ವಿರಾಜಪೇಟೆ ಡಿ.9 NEWS DESK : ಪೊಂಬೊಳ್ಚ ಕೂಟದ ಮಹಾಸಭೆಯು ವಿರಾಜಪೇಟೆಯ ಬೊರೆಗೌಡ ಕಟ್ಟಡದಲ್ಲಿನ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ವಿವಿಧ ವಿಷಯಗಳ ಕುರಿತು ಚರ್ಚಿಸಲಾಯಿತು. ನಂತರ ಭಾರತ ದೇಶದ ವೀರಾಸೇನಾನಿಯಾಗಿ ಸೇವೆಯಲ್ಲಿ ಇರುವ, ಕೊಡವ ಪಾಜೆಯ ಹೆಸರಾಂತ ಸಾಹಿತಿ ಪೊಂಬೊಳ್ಚ ಕೂಟದ ಸದಸ್ಯ ಕ್ಯಾಪ್ಟನ್ ಬಿದ್ದಂಡ ನಾಣಿ ದೇವಯ್ಯ, ಪೊಂಬೊಳ್ಚ ಕೂಟದ ಅಧ್ಯಕ್ಷರೂ ಮತ್ತು ಹಿರಿಯ ಹಾಕಿ ಆಟಗಾರರಾದ ಮಾಳೇಟಿರ ಶ್ರೀನಿವಾಸ್ ಹಾಗೂ ಪೊಂಬೊಳ್ಚ ಕೂಟವನ್ನು ಸ್ಥಾಪನೆ ಮಾಡಿದ ಸ್ಥಾಪಕ ಅಧ್ಯಕ್ಷ ಮತ್ತು ಸಾಹಿತಿ ಕೋಟೆರ ಪೂಣಚ್ಚ ಅವರನ್ನು ಕೂಟದ ವತಿಯಿಂದ ಗೌರವ ಪೂರ್ವಕವಾಗಿ ಸನ್ಮಾನ ಮಾಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಹಲವ ಸಾಹಿತಿಗಳನ್ನು ಗುರುತಿಸಿ ಅವರಿಗೆ ಕೂಟದ ವತಿಯಿಂದ ಕಿರು ಕಾಣಿಕೆ ನೀಡಿ ಗೌರವಿಸಲಾಯಿತು.