ಮಡಿಕೇರಿ ಜ.13 : ಇನ್ನರ್ ವೀಲ್ ಸಂಸ್ಥೆಯ ಜಿಲ್ಲಾಧ್ಯಕ್ಷೆ ವೈಶಾಲಿ ಕುಡುವ ಅವರು ಮಡಿಕೇರಿ ಇನ್ನರ್ ವೀಲ್ ಸಂಸ್ಥೆಗೆ ಭೇಟಿ ನೀಡಿದರು.ಈ ಸಂದಭ೯ ಇನ್ನರ್ ವೀಲ್ ಸದಸ್ಯೆಯರೊಂದಿಗೆ ನಗರದ ವೃದ್ಧಾಶ್ರಮಕ್ಕೆ ಭೇಟಿ ನೀಡಿ ಅಲ್ಲಿನ ಆಶ್ರಿತರಿಗೆ ಎರಡು ಮಂಚ, ಗಾಲಿಕುಚಿ೯ ಸೇರಿದಂತೆ ಅಗತ್ಯವಿರುವ ವಿವಿಧ ವಸ್ತುಗಳನ್ನು ವಿತರಿಸಿದರು. ನಂತರ ಮಡಿಕೇರಿ ರೋಟರಿ ಸಭಾಂಗಣದಲ್ಲಿ ಆಯೋಜಿತ ಸಮಾರಂಭದಲ್ಲಿ ಇನ್ನರ್ ವೀಲ್ ಸಂಸ್ಥೆಯಲ್ಲಿ 50 ವಷ೯ಗಳಿಂದ ಸದಸ್ಯೆಯಾಗಿರುವ ಡಾ.ಜಯಲಕ್ಷ್ಮಿ ಪಾಟ್ಕರ್ ಅವರನ್ನು ಸನ್ಮಾನಿಸಿದರು. ಮಡಿಕೇರಿ ಇನ್ನರ್ ವೀಲ್ ಸಂಸ್ಥೆಯ ಅಧ್ಯಕ್ಷೆ ಆ್ಯಗ್ನೇಸ್ ಮುತ್ತಣ್ಣ, ಕಾಯ೯ದಶಿ೯ ರಶ್ಮಿ ಪ್ರವೀಣ್, ರೋಟರಿ ಅಧ್ಯಕ್ಷ ಸುದಯ್ ನಾಣಯ್ಯ, ಕಾಯ೯ದಶಿ೯ ಪ್ರಿನ್ಸ್ ಪೊನ್ನಣ್ಣ, ಹಾಜರಿದ್ದ ಕಾಯ೯ಕ್ರಮದಲ್ಲಿ ಇನ್ನರ್ ವೀಲ್ ಸಂಸ್ಥೆಯಲ್ಲಿ ಲಲಿತಾರಾಘವನ್ ಸಂಪಾದಕತ್ವದಲ್ಲಿ ಪ್ರಕಟಿತ ವಾತಾ೯ಸಂಚಿಕೆಯನ್ನು ವೈಶಾಲಿ ಕುಡುವ ಬಿಡುಗಡೆಗೊಳಿಸಿದರು.