ಮಡಿಕೇರಿ ಡಿ.14 NEWS DESK : ವಿರಾಜಪೇಟೆ ಸಮೀಪದ ಹೆಗ್ಗಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾರದ ಪೂಜೆಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಬೆಳಿಗ್ಗೆಯಿಂದಲೇ ವಿವಿಧ ಧಾರ್ಮಿಕ ಪೂಜಾಕೈಂಕರ್ಯಗಳು ಸೇರಿದಂತೆ ಸಂಕಲ್ಪ ಪೂಜೆ, ಶಾರದ ಮಾತೆಗೆ ಕುಂಕುಮಾರ್ಚನೆ, ಪುಷ್ಪರ್ಚನೆ, ಅಲಂಕಾರ ಪೂಜೆ ಯನ್ನು ನಡೆಸಿದರು. ಸರಸ್ವತಿ ಸ್ತೋತ್ರವನ್ನು ಪಠಿಸಿ ನೈವೇದ್ಯ ಪ್ರಸಾದವನ್ನು ಸಮರ್ಪಿಸಿದರು. ನಂತರ ವಿಶೇಷ ಪ್ರಾರ್ಥನೆ ಸಲ್ಲಿಸಿ, ಮಹಾ ಮಂಗಳಾರತಿ ನೆರವೇರಿಸಲಾಯಿತು. ಪೂಜಾ ಕಾರ್ಯಕ್ರಮವನ್ನು ಅರ್ಚಕರಾದ ವಾಮನಮೂರ್ತಿ ಭಟ್ ನೆರವೇರಿಸಿದರು. ಈ ಸಂದರ್ಭದ ಶಾಲೆಯ ಮುಖ್ಯ ಶಿಕ್ಷಕಿ ಹೇಮಲತಾ, ಎಸ್.ಡಿ.ಎಂ.ಸಿ. ಅಧ್ಯಕ್ಷ ರಾಜೇಶ್, ಸದಸ್ಯರುಗಳು, ಶಿಕ್ಷಕರು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಗೂ ಪೋಷಕರು ಪಾಲ್ಗೊಂಡಿದ್ದರು.