ಸೋಮವಾರಪೇಟೆ ಡಿ.18 NEWS DESK : ಕೂತಿ ಗ್ರಾಮದಲ್ಲಿ ಸ್ಥಳೀಯರೇ ಶ್ರಮದಾನ ಮಾಡುವ ಮೂಲಕ ರಸ್ತೆ ಸರಿ ಪಡಿಸಿದರು. ಮುಖ್ಯ ರಸ್ತೆಯಿಂದ 11 ಮನೆಗಳಿಗೆ ತೆರಳುವ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದ್ದು, ವಾಹನಗಳು ಸಂಚಾರಿಸಲು ಯೋಗ್ಯವಲ್ಲದಂತಾಗಿತ್ತು. ಈ ಹಿನ್ನೆಲೆ ಸ್ಥಳೀಯರೇ ತಮ್ಮ ಸ್ವಂತ ಖರ್ಚಿನಿಂದ ಸುಮಾರು 1ಕಿ.ಮೀ ರಸ್ತೆಗೆ ವೆಟ್ ಮಿಕ್ಸ್ ಹಾಕುವ ಮೂಲಕ ರಸ್ತೆ ಸರಿಪಡಿಸಿದರು. ಹಲವು ವರ್ಷಗಳಿಂದ ಪಂಚಾಯಿತಿ ಅಧಿಕಾರಿಗಳಿಗೆ, ಸಂಬಂಧ ಪಟ್ಟ ಕೂತಿ ವಾರ್ಡ್ ಸದಸ್ಯರಿಗೆ ರಸ್ತೆ ಸರಿಪಡಿಸುವಂತೆ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ, ಆದ್ದರಿಂದ ಗ್ರಾಮಸ್ಥರೇ ಶ್ರಮದಾನದ ಮೂಲಕ ರಸ್ತೆ ಸರಿಪಡಿಸಿಕೊಳ್ಳುತ್ತಿದ್ದೇವೆ ಎಂದು ಗ್ರಾಮಸ್ಥರು ತಿಳಿಸಿದರು. ಈ ಸಂದರ್ಭ ಸ್ಥಳೀಯರಾದ ಜಿತೇಂದ್ರ, ಬೋಪಯ್ಯ, ಅಶ್ವಥ್, ಅಶೋಕ್ ಸೇರಿದಂತೆ ಇತರರಿದ್ದರು.