ವಿರಾಜಪೇಟೆ ಮೇ 20 NEWS DESK : ಕಳೆದ ನಾಲ್ಕು ತಿಂಗಳ ಹಿಂದೆ ವಾಹನ ಅಪಘಾತಕ್ಕೀಡಾಗಿ ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿದ್ದ ಮರಗೋಡು ನಿವಾಸಿ ಜಯಂತಿಯವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಹಾಯಧನ ನೀಡಲಾಯಿತು.
ಜಯಂತಿ ಅವರ ಇಬ್ಬರು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು ಇವರಿಗೆ ಯಾವುದೇ ಆದಾಯದ ಮೂಲ ಇರುವುದಿಲ್ಲ. ಜಯಂತಿ ಅವರು ಸುಮಾರು 15 ವರ್ಷದಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಕ್ರೀಯ ಸದಸ್ಯರಾಗಿದ್ದು, ಇವರ ಈ ಸಂಕಷ್ಟದ ಸಮಯದಲ್ಲಿ ಇವರಿಗೆ ಸಹಾಯ ಮಾಡುವಂತೆ ಶ್ರೀ ಕ್ಷೇತ್ರಕ್ಕೆ ಮನವಿ ನೀಡಿದ್ದು ಮನವಿಗೆ ಸ್ಪಂದಿಸಿ ಕ್ಷೇತ್ರದಿಂದ 20,000/ ರೂ ನಗದು ಸಹಾಯಧನ ಮಂಜೂರಾಗಿ ಬಂದಿರುತ್ತದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಬಿ.ದಿನೇಶ್ ಗೌಡ ಮಾಹಿತಿ ನೀಡಿದರು.
ಸಹಾಯಧನ ನೀಡುವ ಸಂದರ್ಭ ವಿರಾಜಪೇಟೆ ತಾಲೂಕಿನ ಯೋಜನಾಧಿಕಾರಿ ಬಿ.ದಿನೇಶ್ ಗೌಡ ಹಾಗೂ ವಲಯದ ಮೇಲ್ವಿಚಾರಕರಾದ ಪ್ರತಾಪ್, ಸೇವಾ ಪ್ರತಿನಿಧಿ ಲತಾ ನೇತ್ರಾವತಿ, ಸಂಘದ ಎಲ್ಲಾ ಸದಸ್ಯರ ಸಮೂಹದಲ್ಲಿ ಸಹಾಯಧನವನ್ನು ಫಲಾನುಭವಿಗೆ ವಿತರಿಸಲಾಯಿತು.
ಕಳೆದ 2 ವರ್ಷಗಳಿಂದ ವಿರಾಜಪೇಟೆ ತಾಲೂಕಿನಲ್ಲಿ ಒಟ್ಟು 36 ಫಲಾನುಭವಿಗಳಿಗೆ 7,40,000 ಸಹಾಯಧನ ವಿತರಿಸಲಾಗಿದೆ ಎಂದು ಈ ಸಂದರ್ಭ ತಿಳಿಸಿದರು.