Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಸರಕಾರಿ ಶಾಲೆಗಳು ಮುಚ್ಚುವ ಭೀತಿ : ಕೊಡಗಿನಲ್ಲಿ ಕೆಪಿಎಸ್ ಮ್ಯಾಗ್ನೇಟ್ ಯೋಜನೆಗೆ ವಿರೋಧ*
  • *ಕೂಡಿಗೆ ಸೈನಿಕ ಶಾಲೆಯಲ್ಲಿ ಸಾಂಸ್ಕೃತಿಕ ವೈಭವದ ಅನಾವರಣ : 12ನೇ ತರಗತಿ ಕೆಡೆಟ್‌ಗಳಿಗೆ ಬೀಳ್ಕೊಡುಗೆ*
  • *ಅಶುಭ ಭಾನುವಾರ : ಈಜಲು ಹೋದ ನಾಲ್ವರು ಮಕ್ಕಳ ದುರಂತ ಅಂತ್ಯ*
  • *ಕರ್ನಾಟಕ ರಾಜ್ಯದಲ್ಲಿ ಆಟೋ ಎಲ್‌ಪಿಜಿ ಸರಬರಾಜು ಸ್ಥಿತಿಗತಿ : ಎಲ್ಲಾ ವಲಯಗಳಿಗೂ ಯಾವುದೇ ಅಡೆತಡೆಯಿಲ್ಲದೆ ಎಲ್‌ಪಿಜಿ ಸರಬರಾಜು*
  • *ಸುಂಟಿಕೊಪ್ಪದಲ್ಲಿ ಕೈಸ್ತ ಬಾಂಧವರಿಂದ ಪವಿತ್ರ ವಾರದ ಸಂಕೇತ ಗರಿಗಳ ಭಾನುವಾರ ಆಚರಣೆ : 40 ದಿನಗಳ ಉಪವಾಸ*
  • *ಕೊಡಗಿನ ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ಮುಖ್ಯಮಂತ್ರಿ ಪದಕ*
  • *ಕೊಡಗಿನ ವಿವಿಧೆಡೆ ಗುಡುಗು, ಸಿಡಿಲು ಸಹಿತ ಮಳೆ : ಮರ ಬಿದ್ದು ಸಂಚಾರ ವ್ಯತ್ಯಯ : ಹೊತ್ತಿ ಉರಿದ ತೆಂಗಿನ ಮರ*
  • *ಸಹಾಯ ಧನ ಮತ್ತು ವಸತಿಗಾಗಿ ಒತ್ತಾಯಿಸಿ ಎಸ್‌ಡಿಟಿಯು ಮನವಿ*
  • *ಮಂದಗತಿಯಲ್ಲಿ ಸಾಗುತ್ತಿರುವ ಅಮೃತ್ ಕಾಮಗಾರಿ : ಮಡಿಕೇರಿ ನಗರಸಭೆ ಸಾಮಾನ್ಯ ಸಭೆಯಲ್ಲಿ ತೀವ್ರ ಅಸಮಾಧಾನ*
  • *ಪೊಲೀಸ್ ವಸತಿ ಗೃಹ, ಸಮುದಾಯ ಭವನಗಳಿಗೆ ಕೊಡಗು ಎಸ್‌ಪಿ ಬಿಂದುಮಣಿ ಭೇಟಿ : ಪರಿಶೀಲನೆ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಹಾಕಿ ಆಟಗಾರರಿಗೆ ನೆರಳಿನಂತಿದ್ದ ಮಾಲೆಟೀರ ಶೆರಿ ಬೆಳ್ಳಿಯಪ್ಪ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಹಾಕಿ ಆಟಗಾರರಿಗೆ ನೆರಳಿನಂತಿದ್ದ ಮಾಲೆಟೀರ ಶೆರಿ ಬೆಳ್ಳಿಯಪ್ಪ*

