ಸುಂಟಿಕೊಪ್ಪ ಜ.13 NEWS DESK : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾನ್‍ಬೈಲ್ ಕಾರ್ಯಕ್ಷೇತ್ರದ ವಿವಿಧ ಸ್ವಸಹಾಯ ಸಂಘಗಳ ವತಿಯಿಂದ ಕಾನ್‍ಬೈಲ್ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸ್ವಚ್ಛತಾ ಶ್ರಮದಾನ ನಡೆಯಿತು. ಶಾಲೆಯ ಆವರಣದಲ್ಲಿ ಬೆಳೆದ ಕಾಡು ಗಿಡಗಂಟಿಗಳನ್ನು ಕಡಿದು ಸ್ವಚ್ಛಗೊಳಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾನ್‍ಬೈಲು ಒಕ್ಕೂಟದ ಕಾರ್ಯದರ್ಶಿ ಪುಷ್ಪಲತಾ, ಮಾಜಿ ಅಧ್ಯಕ್ಷ ಖತೀಜ ಹಾಗೂ ಸೇವಾ ಪ್ರತಿನಿಧಿ ಯಶೋಧ ಬಸವರಾಜ್ ಸ್ವಚ್ಛತಾ ಶ್ರಮದಾನಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಸ್ವಸಹಾಯ ಸಂಘಗಳಾದ ಜನನಿ, ಭೂಮಿಕ, ಶ್ರೀನಿಧಿ, ಮೂಕಾಂಬಿಕಾ, ಕನ್ನಿಕ, ಭಗವತಿ ದೃತಿ ಹಾಗೂ ನೇತಾಜಿ ಸಂಘದ ಸದಸ್ಯರು ಪಾಲ್ಗೊಂಡಿದ್ದರು.