ಸೋಮವಾರಪೇಟೆ ಜ.8 NEWS DESK : ತೋಳೂರುಶೆಟ್ಟಳ್ಳಿ ನಡ್ಲಕೊಪ್ಪ ಗುಂಪು ಸಮಿತಿಯ ವಾರ್ಷಿಕ ಮಹಾಸಭೆ ಇಬ್ಬನಿ ಹೋಂಸ್ಟೇಯಲ್ಲಿ ನಡೆಯಿತು. ಸಮಿತಿ ಅಧ್ಯಕ್ಷ ಟಿ.ಕೆ.ಮಾಚಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿ.ಪಂ ಸಹಾಯಕ ಕಾರ್ಯಪಾಲಕ ಅಭಿಯಂತರ ಎಂ.ಪಿ.ವೀರೇಂದ್ರ, ನಿವೃತ್ತ ಮುಖ್ಯ ಶಿಕ್ಷಕ ಹಾಗೂ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಸಿ.ಕೆ.ಶಿವಕುಮಾರ್ ಅವರುಗಳನ್ನು ಸನ್ಮಾನಿಸಲಾಯಿತು. ಈ ಸಂರ್ಭ ಸಮಿತಿ ಕಾರ್ಯದರ್ಶಿ ವಿ.ವಿ.ಸೋಮಯ್ಯ, ಖಜಾಂಚಿ ಎಂ.ಕೆ.ಧರ್ಮಪ್ಪ, ಗ್ರಾಮದ ಮುಖಂಡರಾದ ಹೆಚ್.ಬಿ.ರಮೇಶ, ಸುಬ್ಬಯ್ಯ, ಶಾಂತಪ್ಪ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಕೆ. ಮಲ್ಲಪ್ಪ ಮತ್ತಿತರರು ಇದ್ದರು.