ನಾಪೋಕ್ಲು ಆ.19 NEWS DESK : ಶಿಕ್ಷಣ ಇಲಾಖೆಯ ವತಿಯಿಂದ ನಾಪೋಕ್ಲು ವಲಯ ಮಟ್ಟದ ಫ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ “ದ ರೋವ್’ (THE ROVE) ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯು ನಾಪೋಕ್ಲುವಿನ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಿತು. ಪ್ರಾಥಮಿಕ ಬಾಲಕಿಯರ ವಿಭಾಗದಲ್ಲಿ ಭಾಗಮಂಡಲ ಜ್ಞಾನೋದಯ ಶಾಲೆ ಫ್ರಥಮ, ನಾಪೋಕ್ಲು ಸೇಕ್ರೆಡ್ ಹಾರ್ಟ್ಸ್ ಶಾಲೆ ದ್ವಿತೀಯ, ಫ್ರಾಥಮಿಕ ಬಾಲಕರ ವಿಭಾಗದಲ್ಲಿ ನಾಪೋಕ್ಲು ಎಕ್ಸೆಲ್ ಶಾಲೆ ಫ್ರಥಮ, ಭಾಗಮಂಡಲ ಜ್ಞಾನೋದಯ ಶಾಲೆ ದ್ವಿತೀಯ. ಫ್ರೌಢ ಶಾಲಾ ಬಾಲಕಿಯ ವಿಭಾಗದಲ್ಲಿ ರಾಮ ಟ್ರಸ್ಟ್ ಶಾಲೆ ಫ್ರಥಮ, ಸೇಕ್ರೆಡ್ ಹಾರ್ಟ್ಸ್ ದ್ವಿತೀಯ, ಬಾಲಕರ ವಿಭಾಗದಲ್ಲಿ ರಾಮ ಟ್ರಸ್ಟ್ ಫ್ರಥಮ, ಆಕ್ಸ್ ಪರ್ಡ್ ದ್ವಿತೀಯ ಸ್ಥಾನ ಪಡೆದುಕೊಂಡಿತು. ‘ರೋವ್’ ಸಂಸ್ಥೆಯ ಮಾಲೀಕರಾದ ಜಯ ದೇವಯ್ಯ ಉಚಿತವಾಗಿ ಪಂದ್ಯಾವಳಿ ನಡೆಸಲು ಅವಕಾಶ ನೀಡಿದ್ದಲ್ಲದೆ ಪಂದ್ಯಾವಳಿಯ ರನ್ನರ್ಸ್ ಹಾಗೂ ವಿನ್ನರ್ಸ್ ಗಳಿಗೆ ಟ್ರೋಫಿಗಳನ್ನು ನೀಡಿ ಪ್ರೋತ್ಸಾಹಿಸಿದರು. ಪಂದ್ಯಾವಳಿಯ ಸಂಚಾಲಕರಾಗಿ ಸೇಕ್ರೆಡ್ ಹಾರ್ಟ್ಸ್ ಶಾಲೆ ಸುನಿಲ್ , ಮಾರ್ಗದರ್ಶಕರಾಗಿ ಖ್ಯಾತ ಬ್ಯಾಡ್ಮಿಂಟನ್ ಕೋಚ್ ರಘುರಾಜ್ ಕಾರ್ಯ ನಿರ್ವಹಿಸಿದರು. ರಾಮಟ್ರಸ್ಟ್ ಶಾಲೆ ದೈಹಿಕ ಶಿಕ್ಷಕಿ ಸರಿತಾ, ಮರ್ಕಸ್ ಶಾಲಾ ದೇವಮ್ಮಾಜಿ, ಪಾರಾಣೆ ಶಾಲಾ ದೈಹಿಕ ಶಿಕ್ಷಕ ಮಂಜು, ನರಿಯಂದಡ ಶಾಲಾ ದೈಹಿಕ ಶಿಕ್ಷಕ ಪೊನ್ನಪ್ಪ ಹಾಗೂ ಇನ್ನಿತರರು ಕಾರ್ಯ ನಿರ್ವಹಿಸಿದರು. ಇಂದು ನರಿಯಂದಡ ಶಾಲಾಯಲ್ಲಿ ಜಿಗಿತದ ಸ್ಪರ್ಧೆ ಮತ್ತು ಗ್ರೌಂಡ್ ಮಾರ್ಕಿಂಗ್, ಆ.20 ರಂದು ಪೂರ್ವಾಹ್ನ 10 ಗಂಟೆಗೆ ಉದ್ಘಾಟನಾ ಸಮಾರಂಭ, ಬಾಲಕರ ಫುಟ್ ಬಾಲ್ , ಬಾಲಕಿಯರ ಖೋ ಖೋ, ಕಬಡ್ಡಿ, ಥ್ರೋ ಬಾಲ್, ವಾಲಿಬಾಲ್, ಬಾಲ್ ಬ್ಯಾಡ್ಮಿಂಟನ್ ,ಆ.21 ರಂದು ಬಾಲಕರ ಖೋ ಖೋ, ಕಬಡ್ಡಿ, ಥ್ರೋ ಬಾಲ್, ವಾಲಿಬಾಲ್, ಬಾಲ್ ಬ್ಯಾಡ್ಮಿಂಟನ್,ಆ.22 ರಂದು ಬಾಲಕ ಬಾಲಕಿಯರ ಹಾಕಿ ಪಂದ್ಯಾವಳಿ, ಆ.23 ರಂದು ಬಾಲಕ ಬಾಲಕಿಯರಿಗೆ ಮೇಲಾಟಗಳು ನಡೆಯಲಿದೆ.
ವರದಿ : ದುಗ್ಗಳ ಸದಾನಂದ.