ಮಡಿಕೇರಿ ಡಿ.19 NEWS DESK : ಗ್ರಾಮೀಣ ಪ್ರದೇಶದಲ್ಲಿ ನೆಲೆನಿಂತಿರುವ ಮಾದಾಪುರದ ಶ್ರೀಮತಿ ಡಿ. ಚೆನ್ನಮ್ಮ ಎಜುಕೇಶನ್ ಸೊಸೈಟಿ ಈಗ ವಜ್ರ ಮಹೋತ್ಸವದ ಸಂಭ್ರಮದಲ್ಲಿದ್ದು, ಇದೇ 27 ಮತ್ತು 28 ರಂದು ಸಂಸ್ಥೆಯ 60 ನೇ ವಷಾ೯ರಣೆ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ಕನ೯ಲ್ ಬಿ.ಜಿ.ವಿ.ಕುಮಾರ್ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಕನ೯ಲ್ ಕುಮಾರ್, ದಾನಿಗಳಾದ ದಿವಂಗತ ಲೆಫ್ಟಿನೆಂಟ್ ಕನ೯ಲ್ ಡಿ.ಸಿ.ಬಸಪ್ಪ ಅವರ ಪ್ರಯತ್ನದಿಂದಾಗಿ ಅವರ ತಾಯಿ ಡಿ ಚೆನ್ನಮ್ಮ ಸ್ಮರಣಾಥ೯ 1960 ರ ಜುಲೈ 22 ರಂದು ಆರಂಭವಾದ ಪ್ರೌಢಶಾಲೆ 6 ದಶಕಗಳಲ್ಲಿ ಈ ವ್ಯಾಪ್ತಿಯ ಗ್ರಾಮೀಣ ವಿದ್ಯಾಥಿ೯ಗಳಿಗೆ ಜ್ಞಾನದೀವಿಗೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ದಿವಂಗತರಾದ ಮಚ್ಚಂಡ ಗಣಪತಿ, ಪುಟ್ಟುಸ್ವಾಮಿ ಮುತ್ತಯ್ಯ ಗುಂಡುಕುಟ್ಟಿ ಮಂಜುನಾಥಯ್ಯ, ಎಂ.ಎ.ಪೊನ್ನಪ್ಪ, ಕೆ.ಡಿ.ಸೋಮಯ್ಯ, ಸಿ.ಎ.ಪೂವಯ್ಯ, ಎಂ.ಜಿ.ಬೋಪಣ್ಣ ಸೇರಿದಂತೆ ಅನೇಕ ಮಹನೀಯರ ಪರಿಶ್ರಮದಿಂದಾಗಿ ಶಿಕ್ಷಣ ಸಂಸ್ಥೆಯು ಸಾಕಷ್ಟು ಅಭಿವೖದ್ದಿ ಹೊಂದಿದೆ ಎಂದು ಸ್ಮರಿಸಿಕೊಂಡರು. 