ಸುಂಟಿಕೊಪ್ಪ ನ.17 NEWS DESK : ಉತ್ತಮವಾದ ನಾಳೆಗಳನ್ನು ಸೃಷ್ಟಿಸುವ ಜವಾಬ್ದಾರಿ ಮಕ್ಕಳ ಕೈಯಲ್ಲಿದ್ದು, ಮಕ್ಕಳನ್ನು ಚೆನ್ನಾಗಿ ಪೋಷಿಸಿದಾಗ, ಗುಣಮಟ್ಟದ ಶಿಕ್ಷಣ ನೀಡಿದಾಗ ಮಾತ್ರ ಇದು ಸಾಧ್ಯ ಎಂದು ಹೊಸದಿಗಂತ ಪತ್ರಿಕೆಯ ಜಿಲ್ಲಾ ವರದಿಗಾರ, ಕುಶಾಲನಗರ ತಾಲೂಕು ಪತ್ರರ್ತರ ಸಂಘದ ಗೌರವ ಸಲಹೆಗಾರ ಕೆ. ತಿಮ್ಮಪ್ಪ ಅಭಿಪ್ರಾಯಪಟ್ಟರು. ಸುಂಟಿಕೊಪ್ಪ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಪತ್ರರ್ತರ ಸಂಘದಿಂದ ಕೊಡಮಾಡಿದ ಬಹುಮಾನಗಳನ್ನು ವಿತರಿಸಿ ಮಾತನಾಡಿದರು. ಮನೆಯೇ ಮಗುವಿನ ಮೊದಲ ಶಾಲೆ. ಅಲ್ಲಿ ಪೋಷಕರು ಶಿಸ್ತು ಮತ್ತು ಪ್ರಾಮಾಣಿಕತೆಯನ್ನು ಮಕ್ಕಳಲ್ಲಿ ಕಲಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಈ ಮೌಲ್ಯಗಳನ್ನು ಹೊಂದಿರುವ ಮಕ್ಕಳು ಶಾಲೆ ಮತ್ತು ಜೀವನದಲ್ಲಿ ಯಶಸ್ವಿಯಾಗುತ್ತಾರೆ. ಅವರು ಬಲಿಷ್ಠ ರಾಷ್ಟ್ರವನ್ನು ನರ್ಮಿಸಲು ಶಕ್ತರಾಗುತ್ತಾರೆ. ಇಂದಿನ ಮಕ್ಕಳೇ ನಾಳಿನ ನಾಡಿನ ಶಿಲ್ಪಿಗಳಾಗಿದ್ದು, ಇಡೀ ಜಗತ್ತು ನಿಮ್ಮ ಕೈಯಲ್ಲಿದೆ. ಆದ್ದರಿಂದ, ನಗು, ಆಟದ ಜೊತೆಗೆ ಮನವಿಟ್ಟು ಕಲಿತು ದೇಶದ ಉತ್ತಮ ನಾಗರಿಕರಾಗಬೇಕು. ಕಷ್ಟಪಟ್ಟು ಓದಿ ಸಾಧನೆ ಮಾಡಿದ ಮಹನೀಯರು ನಮಗೆ ಮಾದರಿಯಾಗಬೇಕು ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು. ದೇಶದ ಮಕ್ಕಳಿಗೆ ಅಗತ್ಯ ಶಿಕ್ಷಣವನ್ನು ಪೂರೈಸಬೇಕೆಂಬುದು ನೆಹರೂರವರ ಧ್ಯೇಯವಾಗಿತ್ತು. ಮಕ್ಕಳ ಬಗ್ಗೆ ಅಪಾರ ಪ್ರೀತಿ ಹೊಂದಿದ್ದ ಅವರ ನೆನಪಿಗಾಗಿ ಅವರ ಜನ್ಮದಿನವನ್ನೇ ಮಕ್ಕಳ ದಿನವನ್ನಾಗಿ ಆಚರಿಸಲಾಗುತ್ತಿದೆ. ಅದಕ್ಕೂ ಮುನ್ನ ವಿಶ್ವಸಂಸ್ಥೆ ಘೋಷಿಸಿರುವ ನ.20ರಂದು ಮಕ್ಕಳ ದಿನಾಚರಣೆ ಹಮ್ಮಿಕೊಳ್ಳಲಾಗುತ್ತಿತ್ತು ಎಂದರು. ‘ಇಂದಿನ ಮಕ್ಕಳು ನಾಳಿನ ಭಾರತವನ್ನು ರೂಪಿಸುತ್ತಾರೆ’ ಎಂದು ನೆಹರೂ ನಂಬಿದ್ದರು. ದಿನಾಚರಣೆಗಳು ಕೇವಲ ಮೋಜು, ಮಸ್ತಿಯ ಕಾಟಾಚಾರದ ದಿನಾಚರಣೆಗಳಾಗದೆ, ಮಕ್ಕಳಿಗೆ ಸುರಕ್ಷಿತ ವಾತಾವರಣವನ್ನು