ಜುಲೈ 23, 20243 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಜು.23 NEWS DESK : ಹಿರಿಯ ಪತ್ರಕರ್ತರಾದ ಮನೆಯಪಂಡ ಪೊನ್ನಪ್ಪ ಹಾಕಿ ಆಟಕ್ಕೆ ಪ್ರೋತ್ಸಾಹ ನೀಡಿದವರ ಬಗ್ಗೆ ಲೇಖನ ರಚಿಸಿದ್ದರು. ನನ್ನ ಗುರುಗಳೂ ಆದ ಅವರ ಲೇಖನಗಳ ಕೆಲವು ಅಂಶಗಳನ್ನು ಆರಿಸಿ ಓದುಗರಿಗೆ ತಿಳಿಸಲು ಬಯಸಿದ್ದೇನೆ.
ಮಾಲೆಟೀರ ಶೆರಿ ಬೆಳ್ಳಿಯಪ್ಪ ಅವರು ತಮ್ಮ ಬದುಕಿನುದ್ದಕ್ಕೂ ಹಲವು ಸವಾಲುಗಳನ್ನು ಎದುರಿಸುತ್ತಲೇ ನಡೆದರು. ನ್ಯಾಯಕ್ಕಾಗಿ ಬದ್ಧ, ಅನ್ಯಾಯವನ್ನೆಂದೂ ಸಹಿಸಿದವರಲ್ಲ. ಕ್ರೀಡಾ ವಲಯದಲ್ಲಿ ಅವರೊಬ್ಬ ಚೈತನ್ಯಶೀಲ ವ್ಯಕ್ತಿ ಆಗಿದ್ದರು.
70 ರಿಂದ 90ರ ದಶಕದವರೆಗೆ ಬೆಂಗಳೂರಿನಲ್ಲಿ ತಮ್ಮ ವಕೀಲ ವೃತ್ತಿಜೀವನ ನಡೆಸಿದರು. ಇವರು ಸ್ವತಃ ಹಾಕಿ ಆಟಗಾರರಲ್ಲದಿದ್ದರೂ ಈ ಆಟದ ಬಗ್ಗೆ ಸಂಪೂರ್ಣ ತಿಳಿದಿದ್ದರು. ಕ್ರೀಡಾ ಆಡಳಿತಗಾರರಾಗಿ ದುಡಿದು ಯುವ ಪ್ರತಿಭೆಗಳನ್ನು ಬೆಳಕಿಗೆ ತಂದರು. ಹಾಕಿ ಆಟಗಾರರ ಬೆಳವಣಿಗೆಗೆ ಕೊಡಗು ಮತ್ತು ಬೆಂಗಳೂರು ಹಾಕಿ ವಲಯಗಳ ನಡುವೆ ಸೇತುವೆಯಂತಿದ್ದರು.
ಹಾಕಿ ಕ್ರೀಡೆಗೆ ಹೊಸ ಪೀಳಿಗೆಯ ಹುಡುಗರನ್ನು ತರಲೆಂದು ಖುದ್ದು ಖಾಸಗಿ ಹಾಕಿ ಕ್ಲಬ್ ಒಂದನ್ನು ಹುಟ್ಟು ಹಾಕಿದ್ದರು. “ಕೂರ್ಗ್ ಬ್ಲೂಸ್” ಕ್ಲಬ್ಬಿನ ಹೆಸರು, ಶೆರಿ ಬೆಳ್ಳಿಯಪ್ಪ ತಮ್ಮ ಕ್ಲಬ್‌ನಲ್ಲಿ ಆನೇಕ ಹುಡುಗರಿಗೆ ಹಾಕಿ ತರಬೇತಿ ಕೊಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಇದರ ಜೊತೆಗೆ ಕರ್ನಾಟಕ ರಾಜ್ಯ ಹಾಕಿ ಸಂಸ್ಥೆಯ ಆಡಳಿತ ವರ್ಗದಲ್ಲಿ ಹಲವು ಸಮಿತಿ ಗಳಲ್ಲಿ ಉತ್ಸಾಹದಿಂದ ತಮ್ಮ ಸೇವೆ ಸಲ್ಲಿಸಿದ್ದರು. ಹಾಕಿ ಸಂಸ್ಥೆಯಲ್ಲಿ ಹತ್ತು ಬಾರಿ ಉಪಾಧ್ಯಕ್ಷರಾಗಿ ಮತ್ತು ಹತ್ತು ಬಾರಿ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಬೆಳ್ಳಿಯಪ್ಪ ಸೇವೆ ಸಲ್ಲಿಸಿದ್ದಾರೆ.