1964ರಲ್ಲಿ ಗರಗಂದೂರಿನ ಈಗಿನ ಸುಂದರ ಕಟ್ಟಡಕ್ಕೆ ಶಾಲೆಯನ್ನು ಸ್ಥಳಾಂತರಿಸಲಾಯಿತು ಎಂದು ತಿಳಿಸಿದ ಕುಮಾರ್, ದಿ| ಗುಂಡೂರಾವ್ ಅವರ ಕಾಲದಲ್ಲಿ ಕಾಲೇಜು ಸ್ಥಾಪನೆಯ ಕನಸು 1967ರಲ್ಲಿ ಈಡೇರಿತು ಎಂದು ಹೇಳಿದರು. ಪ್ರೌಡಶಾಲೆಯ ಪ್ರಥಮ ಮುಖ್ಯೋಪಾಧ್ಯಾಯರಾಗಿ ಕೊಡಗಿನ ಇತಿಹಾಸದ ಕೃತಿಕಾರ, ಖ್ಯಾತ ಸಾಹಿತಿ ದಿ. ಡಿ.ಎನ್. ಕೃಷ್ಣಯ್ಯ ಕಾಯ೯ನಿವ೯ಹಿಸಿದ್ದು, ಸಂಸ್ಥೆಯ ಪಾಲಿಗೆ ಹೆ್ಮ್ಮೆಯ ವಿಚಾರ ಎಂದೂ ಕುಮಾರ್ ಸ್ಮರಿಸಿದರು. ಪ್ರಸ್ತುತ ಕಾಲೇಜಿನ ವಜ್ರಮಹೋತ್ಸವದ ಅಂಗವಾಗಿ ಡಿ.27 ರಂದು ಶುಕ್ರವಾರ ಹಳೇ ವಿದ್ಯಾಥಿ೯ಗಳ ಸ್ನೇಹ ಸಮ್ಮಿಲನ ಕಾಯ೯ಕ್ರಮ ಆಯೋಜಿತವಾಗಿದ್ದು, ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಹಳೇ ವಿದ್ಯಾಥಿ೯ಗಳಿಗೆ ವೈವಿಧ್ಯಮಯ ಮನರಂಜನಾ ಕ್ರೀಡಾಸ್ಪಧೆ೯ಗಳು ಆಯೋಜಿಸಲ್ಪಟ್ಟಿದೆ, ಮಧ್ಯಾಹ್ನ 1 ಗಂಟೆಗೆ ಸಭಾ ಕಾಯ೯ಕ್ರಮ ನಡೆಯಲಿದೆ, ಸಂಸ್ಥೆಯ ಹಳೇ ವಿದ್ಯಾಥಿ೯ ಸಂಘದ ಅಧ್ಯಕ್ಷ ಎಂ.ಜಿ.ಬೋಪಣ್ಣ, ಅಧ್ಯಕ್ಷತೆಯ ಕಾಯ೯ಕ್ರಮವನ್ನು , ಎಂ.ಜಿ ಬೋಪಣ್ಣ ಉದ್ಘಾಟಿಸಲಿದ್ದಾರೆ, ವಾಣಿಜ್ಯ ತೆರಿಗೆ ಇಲಾಖೆಯ ನಿವೖತ್ತ ಹೆಚ್ಚುವರಿ ಆಯುಕ್ತ ಬಿ.ಎ.ನಾಣಿಯಪ್ಪ, ಕಾಫಿ ಬೆಳೆಗಾರರಾದ ಸಿ.ಪಿ.ಮುದ್ದಪ್ಪ, ಕೆ.ಎಸ್.ಮಂಜುನಾಥ್, ಹೆಚ್.ಎ.ಎಸ್. ಉತ್ತಯ್ಯ, ಮೈಸೂರು ಆಕಾಶವಾಣಿಯ ಸಹಾಯಕ ನಿದೇ೯ಶಕ ಅಬ್ದುಲ್ ರಶೀದ್, ಅರಣ್ಯ ಇಲಾಖೆಯ ಹಿರಿಯ ಸಹಾಯಕಿ ಬಿ.ಆರ್. ವಿಜಯಲಕ್ಷ್ಮಿ, ಪತ್ರಕತ೯ ಅನಿಲ್ ಹೆಚ್. ಟಿ., ವಕೀಲ ಕೆ.ಎಸ್.