ಮಡಿಕೇರಿ ಸೆ.27 : ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಸೇರಿದಂತೆ 9 ಪ್ರಮುಖ ಬೇಡಿಕೆಗಳ ಕುರಿತು ಸರ್ಕಾರದ ಗಮನ ಸೆಳೆಯಲು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಆರಂಭಿಸಿರುವ ಪಾದಯಾತ್ರೆಯ 2ನೇ ಹಂತ “ಕುರುಳಿ ಅಂಬಲ” ಮಂದ್ ನಿಂದ ಇಂದು ಆರಂಭಗೊಂಡಿತು.
ಮಡಿಕೇರಿ ತಾಲ್ಲೂಕು “ಕುರುಳಿ ಅಂಬಲ” ಮಂದ್, ನೆಲ್ಲಿಯಪುದಿಕೇರಿ ನಾಡ್ ಕಟ್ಟೆಮಾಡ್ ಮತ್ತು ಅರೆಕಾಡ್ ಮಂದ್ ನಲ್ಲಿ ಪಾದಯಾತ್ರೆ ಹಾಗೂ ಕೊಡವ ಜಾಗೃತಿ ಸಭೆ ನಡೆಯಿತು.
ನೆರೆದಿದ್ದವರನ್ನುದ್ದೇಶಿಸಿ ಮಾತನಾಡಿದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ, ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆಯ ಬೇಡಿಕೆ ಈಡೇರುವವರೆಗೆ ಸಿಎನ್‌ಸಿ ಯ ಹೋರಾಟ ಮುಂದುವರೆಯಲಿದೆ, ಸರ್ವ ಕೊಡವರು ಹೋರಾಟದೊಂದಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ದೇಶದ ಸಂವಿಧಾನದಡಿ ಸೂಕ್ಷ್ಮ ಬುಡಕಟ್ಟು ಜನಾಂಗವಾಗಿರುವ ಕೊಡವರು ತಮ್ಮ ಹಕ್ಕುಗಳನ್ನು ಪಡೆಯಲು ಸ್ವತಂತ್ರರು, ಆದರೆ ಪ್ರತಿಯೊಬ್ಬರು ಜಾಗೃತರಾಗಬೇಕು ಎಂದರು.
ಭೌಗೋಳಿಕ-ರಾಜಕೀಯ ಸ್ವಾಯತ್ತತೆಯು ಯುಎನ್/ವಿಶ್ವ ರಾಷ್ಟ್ರ ಸಂಸ್ಥೆ ಚಾರ್ಟರ್‌ನಲ್ಲಿ ಪ್ರತಿಪಾದಿಸಲ್ಪಟ್ಟ ನಿರ್ದಿಷ್ಟ ಪ್ರದೇಶದ ಪ್ರಾಚೀನ ಸೂಕ್ಷ್ಮ ರೇಸ್ ಅನ್ನು ರಕ್ಷಿಸಲು, ಉತ್ತೇಜಿಸಲು ಮತ್ತು ಪುನರುಜ್ಜೀವನಗೊಳಿಸಲು ಮೂಲಭೂತ ನೀತಿಯಾಗಿ ಸಾಂವಿಧಾನಿಕ ವ್ಯವಸ್ಥೆಯಾಗಿದೆ.
2002 ರಲ್ಲಿ ಕೊಡವರಿಗೆ ಸ್ವಾಯತ್ತ ಪರಿಷತ್ತನ್ನು ರಚಿಸಲು ಭಾರತದ ಸಿಎನ್‌ಸಿಯ ಮನವಿ ಮೇರೆಗೆ ಸಂವಿಧಾನ ಪರಿಶೀಲನಾ ಆಯೋಗ ಶಿಫಾರಸು ಮಾಡಿದೆ. ಆನಂದ್ ಶರ್ಮಾ ಸಮಿತಿಯ ವರದಿಯು ಸ್ವಾಯತ್ತ ಪ್ರದೇಶಗಳು ಮತ್ತು ಅದರ ಕೌನ್ಸಿಲ್‌ಗಳಿಗೆ ಹೆಚ್ಚಿನ ಅಧಿಕಾರ ನೀಡಲು ತಿಳಿಸಿದೆ.