ಸ್ನೇಹಮಯಿ ವಕೀಲ :: ಬೆಳ್ಳಿಯಪ್ಪ ಅವರದ್ದು ವಿಶೇಷವಾದ ವ್ಯಕ್ತಿತ್ವ, ಖಾಸಗಿ ಬದುಕಿನಲ್ಲಾಗಲಿ, ವೃತ್ತಿ ಬದುಕಿನಲ್ಲಾಗಲಿ ನುಡಿದಂತೆ ನಡೆದರು ಮತ್ತು ನಡೆದಂತೆ ನುಡಿದರು. ಹೊರ ನೋಟಕ್ಕೆ ಕೊಂಚ ಬಿಗುವಿನ ಮನುಷ್ಯರಂತೆ ಕಂಡರೂ ಸ್ನೇಹಮಯಿ, ಎಲ್ಲರನ್ನೂ ಆತ್ಮೀಯತೆಯಿಂದ ಕಾಣುವ ಮನೋಭಾವ, ಭಾವಾವೇಶಕ್ಕೆ ಒಳಗಾದವರಲ್ಲ, ಎದುರಾದ ಯಾವುದೇ ಸಮಸ್ಯೆಯನ್ನು ಹಗುರವಾಗಿ ಬಗೆಹರಿಸಬಲ್ಲವರಾಗಿದ್ದರು. ಕ್ಲಿಷ್ಟಕರ ಸಮಸ್ಯೆಗಳಿಗೆ ಹೋರಾಟದ ಹಾದಿ ಹಿಡಿದು ಉತ್ತರ ಕಂಡುಕೊಡುತ್ತಿದ್ದರು.
ಶೆರಿ ಬೆಳ್ಳಿಯಪ್ಪ ವೃತ್ತಿಯಲ್ಲಿ ವಕೀಲರಾಗಿದ್ದವರು. ಹೈಕೋರ್ಟ್‌ನಲ್ಲಿ ಬಹಳ ವರ್ಷ ಸೇವೆ ಸಲ್ಲಿಸಿದ್ದ ಇವರು ಪೊನ್ನಪ್ಪನವರ ನಿಕಟವರ್ತಿ, ಅನೇಕ ಬಾರಿ ಹಾಕಿ ತಂಡಗಳ ನಡುವಿನ ಜಗಳಗಳನ್ನು ಕಂಡಿದ್ದರು. ಕ್ಷುಲ್ಲಕ ಕಾರಣಗಳಿಗೆ ಬಡಿದಾಡಿಕೊಳ್ಳು ಹಂತಕ್ಕೆ ತಲುತ್ತಿದ್ದ ಆಟಗಾರರನ್ನು ನೋಡಿದ ಬೆಳ್ಳಿಯಪ್ಪನವರು “ಪ್ರಪಂಚ ಇರುವುದು ಹೀಗೆ, ಕ್ರೀಡಾಪಟುಗಳು ಇಂಥದ್ದೇ ಸ್ವಭಾವ ಉಳ್ಳವರಾಗಿರುತ್ತಾರೆ. ಅದಕ್ಕಾಗಿ ತಲೆಕೆಡಿಸಿಕೊಳ್ಳಬಾರದು” ಎಂದು ಹೇಳುತ್ತಿದ್ದರಾದರೂ ಜಾಣ್ಮೆಯಿಂದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಿದ್ದರು. ಕೈಮೀರಿ ಹೋದಲ್ಲಿ, ಕಾನೂನು ಬಾಹಿರವಾಗಿ ಯಾರಾದರೂ ನಡೆದುಕೊಂಡಲ್ಲಿ ಮುಲಾಜಿಲ್ಲದೆ ಅಂಥವರ ವಿರುದ್ಧ ಶಿಸ್ತು ಸಮಿತಿ ಅಧ್ಯಕ್ಷರಿಗೆ ಕ್ರಮ ಜರುಗಿಸುವಂತೆ ಶಿಫಾರಸ್ಸು ಮಾಡುತ್ತಿದ್ದರು.
ಶಾರದಾ ಲಂಚ್ ಹೋಂ :: ಬೆಂಗಳೂರಿನ ಕಾಕ್ಸ್ ಟೌನ್ ನಲ್ಲಿ ಇವರಿದ್ದ ಶಾರದಾ ಲಂಚ್ ಹೋಂನಲ್ಲಿ, ಇವರ ಕಚೇರಿಯ ಮೇಲ್ಮಹಡಿಯ 3-4 ಕೊಠಡಿಗಳನ್ನು ಕೊಡಗಿನಿಂದ ಬೆಂಗಳೂರಿಗೆ ಬರುವ ಆಟಗಾರರಿಗೆ ತಂಗಲು ವಸತಿ ಹಾಗೂ ಊಟದ ವ್ಯವಸ್ಥೆಗಳನ್ನು ಕಲ್ಪಿಸಿ ಸಾಕಿ ಸಲಹುತಿದ್ದರು.
