ನಾಪೋಕ್ಲು ಜ.6 NEWS DESK : ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಹಾಗೂ ನಾವು ಪ್ರತಿಷ್ಠಾನ ಸಂಸ್ಥೆ ಸಹಯೋಗದಲ್ಲಿ “ಮಕ್ಕಳ ಸಂವಿಧಾನ ಕ್ಲಬ್” ಕುರಿತಂತೆ ಕೊಡಗು ಮತ್ತು ಮೈಸೂರು ಜಿಲ್ಲೆಯ ವಸತಿ ಶಾಲಾ ಸಮಾಜ ವಿಜ್ಞಾನ ಶಿಕ್ಷಕರಿಗೆ ಕಾರ್ಯಾಗಾರವನ್ನು ನೆಡೆಸಲಾಗಿದ್ದು,ಇದರ ಭಾಗವಾಗಿ ನಾಪೋಕ್ಲು ಡಾ|| ಬಿ.ಆರ್ ಅಂಬೇಡ್ಕರ್ ವಸತಿ ಶಾಲೆಗೆ ನಾವು ಪ್ರತಿಷ್ಠಾನ ಭೇಟಿ ನೀಡಿ ತರಗತಿಗಳ ಪರಿವೀಕ್ಷಣೆ ಮಾಡಿದರು. ಆರು ಮತ್ತು ಏಳನೇ ತರಗತಿ ಮಕ್ಕಳಿಗೆ ಮಕ್ಕಳ ಹಕ್ಕುಗಳ ಕುರಿತು ಮಕ್ಕಳಿಗೆ ಚಟುವಟಿಕೆಗಳ ಮೂಲಕ ಪ್ರಜಾಪ್ರಭುತ್ವತ್ಮಾಕ ತರಗತಿಗಳನ್ನು ಸಮಾಜ ವಿಜ್ಞಾನ ಶಿಕ್ಷಕ ಪಿ.ಎಲ್.ಗುಲ್ಶನ್ ನಡೆಸಿ ಮಾರ್ಗದರ್ಶನ ನೀಡಿದರು. ನಂತರ ನಾವು ಪ್ರತಿಷ್ಠಾನದ ಸುಮನ್ ಮ್ಯಾಥ್ಯೂ ಮಕ್ಕಳಿಗಿರುವ ಬದುಕುವ, ಅಭಿವೃದ್ಧಿ ಹೊಂದುವ, ರಕ್ಷಣೆಯ ಮತ್ತು ಭಾಗವಹಿಸುವ ಹಕ್ಕುಗಳ ಬಗ್ಗೆ ಹಾಗೂ ಮಕ್ಕಳಲ್ಲಿ ಆಲೋಚನೆ ಮೂಡುವಂತೆ ಮಾಡುಲು ಸಂವಾದ ನಡೆಯಸಿದರು.
ಮಕ್ಕಳಿಗೆ ಮೂಲಭೂತ ಹಾಗೂ ವಿಶ್ವಸಂಸ್ಥೆಯ ಬಗ್ಗೆ ಜಾಗೃತಿಯನ್ನು ಮೂಡಿಸಲಾಯಿತು. ನಾವು ಸಂಸ್ಥೆಯ ಗೌತಮ್ ಕಿರಗಂದೂರು ಮತ್ತು ಕಾರ್ಯಕ್ರಮ ಸಂಯೋಜಕಿ ಬಿ.ಕೆ.ಕುಮಾರಿ ಮಾತನಾಡಿ, ಹಕ್ಕುಗಳನ್ನು ಚಲಾಯಿಸುವ ಮೊದಲು ನಾವು ಉತ್ತಮ ನಾಗರಿಕರಾಗಿ ನಮ್ಮ ಜವಾಬ್ದಾರಿಗಳನ್ನು ನಿಭಾಯಿಸುವ ಮೂಲಕ ಗೌರವಿಸುವ ಮನೋಭಾವ ಮೂಡಿಸಬೇಕು. ಸಂವಿಧಾನದಡಿಯಲ್ಲಿ ಎಲ್ಲರಿಗೂ ಸಮಾನ ಹಕ್ಕು ಮತ್ತು ಜವಾಬ್ದಾರಿಗಳು ನೀಡಲಾಗಿದ್ದು, ಅದನ್ನು ಜವಾಬ್ದಾರಿಯುತವಾಗಿ ನಿಭಾಯಿಸುವುದು ಮುಖ್ಯ ಎಂಬುದರ ಕುರಿತು ಮಕ್ಕಳಿಗೆ ಅರಿವು ಮೂಡಿಸಿದರು. ಈ ಸಂದರ್ಭ ಕಂಪ್ಯೂಟರ್ ಸೈನ್ಸ್ ಶಿಕ್ಷಕಿ ಸುಸ್ಮಿತಾ, ವಸತಿ ಶಾಲೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ವರದಿ : ದುಗ್ಗಳ ಸದಾನಂದ.