ವಿಶ್ವಪ್ರಸಿದ್ಧ ಅರ್ಥಶಾಸ್ತ್ರಜ್ಞ ಮತ್ತು ಮಾಜಿ ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ಡಾ ಸುಬ್ರಮಣಿಯನ್ ಸ್ವಾಮಿ ಅವರು ನಮ್ಮ ಸಂವಿಧಾನದ ಆರ್ಟಿಕಲ್ 244 R/w 6 ಮತ್ತು 8 ನೇ ಶೆಡ್ಯೂಲ್ ಅಡಿಯಲ್ಲಿ ಕೌನ್ಸಿಲ್ ಅನ್ನು ಸ್ಥಾಪಿಸುವ ಮೂಲಕ ಕೊಡವರಿಗೆ ಸ್ವಾಯತ್ತ ಪ್ರದೇಶವನ್ನು ರಚಿಸುವುದಕ್ಕಾಗಿ ನಮ್ಮ ಸಮಗ್ರ ಸಬಲೀಕರಣಕ್ಕಾಗಿ WP No-7769/2023 (PIL)ಅನ್ನು ಸಲ್ಲಿಸಿದರು.
ಸಿಎನ್‌ಸಿ ಮೂಲಕ ಜನರ ಆಕಾಂಕ್ಷೆಗಳನ್ನು ಪ್ರತಿಧ್ವನಿಸಲು, ಮೂಲೆ ಮೂಲೆಗಳಲ್ಲಿ ಯುಎನ್/ವಿಶ್ವ ರಾಷ್ಟ್ರ ಸಂಸ್ಥೆ ಚಾರ್ಟರ್‌ನಲ್ಲಿ ಪ್ರತಿಪಾದಿಸಿರುವ ಸಾರ್ವತ್ರಿಕ ಕಾನೂನಿನ ಪ್ರಕಾರ ಮತ್ತು ಭಾರತದ ಸಂವಿಧಾನದ ಅಡಿಯಲ್ಲಿ ಸ್ವಯಂ ಆಡಳಿತ ಹಾಗೂ ಸ್ವಯಂ ನಿರ್ಣಯದ ಹಕ್ಕುಗಳನ್ನು ಸ್ಥಾಪಿಸಲು ಆರ್ಟಿಕಲ್ 32 ಅನ್ನು ಈ ಮೂಲಕ ಪ್ರಚಾರ ಮಾಡುತ್ತಿದ್ದೇವೆ. ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಯತ್ತತೆಯೂ ಕರ್ನಾಟಕದ ಸ್ವಾಧೀನದ ಅಡಿಯಲ್ಲಿ ಭಾರತದ ಸಾರ್ವಭೌಮತ್ವಕ್ಕೆ ಪೂರಕವಾಗಿರುತ್ತದೆ ಎಂದು ನಾಚಪ್ಪ ಹೇಳಿದರು.
ಕೊಡವರ ಸ್ವಯಂ ಶಾಸನದ ಜನ್ಮ ಭೂಮಿಯನ್ನು ಕಾಯ್ದೆ ಬದ್ದವಾಗಿ ಸ್ಥಿರೀಕರಣಗೊಳಿಸಲು ಭೌಗೋಳಿಕ ರಾಜಕೀಯ ಸ್ವಾಯತ್ತತೆ ಮತ್ತು ಆಂತರಿಕ ರಾಜಕೀಯ ಸ್ವ-ನಿರ್ಣಯ ಹಕ್ಕು ಸಂವಿಧಾನದ ವಿಧಿ 244 R/w 6 ಮತ್ತು 8ನೇ ಶೆಡ್ಯೂಲ್ ಅಡಿಯಲ್ಲಿ ಕರ್ನಾಟಕದ ಸ್ವಾಧೀನದೊಳಗೆ ಆಂತರಿಕ-ರಾಜಕೀಯ ಸ್ವ- ನಿರ್ಣಯದ ಹಕ್ಕನ್ನು ಕೊಡವರಿಗೆ ಸಂಯೋಜಿಸುವ ಮೂಲಕ ಭಾರತದ ಸಂವಿಧಾನ ಪರಿಶೀಲನಾ ಆಯೋಗವು ಶಿಫಾರಸು ಮಾಡಿರುವ ವರದಿಯನ್ವಯ ಕೊಡವ ಲ್ಯಾಂಡ್ ಸ್ವಯಂ ಶಾಸನದ ಜನ್ಮ ಭೂಮಿಯನ್ನು ರಚಿಸಬೇಕು.
