ಮಡಿಕೇರಿ ಜ.17 NEWS DESK : ಸರಕಾರದ ಆದೇಶದಂತೆ ಕೊಡಗು ಜಿಲ್ಲೆಯಲ್ಲಿ ಆದಾಯ ತೆರಿಗೆ ಸಲ್ಲಿಸಲಾದ/ಪಾವತಿದಾರರ ಒಟ್ಟು 903 ಆದ್ಯತಾ ಪಡಿತರ ಚೀಟಿಗಳನ್ನು ಆದ್ಯತೇತರ ಪಡಿತರ ಚೀಟಿಯನ್ನಾಗಿ ಪರಿವರ್ತನೆ ಮಾಡಲಾಗಿರುತ್ತದೆ. ಆದರೆ ಸರಕಾರ ಮರು ಪರಿಶೀಲಿಸುವವರೆಗೆ ಯಥವಾತ್ತಾಗಿ ಮುಂದುವರೆಸಲು ಸೂಚಿಸಿದಂತೆ ಈ ಎಲ್ಲಾ 903 ಪಡಿತರ ಚೀಟಿಗಳನ್ನು ಯಥಾವತ್ತಾಗಿ ಬಿಪಿಎಲ್ ಪಡಿತರ ಚೀಟಿಯನ್ನಾಗಿ ಮುಂದುವರೆಸಲಾಗಿದೆ. ಈ ಸಂಬಂಧ ಪಡಿತರ ಚೀಟಿದಾರರು ಸಂಬಂಧಿಸಿದ ತಾಲ್ಲೂಕು ಆಹಾರ ನಿರೀಕ್ಷಕರನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರಾದ ಜೆ.ಬಿ.ಶ್ರೀಧರಮೂರ್ತಿ ತಿಳಿಸಿದ್ದಾರೆ.