
ವಿರಾಜಪೇಟೆ ಜೂ.13 NEWS DESK : ವಿರಾಜಪೇಟೆಯ ಕೊಡಗು ಬಾಲವಲೀಕಾರ್ ಉತ್ತಮ ಜೀವನ ಸಹಕಾರ ಸಂಘಕ್ಕೆ ಅಪೆಕ್ಸ್ ಬ್ಯಾಂಕ್ 1.50 ಲಕ್ಷ ರೂ. ಅನುದಾನ ನೀಡಿದೆ. ಈ ಕುರಿತು ಮಾಹಿತಿ ನೀಡಿದ ಸಂಘದ ಅಧ್ಯಕ್ಷ ಬಿ.ಜಿ.ನಟರಾಜ್ ಬೋರ್ಕರ್ ಅವರು, ಕೊಡಗು ಡಿಸಿಸಿ ಬ್ಯಾಂಕ್ ನ ಅಧ್ಯಕ್ಷ ಕೊಡಂದೇರ ಪಿ.ಬಾಂಡ್ ಗಣಪತಿ ಅವರ ಸಹಕಾರದಿಂದ ಈ ಅನುದಾನ ಸಂಘಕ್ಕೆ ದೊರೆತ್ತಿದ್ದು, ಆಡಳಿತ ಮಂಡಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು. ದೊರೆತ ಅನುದಾನವನ್ನು ಸಂಘದ ಅಭಿವೃದ್ಧಿ ಕಾರ್ಯಗಳಿಗೆ ಬಳಸಲಾಗುವುದು ಎಂದರು. ಈ ಸಂದರ್ಭ ಸಂಘದ ಉಪಾಧ್ಯಕ್ಷರಾದ ಸ್ವಾತಿ ಬಿ.ಪಿ, ಕಾರ್ಯದರ್ಶಿ ಉದಯಶಂಕರ್ ಬಿ.ಆರ್ ಹಾಗೂ ಸದಸ್ಯರು ಉಪಸ್ಥಿತರಿದ್ದರು.









