ಗೋಣೀಕೊಪ್ಪ NEWS DESK ಫೆ.8 : ದೆಹಲಿ ಚುನಾವಣೆಯಲ್ಲಿ ಬಿಜೆಪಿ ಜಯ ಸಾಧಿಸಿದ ಹಿನ್ನೆಲೆ ಗೋಣಿಕೊಪ್ಪ ನಗರ ಬಿಜೆಪಿ ಶಕ್ತಿಕೇಂದ್ರದ ಪ್ರಮುಖರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಬಸ್ ನಿಲ್ದಾಣದಲ್ಲಿ ಜಿಲ್ಲಾ ಉಪಾಧ್ಯಕ್ಷ ಗುಮ್ಮಟ್ಟೀರ ಕಿಲನ್ ಗಣಪತಿ, ಶಕ್ತಿ ಕೇಂದ್ರದ ಪ್ರಮುಖ ಸುರೇಶ್ ರೈ ಮುಂದಾಳತ್ವದಲ್ಲಿ ಸಂಭ್ರಮಾಚರಣೆ ನಡೆಯಿತು. ದೆಹಲಿ ಚುನಾವಣಾ ಫಲಿತಾಂಶ ಮುಂದಿನ ಕರ್ನಾಟಕ ಮತ್ತು ತೆಲಂಗಾಣದ ಚುನಾವಣೆಗೆ ದಾರಿದೀಪವಾಗಿದೆ. ದೆಹಲಿಯಲ್ಲಿ ಬಿಜೆಪಿ 70 ಸ್ಥಾನಗಳ ಪೈಕಿ 47 ಸ್ಥಾನಗಳನ್ನು ಗಳಿಸಿದೆ. ಬಿಜೆಪಿ 27 ವರ್ಷಗಳ ಬಳಿಕ ಅಧಿಕಾರಕ್ಕೆ ಬಂದಿದೆ ಎಂದು ಗುಮ್ಮಟ್ಟೀರ ಕಿಲನ್ ಗಣಪತಿ ಹೇಳಿದರು. ರಾಜ್ಯ ಬಿಜೆಪಿ ಕೃಷಿಮೋರ್ಚಾ ಸದಸ್ಯೆ ಮಾಪಂಗಡ ಯಮುನಾ ಚಂಗಪ್ಪ, ಗೋಣಿಕೊಪ್ಪ ಗ್ರಾ.ಪಂ ಸದಸ್ಯರುಗಳಾದ ಕೊಣಿಯಂಡ ಬೋಜಮ್ಮ, ವಿವೇಕ್ ರಾಯ್ಕರ್, ನೂರೇರ ರತಿ ಅಚ್ಚಪ್ಪ, ಮನ್ನಕಮನೆ ಸೌಮ್ಯ ಬಾಲು, ರಾಮಕೃಷ್ಣ, ಪ್ರಮುಖರುಗಳಾದ ಚೇಂದಂಡ ಸುಮಿ ಸುಬ್ಬಯ್ಯ, ಸುಬ್ರಮಣಿ ಎಂ.ಎಸ್, ರಾಣಿ ನಾರಾಯಣ, ಪ್ರಭಾಕರ್ ನೆಲ್ಲಿತ್ತಾಯ, ಜ್ಯೋತಿ, ಮಂಜು ಮಾಯಮುಡಿ, ಸುದರ್ಶನ್ ಭಟ್, ಮನು, ದೀಪು, ಸಾಮಾಜಿಕ ಜಾಲತಾಣದ ಸಂಚಾಲಕ ಸುನಿಲ್ ರೈ ಇತರರು ಇದ್ದರು.