ಕೊಡಗಿನ ಆದಿಮಸಂಜಾತ ಕೊಡವ ಜನಾಂಗವನ್ನು ನಮ್ಮ ಸಂವಿಧಾನದ ಶೆಡ್ಯೂಲ್ ಪಟ್ಟಿಯಲ್ಲಿ ಸೇರಿಸಬೇಕು. ಸಂವಿಧಾನದಲ್ಲಿ ರೇಸ್/ಮೂಲ ವಂಶಸ್ಥ ಜನಾಂಗಕ್ಕೆ ಯಾವುದೇ ವಿಶೇಷ ಪರಿಚ್ಛೇದಗಳ ಷರತ್ತು ಇಲ್ಲದಿರುವುದರಿಂದ ಕೊಡವರನ್ನು ಎಸ್.ಟಿ ಪಟ್ಟಿಗೆ ಸೇರಿಸುವುದು ವರ್ತಮಾನದ ಅನಿವಾರ್ಯ ಅವಶ್ಯಕತೆಯಾಗಿದೆ. ಆದ್ದರಿಂದ ಕರ್ನಾಟಕದ ಗೌರವಾನ್ವಿತ ಉಚ್ಚ ನ್ಯಾಯಾಲಯದ ಆದೇಶದಂತೆ, ಕೊಡವ ಜನಾಂಗದ ನ್ಯಾಯಯುತ, ಸೂಕ್ಷ್ಮ, ಸಮಗ್ರ ಕುಲಶಾಸ್ತ್ರ ಅಧ್ಯಯನ ಆರಂಭಿಸಬೇಕು.
. ಕೊಡವ ಕಸ್ಟಮರಿ ಜನಾಂಗೀಯ ‘ಸಂಸ್ಕಾರ ಗನ್’ ಹಕ್ಕುಗಳನ್ನು ಸಿಖ್ಖರ “ಕಿರ್ಪಾನ್” ಗೆ ಸಮಾನವಾಗಿ ನಮ್ಮ ಸಂವಿಧಾನದ 25 ಮತ್ತು 26ನೇ ವಿಧಿಗಳ ಅಡಿಯಲ್ಲಿ ಕೊಡವರ “ಧಾರ್ಮಿಕ ಸಂಸ್ಕಾರ”ವೆಂದು ರಕ್ಷಿಸಬೇಕು.
ಮಾತೃ ಭಾಷೆ ಕೊಡವ ತಕ್ಕ್ ಅನ್ನು 8ನೇ ಶೆಡ್ಯೂಲ್‌ಗೆ ಸೇರಿಸುವುದು. ನಮ್ಮ ಸಂವಿಧಾನದ 347, 350, 350ಎ ಮತ್ತು 350ಬಿ ವಿಧಿಗಳ ಅಡಿಯಲ್ಲಿ ಪಠ್ಯಕ್ರಮ ಮತ್ತು ಆಡಳಿತದಲ್ಲಿ ಕೊಡವ ತಕ್ಕ್ ಅನ್ನು ಪರಿಚಯಿಸಬೇಕು. ಕೊಡವ ತಕ್ಕ್ ಅನ್ನು ರಾಜ್ಯದ 3ನೇ ಆಡಳಿತ ಭಾಷೆಯನ್ನಾಗಿ ಪರಿಗಣಿಸಬೇಕು.
ಕೊಡವ ಜಾನಪದ ಪರಂಪರೆಯನ್ನು ಯುನೆಸ್ಕೋದ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪಟ್ಟಿಯಲ್ಲಿ ಸೇರಿಸಬೇಕು. ಕೊಡವ ಜಾನಪದ ಪರಂಪರೆಯನ್ನು ಜೀವಂತಗೊಳಿಸಲು, ವಿಶ್ವ ಕೊಡವಾಲಜಿ (ಕೊಡವ ಶಾಸ್ತ್ರದ ಜಾಗತಿಕ ಸಂಶೋಧನಾ ಅಧ್ಯಯನ ಕೇಂದ್ರ) ಸಂಶೋಧನಾ ಕೇಂದ್ರ ಮತ್ತು ಕೊಡವ ಸುಧಾರಿತ ಅಧ್ಯಯನ ಕೇಂದ್ರವನ್ನು ಸ್ಥಾಪಿಸಲು ಸರ್ಕಾರವು ನಮಗೆ ಭೂಮಿಯನ್ನು ನೀಡಬೇಕು.
ಜೀವನದಿ ಕಾವೇರಿಗೆ “ಕಾನೂನು ವ್ಯಕ್ತಿ ಸ್ಥಿತಿಯೊಂದಿಗೆ ಜೀವಂತ ಘಟಕವನ್ನು ನೀಡಬೇಕು. ಕಾವೇರಿಯು ವೇದ ಕಾಲದ 7 ಪವಿತ್ರ ನದಿಗಳಲ್ಲಿ ಒಂದಾಗಿದೆ. ಜಲದೇವತೆ ಕಾವೇರಿಯ ಜನ್ಮಸ್ಥಳವನ್ನು ಸರ್ಕಾರವು ಪೂಜ್ಯ ಭಾವನೆಯಿಂದ ಗೌರವಿಸಬೇಕು. ಯಹೂದಿ ಜನರ ಮೌಂಟ್ ಮೊರೈಯಾ ದೇವನೆಲೆ ಮಾದರಿಯಲ್ಲಿ ಕೊಡವ ಜನಾಂಗದ ಪವಿತ್ರ ತೀರ್ಥಯಾತ್ರ ಕೇಂದ್ರವಾಗಿ ತಲಕಾವೇರಿಯನ್ನು ಪರಿಗಣಿಸಬೇಕು.
1966 ರ ಹೆಲ್ಸಿಂಕಿ ನಿಯಮದ ಪ್ರಕಾರ ಕಾವೇರಿಯ ಪುಮುಖ ನೀರಿನ ಪಾಲನ್ನು ಕೊಡಗಿನಲ್ಲಿ ಬಳಸಿಕೊಳ್ಳಬೇಕು, ಕಾವೇರಿ ನೀರಿನ 740 ಟಿಎಂಸಿ ವಾರ್ಷಿಕ ಇಳುವರಿಯಲ್ಲಿ, ಕೊಡವ ನೆಲದ ಪಾಲು 200 ಟಿಎಂಸಿ ಗಿಂತ ಹೆಚ್ಚು ಆಗಿದೆ.
ನಾಲ್ನಾಡ್ ಅರಮನೆ ಮತ್ತು ಮಡಿಕೇರಿ ಕೋಟೆಯಲ್ಲಿನ ಅರಮನೆಯ ಸಂಚಿನಲ್ಲಿನ ಘಟಿಸಿದ ಅಮಾಯಕ ಕೊಡವರ ರಾಜಕೀಯ ಹತ್ಯೆಗಳ ನೆನಪಿನ ಸ್ಮಾರಕಗಳನ್ನು ಸ್ಥಾಪಿಸಬೇಕು. ಕೊಡವ ಶೌರ್ಯವನ್ನು ಪ್ರತಿಬಿಂಬಿಸುವ ಉಲುಗುಲಿ-ಸುಂಟಿಕೊಪ್ಪ ಮತ್ತು ಮುಳ್ಳುಸೋಗೆಯಲ್ಲಿ ಕೊಡವರ ಯುದ್ಧ ಸ್ಮಾರಕಗಳನ್ನು ಸ್ಥಾಪಿಸಬೇಕು. ದೇವಾಟ್ ಪರಂಟ್ ನಲ್ಲಿ ಅಂತರರಾಷ್ಟ್ರೀಯ ಕೊಡವ ನರಮೇಧದ ಸ್ಮಾರಕಗಳನ್ನು ನಮ್ಮ ಸಂವಿಧಾನದ 49 ವಿಧಿ ಅಡಿಯಲ್ಲಿ ಮತ್ತು 1964 ರ ವೆನಿಸ್ ಘೋಷಣೆ ಯಂತೆ ನಿರ್ಮಿಸಬೇಕು. ಈ ಎರಡೂ ದುರಂತಗಳನ್ನು ವಿಶ್ವ ರಾಷ್ಟ್ರ ಸಂಸ್ಥೆಯ (ಯು.ಎನ್.ಓ) ಹತ್ಯಾಕಾಂಡದ ಸ್ಮರಣಾರ್ಥ ಪಟ್ಟಿಯಲ್ಲಿ ಸೇರಿಸಬೇಕು. ದೇವಾಟ್ ಪರಂಟ್ ಪ್ರಾಚೀನ ಯುದ್ಧಭೂಮಿಯಾಗಿದೆ ಮತ್ತು ಇದು ಕೊಡವ ಜನಾಂಗದ ದೇಶ ಮಂದ್ ಆಗಿದೆ. ಪ್ರಾಚೀನ ಯುದ್ಧಭೂಮಿಗಳಾದ ಕುರುಕ್ಷೇತ್ರ, ಕಳಿಂಗ ಮತ್ತು ವಾಟರ್ಲ್ಲೂ ಗಳನ್ನು ಪಾರಂಪರಿಕ ತಾಣಗಳಾಗಿ ರಕ್ಷಿಸಿದ ಪರಿಯಲ್ಲೇ ಅವುಗಳಿಗೆ ಸಮಾನ ಪ್ರಾಮುಖ್ಯತೆಯಾಗಿ ಸಂರಕ್ಷಿಸಬೇಕು.
