ಮಡಿಕೇರಿ ಜೂ.13 NEWS DESK : ಜೀವನದ ಮೊದಲ ನಾಯಕ ಅಪ್ಪ, ಅಪ್ಪ ಎಂದರೇ ಜೀವನದ ಉದಕ್ಕೂ ಮುಗಿಯದ ಅನುಬಂಧ. ತನ್ನ ಕಷ್ಟಗಳನ್ನು ಯಾರೊಂದಿಗೂ ಹಂಚಿಕೊಳ್ಳದೆ ತನ್ನ ಮಕ್ಕಳ ಶ್ರೇಯೋಭಿವೃದ್ಧಿ ಶ್ರಮಿಸುವ ಒಂದೇ ಒಂದು ಜೀವ ಅದು ಅಪ್ಪ. ಅಪ್ಪ ಎಂಬ ಪದದ ವ್ಯಕ್ತಿ ಯಾರು? ಮಕ್ಕಳ ಬದುಕಿನಲ್ಲಿ ಅಪ್ಪ ಎಂಬ ವ್ಯಕ್ತಿಯ ಪಾತ್ರವೇನ್ನೂ ಎಂಬುದನ್ನು ನಾವು ನೆನಪಿಸಿಕೊಳ್ಳಬೇಕಾದ ದಿನ ಅಪ್ಪಂದಿರ ದಿನ.
ಭೂಮಿಗಿಳಿದ ಮಗುವಿನ ಸಕಲ ಜವಾಬ್ದಾರಿಗಳನ್ನು ಹೊರುವ ತಂದೆ. ಇನ್ನೊಂದು ತಾಯಿಯ ಮಮತೆಯ ಮಡಿಲು ಇವು ಜನಿಸಿದ ಮಗುವಿನ ಮೊದಲ ದೇವಲೋಕ, ಏನು ಅರೀವಿಲ್ಲದ ಜೀವನಕ್ಕೆ ತಂದೆ ತಾಯಿಯ ಬೆಲೆ ಹಾಗೂ ಆ ಪದದ ಅರ್ಥ ಗೊತ್ತಾಗುವುದೇ ಅವುಗಳನೂ ಕಳೆದು ಕೊಂಡಾಗ ಮಾತ್ರ ಎನ್ನಬಹುದು.
ಪ್ರತಿ ವರ್ಷ ಜೂನ್ 3ನೇ ಭಾನುವಾರದಂದು ಅಪ್ಪಂದಿರಿಗೆ ಗೌರವ ಕೊಡುವ ಸಲುವಾಗಿ ಅಂತರರಾಷ್ಟ್ರೀಯ ಅಪ್ಪಂದಿರ ದಿನವನ್ನು ಆಚರಣೆ ಮಾಡಲಾಗುತ್ತಿದೆ. ಭಾರತ ಅಮೇರಿಕ ಸೇರಿದಂತೆ ಪ್ರಪಂಚದ 100ಕ್ಕೂ ಅಧಿಕ ದೇಶದಲ್ಲಿ ಈ ದಿನವನ್ನು ಅಪ್ಪಂದಿರ ದಿನವಾಗಿ ಆಚರಣೆ ಮಾಡಲಾಗುತ್ತಿದೆ. ಜೂನ್ 16 ರಂದು ಅಮೇರಿಕದ ವಾಷಿಂಗ್‌ಟನ್‌ನಲ್ಲಿ ಮೊದಲ ಬಾರಿಗೆ ಅಪ್ಪಂದಿರ ದಿನಾಚರಣೆಯನ್ನು ಆಚರಿಸಲಾಯಿತು. ತಂದೆ ಮಕ್ಕಳಿಗೆ ತಂದೆಯ ಜವಾಬ್ದಾರಿಯಾಗಿ ಜೀವನದೂದಕ್ಕೂ ಮಾಡುವ ತ್ಯಾಗವನ್ನು ಸ್ಮರಿಸುವ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ.
ಪ್ರತಿಯೊಬ್ಬರ ಜೀವನದಲ್ಲಿ ಕೆಟ್ಟದ್ದು ಮತ್ತು ಒಳ್ಳೆಯದನ್ನು ಕಲಿಸುವ ಮೊದಲ ಶಿಕ್ಷಕ ಅಪ್ಪ ನಮ್ಮ ಜೀವನದಲ್ಲಿ ಅಪ್ಪ ಮಾರ್ಗದರ್ಶಕನಾಗಿರುತ್ತಾರೆ. ಎಲ್ಲಾ ಸಮಸ್ಯೆಗಳಿಗೆ ತನ್ನನ್ನು ತಾನು ತ್ಯಾಗ ಮಾಡುವ ತ್ಯಾಗಮಾಯಿಯಾಗಿರುತ್ತಾನೆ. ಅದೆಷ್ಟೆ ತಪ್ಪುಗಳನ್ನು ಮಾಡಿದ್ದರು ಅದನ್ನು ತಿದ್ದಿ ಬುದ್ದಿ ಹೇಳುವ ಅಪ್ಪನ ಮನಸ್ಸು ದೊಡ್ಡದ್ದು, ಅದನ್ನು ವರ್ಣಿಸಲು ಅಸಾಧ್ಯ.
