ಮಡಿಕೇರಿ ಜ.10 NEWS DESK : ನಗರದ ಜನರಲ್ ತಿಮ್ಮಯ್ಯ ಸ್ಮಾರಕ ಭವನಕ್ಕೆ ಏರ್ ಮಾಷ೯ಲ್ ನಾಗೇಶ್ ಕಪೂರ್ ಭೇಟಿ ನೀಡಿ ವ್ಯವಸ್ಥೆಯ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಮಡಿಕೇರಿಯಲ್ಲಿರುವ ಜನರಲ್ ತಿಮ್ಮಯ್ಯ ಜನ್ಮನಿವಾಸ ಸನ್ನಿಸೈಡ್ ಗೆ ಭೇಟಿ ನೀಡಿದ್ದ ವಾಯುಪಡೆಯ ತರಬೇತಿ ವಿಭಾಗದ ಬೆಂಗಳೂರಿನ ಮುಖ್ಯಸ್ಥರಾದ ಏರ್ ಮಾಷ೯ಲ್ ನಾಗೇಶ್ ಕಪೂರ್ ಸ್ಮಾರಕ ಭವನದ ಬಗ್ಗೆ ಮತ್ತು ವೀರಸೇನಾಧಿಕಾರಿ ಜನರಲ್ ತಿಮ್ಮಯ್ಯ ಅವರ ಸೇನಾ ಜೀವನ ಸಂಬಂಧಿತ ಸಮಗ್ರ ಮಾಹಿತಿ ಪಡೆದರು. ಈ ಸಂದಭ೯ ಪ್ರತಿಕ್ರಿಯಿಸಿದ ಏರ್ ಮಾಷ೯ಲ್ ನಾಗೇಶ್ ಕಪೂರ್, ಭಾರತದ ವೀರಸೇನಾನಿಯ ಬಗ್ಗೆ ಸಂಪೂಣ೯ ಮಾಹಿತಿಯುಳ್ಳ ಸ್ಮಾರಕ ಭವನಕ್ಕೆ ಭೇಟಿ ನೀಡಿದ್ದು, ಅಪೂವ೯ ಕ್ಷಣಗಳಾಗಿದೆ, ಈ ವೀರಸೇನಾನಿಯ ಜೀವನ ಯುವಪೀಳಿಗೆಗೆ ಆದಶ೯ಪ್ರಾಯವಾಗಬೇಕೆಂದು ಅಭಿಪ್ರಾಯಪಟ್ಟರು. ಈ ಸಂದಭ೯ ಸ್ಮಾರಕ ಭವನದ ವ್ಯವಸ್ಥಾಪಕರಾದ ಸುಬೇದಾರ್ ಮೇಜರ್ ಗೌಡಂಡ ತಿಮ್ಮಯ್ಯ ಅವರು ಭವನದ ಮಾಹಿತಿ ನೀಡಿದರು. ಕನ್ಡಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿದೇ೯ಶಕ ಕುಮಾರ್, ಸೈನಿಕ ಕಲ್ಯಾಣಾಧಿಕಾರಿ ಬಿ.ಆರ್. ಶೆಟ್ಟಿ , ಜನರಲ್ ತಿಮ್ಮಯ್ಯ ಸ್ಮಾರಕಭವನದ ಸಿಬ್ಬಂದಿಗಳಾದ ಪಿ.ಆರ್.ಮೋಹನ್, ರಮ್ಯ ಮಾಚಯ್ಯ, ಸುಭಾಷ್ ಹಾಜರಿದ್ದರು.