ಜನಸಂಖ್ಯಾ ಬದಲಾವಣೆಯನ್ನು/ಪಲ್ಲಟವನ್ನು ತಡೆಗಟ್ಟಲು, ನಮ್ಮ ಆನುವಂಶಿಕ ಸಮುದಾಯ ಆಸ್ತಿಗಳನ್ನು ಮತ್ತು ನಮ್ಮ ಆಧ್ಯಾತ್ಮಿಕ ಪಾರಮಾರ್ಥಿಕ ನೆಲೆಗಳಾದ ಮಂದ್, ದೇವಕಾಡ್, ತೂಟ್‌ಂಗಲ, ಕ್ಯಾಕೊಳ ಗಳನ್ನು ರಕ್ಷಿಸಬೇಕು. ಕೊಡವರ ಜನ್ಮ ಭೂಮಿಯಲ್ಲಿ ನಮ್ಮ ಐತಿಹಾಸಿಕ ನಿರಂತರತೆಗೆ ಶಾಸನಬದ್ಧ ಅನುಮೋದನೆಗಾಗಿ, ಮಣಿಪುರ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ ಮತ್ತು ಮಿಜೋರಾಂನ ಮಾದರಿಯಲ್ಲಿ ಇನ್ನರ್ ಲೈನ್ ರ‍್ಮಿಟ್ ಮತ್ತು ಹೊಸ ಸಂಸತ್ತಿನಲ್ಲಿ ಕೊಡವ ಪ್ರಾತಿನಿಧ್ಯವನ್ನು ನೀಡಬೇಕು ಎಂದು ನಾಚಪ್ಪ ಒತ್ತಾಯಿಸಿದರು.
ಅಜ್ಜಂಡ ಅಪ್ಪಯ್ಯ, ಅಚ್ಚಕಳೇರ ಸಂತು ಅಯ್ಯಪ್ಪ, ಅಚ್ಚಕಳೇರ ನವೀನ್ ಮೊಣ್ಣಪ್ಪ, ನಂದೇಟಿರ ರವಿ ಸುಬ್ಬಯ್ಯ, ನಂದೇಟಿರ ಕಾಜು ಕಾರ್ಯಪ್ಪ, ಅಚ್ಚಕಳೇರ ಕಾವೇರಪ್ಪ, ಅಚ್ಚಕಳೇರ ಪಳಂಗಪ್ಪ, ನಂದೇಟಿರ ನೀರಜ್ ವೀರಪ್ಪ, ನಂದೇಟಿರ ರಿಷ್ತಾ ಕಾವೇರಮ್ಮ, ನಂದೇಟಿರ ರಾಜ ಮಾದಪ್ಪ, ನಂದೇಟಿರ ನೀನಾ, ಸಾದೇರ ಮಧು ಗಣಪತಿ, ನಂದೇಟಿರ ಕೌಶಿಕ್ ಕುಶಾಲಪ್ಪ, ತಂಶಿ ತಮ್ಮಯ್ಯ, ಅಚ್ಚಕಳೇರ ಸಜನ್, ಅಚ್ಚಕಳೇರ ಬೋಪಣ್ಣ, ನಂದೇಟಿರ ನಿಶು ನಂಜಪ್ಪ, ಬಡಕಡ ನಿಗು ಸುಬ್ರಮಣಿ, ಸಾದೇರ ಜೀವನ್, ಬೊಡ್ಡಂಡ ಮಂದಣ್ಣ, ನಂದೇಟಿರ ನವೀನ್ ಜೋಯಪ್ಪ, ಮಂಡೇಪಂಡ ಮುತ್ತಪ್ಪ, ಪಳಂಗಡ ಲವ, ಅಜ್ಜಂಡ ಉತ್ತಪ್ಪ, ಮುಂಡಂಡ ಸೋಮಣ್ಣ, ಕೆ.ಜಿ.