ಮಡಿಕೇರಿ ಜ.7 NEWS DESK : ಸಿದ್ದಾಪುರದ ಶ್ರೀ ದುರ್ಗಾಭಗವತಿ ದೇವಾಲಯದ ತಿರು ಮಹೋತ್ಸವವು ಶ್ರದ್ಧಾಭಕ್ತಿಯಿಂದ ನಡೆಯಿತು.
ಬ್ರಹ್ಮಶ್ರೀ ಈಡವಲತ್ ಪುಡಯೂರ್ಮನ ಕುಬೇರನ್ ನಂಬೂದಿರಿಪಾಡ್ ತಂತ್ರಿಗಳು ರಾಜರಾಜೇಶ್ವರ ದೇವಸ್ಥಾನದ ತಲೋರ ತಳಿಪರಂಬ್ ನೇತೃತ್ವದಲ್ಲಿ ನಾಲ್ಕು ದಿನಗಳ ಕಾಲ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ನೆರವೇರಿತು. ಜ.3ರ ಸಂಜೆಯಿಂದಲೇ ಪುಣ್ಯಾಹ ಪ್ರಾಸಶುದ್ಧಿ, ವಾಸ್ತುಬಲಿ, ದೀಪಾರಾಧನೆ, ತ್ರಿಕೊಡಿಯೆಟಂ, ಅತ್ತಾಯ ಪೂಜಾ, ಮಹಾಪೂಜೆ, ಮಹಾಗಣಪತಿ ಹೋಮ, ಉಷಾಪೂಜೆ, ಮಹಾಸುದರ್ಶನ ಹೋಮ, ಮಹಾಮೃತ್ಯುಂಜಯ ಹೋಮ, ನವಕಂ ಪಂಚಗವ್ಯಂ, ಕಲಶಾಭಿಷೇಕ, ಭಗವತಿಸೇವೆ, ದೀಪಾರಾಧನೆ, ಸಹಸ್ರದೀಪಾ, ಗುಳಿಗ, ನಾಗದೇವರಿಗೆ ಪೂಜೆ, ಕಲಶಭಿಷೇಕ ಮಹಾಪೂಜೆ ತ್‍ಡಂಬ್‍ನೃತ್ಯ, ಅತ್ತಾಯಪೂಜಾ ತ್ರಿಕೊಡಿಎರಕಂ ಪೂಜೆ ಹಾಗೂ ಬಲಿಬಿಂಬದ ಮೆರವಣಿಗೆ ನಡೆಯಿತು. ನೆರೆದಿದ್ದ ಭಕ್ತಾಧಿಗಳಿಗೆ ನಾಲ್ಕುದಿನವೂ ಅನ್ನಸಂತರ್ಪಣೆ ನೆರವೇರಿತು. ವಿವಿಧ ಗ್ರಾಮಗಳಿಂದ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ದುರ್ಗಾಭಗವತಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.