NEWS DESK :: ದೇವರ ನಾಡೆಂದು ಪ್ರಸಿದ್ಧವಾಗಿರುವ ಕೇರಳ ರಾಜ್ಯದ ಪ್ರಸಿದ್ಧ ಹಬ್ಬ ಓಣಂ. ಇದನ್ನು ಪುರಾತನ ಕಾಲದಿಂದಲ್ಲೂ ಸಂಭ್ರಮದಿಂದ ಆಚರಿಸಿಕೊಂಡು ಬರಲಾಗುತ್ತದೆ. ಇದು ಕೇರಳದವರ ಪಾಲಿಗೆ ನಾಡ ಹಬ್ಬವಿದ್ದಂತೆ ಎನ್ನಬಹುದು. ಕೃಷಿ ಹಿನ್ನಲೆಯಲ್ಲಿ ಆಚರಿಸುವ ಈ ಹಬ್ಬವು ಮಳೆಗಾಳಿಗೆ ದುಡಿದು ಬೆಂಡದಾ ಜೀವಗಳಿಗೆ ಸಂತಸ ಸಂಭ್ರಮವನ್ನು ಉಂಟುಮಾಡುವ ಹಬ್ಬ. ಮಳೆಯ ಆರ್ಭಟದ ನಡುವೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರು ತಮ್ಮ ಕೆಲಸಗಳನ್ನೆಲ್ಲ ಮುಗಿಸಿ ನೆಮ್ಮದಿಯ ನಿಟ್ಟುಸಿರು ಬಿಟ್ಟು ಕೂರುವ ಸಮಯದಲ್ಲಿ ಬರುವ ಈ ಹಬ್ಬ ಶುಭ ಸೂಚನೆಯ ಸಂಕೇತವಾಗಿದೆ. 10 ದಿನಗಳ ಕಾಲ ನಡೆಯುವ ಓಣಂ ಹಬ್ಬವನ್ನು ಮಲೆಯಾಳಂನ ಆಯಾ ಮಾಸದಲ್ಲಿ ಅಂದರೆ ಸಿಂಹಮಾಸದಲ್ಲಿ ಅಥವಾ ಆಗಸ್ಟ್ ಕೊನೆಯ ವಾರ ಅಥವಾ ಸೆಪ್ಟಂಬರ್ ತಿಂಗಳಿನಲ್ಲಿ ಆಚರಿಸುತ್ತಾರೆ. ಈ ಬಾರಿ ಓಣಂ ಹಬ್ಬವು ಸೆ.15 ರಂದು ಆಚರಣೆ ಮಾಡಲಾಗುತ್ತದೆ. ಹತ್ತು ದಿನಗಳ ಕಾಲ ಆತ್ತಂನಿಂದ ಪ್ರಾರಂಭಗೊಂಡು ಚಿತ್ತಿರ, ಚೂದಿ, ವಿಶಾಖಂ, ಆನಿಯ, ತ್ರಿಕೇಟಾ, ಮೂಲಂ, ಪೇರಾಡಂ, ಉತ್ರಾಡಂ ಮತ್ತು 10ನೇ ದಿನ ತಿರುಓಣಂ ಅನ್ನು ಆಚರಣೆ ಮಾಡಲಾಗುತ್ತದೆ. ಅಂದರೆ ಕನ್ನಡದಲ್ಲಿ ಹಸ್ತ, ಚಿತ್ತ, ಸ್ವಾತಿ, ವಿಶಾಖಂ, ಅನುರಾಧ, ಜೇಷ್ಠ ಮೂಲ ಪೂರ್ವಷಾಡ, ಉತ್ತರಷಾಡ, ಮತ್ತು ಶ್ರಾವಣ ಎಂದಾಗಿದೆ. ಓಣಂ ಹಬ್ಬವು ತನ್ನದೇ, ಆದ ಪಾರಾಣಿಕ ಹಿನ್ನಲೆ ಹೊಂದಿದೆ ಕೇರಳ ರಾಜ್ಯದಲ್ಲಿ ರಾಜ ಬಲಿಚಕ್ರವರ್ತಿಯು (ಮಾವೇಲಿ) ಪಾತಾಳಲೋಕದಿಂದ ಭೂಮಿಗೆ ತನ್ನ ಪ್ರಜೆಗಳನ್ನು ನೋಡುವ ಸಲುವಾಗಿ ಬರುವ ದಿನವೇ ತಿರುಓಣಂ, ಮಲೆಯಾಳಿ ಬಾಂದವರು ರಾಜ ಮಾವೇಲಿಯನ್ನು (ಬಲಿಚಕ್ರವರ್ತಿ) ಆರಾಧಿಸುತ್ತಾ ಬಂದಿರುವುದರಿಂದ ಓಣಂ ಹಬ್ಬಕ್ಕೆ ಅದರದೆ ಆದ ವಿಶೇಷತೆ ಇದೆ. ತಿರುಓಣಂ ದಿನ ಬಲಿ ಚಕ್ರವರ್ತಿಯ ಸ್ವಾಗತಕ್ಕಾಗಿ ಇಡೀ ನಾಡಿಗೆ ನಾಡೇ ಸಿದ್ಧಗೊಳ್ಳುತ್ತದೆ. ಈ ದಿನ ಮಾಡುವ ಎಲ್ಲ ಕೆಲಸಗಳಿಗೆ ಹೊಸತನವಿರುತ್ತದೆ. ಪ್ರಜೆಗಳ ಉನ್ನತಿಗಾಗಿ ರಾಜ್ಯ ಬಲಿ ಚಕ್ರವರ್ತಿ ತನ್ನನ್ನು ತಾನು ತ್ಯಾಗ ಮಾಡಿದರಿಂದ ಈ ದಿನವನ್ನು ನೆನೆಪಿಸಿಕೊಳ್ಳುತ್ತಾ ಮನೆ ಎದುರು ಹತ್ತು ದಿನಗಳ ಪುಷ್ಟ ರಂಗೋಲಿ ಹಾಕಲಾಗುತ್ತದೆ. ಅದನ್ನು ಪೂಕೊಳಂ ಎಂದು ಕರೆಯಲಾಗುತ್ತದೆ. ಹಬ್ಬದ ಅಂಗವಾಗಿ ಆ ದಿನ ಹೆಣ್ಣು ಮಕ್ಕಳು ಬೆಳ್ಳಗೆ ಎದ್ದು ಸ್ನಾನ ಮಾಡಿ ಮನೆ ಶುಭ್ರಗೊಳಿಸಿ ಮನೆ ಎದುರು ಪುಷ್ಟ ರಂಗೋಲಿ ಹಾಕಿ ಹೊಸ ಬಟ್ಟೆಗಳನ್ನು ಧರಿಸಿ ವಿಶೇಷ ಪೂಜೆ ಪ್ರಾರ್ಥನೆ ಮಾಡಿ ವಿವಿಧ ರೀತಿಯ ಸಿಹಿ ಊಟಗಳನ್ನು ತಯಾರಿಸುತ್ತಾರೆ. ಇದಕ್ಕೆ ಓಣಂ ಸಧ್ಯ ಎನ್ನುತ್ತಾರೆ. ಹೊಸ ಉಡುಗೆ ಕೊಟ್ಟು ಸಂಭ್ರಮಿಸುತ್ತಾರೆ. ಕೇಕೆ ಹಾಕುತ್ತಾ ಮನೆ ತುಂಬ ಒಡಾಡುವ ಮಕ್ಕಳು ಮನೆ ಒಳಗೆ ಓಣಂ ಸಧ್ಯ ತಯಾರಿಯಲ್ಲಿ ನಿರತವಾಗಿರುವ ಮಹಿಳೆಯರು ಇವು ಓಣಂ ಆಚರಿಸುವ ಮನೆಗಳಲ್ಲಿ ಕಂಡು ಬರುವ ದೃಶ್ಯಗಳು. ಓಣಂ ಹಬ್ಬವು ತನ್ನದೇ ಆದ ಪೌರಾಣಿಕ ಹಿನ್ನಲೆಯನ್ನು ಹೊಂದಿರುವುದನ್ನು ನಾವು ಇಲ್ಲಿ ನೋಡಬಹುದು ಇದರ ಹಿನ್ನಲೆ ನೋಡುವುದಾದರೆ ವಾಮನ ರೂಪದಲ್ಲಿ ಬಂದ ವಿಷ್ಣು ಬಲಿ ಚಕ್ರವರ್ತಿಯನ್ನು ಸಂಹರಿಸುವ ಕಥೆ. ಪೌರಾಣಿಕ ಯುಗದಲ್ಲಿ ಬಲಿ ಚಕ್ರವರ್ತಿ ರಾಕ್ಷಸನಾಗಿದ್ದನು ಇವನು ಪ್ರಜೆಗಳ ಬಗ್ಗೆ ತುಂಬಾ ಕಾಳಜಿ, ತ್ಯಾಗಿಯು, ವಾತ್ಸಲ್ಯ ಮಾಯಿ, ಮಹಾಧಾನಿಯೂ, ಪರಾಕ್ರಾಮಿಯೂ, ಆಗಿದ್ದನು, ಈತ ತನ್ನ ಪರಾಕ್ರಮದಿಂದ ಜಗತ್ತನ್ನೆ ಸುತ್ತುವ ದೇವ ವಾಹನವನ್ನು ಪಡೆದಿದ್ದ, ಆದರೆ ರಾಕ್ಷಸ ಕುಲದವನಾದ ಬಲಿ ಚಕ್ರವರ್ತಿಗೆ ದೇವತೆಗಳ ಮೇರೆ ಯುದ್ಧ ಸಾರಿ ಅವರನ್ನು ಬಗ್ಗು ಬಡಿಯುವ ಹಂಬಲ ಹಾಗೂ ಇಂದ್ರ ಪದವಿಯನ್ನು ಪಡೆದೇ ತಿರಬೇಕು ಎಂಬ ದುರಾಸೆ ಮುಡಿತ್ತು. ಹೀಗಾಗಿ ಇಂದ್ರ ಪದವಿಯನ್ನು ಪಡೆಯಲು ಮಹಾಯೋಗ ಮಾಡಲು ಸಿದ್ಧನಾದನು ಯಾವಾಗ ಬಲಿ ಚಕ್ರವರ್ತಿ ಮಹಾಯುಗ ಮಾಡಲು ಸಿದ್ಧನಾದ ವಿಷಯ ದೇವತೆಗಳ ಕಿವಿಗೆ ಬಿತ್ತೊ ಅವರೆಲ್ಲಾ ನಡುಗಿ ಹೋದರು ಇನ್ನು ನಮಗೆ ಉಳಿಗಾಲ ಇಲ್ಲವೆಂದು ತಿಳಿದು. ಹೇಗಾದರು ಮಾಡಿ ನಮನ್ನೆಲ್ಲಾ ಕಾಪಾಡು ಎಂದು ವಿಷ್ಣುವಿನ ಬಳಿ ಮೊರೆ ಹೋದರು ದೇವತೆಗಳಿಗೆ ಒದಗಿದ ಕಷ್ಟವನ್ನು ಪರಿಹರಿಸಬೇಕಾದರೆ ಬಲಿ ಚಕ್ರವರ್ತಿಯನ್ನು ಯುದ್ಧ ಮಾಡದೇ ಉಪಾಯದಿಂದ ವದಿಸಬೇಕು ಎಂದು ತಿಳಿದು ತಂತ್ರ ರೂಪಿಸಿದ ವಿಷ್ಣು ವಾಮನ ರೂಪದಲ್ಲಿ ಬಲಿ ಚಕ್ರವರ್ತಿಯ ಬಳಿಗೆ ಬರುತ್ತಾನೆ ತನಗೆ ತಪಸ್ಸು ಮಾಡಲು