ಕಾರ್ಯಪ್ಪ, ಅಚ್ಚಕಳೇರ ಮುತ್ತಣ್ಣ, ಪೆಮ್ಮಡಿಯಂಡ ವೇಣು ಅಪ್ಪಣ್ಣ, ತಾತಪಂಡ ನಯನ, ಸಾದೇರ ರವಿ ಮೊಣ್ಣಪ್ಪ, ಅಜ್ಜಂಡ ಸದಾ ಭೀಮಯ್ಯ, ಬಿದ್ದಂಡ ಅಯ್ಯಪ್ಪ, ಚಂಗನಮಕ್ಕಡ ಸೂರಜ್ ಬೆಳ್ಳಿಯಪ್ಪ, ಅಚ್ಚಕಳೇರ ರಾಜ, ಬೊಡ್ಡಂಡ ರವಿ, ಸಾದರ ಗಣೇಶ್, ಅಚ್ಚಕಳೇರ ಕುಶಿ ಡಾಲು, ಅಚ್ಚಕಳೇರ ಶುಭ, ಅಚ್ಚಕಳೇರ ಸವಿತಾ ಮೊಣ್ಣಪ್ಪ, ಅಚ್ಚಕಳೇರ ರಚನಾ ಅಪ್ಪಣ್ಣ, ಅಚ್ಚಕಳೇರ ರಾಣಿ ಗೌರಮ್ಮ, ಅಚ್ಚಕಳೇರ ಸೌಮ್ಯ ಸಜನ್, ಅಚ್ಚಕಳೇರ ಚೋಂದಮ್ಮ, ನಂದೇಟಿರ ಗೊಂಬೆ ರಮೇಶ್, ನಂದೇಟಿರ ಮಮತಾ ಸುಬ್ಬಯ್ಯ, ಬಿದ್ದಂಡ ಗಿಲ್ಲು, ಅಚ್ಚಕಳೇರ ರತ್ನ ಅಯ್ಯಪ್ಪ, ನಂದೇಟಿರ ಕವಿತಾ ಸುಬ್ಬಯ್ಯ, ಸಾದೇರ ಸುಶೀಲ ನಾಣಯ್ಯ, ಸಾದೇರ ಕಮಲ ಪೂಣಚ್ಚ, ಬಡಕಡ ಪ್ರೇಮಾ ಬೋಪಯ್ಯ, ಬಡಕಡ ಶೃಂಗ ಸುಬ್ರಮಣಿ, ಸಾದೇರ ಭವ್ಯ ತಿಮ್ಮಯ್ಯ, ಸಾದೇರ ಜಾನ್ಸಿ ಮೊಣ್ಣಪ್ಪ, ಚೊಕ್ಕಂಡ ತರನ್, ಚೊಕ್ಕಂಡ ಸರಸು ಗಣಪತಿ, ಸಾದೇರ ಸರಸ್ವತಿ ಕಾಳಪ್ಪ, ಸಾದೇರ ಪ್ರತಿಮಾ ಮಧು, ಸಾದೇರ, ಡೀನ ಚಿಣ್ಣಪ್ಪ, ತಾತಪಂಡ ನಳಿನಿ ರಮೇಶ್, ತಾತಪಂಡ ಸಬನ ನಯನ, ತಾತಪಂಡ ವೀಣಾ ಉತ್ತಪ್ಪ, ಚಂಗನಮಕ್ಕಡ ರಮ್ಯ ವಿನು, ನಾಪಂಡ ಅಶ್ವಿನ್ ನಂಜಪ್ಪ, ನಂದೇಟಿರ ಮೌನಿತ ನಂಜಪ್ಪ, ನಂದೇಟಿರ ಪುಷ್ಪಾ, ನಂದೇಟಿರ ರಾಧಾ ಕಾವೇರಪ್ಪ, ನಂದೇಟಿರ ಶಾಹಿ, ಚಂಗನಮಕ್ಕಡ ಅಕ್ಷಯ್, ಸಾದೇರ ತಶ್ಮಿ, ನಂದೇಟಿರ ಗಣೇಶ್, ಬಿ.ಜಿ.