ಚೆಟ್ಟಳ್ಳಿ ನ.26 NEWS DESK : ಚೆಟ್ಟಳ್ಳಿ ಗ್ರಾಮ ಪಂಚಾಯಿತಿಯಲ್ಲಿ ತೆರವಾಗಿದ್ದ ಮಹಿಳಾ ಮೀಸಲಾತಿ ಸ್ಥಾನಕ್ಕೆ ಬಿಜೆಪಿಯ ಬೆಂಬಲಿತ ಅಭ್ಯರ್ಥಿ ಅಯ್ಯಂಡ್ರ ಭಾಗೀರಥಿ ಹೆಚ್ಚಿನ ಮತ ಪಡೆಯುವ ಮೂಲಕ ಗೆಲುವನ್ನು ಸಾಧಿಸಿದ್ದಾರೆ. ಚೆಟ್ಟಳ್ಳಿ ಗ್ರಾ.ಪಂ ಚೇರಳ ಶ್ರೀಮಂಗಲ ವಾರ್ಡಿನ ಸಾಮಾನ್ಯ ಮಹಿಳಾ ಮೀಸಲಾತಿ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಭಾಗೀರಥಿ ಅಯ್ಯಂಡ್ರ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಸುಲೋಚನ ಸ್ಪರ್ಧಿಸಿದರು. ಚುನಾವಣೆಯಲ್ಲಿ 440 ಮತಚಲಾವಣೆ ಗೊಳ್ಳುವ ಮೂಲಕ ಶೇ.43 ಮತದಾನವಾಗಿತ್ತು. ಕುಶಾಲನಗರದ ತಾಲೂಕು ಕಚೇರಿಯಲ್ಲಿ ನಡೆದ ಮತ ಎಣಿಕಾ ಕಾರ್ಯದಲ್ಲಿ ಸುಲೋಚನಾ 179 ಮತ ಪಡೆದರೆ, ಭಾಗೀರಥಿ ಅಯ್ಯಂಡ್ರ 246 ಮತಪಡೆಯುವ ಮೂಲಕ 67 ಮತಗಳ ಅಂತರದಿಂದ ಗೆಲುವನ್ನು ಸಾಧಿಸಿದ್ದಾರೆ. ಈ ಸಂದರ್ಭ ಬಿಜೆಪಿ ತಾಲ್ಲೂಕು ವಕ್ತಾರ ಹಾಗೂ ವಕೀಲ ಬಲ್ಲಾರಂಡ ಕಂಠಿಕಾರ್ಯಪ್ಪ, ಶಕ್ತಿ ಕೇಂದ್ರದ ಅಧ್ಯಕ್ಷ ಎನ್.ಎಸ್.ರವಿ, ಬಿಜೆಪಿಯ ಚೆಟ್ಟಳ್ಳಿ ವಾರ್ಡ್ ಅಧ್ಯಕ್ಷ ಪುತ್ತರಿರ ಶಿವು ನಂಜಪ್ಪ, ಅಯ್ಯಂಡ್ರ ಲೋಹಿತಾಶ್ವ, ಶುಭಾಂಗಿನಿ, ಅಶಾ ಬಾಬು ಹಾಗು ಕಾರ್ಯಕರ್ತರು ಹಾಜರಿದ್ದರು.