ಮೂರು ಅಡಿ ಜಾಗವನ್ನು ಕೇಳುತ್ತಾನೆ. ಮೂರು ಅಡಿ ಜಾಗವನ್ನು ಕೇಳುತ್ತಿದ್ದ ವಾಮನನ್ನು ಕಂಡು ಕನಿಕರ ಉಂಟಾಗುತ್ತದೆ ಬಲಿ ಚಕ್ರವರ್ತಿಗೆ. ಇವನ ಅಧಿಕಾರ ಅವಧಿಯಲ್ಲಿ ಕಷ್ಟದಲ್ಲಿ ಬಳುತ್ತಿದ್ದವರು. ಇಲ್ಲ ಎನ್ನಲಾಗಿದೆ. ಅಲ್ಲದೇ ಶಾಂತಿ, ಸಂತಸ, ಸಮಾಧಾನ ಇತನ ಅಧಿಕಾರ ಅವಧಿಯಲ್ಲಿ ಇದ್ದುದರಿಂದ 3 ಅಡಿ ಆಗ ಕೊಡಲು ಒಪ್ಪುತ್ತಾನೆ. ರಾಕ್ಷಸ ಗುರು ಶುಕ್ರಚಾರ್ಯರಿಗೆ ವಾಮನ ರೂಪದಲ್ಲಿ ಬಂದಾತ ವಿಷ್ಣು ಎಂದು ತಿಳಿದು ಆತನಿಗೆ ದಾನವಾಗಿ ಜಾಗವನ್ನು ನೀಡದಂತೆ ಬೇಡಿಕೊಳ್ಳುತ್ತಾನೆ. ಆದರೆ ತಾನು ಹೀಗಾಗಲೇ ದಾನ ನೀಡುವುದಾಗಿ ಮಾತು ಕೊಟ್ಟಿದು ಅದಕ್ಕೆ ನಾನು ತಪ್ಪುವುದಿಲ್ಲ ಎನುತ್ತಾನೆ. ಬಲಿ ಚಕ್ರವರ್ತಿ ತನ್ನ ಬಳಿ ಬೇಡಿ ಬಂದವರನ್ನು ನಾನು ಬರಿ ಕೈಯಲ್ಲಿ ವಾಪಸ್ಸು ಕಳಿಸಲಾರೆ ಎಂದು ಅವರ ಮಾತನ್ನು ಲೆಕ್ಕಿಸದೇ ತಪ್ಪಸಿಗೆ ಜಾಗ ನೀಡುತ್ತಾನೆ ಇದೇ ಸಂಬಂಧಕ್ಕೆ ಕಾಯುತ್ತಿದ್ದ ವಿಷ್ಣು ಇದಕ್ಕಿಂದಂತೆ ಆಕಾಸದೆತ್ತರಕ್ಕೆ ತ್ರಿವಿಕ್ರಮಾನಾಗಿ ಬೆಳೆಯುತ್ತಾನೆ. ಹಾಗೇ ಬೆಳೆದು ಒಂದು ಪಾದವನ್ನು ಭೂಮಿಯ ಮೇಲೆ ಮತ್ತೊಂದು ಪಾದವನ್ನು ಆಕಾಶದಲ್ಲಿ ಇನ್ನೊಂದು ಪಾದವನ್ನು ಎಲ್ಲಿ ಇಡಲಿ ಎಂದು ಕೇಳುತ್ತಾನೆ. ಮಹಾದಾನಿ ಆಗಿದ್ದ ಬಲಿ ಚಕ್ರವರ್ತಿ ಕೊಟ್ಟ ಮಾತಿಗೆ ತಪ್ಪದೇ ತನ್ನ ತಲೆಯ ಮೇಲೆ ಪಾದವನ್ನು ಇಡುವಂತೆ ತೋರಿಸುತ್ತಾನೆ. ವಿಷ್ಣು ತಲೆ ಮೇಲೆ ಪಾದವನ್ನು ಇಡುತ್ತಿದ್ದಂತೆ ಬಲಿ ಚಕ್ರವರ್ತಿ ಪಾತಳ ಸೇರುತ್ತಾನೆ ಈ ಘಟನೆಗೆ ಮೊದಲೇ ಬಲಿ ಚಕ್ರವರ್ತಿಯು ತಾನು ವರ್ಷಕ್ಕೊಮ್ಮೆ ಬಂದು ತನ್ನ ಪ್ರಜೆಗಳನ್ನು ನೋಡಲು ಅನುಮತಿಯನ್ನು ಕೇಳುತ್ತಾನೆ. ಅದಕ್ಕೆ ವಿಷ್ಣು ಒಪ್ಪಿಗೆಯನ್ನು ನೀಡುತ್ತಾನೆ ಅದರಂತೆ ಇಂದಿಗೂ ಬಲಿ ಚಕ್ರವರ್ತಿ ತಿರು ಓಣಂ ದಿನ ಪ್ರಜೆಗಳನ್ನು ನೋಡಲು ಬರುತ್ತಾನೆ. ಎಂದು ನಂಬಿಕೆ ಇದೆ. ಹಾಗಾಗಿ ಈ ದಿನ ಮನೆ ಮುಂದೆ ಅಂಗಲದಲ್ಲಿ ಹೂವಿನ ರಂಗೋಲಿ ಹಾಕಿ ಬಲಿ ಚಕ್ರವರ್ತಿಯನ್ನು ಸ್ವಾಗತ ಮಾಡಲಾಗುತ್ತದೆ. ಇದ್ದು ಇಂದಿಗೂ ರೂಢಿಯಲ್ಲಿದ್ದು ಈ ದಿನವನ್ನು ತಿರುಓಣಂ, ಪೊನ್ನೋಣಂ ಎಂದೆಲ್ಲ ಕರೆಯುತ್ತಾರೆ. ಹಬ್ಬದ ದಿನದಂದು ಬಡವ ಬಲಿಗ ಎನ್ನದೇ ಪ್ರತಿ ಊರಿನಲ್ಲಿ ಎಲ್ಲರು ಒಂದೆಡೆ ಸೇರಿ ಹಬ್ಬದ ಶುಭಾಶಯ ಹಂಚಿಕೊಳ್ಳುತ್ತಾರೆ. ಅಲ್ಲದೇ ಇಂದಿನ ಹಬ್ಬದ ಆಚರಣೆಗಳಲ್ಲಿ ಬದಲಾವಣೆ ಕಾಣಬಹುದು ಅದರಂತೆ ಮಲೆಯಾಳಿಗಳು ವಾಸವಿರುವ ದೇಶವಿದೇಶ ಹಾಗೂ ವಿವಿಧ ರಾಜ್ಯಗಳಲ್ಲಿ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಜಾತಿ-ಮತ ಧರ್ಮವಿಲ್ಲದೆ, ಸಮೂಹಿಕವಾಗಿ ಹಬ್ಬ ಆಚರಿಸಲಾಗುತ್ತಿದೆ. ಇದು ಕೇರಳದ ನಾಡ ಹಬ್ಬವಾಗಿ ಆಚರಿಸುತ್ತಾರೆ. ಇಂತಹ ಹಬ್ಬಗಳ ಆಚರಣೆಗಳಿಂದ ನಾವುಗಳು ಇಂದು ವಿವಿಧತೆಯಲ್ಲಿ ಏಕತೆಯನ್ನು ಕಾಣಬಹುದು ನಾಡಿನ ಸಮಸ್ತ ಜನತೆಗೆ ಓಣಂ ಹಬ್ಬವು ಸುಖ ಶಾಂತಿ ಸಮೃಧ್ಧಿಯನ್ನು ತರಲಿ ಎಂದು ಹಾರೈಸೋಣ.
ಲೇಖನ : ಪಿ.ಪಿ.ಸುಕುಮಾರ್, ಹಾಕತ್ತೂರು