ನಾಪೋಕ್ಲು ಡಿ.14 NEWS DESK : ಪುತ್ತರಿ ಹಬ್ಬವೆಂದರೆ ಗ್ರಾಮೀಣ ಪ್ರದೇಶದಲ್ಲಿ ಅತೀವ ಸಂಭ್ರಮ. ಧಾನ್ಯಲಕ್ಷ್ಮಿಯನ್ನು ಕರೆತರುವ ಈ ಹಬ್ಬದಲ್ಲಿ ಸಿಡಿಮದ್ದುಗಳದ್ದೇ ದರ್ಬಾರ್. ರಾಜ್ಯದ ಇತರೆಡೆಗಳಲ್ಲಿ ದೀಪಾವಳಿಯನ್ನು ಬೆಳಕಿನ ಹಬ್ಬವಾಗಿ ಆಚರಿಸಿದರೆ ಕೊಡಗಿನಲ್ಲಿ ಪುತ್ತರಿಯನ್ನು ಬೆಳಕಿನ ಹಬ್ಬವಾಗಿ ಆಚರಿಸುತ್ತಾರೆ ಅಂತೆಯೇ ಪಟಾಕಿಗಳಿಗೆ, ಸುಡು ಮದ್ದುಗಳಿಗೆ ಅಧಿಕ ಬೇಡಿಕೆ. ನಾಪೋಕ್ಲುವಿನ ಸಂತೆ ಮೈದಾನದಲ್ಲಿ ಪಟಾಕಿಗಳ ಮಾರಾಟ ಬಿರುಸಿನಿಂದ ನಡೆಯಿತು. ಗ್ರಾಹಕರು ಇಲ್ಲಿನ ಐದು ಮಳಿಗೆಗಳಿಂದ ಪಟಾಕಿಗಳನ್ನು ಖರೀದಿಸಿದರು. ಪುತ್ತರಿ ಹಬ್ಬದಂದು ಭತ್ತದ ಗದ್ದೆಗಳಲ್ಲಿ ಕದಿರು ಕೊಯ್ಯುವಲ್ಲಿಂದ ಹಿಡಿದು ರಾತ್ರಿಯಿಡೀ ಪಟಾಕಿ ಸಿಡಿಸುತ್ತಾರೆ. ಅದಕ್ಕೂ ಮುನ್ನ ಕತ್ತಲೆ ಆವರಿಸುತ್ತಿದ್ದಂತೆ ನೆರೆಕಟ್ಟುವ ಕಾರ್ಯ ಆರಂಭಗೊಳ್ಳುತ್ತದೆ. ಇಡೀ ದಿನ ಪಟಾಕಿಗಳ ಸದ್ದು ಮಾರ್ದನಿಸುತ್ತದೆ. ಬಾಣಬಿರುಸುಗಳ ಸದ್ದಿನೊಂದಿಗೆ ಮಕ್ಕಳು,ಹಿರಿಯರು ಖುಷಿ ಪಡುತ್ತಾರೆ. ಹಬ್ಬದಲ್ಲಿ ಸಾವಿರಾರು ರೂಪಾಯಿಗಳ ಪಟಾಕಿಗಳನ್ನು ಬೆಲೆ ಲೆಕ್ಕಿಸದೆ ಗ್ರಾಹಕರು ಖರೀದಿಸಿ, ಸಿಡಿಸಿ ಸಂಭ್ರಮಿಸುತ್ತಾರೆ.
ವರದಿ : ದುಗ್ಗಳ ಸದಾನಂದ.