ಹಿನ್ನೆಲೆ : ವೀರಾಜಪೇಟೆ ಕಕ್ಲೂರು ಗ್ರಾಮದ (ಬೈಗೋಡು) ಮಾಳೇಟೀರ ಸುಬ್ಬಯ್ಯ ಮತ್ತು ಬೊಳ್ಳವ್ವ (ತಾಮನೆ ಕೊಂಗೇಟಿರ) ದಂಪತಿಗಳಿಗೆ ಒಟ್ಟು ಹತ್ತು ಮಂದಿ ಮಕ್ಕಳಲ್ಲಿ ಬೆಳ್ಳಿಯಪ್ಪ ಏಳನೇಯವರು.
1942ರಲ್ಲಿ ಜನಿಸಿದ ಶೆರಿ ಬೆಳ್ಳಿಯಪ್ಪ, ಪ್ರಾಥಮಿಕ ವಿದ್ಯಾಭ್ಯಾಸವನ್ನು ದಕ್ಷಿಣ ಕೊಡಗಿನ ಸರ್ಕಾರಿ ಪ್ರೌಢಶಾಲೆಯಲ್ಲಿ, ನಂತರ ಮಡಿಕೇರಿ ಸರ್ಕಾರಿ ಕಾಲೇಜ್‌ನಲ್ಲಿ ವ್ಯಾಸಾಂಗ ಮಾಡಿ ಪದವಿ ಪಡೆದರು. ನಂತರ ಮೈಸೂರಿನ ಶಾರದಾ ವಿಲಾಸ ಕಾಲೇಜಿನಲ್ಲಿ ಕಾನೂನು ಪದವಿ, ಬೆಂಗಳೂರಿನಲ್ಲಿ ವಕೀಲ ವೃತ್ತಿ ಮತ್ತು ಕ್ರೀಡಾ ಆಡಳಿತ ಸೇವೆ. ಇವರ ಸ್ನೇಹಿತರ ವಲಯ ದೊಡ್ಡದು.
ಕರ್ನಾಟಕ ರಾಜ್ಯ ಹಾಕಿ ಸಮಿತಿಯ ಆಯ್ಕೆ ಸಮಿತಿ ಸದಸ್ಯರಾಗಿದ್ದ ಬೆಳ್ಳಿಯಪ್ಪ ನಿಷ್ಪಕ್ಷಪಾತವಾಗಿ ಆಟಗಾರರನ್ನು ರಾಜ್ಯ ತಂಡಗಳಿಗೆ ಆಯ್ಕೆ ಮಾಡುತ್ತಿದ್ದರು. ತಂಡದ ಆಯ್ಕೆಯಲ್ಲಿ ಕೊಡಗಿನ ಆಟಗಾರರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುತ್ತಿದ್ದರು. ಇವರಿಂದ ನೈಜ ಆಟಗಾರರು ಎತ್ತರಕ್ಕೆ ಬೆಳೆದರು. ಆಗೆಲ್ಲಾ ಸ್ಟಾರ್ ಆಟಗಾರರನ್ನು ಕೊಡಗಿಗೆ ಕರೆತಂದು ಹೊಸ ಪೀಳಿಗೆಯ ಆಟಗಾರರನ್ನು ಹುರಿದುಂಬಿಸುತ್ತಿದ್ದರು.
ಶೆರಿ ಬೆಳ್ಳಿಯಪ್ಪ ಎಂದರೆ ಹಾಕಿಯ ಸ್ವಾಭಿಮಾನದ ಪ್ರತೀಕ. ಹಾಕಿ ಕ್ಷೇತ್ರದ ಎಲ್ಲರಿಗೂ ತುಂಬಾ ಇಷ್ಟವಾಗುತ್ತಾ ಹೋಗುತ್ತಾರೆ. ಇಂತಹ ಸರಳ ವ್ಯಕ್ತಿ ಹಾಕಿಯ ದೊಡ್ಡ ಆಸ್ತಿ ಆಗಿದ್ದರು. ಕೊಡಗಿನ ತರುಣ ಆಟಗಾರರಿಗೆ ಪ್ರೇರಕ ಶಕ್ತಿಯಾಗಿ, ಭವಿಷ್ಯಕ್ಕೆ “ಗಾಡ್ ಫಾದರ್” ಆಗಿ ಗಮನ ಸೆಳೆದಿದ್ದು ಹೆಮ್ಮೆಯ ವಿಷಯ. ಹಾಕಿ ವಲಯದ ಹಿರಿಯ, ಕಿರಿಯರೆಲ್ಲರನ್ನೂ ಒಂದೇ ಭಾವನೆಯಿಂದ ಕಾಣುತ್ತಿದ್ದ, ಅವರು ಕಾರ್ಯದಕ್ಷತೆಗೆ ಸಾಕ್ಷಿಯಾಗಿದ್ದರು.