ರತನ್ ತಮ್ಮಯ್ಯ, ಕನ೯ಲ್ ಪಾಸುರ ಮುತ್ತಪ್ಪ, ಕನ೯ಲ್ ಎಂ.ಜಿ.ತಿಮ್ಮಯ್ಯ, ಸಂಸ್ಥೆಯ ನಿವೖತ್ತ ಹಿರಿಯ ಕಛೇರಿ ಸಹಾಯಕಿ ಎಸ್. ಸಿ. ಮಾಲತಿ,ಲೆಕ್ಕಪರಿಶೋಧಕ ಫ್ರಾನ್ಸಿಸ್ ಪಿ.ಡಬ್ಲ್ಯು, ನಿವೃತ್ತ ಉಪನೋಂದಣಿಧಾಕಾರಿ ಕೆ.ಎಂ.ಭಾನುಮತಿ ಮೈಸೂರಿನ ಉದ್ಯಮಿ ಬಿ.ವಿ.ವೆಂಕಪ್ಪ , ಶಾಲಾ ಸಮಿತಿಯ ಪೋಷಕ ಸದಸ್ಯ ಹೆಚ್.ಎಸ್ ಗಣೇಶ್ , ಸವಿತ ಪಾಲ್ಗೊಳ್ಳಲಿದ್ದಾರೆ. ಅಂದು ಸಂಜೆ 5 ಗಂಟೆಯಿಂದ 7 ಗಂಟೆಯವರೆಗೆ ಮೈಸೂರಿನ ಖ್ಯಾತಕಲಾವಿದರಿಂದ ಸಂಗೀತ, ನೖತ್ಯ ಕಾಯ೯ಕ್ರಮ ಆಯೋಜಿತವಾಗಿದೆ ಎಂದು ಸಂಸ್ಥೆಯ ಅಧ್ಕ್ಷಕ್ಷ ಕನ೯ಲ್ ಬಿ.ಜಿ.ವಿ.ಕುಮಾರ್ ತಿಳಿಸಿದರು. ಡಿ.28 ರಂದು ಬೆಳಗ್ಗೆ 11 ಗಂಟೆಗೆ 20 ಲಕ್ಷ ರುಪಾಯಿ ಅಂದಾಜು ವೆಚ್ಚದಲ್ಲಿ ನಿಮಿ೯ಸಲಾಗಿರುವ ಭೋಜನಾಲಯವನ್ನು ಮಡಿಕೇರಿ ಕ್ಷೇತ್ರ ಶಾಸಕ ಡಾ. ಮಂಥರ್ ಗೌಡ ಉದ್ಘಾಟಿಸಲಿದ್ದು, ಸಭಾ ಕಾಯ೯ಕ್ರಮವನ್ನು ಶಾಸಕರಾದ ಎ.ಎಸ್. ಪೊನ್ನಣ್ಣ ಮತ್ತು ಸುಜಾಕುಶಾಲಪ್ಪ ಉದ್ಘಾಟಿಸಲಿದ್ದಾರೆ, ಕಾಯ೯ಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಲೆಫ್ಪಿನೆಂಟ್ ಕನ೯ಲ್ ಸಿ.ಪಿ. ಕಾಯ೯ಪ್ಪ, ರಾಜ್ಯ ಸಕಾ೯ರದ ಚೀಫ್ ಎಲೆಕ್ಟಿಕಲ್ ಇನ್ಸ್ ಪೆಕ್ಟರ್ ರೋಷನ್ ಅಪ್ಪಚ್ಚು, ಅರಣ್ಯ ಮಹಾವಿದ್ಯಾಲಯದ ನಿವೖತ್ತ ಡೀನ್ ಸಿ.ಜಿ. ಕುಶಾಲಪ್ಪ, ಮಾಜಿ ಸಚಿವರಾದ ಎಂ.ಪಿ ಅಪ್ಪಚ್ಚು ರಂಜನ್, ಬಿ.ಎ.