ನಾಪೋಕ್ಲು ಸೆ.3 NEWS DESK : ಭಗವತಿ ಯುವಕ ಸಂಘ ದ ವತಿಯಿಂದ ಸ್ಥಳೀಯ (ಕೆ ಪಿ ಎಸ್) ಸರ್ಕಾರಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಸ್ಟೀಲ್ ಊಟದ ತಟ್ಟೆ ಹಾಗೂ ಲೋಟವನ್ನು ಕೊಡುಗೆಯಾಗಿ ವಿತರಿಸಲಾಯಿತು. ಈ ಕಾರ್ಯಕ್ರಮ ದಲ್ಲಿ ಕೆ ಪಿ ಎಸ್ ಶಾಲಾ ಉಪಾಧ್ಯಕ್ಷ ಎನ್. ಎಸ್. ಉದಯಶಂಕರ್, ಭಗವತಿ ಯುವಕ ಸಂಘ ದ ಅಧ್ಯಕ್ಷ ಕುಲ್ಲೇಟ್ಟಿರ ದೇವಿ ದೇವಯ್ಯ, ಕಾರ್ಯದರ್ಶಿ ಶಿವಚಾಳಿಯಂಡ ಕಿಶೋರ್ ಬೋಪಣ್ಣ, ಮಾಜಿ ಅಧ್ಯಕ್ಷ ಜಾಲಿ ಪೂವಪ್ಪ, ಗ್ರಾ.ಪಂ ಸದಸ್ಯ ಶಿವಚಾಳಿಯಂಡ ಜಗದೀಶ್, ಯುವಕ ಸಂಘ ದ ಸದಸ್ಯ ಬೊಪ್ಪಂಡ ವೀರನ್ ಶಾಲಾ ಶಿಕ್ಷಕರು ಹಾಗೂ ಸಿಬ್ಬಂದಿ ಹಾಜರಿದ್ದರು.
ವರದಿ : ದುಗ್ಗಳ ಸದಾನಂದ.