ಅಂದಿನ ಕಾಲದಲ್ಲಿ ಕೊಡಗಿನಲ್ಲಿ ನಡೆಯುತ್ತಿದ್ದ ಪ್ರಮುಖ ಟೂರ್ನಿಗಳಿಗೆ ಕೊಡಗು ಇಲೆವೆನ್ ತಂಡದ ಹೆಸರಿನಲ್ಲಿ ಆಟಗಾರರನ್ನು ಅತಿಥಿ ಆಟಗಾರರಾಗಿ ಕರೆದುಕೊಂಡು ಬರುತ್ತಿದ್ದರು. ಇದರಿಂದ ಬೆಳ್ಳಿಯಪ್ಪ ಅವರ ಕ್ರೀಡಾ ಮನೋಭಾವ ಕೊಡಗಿನ ಕ್ರೀಡಾಭಿಮಾನಿಗಳಿಗೆ ಸಂತಸದ ವಿಷಯವಾಗಿತ್ತು. ಬಲ್ಟಿಕಾಳಂಡ ರಘು ಮೇದಪ್ಪ, ಅಮ್ಮಂಡ ವಾಸು ಉತ್ತಯ್ಯ, ಕ್ಯಾಲೇಟಿರ ಪಾಲ್ ಸುಬ್ಬಯ್ಯ, ಆಯ್ಯುಡ ವೇಣು ಉತ್ತಪ್ಪ, ಪಾರುವಂಗಡ ನಂದು ನಂಜಪ್ಪ, ಮುಕ್ಕಾಟರ ಅಪ್ಪಚ್ಚು ಮುಂತಾದವರು ಕೊಡಗು ಇಲೆವೆನ್ ತಂಡದಲ್ಲಿ ಆಡುತ್ತಿದ್ದರು. ಇವರ ಆಟ ನೋಡಲು ಕ್ರೀಡಾಭಿಮಾನಿಗಳು ಕಕ್ಕಿರಿದು ನೆರೆದಿರುತ್ತಿದ್ದರು. ಕೊಡಗಿನಲ್ಲಿ ಅನೇಕ ಹಾಕಿ ಪಂದ್ಯಾಟಗಳನ್ನು ಗೆದ್ದ ಕೀರ್ತಿ ಈ ತಂಡಕ್ಕಿತ್ತು.
ಹೀಗೊಂದು ಟೂರ್ನಿ :: ವಿರಾಜಪೇಟೆಯ ಜೂನಿಯರ್ ಕಾಲೇಜು ಮೈದಾನದಲ್ಲಿ ಅಂದು ನಡೆಯುತ್ತಿದ್ದ ನೆಲ್ಲಮಕ್ಕಡ ಉತ್ತಪ್ಪ ಮೆಮೋರಿಯಲ್ ಟೂರ್ನಿ ಕೂರ್ಗ್ – 11 ವಿರುದ್ಧ ಬಿ.ಬಿ.ಸಿ ತಂಡ ಆಡಿತು. ಬಿ.ಬಿ.ಸಿ ಆಟಗಾರರಾದ ಅಚ್ಚಕಾಳೀರ ಪಳಂಗಪ್ಪ, ಎಂ.ಪಿ.ಗಣೇಶ್, ವಾಂಜಂಡ ಚರ್ಮಣ, ಕೂತಂಡ ಚೆಂಗಪ್ಪ, ಮುಂಡುಮಾಡ ರಾಮು, ಕೊಕ್ಕಂಡ ತಿಮ್ಮು, ಮುಂತಾದವರು ತಮ್ಮ ಆಟದ ಮೂಲಕ ಅದ್ಭುತ ರಸದೌತಣವನ್ನು ಪ್ರೇಕ್ಷಕರಿಗೆ ಉಣಬಡಿಸಿದರು.
ಕೊಡಗಿನ ಅನೇಕ ಆಟಗಾರರಿಗೆ ಬೆಂಗಳೂರಿನ ವಿವಿಧ ಸಾರ್ವಜನಿಕ ಉದ್ದಿಮೆಗಳಲ್ಲಿ ಉದ್ಯೋಗ ಒದಗಿಸುವಲ್ಲಿ ಶೆರಿ ಬೆಳ್ಳಿಯಪ್ಪ ಶ್ರಮಿಸಿದ್ದಾರೆ.
ಇವರು 2005 ಅಕ್ಟೋಬರ್ 21ರಂದು ನಿಧನರಾದರು. ಅವರಿಗೆ ಪತ್ನಿ ವಿಮು (ತಾಮನೆ ಅಜ್ಜೀರಂಡ) ಪುತ್ರಿ ಶ್ರುತಿ ಬೊಳ್ಳಮ್ಮ ಇದ್ದಾರೆ. ಇಂಜಿನಿಯರಿಂಗ್ ಪದವೀಧರೆ ಆಗಿರುವ ಬೊಳ್ಳಮ್ಮ ಒರಾಕಲ್ ಕಂಪೆನಿಯಲ್ಲಿ ಉದ್ಯೋಗಿ ಆಗಿದ್ದಾರೆ. ಬೆಳ್ಳಿಯಪ್ಪ ಅವರ ಸಾಧನೆಗಳಿಗೆ, ಸಂಭ್ರಮಗಳಿಗೆ ಬೆಲೆ ದೊರಕಿದಂತಾಗಿದೆ ಎಂಬದು ನನ್ನ ಪ್ರಾಮಾಣಿಕ ಅನಿಸಿಕೆ.