ಜೀವಿಜಯ, ಪಾಂಡಿಚೇರಿ ಸಕಾ೯ರದ ಪ್ರವಾಸೋದ್ಯಮ ಇಲಾಖೆಯ ನಿವೃತ್ತ ಕಾಯ೯ದಶಿ೯ ಬಿ.ಆರ್. ಬಾಬು ಸಂಸ್ಥೆಯ ಮಹಾಪೋಷಕ ಗೌತಮ್ ಬಸಪ್ಪ, ಎಂ.ಜಿ ಬೋಪಣ್ಣ, ಕಾಯ೯ದಶಿ೯ ಎಂ.ಬಿ. ಬೋಪಣ್ಣ ಜಿ.ಪಂ.ನ ನಿವೖತ್ತ ಮುಖ್ಯ ಲೆಕ್ಕಧಿಕಾರಿ ಬಿ.ಬಿ. ಪುಪ್ಪಾವತಿ, ಪ್ರಾಂಶುಪಾಲ ಸಿ.ಜಿ.ಮಂದಪ್ಪ, ಮುಖ್ಯಶಿಕ್ಷಕಿ ಕೆ.ಯು.ರೀಟಾ ಪಾಲ್ಗೊಳ್ಳಲಿದ್ದಾರೆ ವಜ್ರದೀವಿಗೆ ಸ್ಮರಣ ಸಂಚಿಕೆಯನ್ನೂ ಲೋಕಾಪ೯ಣೆ ಮಾಡಲಾಗುತ್ತದೆ. ಸಭಾ ಕಾಯ೯ಕ್ರಮದ ನಂತರ ಸಂಸ್ಥೆಯ ವಿದ್ಯಾಥಿ೯ಗಳಿಂದ ವೈವಿಧ್ಯಮಯ ಸಾಂಸ್ಕೖತಿಕ ಕಾಯ೯ಕ್ರಮ ಆಯೋಜಿತವಾಗಿದೆ ಎಂದೂ ಕನ೯ಲ್ ಕುಮಾರ್ ಮಾಹಿತಿ ನೀಡಿದರು. ಸಂಸ್ಥೆಯ ಪ್ರಾಂಶುಪಾಲ ಸಿ.ಜಿ.ಮಂದಪ್ಪ ಮಾತನಾಡಿ, ಮುಂದಿನ ಶೈಕ್ಷಣಿಕ ವಷ೯ದಿಂದ ಎಲ್ ಕೆಜಿ ಮತ್ತು ಯುಕೆಜಿಯನ್ನು ಇಂಗ್ಲೀಷ್ ಮಾಧ್ಯಮದಲ್ಲಿ ಪ್ರಾರಂಭಿಸಲಾಗುತ್ತದೆ, ಪ್ರಸ್ತುತ ಸಂಸ್ಥೆಯಲ್ಲಿ 300 ವಿದ್ಯಾಥಿ೯ಗಳು ಶಿಕ್ಷಣ ಪಡೆಯುತ್ತಿದ್ದು, ಸುಸಜ್ಜಿತವಾದ 40 ಕಂಪ್ಯೂಟರ್ ಹೊಂದಿರುವ ಲ್ಯಾಬ್, 5 ಸಾವಿರ ಪುಸ್ತಕಗಳ ಗ್ರಂಥಾಲಯ, ಪ್ರಯೋಗಾಲಯ, 500 ಜನ ಕೂರಬಹುದಾದ ಸಭಾಂಗಣ, ವಿಶಾಲವಾದ ಆಟದ ಮೈದಾನವನ್ನು ಶಿಕ್ಷಣ ಸಂಸ್ಥೆಯು ವಿದ್ಯಾಥಿ೯ಗಳಿಗಾಗಿ ಹೊಂದಿದೆ ಎಂದು ವಿವರಿಸಿದರು. ಸುದ್ದಿಗೋಷ್ಟಿಯಲ್ಲಿ ಸಂಸ್ಥೆಯ ನಿದೇ೯ಶಕರಾದ ಬಿ.ಎ.ನಾಣಿಯಪ್ಪ, ಸಿ.ಪಿ. ಮುದ್ದಪ್ಪ, ಉಪನ್ಯಾಸಕ ಮೋಹನ್ ಹೆಗ್ಗಡೆ ಹಾಜರಿದ್ದರು.