ಮಡಿಕೇರಿ NEWS DESK ಅ.31 : ವಿರಾಜಪೇಟೆ ತಾಲ್ಲೂಕಿನ ಎಡಪಾಲ ಗ್ರಾಮದ ಜಮಾಯತ್‌ನ ಅರೇಬಿಕ್ ಶಾಲೆ ‘ದರ್ಸ್’ನ 25ನೇ ವರ್ಷದ ‘ಬೆಳ್ಳಿ ಮಹೋತ್ಸವ’ ನ.1 ರಿಂದ 3 ರವರೆಗೆ ನಡೆಯಲಿದೆಯೆಂದು ಜಮಾಯತ್ ಅಧ್ಯಕ್ಷರಾದ ಬಶೀರ್ ಕೆ.ಎ. ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳ್ಳಿ ಮಹೋತ್ಸವದ ಎರಡನೇ ದಿನವಾದ ನ.2 ರಂದು ಅರೇಬಿಕ್ ಶಾಲೆಯ ನೂತನ ಕಟ್ಟಡವನ್ನು ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣನವರು ಉದ್ಘಾಟಿಸಲಿದ್ದಾರೆ ಎಂದರು. ಬೆಳ್ಳಿ ಮಹೋತ್ಸವ ಕಾರ್ಯಕ್ರಮಗಳಿಗೆ ನ.1ರಂದು ಮಧ್ಯಾಹ್ನ ಜುಮಾ ನಮಾಝಿನ ಬಳಿಕ ಜಮಾಯತ್ ಅಧ್ಯಕ್ಷರು ಧ್ವಜಾರೋಹಣ ನೆರವೇರಿಸುವುದರೊಂದಿಗೆ ಚಾಲನೆ ದೊರಕಲಿದೆ. ಈ ಸಂದರ್ಭ ಆಯೋಜಿತ ಉದ್ಘಾಟನಾ ಸಮ್ಮೇಳನಕ್ಕೆ ಕೊಡಗು ಜಿಲ್ಲಾ ಉಪ ಖಾಝಿ ಶೈಖುನಾ ಮೂರ್ಯಾಡ್ ಉಸ್ತಾದ್ ಚಾಲನೆ ನೀಡಲಿದ್ದಾರೆ. ಮುಖ್ಯ ಭಾಷಣ ಬಹು ರಫೀಕ್ ಸಅದಿ ದೇಲಂಬಾಡಿ ಮಾಡಲಿದ್ದಾರೆಂದರು. ನ.2 ರಂದು ಬೆಳಿಗ್ಗೆ 10 ಗಂಟೆಗೆ ‘ಮಹಲ್ ಸಂಗಮ’ ಮಧ್ಯಾಹ್ನ 2 ಗಂಟೆಗೆ ಯೂತ್ ಮೀಟ್, ಸಂಜೆ 4 ಗಂಟೆಗೆ ‘ಸಾಂಸ್ಕೃತಿಕ ಸಮಾವೇಶ ನಡೆಯಲಿದೆ.ಇದರಲ್ಲಿ ವಿರಾಜಪೇಟೆ ಶಾಸಕರಾದ ಎ. ಎಸ್. ಪೊನ್ನಣ್ಣ ಮತ್ತು ಮಡಿಕೇರಿ ಶಾಸಕರಾದ ಡಾ.ಮಂತರ್ ಗೌಡ ಸೇರಿದಂತೆ ಹಲ ಪ್ರಮುಖರು ಪಾಲ್ಗೊಳ್ಳಲಿದ್ದಾರೆ. ಸಂಜೆ 7 ಗಂಟೆಗೆ ಬಹು ಅನ್ವರ್ ಮನ್ನಾನಿ ತೊಡುಪುಝ ಮುಖ್ಯ ಭಾಷಣ ಮಾಡಲಿದ್ದಾರೆಂದರು. ನ.3 ರಂದು ಬೆಳಗ್ಗೆ ‘ಆಧ್ಯಾತ್ಮಿಕ ಮಜ್ಲಿಸ್’, 8 ಗಂಟೆಗೆ ಪೂರ್ವ ವಿದ್ಯಾರ್ಥಿ ಸಂಗಮ, 10 ಗಂಟೆಗೆ ಪೋಷಕರ ಸಭೆ, ಮಧ್ಯಾಹ್ನ 2 ಗಂಟೆಗೆ ವಿದ್ಯಾರ್ಥಿ ಸಂಗಮ, ಸಂಜೆ ಸಮಾರೋಪ ಮಹಾ ಸಮ್ಮೇಳನ ನಡೆಯಲಿದ್ದು, ಬಹು ಶೈಖುನಾ ಕೊಯ್ಯೋಡ್ ಉಮ್ಮರ್ ಮುಸ್ಲಿಯಾರ್ ಉದ್ಘಾಟನೆ ನೆರವೇರಿಸಲಿದ್ದಾರೆಂದರು. ಸುದ್ದಿಗೋಷ್ಠಿಯಲ್ಲಿ ಎಡಪಾಲ ಜಮಾಯತ್ ಉಪಾಧ್ಯಕ್ಷ ಉಮ್ಮರ್ ಎ.ಎಂ, ಕಾರ್ಯದರ್ಶಿ ಶರೀಫ್ ಝೈನಿ, ಖಜಾಂಚಿ ಮಹಮ್ಮದ್ ಕೆ.ಇ ಹಾಗೂ ಕೆ.ಎಂ.ಹಂಸ ಉಪಸ್ಥಿತರಿದ್ದರು.
Breaking News
- *ಸೋಮವಾರಪೇಟೆ : ಹಾಡಹಗಲೇ ಮಹಿಳೆಯ ಸರ, ಹಣ ಕದ್ದ ಚೋರರಿಗೆ ಗೂಸ*
- *ವೀರ ಸೇನಾನಿಗಳಿಗೆ ಅವಮಾನ : ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಖಂಡನೆ*
- *ಕಿಡಿಗೇಡಿಯ ಗಡಿಪಾರಿಗೆ ಮತ್ತು ಉನ್ನತ ಮಟ್ಟದ ತನಿಖೆಗೆ ಕೊಡವ ನ್ಯಾಷನಲ್ ಕೌನ್ಸಿಲ್ ಒತ್ತಾಯ*
- *ವಾರ ಭವಿಷ್ಯ: ನ.25 ರಿಂದ ಡಿ.1ರ ವರೆಗೆ ಯಾರ ಭವಿಷ್ಯ ಹೇಗಿದೆ…*
- *ವೀರ ಸೇನಾನಿಗಳನ್ನು ಅವಮಾನಿಸಿದವರನ್ನು ಗಡಿಪಾರು ಮಾಡದಿದ್ದರೆ ಕೊಡಗು ಬಂದ್ : ಜಬ್ಬೂಮಿ ಸಂಘಟನೆ ಎಚ್ಚರಿಕೆ*
- *ಹೊದ್ದೂರಿನ ಕಬಡಕೇರಿ ಗ್ರಾಮದಲ್ಲಿ ಸ್ವಚ್ಛತಾ ಶ್ರಮದಾನ*
- *ಕೊಡಗು ಕೃಷಿ ವಿಜ್ಞಾನ ವೇದಿಕೆಯ ಬೆಳ್ಳಿ ಮಹೋತ್ಸವ : ನ.26 ರಂದು ರೈತ ಮೇಳ*
- *ಡಿ.1 ರಂದು ಗಾಳಿಬೀಡುವಿನಲ್ಲಿ ಬಾಣೆ ಹಬ್ಬ*
- *ನ.26 ರಂದು ಮಡಿಕೇರಿಯಲ್ಲಿ ಜಿಕೀರ್, ಜಾರಿ ಮತ್ತು ನಾತೆ-ರಸುಲ್” ಗಾಯನ*
- *ವಿಶ್ವಾಸ್ ವೆಂಕಟ್ ಗೆ ಟೇಬಲ್ ಟೆನ್ನಿಸ್ ನಲ್ಲಿ ರನ್ನರ್ ಪ್ರಶಸ್ತಿ*