ಕ್ರೀಡಾ ವಿಶ್ಲೇಷಣೆ :: ಚೆಪ್ಪುಡೀರ ಕಾರ್ಯಪ್ಪ 

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಸರಕಾರಿ ಶಾಲೆಗಳು ಮುಚ್ಚುವ ಭೀತಿ : ಕೊಡಗಿನಲ್ಲಿ ಕೆಪಿಎಸ್ ಮ್ಯಾಗ್ನೇಟ್ ಯೋಜನೆಗೆ ವಿರೋಧ*

ಮಾರ್ಚ್ 29, 2026

*ಕೂಡಿಗೆ ಸೈನಿಕ ಶಾಲೆಯಲ್ಲಿ ಸಾಂಸ್ಕೃತಿಕ ವೈಭವದ ಅನಾವರಣ : 12ನೇ ತರಗತಿ ಕೆಡೆಟ್‌ಗಳಿಗೆ ಬೀಳ್ಕೊಡುಗೆ*

ಮಾರ್ಚ್ 29, 2026

*ಅಶುಭ ಭಾನುವಾರ : ಈಜಲು ಹೋದ ನಾಲ್ವರು ಮಕ್ಕಳ ದುರಂತ ಅಂತ್ಯ*

ಮಾರ್ಚ್ 29, 2026

*ಕೂಡಿಗೆ ಸೈನಿಕ ಶಾಲೆಯಲ್ಲಿ ಸಾಂಸ್ಕೃತಿಕ ವೈಭವದ ಅನಾವರಣ : 12ನೇ ತರಗತಿ ಕೆಡೆಟ್‌ಗಳಿಗೆ ಬೀಳ್ಕೊಡುಗೆ*

