ಮಡಿಕೇರಿ ನ.4 NEWS DESK : ಹೋಬಳಿ ಮಟ್ಟದಲ್ಲಿ ಸಮುದಾಯ ಕೖಷಿಕ ಗುಂಪುಗಳನ್ನು ಪ್ರಾರಂಭಿಸುವ ಮೂಲಕ ಆಯಾ ವಲಯಗಳಲ್ಲಿರುವ ಕಾಫಿ ಗುಣಮಟ್ಟದ ಬಗ್ಗೆ ಮಾಹಿತಿ ಪಡೆದು ಗುಣಮಟ್ಟ ಹೆಚ್ಚಳಕ್ಕೆ ಅಗತ್ಯ ಕ್ರಮ ಕೈಗೊಳ್ಳುವ ವಿನೂತನ ಯೋಜನೆ ಭಾರತೀಯ ಕಾಫಿ ಮಂಡಳಿ ಮುಂದಿದೆ ಎಂದು ಮಂಡಳಿಯ ಮುಖ್ಯ ಕಾಯ೯ನಿವ೯ಹಣಾಧಿಕಾರಿ ಮತ್ತು ಕಾಯ೯ದಶಿ೯ ಡಾ.ಕೆ.ಜಿ.ಜಗದೀಶ್ ಹೇಳಿದರು. ನಗರದ ಕ್ರಿಸ್ಟಲ್ ಕೋಟ್೯ ಸಭಾಂಗಣದಲ್ಲಿ ಕೂಗ್೯ ಪ್ಲಾಂಟಸ್೯ ಅಸೋಸಿಯೇಷನ್ ನ 145 ನೇ ವಾಷಿ೯ಕ ಮಹಾಸಭೆಗೆ ಉದ್ಘಾಟಿಸಿ ಮಾತನಾಡಿದ ಜಗದೀಶ್, ಕಾಫಿ ಬೆಳೆಯ ಗುಣಮಟ್ಟಕ್ಕೆ ಆದ್ಯತೆ ನೀಡಿದಾಗ ಭಾರತೀಯ ಕಾಫಿ ಬೆಳೆಗೆ ಎಂದಿಗೂ ಹಿನ್ನಡೆಯಾಗಲಾರದು, ಈ ನಿಟ್ಟಿನಲ್ಲಿ ಕಾಫಿ ಬೆಳೆಯ ಗುಣಮಟ್ಟ ಕಾಪಾಡುವ ದೖಷ್ಟಿಯಿಂದ ಪ್ರತೀ ಹೋಬಳಿಯಲ್ಲಿಯೂ 100 ಕೖಷಿಕರನ್ನೊಳಗೊಂಡ ಸಮುದಾಯ ಗುಂಪನ್ನು ಪ್ರಾರಂಭಿಸಿ, ಅವರು ಬೆಳೆದ ಕಾಫಿಯನ್ನು ಸಂಗ್ರಹಿಸಿ ಅದರ ಗುಣಮಟ್ಟದ ಬಗ್ಗೆ ( ಕಾಫಿ ಕಪ್ಪಿಂಗ್ ಸ್ಕೋರ್ ) ಪ್ರಯೋಗಾಲಯದಿಂದ ಮಾಹಿತಿ ಪಡೆಯಲಾಗುತ್ತದೆ, ಗುಣಮಟ್ಟ ಹೆಚ್ಚಳವಾಗಬೇಕೆಂದಾದಲ್ಲಿ ಯಾವ ರೀತಿ ಗುಣಮಟ್ಟ ಹೆಚ್ಚಳ ಮಾಡಬಹುದು ಎಂಬ ಬಗ್ಗೆಯೂ ಕಾಫಿ ಮಂಡಳಿಯಿಂದ ಸೂಕ್ತ ಮಾಹಿತಿಯನ್ನು ತಜ್ಞರು ಕೖಷಿಕರಿಗೆ ನೀಡಲಿದ್ದಾರೆ, ಈ ಯೋಜನೆಯಿಂದ ಪ್ರತೀ ಗ್ರಾಮದ ಕಾಫಿ ಕೖಷಿಕರಿಗೆ ಕಾಫಿಯ ಗುಣಮಟ್ಟ ಹೆಚ್ಚಳ ಕಾಪಾಡಿಕೊಳ್ಳಲು ಸಾಧ್ಯವಾಗಿ ಉತ್ತಮ ಬೆಲೆಯನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪಡೆಯಲು ಸಾಧ್ಯವಾಗಲಿದೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು. ಭಾರತೀಯ ಕಾಫಿ ಮಂಡಳಿಯಿಂದ ಶೀಘ್ರದಲ್ಲಿಯೇ 2 ವಷ೯ಗಳ ಡಿಪ್ಲೋಮ ಪದವಿಯನ್ನು ನೀಡಲಾಗುತ್ತದೆ ಇದರಿಂದಾಗಿ ಯುವಪೀಳಿಗೆಯು ಕಾಫಿ ಕೖಷಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ಹೇಳಿದ ಡಾ ಜಗದೀಶ್, ತೋಟ ನಿವ೯ಹಣೆಗೆ ಸೂಕ್ತ ತರಬೇತಿ ಹೊಂದಿದವರ ಕೊರತೆಯನ್ನು ಗಮನಿಿಸ ಕಾಫಿ ಮಂಡಳಿಯು ತೋಟಗಳ ಸೂಪರ್ ವೈಸರ್ ಗಳು ಮತ್ತು ವ್ಯವಸ್ಥಾಪಕರಾಗಿ ತರಬೇತಿ ನೀಡುವ ಯೋಜನೆ ಪ್ರಾರಂಭಿಸಲಿದೆ, 10 ನೇ ತರಗತಿ ಉತ್ತೀಣ೯ರಾದವರು ಈ ತರಬೇತಿಯನ್ನು ಪಡೆಯುವ ಮೂಲಕ ಕಾಫಿ ತೋಟಗಳಲ್ಲಿ ಉದ್ಯೋಗ ಪಡೆಯಲು ಸಾಧ್ಯವಾಗಲಿದೆ ಎಂದು ಮಾಹಿತಿ ನೀಡಿದರು. ಅಂತೆಯೇ ಹೆಚ್ಚುತ್ತಿರುವ ಕಾಫಿ ಕೆಫೆಗಳಿಗೆ ಸೂಕ್ತ ಸಿಬ್ಬಂದಿ ಅಗತ್ಯತೆಯನ್ನು ಮನಗಂಡು ಮಹಿಳೆಯರು, ಮಕ್ಕಳೂ ಸೇರಿದಂತೆ ಆಸಕ್ತಿಯುಳ್ಳವರಿಗೆ ಕೆಫೆ ಬರಿಸ್ಟಾ (ಕೆಫೆ ನಿವಾ೯ಹಕರು) ತರಬೇತಿಯನ್ನು ನೀಡುವ ಯೋಜನೆ ಮಂಡಳಿಯ ಮುಂದಿದೆ ಈ ಮೂಲಕ ಕಾಫಿ ತೋಟಗಳಿಗೆ ಬರುವ ಸಂದಶ೯ಕರು, ಪ್ರವಾಸಿಗರಿಗೂ ಉತ್ತಮ ಗುಣಮಟ್ಟದ ಸ್ವಾದಿಷ್ಟ ಕಾಫಿಯನ್ನು ತಯಾರಿಸಿ ನೀಡಬಹುದಾಗಿದೆ ಎಂದೂ ಡಾ ಜಗದೀಶ್ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಕೊಡಗಿನಲ್ಲಿ ಪರಿಸರ ಸ್ನೇಹಿ ಕಾಫಿ ಪ್ರವಾಸೋದ್ಯಮದ ಮೂಲಕ ಕಾಫಿ ತೋಟಗಳಿಗೆ ಸಂದಶ೯ಕರನ್ನು ಕರೆತರಲು ಸಾಧ್ಯವಿದೆ ಎಂದು ಸಲಹೆ ನೀಡಿದ ಜಗದೀಶ್, ಈ ನಿಟ್ಟಿನಲ್ಲಿ ಕಾಫಿ ತೋಟಗಳನ್ನು ಪರಿಸರ ಸ್ನೇಹಿಯಾಗಿ ಸಂರಕ್ಷಿಸಿಕೊಳ್ಳುವ ಹೊಣೆಗಾರಿಕೆ ತೋಟ ಮಾಲೀಕರ ಮೇಲಿದೆ ಎಂದು ಅಭಿಪ್ರಾಯಪಟ್ಟರು ಕೊಡಗೂ ಸೇರಿದಂತೆ ಕನಾ೯ಟಕದ ಕಾಫಿ ತೋಟಗಳಲ್ಲಿ ಹಲವಷ್ಟು ಜೀವವೈವಿಧ್ಯತೆಗಳಿವೆ, ಇದನ್ನೇ ಬಳಸಿಕೊಂಡು ಜಾಗತಿಕ ಮಟ್ಟದಲ್ಲಿ ಕನಾ೯ಟಕದ ಕಾಫಿ ತೋಟಗಳಲ್ಲಿನ ವಿಶಿಷ್ಟತೆಗಳ ಕಥೆ ಹೇಳುವಂತಾಗಬೇಕೆಂದೂ ಕಾಫಿ ಮಂಡಳಿ ಕಾಯ೯ದಶಿ೯ ಡಾ.ಜಗದೀಶ್ ಸಲಹೆ ನೀಡಿದರು. ಹವಾಮಾನ ಬದಲಾವಣೆ ಎಂಬುದು ವಿಶ್ವವ್ಯಾಪಿಯಾಗಿದೆ, ಈ ನಿಟ್ಟಿನಲ್ಲಿ ಕಾಫಿ ಬೆಳೆಗಾರರ ಒಂದಾಗಿ ಚಿಂತನೆ ಹರಿಸಿ ವಿಕೋಪ ಸಂದಭ೯ ಯಾವ ರೀತಿ ಕಾಫಿ ಸಮುದಾಯದ ಹಿತರಕ್ಷಣೆ ಮಾಡಬಹುದು ಎಂಬ ಬಗ್ಗೆ ಕಾಳಜಿ ತೋರಬೇಕು ಕೆಲವು ತೋಟಗಳು ಪ್ರಾಕೖತ್ತಿಕ ವಿಕೋಪದ ಸಂದಭ೯ ನೀರು ಸಾಗಲು ಉತ್ತಮ ಚರಂಡಿ, ಮಳೆ ಕೊಯ್ಲು ಮುಂತಾದ ಮುಂಜಾಗ್ರತ ಕ್ರಮ ಕೈಗೊಂಡಿವೆ, ಹೀಗಾಗಿ ಇಂಥ ತೋಟಗಳಿಗೆ ಸಮಸ್ಯೆ ಭಾದಿಸುತ್ತಿಲ್ಲ, ಇದನ್ನೇ ಮಾದರಿಯಾಗಿಸಿಕೊಂಡು ತೋಟಗಳ ನಿವ೯ಹಣೆ ಕೈಗೊಳ್ಳಬೇಕೆಂದೂ ಜಗದೀಶ್ ಸೂಚಿಸಿದರು. ಭವಿಷ್ಯದಲ್ಲಿ ಕಾಮಿ೯ಕರ ಸಮಸ್ಯೆ ಮತ್ತಷ್ಟು ಬಿಗಡಾಯಿಸುವ ಹಿನ್ನಲೆಯಲ್ಲಿ ಶೇ 60 ರಷ್ಟು ತೋಟವನ್ನಾದರೂ ಯಾಂತ್ರೀಕರಣಕ್ಕೆ ಒಳಪಡಿಸುವ ಅನಿವಾಯ೯ತೆ ಕಾಫಿ ಕೖಷಿಕರಿಗೆ ಇದೆ ಇದನ್ನು ಗಂಭೀರವಾಗಿ ಪರಿಗಣಿಸದೇ ಕಾಮಿ೯ಕರನ್ನೇ ನಂಬಿಕೊಂಡರೆ ಸಮಸ್ಯೆ ಖಂಡಿತಾ ಎಂದು ಎಚ್ಚರಿಸಿದ ಜಗದೀಶ್, ಪ್ರಸ್ತುತ ಶೇ.5 ರಷ್ಟಿರುವ ಸ್ಲೆಷಾಲಿಟಿ ಕಾಫಿ ಶೇ, 40 ರಷ್ಟು ಮಾರುಕಟ್ಟೆ ಪ್ರಮಾಣ ಹೊಂದುವ ಸಾಧ್ಯತೆ ಇದೆ, ಹೀಗಾಗಿ ಸ್ಪೆಷಾಲಿಟಿ ಕಾಫಿಯತ್ತ ಹೆಚ್ಚಿನ ಗಮನ ನೀಡುವುದು ಸೂಕ್ತ ಎಂದೂ ಅವರು ಹೇಳಿದರು. ಭಾರತದಲ್ಲಿ ಕಾಫಿಯ ಬಗ್ಗೆ ಯುವಪೀಳಿಗೆ ಹೆಚ್ಚು ಆಸಕ್ತಿ ವಹಿಸುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದು ಹೇಳಿದ ಡಾ ಜಗದೀಶ್, 2018 ರಲ್ಲಿ ಕಾಫಿ ಮಂಡಳಿಗೆ 180 ತೋಟಿ ರುಪಾಯಿ ಅನುದಾನ ನೀಡಲಾಗುತ್ತಿತ್ತು, ಈ ವಷ೯ 307 ಕೋಟಿ ರುಪಾಯಿಗಳ ಅನುದಾನ ದೊರಕಿದ್ದು ಸಾಕಷ್ಟು ಯೋಜನೆಗಳನ್ನು ಈ ಅನುದಾನದ ಮೂಲಕ ಜಾರಿಗೊಳಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ ಡಾ ಜಗದೀಶ್, ಮುಂದಿನ 1 ವಷ೯ದಲ್ಲಿಯೇ ಭಾರತಾದ್ಯಂತ 3 ಸಾವಿರ ಕಾಫಿ ಕೆಫೆಗಳು ಪ್ರಾರಂಭವಾಗುತ್ತಿರುವುದು ಕೂಡ ಕಾಫಿ ಕ್ಷೇತ್ರದ ಭವಿಷ್ಯದ ಬಗ್ಗೆ ಆಶಾಭಾವನೆ ಮೂಡಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು ಕಳೆದ ವಷ೯ 2 92 ಮೆಟ್ರಿಕ್ ಟನ್ ಉತ್ಪಾದನೆಯಿದ್ದ ಭಾರತೀಯ ಕಾಫಿ ಈ ವಷ೯ 3 60 ಮೆಟ್ರಿಕ್ ಟನ್ ಗಳ ಮೂಲಕ 80 ಸಾವಿರ ಮೆಟ್ರಿಕ್ ಟನ್ ಗಳಷ್ಟು ಹೆಚ್ಚಳ ಕಂಡಿರುವುದು ಕೂಡ ಹಷ೯ದಾಯಕ ಬೆಳವಣಿಗೆಯಾಗಿದ್ದರೂ ಅಕಾಲಿಕ ಮಳೆಯಿಂದಾಗಿ ಕಾಫಿ ಉತ್ಪಾದನೆ ಮೇಲೆ ವ್ಯತಿರಿಕ್ತ ಪರಿಣಾದ ಸಾಧ್ಯತೆ ಚಿಂತೆಗೀಡು ಮಾಡಿದೆ ಎಂದೂ ಹೇಳಿದರು. ಟಾಟಾ ಕಾಫಿ ಸಂಸ್ಥೆಯ ವ್ಯವಸ್ಥಾಪಕ ನಿದೇ೯ಸಕ ಪಿ ಎ ಮಂದಣ್ಣ ಮಾತನಾಡಿ, ಸುಸ್ಥಿರ ಕಾಫಿ ಬೆಳೆಯತ್ತ ಪ್ರತೀ ಬೆಳಗಾರರೂ ಆದ್ಯತೆ ನೀಡುವಂತಾಗಬೇಕು, ಪರಿಸರ, ಆಥಿ೯ಕತೆ ಮತ್ತು ಸಾಮಾಜಿಕ ಸೇವೆಯತ್ತಲೂ ತೋಟ ಕೖಷಿಕರು ಗಮನ ಹರಿಸಬೇಕೆಂದು ಹೇಳಿದರಲ್ಲದೇ, ಟಾಟಾ ಕಾಫಿ ಸಂಸ್ಥೆಯ ತೋಟಗಳಲ್ಲಿ ಪರಿಸರ ಸ್ನೇಹಿ ಪಲ್ಪರ್ ಗಳು, ಮಳೆ ಕೊಯ್ಲು ವ್ಯವಸ್ಥೆಯನ್ನು