ಕುಟುಂಬ ಎನ್ನುವ ದೊಡ್ಡ ತೆರನ್ನು ಸಮಯಕ್ಕೆ ಅನುಗುಣವಾಗಿ ಎಲ್ಲವನ್ನು ತನ್ನೊಳಗೆ ಜೀರ್ಣಿಸಿಕೊಂಡು ಎಳೆಯುವ ಏಕೈಕ ವ್ಯಕ್ತಿ ಅಪ್ಪ ಕುಟುಂಬ ಎನ್ನುವ ರಥಕ್ಕೆ ತಂದೆ-ತಾಯಿ ಇಬ್ಬರು ಕಾರಣರಾದರೆ ಮಕ್ಕಳು ಅದರ ಪಾಲುದಾರರು ಮಕ್ಕಳ ಮೇಲೆ ಬೇರೆಯವರಿಂದ ದಾಳಿಯಾದರೆ ತಂದೆ ರಕ್ಷಕನಾಗುತ್ತಾನೆ. ಮಕ್ಕಳ ಭವಿಷ್ಯ ರೂಪಿಸುವಲ್ಲಿ ಅಪ್ಪ ಪ್ರಮುಖ ಪಾತ್ರದಾರಿಯಾಗಿರುತ್ತಾನೆ. ತನ್ನ ಮಕ್ಕಳ ಸಂತೋಷವೇ ಆತನಿಗೆ ಮುಖ್ಯ ತನ್ನ ಮಕ್ಕಳ ಭವಿಷ್ಯಕ್ಕಾಗಿ ತನ್ನ ಜೀವನವನ್ನು ದಾರೇ ಎರೆವ ದೇವತಮೂರ್ತಿ ತಂದೆ, ಆತನ ಋಣ ತೀರಿಸಲಾಗದು. ಆತನ ಪ್ರೀತಿಗೆ ಬೆಲೆ ಕಟ್ಟಲಾಗದು, ಎಂದೆ ಎಂದೆಗೂ ಮಕ್ಕಳ ಎಳಿಗೆಗೆ ಕಾರಣನಾಗಿರುತ್ತಾನೆ. ಅಪ್ಪ ಎನ್ನುವುದಕ್ಕೆ ಅದೆನೋ ಗತ್ತು. ಪ್ರಸ್ತುತ ಪರಿಸ್ಥಿತಿಗೆ ತಕ್ಕಂತೆ ಬದಲಾಗಿದನೇ ಅಪ್ಪ ಬದಲಾಗುತ್ತಿದ್ದಾನೆ ಎಂದರೆ ತಪ್ಪಾಗಲಾರದು. ಅಪ್ಪನೆಂದರೆ ತ್ಯಾಗ ಅಪ್ಪನೆಂದರೆ ಬದುಕು. ಮೌನವಾಗಿ ನಮ್ಮೆಲ್ಲ ಜವಬ್ದಾರಿಯನ್ನು ಹೋರುವ ಅಪ್ಪನಿಗೆ ಒಂದು ಸಲಾಂ.
ಅಪ್ಪ ಅಮ್ಮನಂತೆ ಸಲುಗೆಯಿಂದ ಇರುವುದು ಕಡಿಮೆ ಜೀವನದ ಉದ್ದಕ್ಕೂ ಗಡುಸಾಗಿಯೇ ಕಾಣಿಸುವ ಅಪ್ಪನಲ್ಲಿ ಅಮ್ಮನ ಪ್ರೀತಿಗಿಂತ ವಿಶಾಲವಾಗಿರುತ್ತದೆ. ಅಪ್ಪ ಅಮ್ಮನ ಪ್ರೀತಿ, ಕೇವಲ ಸ್ಟೇಟಸ್‌ಗಳಲ್ಲಿ ಪ್ರೀತಿ ತೋರಿಸಿಕೊಳ್ಳುವುದಕ್ಕಿಂತ ತನ್ನ ಅಂತರಾಳದಲ್ಲಿ ಅಪ್ಪನ ಗೌರವಕ್ಕೆ ಕಳಂಕ ಬಾರದ ರೀತಿಯಲ್ಲಿ ತಮ್ಮ ನಡವಳಿಕೆಗಳಲ್ಲಿ ಮಕ್ಕಳು ತೊರಿಸಿದರೆ, ಅಪ್ಪಂದಿರ ದಿನಕ್ಕೊಂದು ಅರ್ಥ ಬರುತ್ತದೆ.
ವರದಿ : ಪಿ.ಪಿ.ಸುಕುಮಾರ
ಹಾಕತ್ತೂರು