ನಾಪೋಕ್ಲು ಫೆ.7 NEWS DESK : ಬಡ ಕುಟುಂಬದ ಮನೆಯೊಂದಕ್ಕೆ ಸುಣ್ಣ ಬಣ್ಣ ಬಳಿಯುವ ಮೂಲಕ ನಾಪೋಕ್ಲು ಶೌರ್ಯ ವಿಪತ್ತು ತಂಡ ಮಾನವೀಯತೆ ಮೆರೆದಿದೆ. ಕೂರುಳಿಯ ಮನೆಯೊಂದರಲ್ಲಿ ವಾಸವಿರುವ ಪಾರ್ಶ್ವವಾಯು ಪೀಡಿತ ಗಂಡ. ಕಾಯಿಲೆಯಿಂದ ಬಳಲುತ್ತರುವ ಹೆಂಡತಿ. ಆಸರೆಗೆ ಯಾರೂ ಇಲ್ಲದ ದಯಾನೀಯ ಪರಿಸ್ಥಿತಿಯಲ್ಲಿರುವ ಕುಟುಂಬಕ್ಕೆ ಹತ್ತು ಹಲವು ಸೇವಾ ಕಾರ್ಯದಲ್ಲಿ ಮುಂಚೂಣಿಯಲ್ಲಿರುವ ನಾಪೋಕ್ಲು ಶೌರ್ಯ ವಿಪ್ಪತ್ತು ನಿರ್ವಹಣಾ ಘಟಕದ ಸದಸ್ಯರು ಬಣ್ಣ ಖರೀದಿಸಿ ಪೂರ್ತಿಮನೆಗೆ ಬಣ್ಣ ಬಳಿದು ಕುಟುಂಬಸ್ಥರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದ್ದಾರೆ. ಸೇವಾ ಕಾರ್ಯದಲ್ಲಿ ಶೌರ್ಯ ವಿಪತ್ತು ನಿರ್ವಹಣಾ ಘಟಕದ ತಾಲ್ಲೂಕು ಮಾಸ್ಟರ್ ಬಾಳೆಯಡ ದಿವ್ಯ ಮಂದಪ್ಪ, ಪ್ರಮುಖರಾದ ಉಮಾಲಕ್ಷ್ಮಿ, ಸೀನ, ಮಾಧವನ್, ಶಂಕರ, ಶರವಣ, ರವಿ, ಚಂದ್ರಕಲಾ, ರಮ್ಯ, ಪೊನ್ನಮ್ಮ ಮೊದಲಾದವರು ಭಾಗವಹಿಸಿದ್ದು, ಸಾರ್ವಜನಿಕರ ಪ್ರಸಂಸೆಗೆ ಪಾತ್ರರಾದರು.
ವರದಿ : ದುಗ್ಗಳ ಸದಾನಂದ.











