ಮಡಿಕೇರಿ ಆ.19 NEWS DESK : ಕೇರಳದ ತ್ರಿವಂದ್ರಂನಲ್ಲಿ ಆಯೋಜಿತ ಸ್ಟೀಫನ್ ಕೋಶಿ ಜಾಕಬ್ ಮೆಮೊರಿಯಲ್ ಇಂಟರ್‍ನ್ಯಾಷನಲ್ ಮಾಸ್ಟರ್ಸ್ ಬಾಸ್ಕೆಟ್ ಬಾಲ್ ಟೂರ್ನಮೆಂಟ್‍ನಲ್ಲಿ ಕೊಡಗಿನ ‘ಇಂಡಿಯಾ ವಾರಿಯರ್ಸ್’ ತಂಡ ದ್ವಿತೀಯ ಸ್ಥಾನ ಪಡೆಯುವ ಮೂಲಕ ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡಿದೆ. ಆ.16, 17 ಮತ್ತು 18 ರಂದು 50 ಹಾಗೂ 55 ವರ್ಷ ಮೇಲ್ಪಟ್ಟ ಮಹಿಳೆಯರಿಗೆಗಾಗಿ ಬಾಸ್ಕೆಟ್ ಬಾಲ್ ಪಂದ್ಯಾಟ ಆಯೋಜಿಸಲಾಗಿತ್ತು. ಕ್ರೀಡಾಕೂಟದಲ್ಲಿ ಅಂತರಾಷ್ಟ್ರೀಯ ಬಾಸ್ಕೆಟ್ ಬಾಲ್ ಆಟಗಾರ್ತಿ ಹಾಗೂ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಮಂಡೇಪಂಡ ಪುಷ್ಪ ಕುಟ್ಟಣ್ಣ ಅವರ ನೇತೃತ್ವದ ಕೊಡಗಿನ ಇಂಡಿಯಾ ವಾರಿಯರ್ಸ್ ತಂಡ ಎರಡು ವರ್ಗದಲ್ಲೂ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿಯ ಪದಕವನ್ನು ತನ್ನದಾಗಿಸಿಕೊಂಡಿತು. ಅಂತರಾಷ್ಟ್ರೀಯ ಬಾಸ್ಕೆಟ್ ಬಾಲ್ ಆಟಗಾರರಾದ ಕಾಡ್ಯಮಾಡ ದೇಚಮ್ಮ, ಕಲಿಯಂಡ ರೇಷ್ಮ ಚಂಗಪ್ಪ, ರಾಜ್ಯ ಆಟಗಾರರಾದ ಪಳಂಗಂಡ ವಾಣಿ, ತಾತಂಡ ಜ್ಯೋತಿ, ಬಲ್ಯಮೀದೇರಿರ ಆಶಾ, ಕೊಳ್ಳಿಮಾಡ ರಶ್ಮಿ, ಪೊನ್ನಚಂಡ ಸಬಿತ, ಗುಣಶೀಲ ಅಮರ್‍ನಾಥ್, ಮೇಕೇರಿರ ಶರ್ಮಿಳಾ, ಕಾಂಡೇರ ಜಲಜ, ಕೋದೇಂಗಡ ರೇಷ್ಮ ಅವರುಗಳು ಇಂಡಿಯಾ ವಾರಿಯರ್ಸ್ ತಂಡದ ಪರ ಪ್ರದರ್ಶನ ತೋರಿದರು.
Breaking News
- *ರಾಜಾಸೀಟು ಉದ್ಯಾನವನದಲ್ಲಿ ಫಲಪುಷ್ಪ ಪ್ರದರ್ಶನದ ಆಕರ್ಷಣೆ*
- *ರೈಲ್ವೆ ಇಲಾಖೆಯ 32,438 ಗ್ರೂಪ್-ಡಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ*
- *ಭಾಗಮಂಡಲ ಗ್ರಾ.ಪಂ ವತಿಯಿಂದ ಅಂಗನವಾಡಿಗಳಿಗೆ ಕೊಡುಗೆ*
- *ಗಣರಾಜ್ಯೋತ್ಸವದಂದು ಸಿಎನ್‌ಸಿಯಿಂದ ಶಾಂತಿಯುತ ಹಕ್ಕೊತ್ತಾಯ ಮಂಡನೆ*
- *ಪ್ರಾಣಿ ದಯಾಸಂಘದ ವಾರ್ಷಿಕ ಮಹಾಸಭೆ : ಹಲವು ವಿಚಾರ ಕುರಿತು ಚರ್ಚೆ*
- *ರಾಜಾಸೀಟು ಉದ್ಯಾನದಲ್ಲಿ ಕಣ್ಮನ ಸೆಳೆಯುತ್ತಿರುವ ಫಲಪುಷ್ಪ ಪ್ರದರ್ಶನ : ಶಾಸಕ ಡಾ.ಮಂತರ್ ಗೌಡ ಉದ್ಘಾಟನೆ*
- *ರಾಜಾಸೀಟು ಫಲಪುಷ್ಪ ಪ್ರದರ್ಶನದಲ್ಲಿ ಇತಿಹಾಸ ಪ್ರಸಿದ್ಧ ಶ್ರೀ ಓಂಕಾರೇಶ್ವರ ದೇವಾಲಯದ ಆಕರ್ಷಣೆ*
- *ಮಡಿಕೇರಿಯಲ್ಲಿ ಹಿರಿಯ ನಾಗರಿಕರಿಗೆ ಕಣ್ಣಿನ ತಪಾಸಣಾ ಶಿಬಿರ*
- *ಯತಿಕಾರ್ಪ್ ಇಂಡಿಯಾ ಐಟಿ ಕಂಪನಿಯಲ್ಲಿ ಪದವೀಧರರಿಗೆ ಉದ್ಯೋಗ ಅವಕಾಶ : ಉತ್ತಮ ವೇತನ*
- *ಜ.25 ರಂದು ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಕೊಡಗಿಗೆ ಭೇಟಿ