ಸುಂಟಿಕೊಪ್ಪ ಮೇ 29 NEWS DESK : ವೃಕ್ಷೋದ್ಭವ ಶಕ್ತಿ ಗಣಪತಿ ದೇವಾಲಯದ 20ನೇ ವಾರ್ಷಿಕೋತ್ಸವವು ಶ್ರದ್ಧಾಭಕ್ತಿಯಿಂದ ಜರುಗಿತು.
ದೇವಾಲಯದ ಪ್ರಧಾನ ಅರ್ಚಕ ಮಹಾಬಲಭಟ್ ಹಾಗೂ ಹಿರಿಯ ಅರ್ಚಕ ಹಾ.ಮಾ.ಗಣೇಶ್ ಶರ್ಮಾ ನೇತೃತ್ವದಲ್ಲಿ ನಾಗಮಂಡಲದ ಅರ್ಚಕರಾದ ಸಂತೋಷ್ ಹೆಬ್ಬಾರ್, ರಾಘವೇಂದ್ರ ಭಟ್, ರವಿ ಭಟ್ ಮುಂಜಾನೆಯಿಂದಲೇ ದೇವರಿಗೆ ಶುದ್ಧಪೂಜೆ, ಪ್ರಾರ್ಥನೆ, ಪುಣ್ಯಾಹವಾಚನ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.
ಹರದೂರು ಹೊಳೆಯಿಂದ ಜಲಕುಂಭಗಳನ್ನು ತಂದು ದೇವರಿಗೆ ಅಭಿಷೇಕ ಮಾಡಲಾಯಿತು. ನಂತರ ನವಗ್ರಹ ಹೋಮ, ಪೂರ್ವಕ 9 ತೆಂಗಿನಕಾಯಿಗಳ ಗಣಹೋಮ, ಪೂರ್ಣಾಹುತಿಯ ನಂತರ ದೇವರಿಗೆ ಪಂಚಾಮೃತಾಭಿಷೇಕ, ಪೂರ್ವಕತವಕ, ಕಲಭಿಷೇಕ, ಪೂರ್ವಕ ಮಹಾಪೂಜೆಯ ನಂತರ ಅಲಂಕಾರ, ವಿವಿಧ ಹೂವುಗಳ ಪೂಜೆಗಳು ನಡೆದವು.
ಮಧ್ಯಾಹ್ನ ಮಹಾಮಂಗಳಾರತಿ, ಅಷ್ಟವದನ ಸೇವೆ, ತೀರ್ಥಪ್ರಸಾದ ವಿನಿಯೋಗದ ನಂತರ ನೆರೆದಿದ್ದ ಭಕ್ತರಿಗೆ ಅನ್ನಸಂರ್ಪಣೆ ನೆರವೇರಿತು.
ದೇವಾಲಯದ ಟ್ರಸ್ಟಿ ಎ.ಲೋಕೇಶ್ ಕುಮಾರ್, ಉತ್ಸವ ಸಮಿತಿಯ ಅಧ್ಯಕ್ಷ ಎಂ.ಮಂಜುನಾಥ್, ಕಾರ್ಯದರ್ಶಿ ಸುನಿಲ್ ಕುಮಾರ್, ಪದಾಧಿಕಾರಿಗಳಾದ ಸದಾಶಿವ ರೈ, ಚಂದುಸುರೇಶ್, ಅರುಣ್ ಪೂಜಾರಿ, ದಿವಾಕರ ರೈ, ರಮೇಶ್ ಪೂಜಾರಿ, ವಸಂತ, ಬಿ.ಎಂ.ಸುರೇಶ್, ಸುರೇಶ್ ಗೋಪಿ ಸೇರಿದಂತೆ ಇತರರು ಇದ್ದರು.
ಸುಂಟಿಕೊಪ್ಪ, ಪನ್ಯ, ಬೆಟ್ಟಗೇರಿ, ಹರದೂರು ಸೇರಿದಂತೆ ಹಲವು ಗ್ರಾಮಗಳಿಂದ ಭಕ್ತರು ಆಗಮಿಸಿದ್ದರು.
ದೇವಸ್ಥಾನದ 20ನೇ ವಾರ್ಷಿಕೋತ್ಸವದ ಅಂಗವಾಗಿ ದೇವಾಲಯವನ್ನು ವಿದ್ಯುತ್ ದೀಪ ಹಾಗೂ ಬಣ್ಣದ ಹೂಗಳಿಂದ ಅಲಂಕಾರಗೊಳಿಸಲಾಗಿದ್ದು, ವಿಶೇಷ ಪೂಜಾ ಕೈಂಕರ್ಯಗಳೊಂದಿಗೆ ನೂರಾರು ಭಕ್ತರ ಸಮುಖದಲ್ಲಿ ಸಂಪನ್ನಗೊಂಡಿತು.










