ನಾಪೋಕ್ಲು ಜ.10 NEWS DESK : ಸಂಪಾಜೆಯ ಆದರ್ಶ ಫ್ರೆಂಡ್ಸ್ ಚಡಾವು ವತಿಯಿಂದ ಬಾಲಚಂದ್ರ ಕಳಗಿಯವರ ಸ್ಮರಣಾರ್ಥ 3ನೇ ವರ್ಷದ ಗ್ರಾಮಿಣ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಸಂಪಾಜೆಯಲ್ಲಿ ಸಂಭ್ರಮದಿಂದ ನಡೆಯಿತು. ಆದರ್ಶ ಫ್ರೆಂಡ್ಸ್ ನ ಅಧ್ಯಕ್ಷ ಸುನಿಲ್ ಪನೆಯಾಳ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಮಾದೇವಿ ಬಾಲಚಂದ್ರ ಕಳಗಿ, ಶ್ರೀಧರ ಪಡ್ಪು ಭಾಗವಹಿಸಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ನಂತರ ಕ್ರೀಡಾಕೂಟದ ವಿಜೇತರಿಗೆ ಬಹುಮಾನ ವಿತರಿಸಿದರು. ಸಂಜೆ ನಡೆದ ಸಾಂಸ್ಕತಿಕ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಹಾಗೂ ಹೆಸರಾಂತ ಕಲಾವಿದ ಮಯೂರಿ ಎನ್.ಆರ್.ಪುರ ಚಿಕ್ಕಮಗಳೂರು ನಡೆಸಿಕೊಟ್ಟರು. ಭಾರತೀಯ ಭೂಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಸಂಪಾಜೆಯ ಸೈನುದ್ದಿನ್ ಹಾಗೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಸಾವಿತ್ರಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಯಶೋಧರ ಸ್ವಾಗತಿಸಿದರು, ವಿಕ್ರಾಂತ್ ಹಾಗೂ ಪ್ರಸಾದ್ ಕಾಟುರು ಕಾರ್ಯಕ್ರಮ ನಿರೂಪಿಸಿದರು. ಭರತ್ ವಂದಿಸಿದರು.
ವರದಿ : ದುಗ್ಗಳ ಸದಾನಂದ