ಮಡಿಕೇರಿ ಸೆ.16 : ವಿರಾಜಪೇಟೆಯ ಕೊಳತ್ತೋಡು ಬೈಗೋಡು ಸಮೀಪ ಬೀಟೆ ಮರವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿರುವ ಅರಣ್ಯ ಇಲಾಖೆ ಇಬ್ಬರು ಆರೋಪಿಗಳನ್ನು ಬಂಧಿಸಿ, ರೂ.35 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದೆ.
ವಿರಾಜಪೇಟೆಯ ಜೈನರ ಬೀದಿ ನಿವಾಸಿ ಕೆ.ಆರ್.ಪ್ರದೀಪ್ ಹಾಗೂ ಬಿಟ್ಟಂಗಾಲ ನಿವಾಸಿ ಪಿ.ಎಸ್.ಅರ್ಜುನ್ ಬಂಧಿತ ಆರೋಪಿಗಳು.
ವಿರಾಜಪೇಟೆ ಅರಣ್ಯ ವಲಯ ವ್ಯಾಪ್ತಿಯ ಕೊಳತ್ತೋಡು ಬೈಗೋಡು ಗ್ರಾಮದ ಸಮೀಪ ಗೋಣಿಕೊಪ್ಪ -ವಿರಾಜಪೇಟೆ ಮುಖ್ಯ ರಸ್ತೆಯಲ್ಲಿ ಅಕ್ರಮವಾಗಿ ಬೀಟೆ ಮರದ 50 ನಾಟಗಳನ್ನು ತುಂಬಿಸಿ ಸಾಗಿಸುತ್ತಿದ್ದ ಇಚರ್ ವಾಹನವನ್ನು ಅರಣ್ಯ ಇಲಾಖಾ ತಂಡ ವಶಪಡಿಸಿಕೊಂಡು, ಆರೋಪಿಗಳನ್ನು ಬಂಧಿಸುವಲ್ಲಿ ಯಶಶ್ವಿಯಾಗಿದೆ.
ವಿರಾಜಪೇಟೆ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶರಣಬಸಪ್ಪ ಬಿ.ಎಂ. ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಕೊಚ್ಚೆರ ಎ.ನೆಹರೂರವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ವಿರಾಜಪೇಟೆ ವಲಯದ ಅರಣ್ಯ ಅಧಿಕಾರಿ ಕಳ್ಳಿರ ಎಂ.ದೇವಯ್ಯ, ವಿರಾಜಪೇಟೆ ವಲಯದ ಉಪವಲಯ ಅರಣ್ಯಧಿಕಾರಿಗಳಾದ ದೇಯಂಡ ಸಂಜಿತ್ ಸೋಮಯ್ಯ, ಆನಂದ ಕೆ. ಆರ್., ಅನಿಲ್ ಸಿ. ಟಿ., ಮಾದಂಡ ಮೋನಿಷಾ, ಸಚಿನ್ ನಿಂಬಾಳ್ಕರ್, ಅರಣ್ಯ ರಕ್ಷಕರುಗಳಾದ ಅರುಣ್ ಸಿ., ಚಂದ್ರಶೇಖರ ಅಮರಗೋಳ. ಮಾಲತೇಶ್ ಬಡಿಗೇರ, ವಾಹನ ಚಾಲಕರಾದ ಅಶೋಕ್, ಪ್ರಕಾಶ, ಮಧು, ಅಚ್ಚಯ್ಯ ಹಾಗೂ ವಿರಾಜಪೇಟೆ ಅರಣ್ಯ ವಲಯದ ಆರ್‌ಆರ್‌ಟಿ ಸಿಬ್ಬಂದಿಗಳಾದ ವಿಕಾಸ್, ಲತೇಶ,ಅನಿಲ್, ಸುರೇಶ, ಮಹೇಶ್, ಮೊಣ್ಣಪ್ಪ, ಹರ್ಷಿತ್, ನಾಚಪ್ಪ, ವಿನೋದ್, ವಿನುಕುಮಾರ್, ಮಂಜು, ಸಚಿನ್, ಮುರುಗನ್ ಪಾಲ್ಗೊಂಡಿದ್ದರು.











