ಮಡಿಕೇರಿ ಸೆ.4 : ಕೊಡಗಿನ ಆಯುಧ ಪೂಜೆ ಎಂದೇ ಹೆಸರಾಗಿರುವ ಕೈಲ್ ಪೊಲ್ದ್ (ಕೈಲು ಮುಹೂರ್ತ) ಹಬ್ಬವನ್ನು ಜಿಲ್ಲೆಯಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು.
ಮಳೆಗಾಲದಲ್ಲಿ ಕೃಷಿ ಕಾರ್ಯ ಪೂರ್ಣಗೊಂಡ ನಂತರ ಕೃಷಿ ಪರಿಕರಗಳಿಗೆ ಪೂಜೆ ಸಲ್ಲಿಸುವ ಮತ್ತು ಊರಿನವರು ಸೇರಿ ಮಾಂಸದ ಖ್ಯಾದ್ಯವನ್ನು ಸವಿದು ವಿವಿಧ ಜನಪದೀಯ ಸ್ಪರ್ಧೆಗಳಲ್ಲಿ ಸಂಭ್ರಮಿಸುವ ಹಬ್ಬ ಕೈಲ್ ಪೊಲ್ದ್ ನ್ನು ಕೊಡವ ಮತ್ತು ಗೌಡ ಸಮುದಾಯದ ಮಂದಿ ಆಚರಿಸಿದರು.
ಬಲ್ಲಿಮಾಡ ಮೋಹನ್ ದೇವಯ್ಯ ಕುಟುಂಬಸ್ಥರು ಕೋವಿ, ಒಡಿಕತ್ತಿ, ವಾಹನ ಮತ್ತು ಕೃಷಿ ಪರಿಕರಗಳನ್ನು ಪೂಜ್ಯ ಸ್ಥಾನದಲ್ಲಿಟ್ಟು ತೋಕ್ ಪೂ (ಹೂವು) ನಿಂದ ಸಿಂಗರಿಸಿ ವಿವಿಧ ಖಾದ್ಯಗಳನ್ನಿರಿಸಿ ಪೂಜೆ ನೆರವೇರಿಸುವ ಮೂಲಕ ಕುಟುಂಬದ ಹಿರಿಯರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.