ಮಾರ್ಚ್ 29, 2026 ಇತ್ತೀಚಿನ ಸುದ್ದಿಗಳು ಕರ್ನಾಟಕ ಕೊಡಗು ಜಿಲ್ಲೆ

ಮಡಿಕೇರಿ NEWS DESK ಮಾ.29 : ಕೂಡಿಗೆಯ ಸೈನಿಕ ಶಾಲೆ ಕೊಡಗು ತನ್ನ ಕುವೆಂಪು ವಿವಿಧೋದ್ದೇಶ ಸಭಾಂಗಣದಲ್ಲಿ 2025–26ನೇ ಶೈಕ್ಷಣಿಕ…

*ಅಶುಭ ಭಾನುವಾರ : ಈಜಲು ಹೋದ ನಾಲ್ವರು ಮಕ್ಕಳ ದುರಂತ ಅಂತ್ಯ*

ಮಾರ್ಚ್ 29, 2026

*ಕರ್ನಾಟಕ ರಾಜ್ಯದಲ್ಲಿ ಆಟೋ ಎಲ್‌ಪಿಜಿ ಸರಬರಾಜು ಸ್ಥಿತಿಗತಿ : ಎಲ್ಲಾ ವಲಯಗಳಿಗೂ ಯಾವುದೇ ಅಡೆತಡೆಯಿಲ್ಲದೆ ಎಲ್‌ಪಿಜಿ ಸರಬರಾಜು*

ಮಾರ್ಚ್ 29, 2026

*ಸುಂಟಿಕೊಪ್ಪದಲ್ಲಿ ಕೈಸ್ತ ಬಾಂಧವರಿಂದ ಪವಿತ್ರ ವಾರದ ಸಂಕೇತ ಗರಿಗಳ ಭಾನುವಾರ ಆಚರಣೆ : 40 ದಿನಗಳ ಉಪವಾಸ*

ಮಾರ್ಚ್ 29, 2026

*ಕೊಡಗಿನ ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ಮುಖ್ಯಮಂತ್ರಿ ಪದಕ*

ಮಾರ್ಚ್ 28, 2026

*ಕೊಡಗಿನ ವಿವಿಧೆಡೆ ಗುಡುಗು, ಸಿಡಿಲು ಸಹಿತ ಮಳೆ : ಮರ ಬಿದ್ದು ಸಂಚಾರ ವ್ಯತ್ಯಯ : ಹೊತ್ತಿ ಉರಿದ ತೆಂಗಿನ ಮರ*

ಮಾರ್ಚ್ 28, 2026

*ಸಹಾಯ ಧನ ಮತ್ತು ವಸತಿಗಾಗಿ ಒತ್ತಾಯಿಸಿ ಎಸ್‌ಡಿಟಿಯು ಮನವಿ*

ಮಾರ್ಚ್ 28, 2026

*ಮಂದಗತಿಯಲ್ಲಿ ಸಾಗುತ್ತಿರುವ ಅಮೃತ್ ಕಾಮಗಾರಿ : ಮಡಿಕೇರಿ ನಗರಸಭೆ ಸಾಮಾನ್ಯ ಸಭೆಯಲ್ಲಿ ತೀವ್ರ ಅಸಮಾಧಾನ*

ಮಾರ್ಚ್ 28, 2026

*ಪೊಲೀಸ್ ವಸತಿ ಗೃಹ, ಸಮುದಾಯ ಭವನಗಳಿಗೆ ಕೊಡಗು ಎಸ್‌ಪಿ ಬಿಂದುಮಣಿ ಭೇಟಿ : ಪರಿಶೀಲನೆ*

ಮಾರ್ಚ್ 28, 2026

*ಏ.1 ರಂದು ನಾಪೋಕ್ಲುವಿನಲ್ಲಿ ಹಿಂದೂ ಜನಜಾಗೃತಿ ಸಮಾವೇಶ*

ಮಾರ್ಚ್ 28, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.