದ ಯು.ಸಿ ದಮಯಂತಿ, ಖಜಾಂಚಿ ಮುತ್ತಮ್ಮ, ಜಂಟಿ ಕಾರ್ಯದರ್ಶಿ ಕಾವೇರಿ, ಸ್ಕೌಟ್ ಮಾಸ್ಟರ್ಸ್ ಗೈಡ್ ಕ್ಯಾಪ್ಟನ್ಸ್, ಕಬ್ ಮಾಸ್ಟರ್ಸ್ ಫ್ಲಾಕ್ ಲೀಡರ್ಸ್ ಹಾಗೂ ಎಲ್ಲಾ ಪದಾಧಿಕಾರಿಗಳು ಹಾಜರಿದ್ದರು.
ಈ ಸಂದರ್ಭದಲ್ಲಿ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ಪೊನ್ನಂಪೇಟೆ ತಾಲೂಕಿನ ಕಿರುಗೂರು ಗ್ರಾಮದ ಚೆಪ್ಪುಡಿರ ರೋಷನ್ ರವನ್ನು ಅಯ್ಕೆ ಮಾಡಲಾಯಿತು.
ಕಾವೇರಿ ಸ್ವಾಗತಿಸಿದರು. ಕಾರ್ಯದರ್ಶಿ ವಾಮನ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.