ಮಡಿಕೇರಿ ಆ.23 NEWS DESK : ನಗರದ ಶ್ರೀ ಕಂಚಿ ಕಾಮಾಕ್ಷಿಯಮ್ಮ ದೇವಾಲಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಆ.26 ರಂದು ರಾತ್ರಿ ವಿಶೇಷ ಪೂಜೆ ಹಾಗೂ ಶ್ರೀ ರಾಮಾಂಜನೇಯ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
ಮೊಸರು ಕುಡಿಕೆ ಸ್ಪರ್ಧೆ: ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಸೆ.1 ರಂದು ಸಂಜೆ 4 ಗಂಟೆಗೆ ಮೊಸರು ಕುಡಿಕೆ ಒಡೆಯುವ ಸ್ಪರ್ಧೆ ಹಾಗೂ 6 ವರ್ಷದೊಳಗಿನ ಮಕ್ಕಳ ಶ್ರೀ ಕೃಷ್ಣ ಛದ್ಮ ವೇಷ ಸ್ಪರ್ಧೆ ನಡೆಯಲಿದೆ.
ಛದ್ಮ ವೇಷ ಸ್ಪರ್ಧೆ :: ಛದ್ಮ ವೇಷ ಸ್ಪರ್ಧೆಯಲ್ಲಿ ಭಾಗವಹಿಸುವ ಮಕ್ಕಳು ತಮ್ಮ ಹೆಸರುಗಳನ್ನು ಪವನ್ 9900667686, ರಘು 9844290058, ಅರುಣ್ 7022790974 ಸಂಪರ್ಕಿಸಿ ನೋಂದಾಯಿಸಿಕೊಳ್ಳಬಹುದು. ಶ್ರೀ ಕೃಷ್ಣ ದೇವರನ್ನು ವಿಶೇಷವಾಗಿ ಆರಾಧಿಸುವ ಸಾಂಪ್ರದಾಯಕ ಆಚರಣೆಯಲ್ಲಿ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಶ್ರೀ ಕಂಚಿ ಕಾಮಾಕ್ಷಿಯಮ್ಮ ಆಡಳಿತ ಮಂಡಳಿ ಕೋರಿದೆ.