ಬೋಜಪ್ಪ, ಪುದಿಯೊಕ್ಕಡ ಕಾಶಿ, ಬಡಕಡ ನಿತಿನ್, ಚಂಗನಮಕ್ಕಡ ವಿನು, ಚಂಗನಮಕ್ಕಡ ಸುನಿಲ್, ಮುಕ್ಕಾಟಿರ ಶಿಲ್ಪ, ಕುಕ್ಕೇರ ವಿಜು, ಕುಕ್ಕೇರ ನೀತು, ಕುಕ್ಕೇರ ರೀನ, ಕೊರವಂಡ ರಾಮು ಅಯ್ಯಪ್ಪ, ಮುಕ್ಕಾಟಿರ ಸ್ಮಾ:, ಜಾಗರಂಡ ಮೋಟಯ್ಯ, ಕೇಚೆಟ್ಟಿರ ಉತ್ತಯ್ಯ, ಮುಕ್ಕಾಟಿರ ಜಾಲು, ಮುಕ್ಕಾಟಿರ ವಿಮಲ, ಶಮ್ಮಿ ನುಚ್ಚಿಮಣಿಯಂಡ, ಅಡಿಕೇರ ಶಾಂತಿ ಜಯ, 9 ಪೊರಿಮಂಡ ಯಶೋಧ ಈರಪ್ಪ, ಪೊರಿಮಂಡ ಧನು ತಂಗಮ್ಮ, ಎ.ಕೆ.ಚಿಟ್ಟಿಯಪ್ಪ, ಪೊರಿಮಂಡ ರಾಶಿ ದಿನಮಣಿ, ಚೋಳಪಂಡ ನಾಣಯ್ಯ, ಕೇಚೆಟಿರ ಅಯ್ಯಪ್ಪ, ಕಾಂಡೇರ ಸುರೇಶ್, ಕೊರವಂಡ ದೇವಯ್ಯ, ನಲ್ಲಪಟ್ಟಿರ ಕಾವೇರಪ್ಪ, ಪೊರಿಮಾಡ ದಿನಮಣಿ ಪೂವಯ್ಯ, ಮಾದೇಟಿರ ಬೊಳ್ಳಿಯಪ್ಪ, ಪಾಂಡಿರ ಬೊಳ್ಳಿಯಪ್ಪ, ಅಯ್ಯಾರಣಿಯಂಡ ಜಗತ್, ಮುಕ್ಕಾಟಿರ ಚೋಂದಮ್ಮ, ಮುಕ್ಕಾಟಿರ ಮೀನ, ಕೊರವಂಡ ಮಧು ಅಯ್ಯಪ್ಪ, ಕೊರವಂಡ ಪ್ರಣತಿ ಅಯ್ಯಪ್ಪ, ಕೇಚೆಟ್ಟಿರ ರಾಜ, ಮುಕ್ಕಾಟಿರ ರಮೇಶ್ ಸೋಮಯ್ಯ, ಕೊರವಂಡ ಬೊಳ್ಳಿಯಪ್ಪ, ಕೇಚೆಟ್ಟಿರ ಮಿಥುನ್ ಮುತ್ತಣ್ಣ, ಕೊರವಂಡ ಬೋಪಯ್ಯ, ಕೊರವಂಡ ದೇವಯ್ಯ, ಮುಳ್ಳಂಡ ಕರಣ್ ಕಾವೇರಿಪ್ಪ, ಮಣವಟ್ಟೀರ ಜಗದೀಶ್, ಪುತ್ತೇರಿರ ಕರುಣ್ ಕಾಳಯ್ಯ, ಮುಳ್ಳಂಡ ರತ್ತು ಚೆಂಗಪ್ಪ, ಮುಕ್ಕಾಟಿರ ಅಜಿತ್ ಉತ್ತಪ್ಪ, ನಂದಿನೆರವAದ ಮಧು, ಕೊರವಂಡ ಮಂಜು ಅಯ್ಯಪ್ಪ, ನಲ್ಲಪಟ್ಟಿರ ಅಯ್ಯಪ್ಪ, ಪಾಡಿರ ಜಿ.ಸುಬ್ರಮಣಿ, ಅಯ್ಯರಾಣಿಯಂಡ ಸುಬ್ರಮಣಿ, ಪುತ್ತರೀರ ರಾಬಿನ್ ಚೆಂಗಪ್ಪ, ಮುಕ್ಕಾಟಿರ ಸೋಮಯ್ಯ, ಕೇಚೆಟ್ಟಿರ ರಾಣಿ ದೇವಯ್ಯ, ಪಟ್ಟಮಾಡ ಗಣಪತಿ, ಚೋಳಪಂಡ ಜ್ಯೋತಿ ನಾಣಯ್ಯ, ಬಡಲ್ಲೇರ ಕೌಶಿ, ಬಲ್ಲಾರಂಡ ರಾಜಪ್ಪ, ಚೋಳಪಂಡ ವಿಜಯ, ಪೊರಿಮಂಡ ದೇವಯ್ಯ, ಕೊರವಂಡ ಸಬಿತ್ ಗೌರಮ್ಮ, ಮುಕ್ಕಾಟ್ಟಿರ ಶಿಲ್ಪ, ಕುಕ್ಕೆರ ವಿಜು, ಕುಕ್ಕೆರ ನೀತು, ಕುಕ್ಕೆರ ರೀನ, ಕುಕ್ಕೆರ ಜಾನಕ್ಕಿ, ತೊಂಡಿಯಂಡ ವೀಣಾ ಪೂಣಚ್ಚ, ಅನ್ನರ್ಕಂಡ ಕವಿತ, ನೆಲ್ಲಮಕ್ಕಡ ಮೇನಕ ವಿಠಲ, ಬೊಳಿಯಾಡಿರ ಉಷಾ, ಕುಕ್ಕೆರ ಪದ್ಮಿನಿ ಸುಬ್ಬಯ್ಯ, ಅನ್ನರ್ಕಂಡ ಸೋಮಯ್ಯ, ಕುಕ್ಕೆರ ಅಶೋಕ್, ಮಂಡೇಪಂಡ ಕುಟ್ಟಣ್ಣ, ಕುಕ್ಕೆರ ಡಾಲು ಪೂಣಚ್ಚ, ಕುಕ್ಕೆರ ಕುಶ ಗಣಪತಿ, ನೆಲ್ಲಮಕ್ಕಡ ಪೊನ್ನಪ್ಪ, ಕುಕ್ಕೆರ ಬೋಪಣ್ಣ, ಕಳೆಯಂಗಡ ಗಣೇಶ್, ಕುಕ್ಕೆರ ಪೂವಯ್ಯ, ಕುಕ್ಕೆರ ಮುತ್ತಪ್ಪ, ಕುಕ್ಕೆರ ಅಯ್ಯಪ್ಪ, ಕಾಡುಮಂಡ ಮುತ್ತಣ್ಣ, ನೆಲ್ಲಮಕ್ಕಡ ಪವನ್ ಮುತ್ತಪ್ಪ, ಚೇರಂಡ ಸುಭಾಷ್, ಕುಕ್ಕೆರ ಗಣೇಶ್ ಗಣಪತಿ, ಬಲ್ಲರಂಡ ಅಭಿನ್, ಕಮಂಡರ್ ಕುಕ್ಕೆರ ಕೇಶು ಉತ್ತಪ್ಪ, ಬಲ್ಲಚಂಡ ವಿಠಲ್ ಕಾವೇರಪ್ಪ, ತೊಂಡಿಯಂಡ ವಾಸು ನಾಣಯ್ಯ, ಅಪ್ಪಚೆಟ್ಟೋಳಂಡ ಹರೀಶ್ ಸೋಮಯ್ಯ ಮತ್ತಿತರರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಸೆ.28 ರಂದು ಬೆಳಗ್ಗೆ 10ಕ್ಕೆ ಕಾಣತ್ತ್ ಮೂರ್ನಾಡ್ (ಮೂರ್ನಾಡ್-ಐಕೊಳ) (ಮಡಿಕೇರಿ ತಾಲ್ಲೂಕು) ಮಧ್ಯಾಹ್ನ 3 ಗಂಟೆಗೆ ಪಾಲಂದ ಮಂದ್, ಹಾಲುಗುಂದ. ಸಂಜೆ 5.30 ಗಂಟೆಗೆ ಚೆಂಬೆಬೆಳಿಯೂರ್ (ವಿರಾಜಪೇಟೆ ತಾಲ್ಲೂಕು), ಸೆ.29 ರಂದು ಬೆಳಗ್ಗೆ 10 ಗಂಟೆಗೆ ಎಡೆನಾಲ್‌ನಾಡ್ (ಮಗ್ಗುಲ), 2 ಗಂಟೆಗೆ ಕಳ್ಳಿರ ಬಾಣೆ ಮಂದ್ ಉಮ್ಮತನಾಡ್ ಅಮ್ಮತ್ತಿ-ಬಿಳುಗುಂದ (ವಿರಾಜಪೇಟೆ ತಾಲ್ಲೂಕು)ದಲ್ಲಿ ನಡೆಯಲಿದೆ ಎಂದು ನಾಚಪ್ಪ ತಿಳಿಸಿದ್ದಾರೆ.