ಸೂಕ್ತರೀತಿಯಲ್ಲಿ ನಿವ೯ಹಿಸಿರುವ ಪರಿಣಾಮವೇ ಮಣ್ಣಿನ ಫಲವತ್ತತೆ ಹೆಚ್ಚಳವಾಗಿ ಉತ್ಪಾದನೆ ಹೆಚ್ಚಳಕ್ಕೆ ಕಾರಣವಾಗಿದೆ, ಅಂತರ್ ಜಲದ ಮಟ್ಟದಲ್ಲಿಯೂ ಹೆಚ್ಚಳವಾಗಿದೆ ಎಂದು ಮಾಹಿತಿ ನೀಡಿದರು. ಕೂಗ್೯ ಪ್ಲಾಂಟಸ್೯ ಅಸೋಸಿಯೇಷನ್ ಅಧ್ಯಕ್ಷ ಎ ನಂದ ಬೆಳ್ಯಪ್ಪ ಮಾತನಾಡಿ, ಕಳೆದ 1 ವಷ೯ಧಲ್ಲಿ ಅಸೋಸಿಯೇಷನ್ ವತಿಯಿಂದ ಹಲವಾರು ಗಮನಾಹ೯ ಯೋಜನೆ ಜಾರಿಗೊಳಿಸಲಾಗಿದೆ, ಜಮ್ಮ, ಸಾಗು ಸೇರಿದಂತೆ ಅನೇಕ ಸಮಸ್ಯೆಗಳ ಬಗ್ಗೆ ಸಕಾ೯ರದ ಮಟ್ಟದಲ್ಲಿ ಧ್ವನಿ ಎತ್ತಲಾಗಿದೆ ಬೆಳೆಗಾರರಿಗೆ ಕಾಲದಿಂದ ಕಾಲಕ್ಕೆ ಅಗತ್ಯ ಮಾಹಿತಿ ನೀಡಿದ ಕೀತಿ೯ ಸಂಸ್ಥೆಗೆ ಸಲ್ಲುತ್ತದೆ ಎಂದು ಹಷ೯ ವ್ಯಕ್ತಪಡಿಸಿದರು. ಡಾ.ರಾಜಾ ವಿಜಯ್ ಕುಮಾರ್, ಯುನೆಟೈಡ್ ಕಿಂಗ್ ಡಮ್ ನ ಕೖಷಿ ಪರಿಣಿತ ಮಾಕ್೯ ತ್ರಿಸ್ನಿ, ಕೆ ಸುದೀಂದ್ರ ಅವರು ಕಾಫಿ ಕೖಷಿ ಸಂಬಂಧಿತ ವಿವಿಧ ವಿಚಾರಗಳ ಬಗ್ಗೆ ಪ್ರಾತಕ್ಷಿಕೆ ಮೂಲಕ ಉಪಯುಕ್ತ ಮಾಹಿತಿಗಳನ್ನು ಬೆಳೆಗಾರರಿಗೆ ನೀಡಿದರು. ಕೂಗ್೯ ಪ್ಲಾಂಟಸ್೯ ಅಸೋಸಿಯೇಷನ್ ಕಾಯ೯ದಶಿ೯ ಸಿ ಕೆ ಬೆಳ್ಳಿಯಪ್ಪ, ಉಪಾಧ್ಯಕ್ಷ ಎ ಚಂಗಪ್ಪ ವೇದಿಕೆಯಲ್ಲಿದ್ದರು, ಕಾಯ೯ಕ್ರಮದಲ್ಲಿ ಕನಾ೯ಟಕ ಕಾಫಿ ಪ್ಲಾಂಟಸ್೯ ಅಸೋಸಿಯೇಷನ್ ಅಧ್ಯಕ್ಷ ಕೆ ರಾಜೀವ್, ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷರಾದ ನಡಿಕೇರಿಯಂಡ ಬೋಸ್ ಮಂದಣ್ಣ, ಬಿ ಡಿ ಮಂಜುನಾಥ್, ಮೋಹನ್ ದಾಸ್, ಕೆ ಪಿ ಉತ್ತಪ್ಪ ಸೇರಿದಂತೆ ಕಾಫಿ ಉದ್ಯಮದ ಅನೇಕರು ಹಾಜರಿದ್ದರು ವಿವಿಧ ಕೖಷಿ ಯಂತ್ರೋಪಕರಣಗಳ ಪ್ರದಶ೯ನ ಮತ್ತು ಮಾರಾಟ ಆಯೋಜಿಸಲ್ಪಟ್ಟಿತ್ತು.