ಸೃಷ್ಟಿಸಲು, ಅವರ ಬೆಳವಣಿಗೆ ಮತ್ತು ಅಭಿವೃದ್ಧಿ, ಮುಂದೆ ಇರುವ ಅಂತ್ಯವಿಲ್ಲದ ಸಾಧ್ಯತೆಗಳನ್ನು ಸಾಧಿಸಲು ನಾವು ಅವರಿಗೆ ಬೆಂಬಲ ನೀಡಲು ಪ್ರತಿಜ್ಞೆ ಮಾಡಬೇಕಾಗಿದೆ. ಅವರಲ್ಲಿ ಮಕ್ಕಳ ಹಕ್ಕುಗಳು, ಆರೈಕೆ ಮತ್ತು ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುವ ಕರ್ಯವನ್ನು ಮಾಡಬೇಕಾಗಿದೆ ಎಂದು ತಿಮಪ್ಪ ಹೇಳಿದರು. ಇಂದು ನೀವು ಕಲಿಯುವ ಮೌಲ್ಯಗಳು ನಾಳೆ ನೀವು ದೊಡ್ಡವರಾಗಿ ರೂಪುಗೊಳ್ಳಲು ಕಾರಣವಾಗುತ್ತವೆ. ನೆನಪಿಡಿ, ಪ್ರತಿ ದೊಡ್ಡ ಸಾಧನೆಯೂ ಕನಸಿನೊಂದಿಗೆ ಪ್ರಾರಂಭವಾಗುತ್ತದೆ ಮತ್ತು ಪ್ರತಿ ಕನಸು ಕಠಿಣ ಪರಿಶ್ರಮ ಮತ್ತು ಸರ್ಪಣೆಯೊಂದಿಗೆ ನನಸಾಗುತ್ತದೆ.ಆದ್ದರಿಂದ ಭವಿಷ್ಯದ ಬಗ್ಗೆ ಕನಸು ಕಾಣುವುದನ್ನು ವಿದ್ಯರ್ಥಿಗಳು ರೂಢಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು. ನಿಮ್ಮನ್ನು ನೀವು ನಂಬಿ. ನಿಮ್ಮ ಸಾಥ್ರ್ಯದ ಬಗ್ಗೆ ನಿಮಗೆ ವಿಶ್ವಾಸವಿರಲಿ. ಆಗ ಎಲ್ಲವನ್ನೂ ಸಾಧಿಸುವ ಮರ್ಗ ತಾನಾಗಿಯೇ ತೋರುತ್ತದೆ ಎಂದು ತಿಳಿಹೇಳಿದರು. ಕರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದಬಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಬಾಲಕೃಷ್ಣ ಅವರು ಮಾತನಾಡಿ, ಪತ್ರರ್ತರು ಶಾಲೆಯ ಬಗ್ಗೆ ಇಟ್ಟಿರುವ ಕಾಳಜಿಗೆ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ, ಮಹನೀಯರ ದಿನಾಚರಣೆಗಳನ್ನು ಆಚರಿಸುವಾಗ ಅವರು ಮಾಡಿರುವ ಸಾಧನೆಗಳನ್ನು ಅರಿತು ಅವರಂತೆ ನಡೆಯಲು ಪ್ರೇರಣೆ ಸಿಗುತ್ತದೆ ಎಂದು ನುಡಿದರು. ಶಿಕ್ಷಕಿ ಚಿತ್ರಾ ಸ್ವಾಗತಿಸಿದರೆ, ಮತ್ತರೋರ್ವ ಶಿಕ್ಷಕಿ ಲಿಯೋನಾ ಕಾರ್ಯಕ್ರಮ ನಿರ್ವಹಿಸಿದರು, ಶಿಕ್ಷಕ ಪ್ರಕಾಶ್ ವಂದಿಸಿದರು. ಕುಶಾಲನಗರ ತಾಲೂಕು ಪತ್ರಕರ್ತರ ಸಂಘದ ಉಪಾಧ್ಯಕ್ಷ ಬಿ.ಸಿ.ದಿನೇಶ್, ಪ್ರಧಾನ ಕಾರ್ಯದರ್ಶಿಎಂ.ಬಿ.ವಿನ್ಸೆಂಟ್, ನಿರ್ದೇಶಕ ಆಲ್ಫ್ರೆಡ್ ಡಿಸೋಜ, ಸಹ ಶಿಕ್ಷಕಿ ಶಾಂತ ಹೆಗ್ಡೆ, ಹಾಜರಿದ್ದು ಬಹುಮಾನ ವಿತರಿಸಿದರು.