ಕುಶಾಲನಗರ ಫೆ.8 NEWS DESK : ಕೂಡುಮಂಗಳೂರು ಗ್ರಾ.ಪಂ ನ ಬಸವೇಶ್ವರ ಬಡಾವಣೆಯಲ್ಲಿ ಐದು ಲಕ್ಷ ರೂ.ವೆಚ್ಚದ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಿದ್ದು, ಕಾಮಗಾರಿಯನ್ನು ಗ್ರಾ.ಪಂ ಸದಸ್ಯ ಕೆ.ಬಿ.ಶಂಶುದ್ಧೀನ್ ಪರಿಶೀಲನೆ ನಡೆಸಿದರು. ಬಸವೇಶ್ವರ ಬಡಾವಣೆಯ ಕುಬೇರ ಮಣಿಮಾಲ ಅವರ ಮನೆಯಿಂದ ಜಗದೀಶ್ ಅವರ ಜಾಗದವರೆಗೆ ಐದು ಲಕ್ಷ ರೂ ವೆಚ್ಚದಲ್ಲಿ 80 ಮೀಟರ್ ಕಾಂಕ್ರೀಟ್ ರಸ್ತೆಯನ್ನು ನಿರ್ಮಿಸಲಾಗಿದೆ. ಈ ಸಂದರ್ಭ ಮಾತನಾಡಿದ ಕೂಡುಮಂಗಳೂರು ಗ್ರಾ.ಪಂ ಸದಸ್ಯ ಕೆ.ಬಿ.ಶಂಶುದ್ಧೀನ್, ವಾರ್ಡ್ ಅಭಿವೃದ್ಧಿ ವಿಚಾರವಾಗಿ ಶಾಸಕರ ಬಳಿ ಮನವಿ ಮಾಡಲಾಗಿತ್ತು. ಈ ಹಿನ್ನಲೆ ಶಾಸಕರು ಅನುದಾನವನ್ನು ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅನುದಾನವನ್ನು ನೀಡುವುದಾಗಿಯೂ ಭರವಸೆ ನೀಡಿದ್ದಾರೆ ಎಂದರು. ಈ ಸಂದರ್ಭ ಬಸವೇಶ್ವರ ಬಡಾವಣೆಯ ನಿವಾಸಿಗಳಾದ ಅಕ್ಕಮ್ಮ, ಚನ್ನಮ್ಮ, ಜೈನಾಬಿ, ಹಸೀನಾ, ಮಂಗಳ, ಶಕೀಲಾ, ಅದ್ನಾನ್ ಹಾಗೂ ಇನ್ನಿತರರು ಇದ್ದರು.











