Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಮೇ 15 ರಂದು ಕೊಡಗಿನ ವಿವಿಧೆಡೆ ವಿದ್ಯುತ್ ವ್ಯತ್ಯಯ*
  • *ವಿರಾಜಪೇಟೆ ತಾ.ಪಂ ಪ್ರಭಾರ ಕಾರ್ಯ ನಿರ್ವಹಣಾಧಿಕಾರಿಗಳಾಗಿ ಕೆ.ಆರ್‌.ರಾಜೇಶ್ ನೇಮಕ*
  • *ದೇಹದಾರ್ಢ್ಯ ಸ್ಪರ್ಧೆ ಯಲ್ಲಿ ಕುಶಾಲನಗರದ ಮೊಹಮ್ಮದ್ ನಬ್ ಹಾನ್ ಸಾಧನೆ*
  • *ತೋರ ಗ್ರಾಮದಲ್ಲಿ ‘ಅರೆಭಾಷೆ ಗಡಿನಾಡ ಉತ್ಸವ’ : ಕುಗ್ರಾಮಗಳಿಗೂ ಅಕಾಡೆಮಿ ಕಾರ್ಯಕ್ರಮ ತಲುಪುತ್ತಿರುವುದು ಅರೆಭಾಷೆ ಬೆಳವಣಿಗೆಗೆ ಸಹಕಾರಿ :  ಶಾಸಕ ಎ.ಎಸ್.ಪೊನ್ನಣ್ಣ*
  • *ಕೊಡಗು : ಹೋಂಸ್ಟೇಗಳ ಸರ್ವೆ ಕಾರ್ಯ ಆರಂಭ : ಹೋಂಸ್ಟೇ ಗಳ ನೋಂದಣಿಗೆ ಅವಕಾಶ : ನಿತಿನ್ ಚಕ್ಕಿ*
  • *ಲಾರಿ ಮಾಲೀಕರ ಸಮಸ್ಯೆಗೆ ಪರಿಹಾರ : ಮೈಸೂರು ನ್ಯೂ ಗೂಡ್ಸ್‌ ಟರ್ಮಿನಲ್‌ ರಸ್ತೆ ಸಂಚಾರಕ್ಕೆ ಮುಕ್ತಗೊಳಿಸಿದ ಸಂಸದ ಯದುವೀರ್‌ ಒಡೆಯರ್‌*
  • *ಬಾರಿಕಾಡು ಗ್ರಾಮದಲ್ಲಿ ನೂತನ ರಸ್ತೆ ಉದ್ಘಾಟನೆ*
  • *ಪಾಲಂಗಾಲ : ಹ್ಯಾಂಗಿಂಗ್ ಸೋಲಾರ್ ಪೆನ್ಸಿಂಗ್ ಕಾಮಗಾರಿಗೆ ಶಾಸಕ ಎ.ಎಸ್.ಪೊನ್ನಣ್ಣ ಚಾಲನೆ*
  • *ಕೊಡಗು : ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ*
  • *ಮೇ 15 ರಂದು “ಕೋವಿ ಮತ್ತು ಕೊಳಲು” ಸಿನಿಮಾದ ಮುಹೂರ್ತ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಕೊಡಗು : ಹೋಂಸ್ಟೇಗಳ ಸರ್ವೆ ಕಾರ್ಯ ಆರಂಭ : ಹೋಂಸ್ಟೇ ಗಳ ನೋಂದಣಿಗೆ ಅವಕಾಶ : ನಿತಿನ್ ಚಕ್ಕಿ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಕೊಡಗು : ಹೋಂಸ್ಟೇಗಳ ಸರ್ವೆ ಕಾರ್ಯ ಆರಂಭ : ಹೋಂಸ್ಟೇ ಗಳ ನೋಂದಣಿಗೆ ಅವಕಾಶ : ನಿತಿನ್ ಚಕ್ಕಿ*

ಮೇ 13, 20264 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಮೇ 13 NEWS DESK : ಜಿಲ್ಲೆಯಲ್ಲಿ ಅಕ್ರಮ ಮತ್ತು ಅನಧಿಕೃತ ಹೋಂಸ್ಟೇಗಳ ಪತ್ತೆ ಹಾಗೂ ಪ್ರವಾಸಿಗರ ಸುರಕ್ಷತೆಗಾಗಿ ಪ್ರವಾಸೋದ್ಯಮ, ಪೊಲೀಸ್ ಮತ್ತು ಕಂದಾಯ ಇಲಾಖೆಯ ಜಂಟಿ ಆಶ್ರಯದಲ್ಲಿ ಸರ್ವೆ ಕಾರ್ಯ ಆರಂಭಗೊಂಡಿದ್ದು, ನೋಂದಣಿ ಆಗದೆ ಇರುವ ಹೋಂಸ್ಟೇ ಮಾಲೀಕರು ಕಾಲಮಿತಿಯಲ್ಲಿ ಸ್ಥಳೀಯ ಪೊಲೀಸ್ ಠಾಣೆ, ನಗರಸಭೆ, ಪುರಸಭೆ ಅಥವಾ ಗ್ರಾಮ ಪಂಚಾಯಿತಿಯಿಂದ ನಿರಾಕ್ಷೇಪಣಾ ಪ್ರಮಾಣ ಪತ್ರ (ಎನ್‍ಒಸಿ) ಪಡೆದು ಪ್ರವಾಸೋದ್ಯಮ ಇಲಾಖೆಯಲ್ಲಿ ಕಡ್ಡಾಯವಾಗಿ ನೋಂದಯಿಸಿಕೊಳ್ಳಬೇಕು, ತಪ್ಪಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಉಪ ವಿಭಾಗಾಧಿಕಾರಿ ಹಾಗೂ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರಾದ ನಿತಿನ್ ಚಕ್ಕಿ ಅವರು ಎಚ್ಚರಿಸಿದ್ದಾರೆ. ನಗರದ ಉಪ ವಿಭಾಗಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಹೋಂಸ್ಟೇ/ ಬೆಡ್ ಮತ್ತು ಬ್ರೇಕ್ ಪಾಸ್ಟ್/ ಹೋಟೆಲ್‍ಗಳ ಸುರಕ್ಷತೆ ಕುರಿತು ಭಿತ್ತಿಪತ್ರ ಬಿಡುಗಡೆ ಮಾಡಿ ಹೋಂಸ್ಟೇಗಳ ಮಾಲೀಕರು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಅಧಿಕಾರಿಗಳು ಹೋಂ-ಸ್ಟೇಗಳ ಸರ್ವೇ ನಡೆಸುವ ಸಂದರ್ಭದಲ್ಲಿ ಮಾಲೀಕರು ಸರಿಯಾದ ಮಾಹಿತಿ ನೀಡಬೇಕು. ಈ ಹಿಂದೆ ಹೋಂ-ಸ್ಟೇ ನಡೆಸುತ್ತಿದ್ದು, ಪ್ರಸ್ತುತ ಸ್ಥಗಿತಗೊಳಿಸಿರುವ ಹೋಂ-ಸ್ಟೇಗಳ ಮಾಹಿತಿಯನ್ನು ಮಾಲೀಕರು ಕಡ್ಡಾಯವಾಗಿ ನೀಡಬೇಕು. ಜಿಲ್ಲೆಯಲ್ಲಿ ಯಾವುದೇ ವಾಣಿಜ್ಯ ಅಥವಾ ಅನಧಿಕೃತ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಮತ್ತು ಪ್ರವಾಸಿಗರ ಸುರಕ್ಷತೆಗಾಗಿ ಸರ್ಕಾರ ಹಲವು ಕ್ರಮ ಕೈಗೊಳ್ಳಲಾಗಿದ್ದು, ಹೋಂಸ್ಟೇಗಳ ಮಾಲೀಕರು ಕಡ್ಡಾಯವಾಗಿ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು, ಸಾಧ್ಯವಾದಷ್ಟು ಸ್ಥಳೀಯ ಜನರನ್ನು ಉದ್ಯೋಗಕ್ಕೆ ತೆಗೆದುಕೊಳ್ಳಬೇಕು ಮತ್ತು ಸ್ಥಳೀಯ ವ್ಯಾಪಾರಿಗಳಿಂದ ಖರೀದಿ ಮಾಡಬೇಕು, ನೋಂದಣಿ ಪ್ರಮಾಣಪತ್ರ ಮತ್ತು ಪರವಾನಗಿಗಳನ್ನು ಮುಖ್ಯ ಪ್ರವೇಶದ್ವಾರದಲ್ಲಿ ಸ್ಪಷ್ಟವಾಗಿ ಪ್ರದರ್ಶಿಸಬೇಕು, ನೋಂದಾಣಿ ಮತ್ತು ಅನುಮತಿ ಇಲ್ಲದೆ ಕಾರ್ಯಾಚರಣೆ ನಡೆಸುವುದು ಕಾನೂನು ಬಾಹಿರ. ಅಂತಹ ಪ್ರಕರಣಗಳು ಕಂಡು ಬಂದಲ್ಲಿ ಪ್ರವಾಸೋದ್ಯಮ ಇಲಾಖೆಯ ಗಮನಕ್ಕೆ ತರಬೇಕು ಎಂದು ನಿತಿನ್ ಚಕ್ಕಿ ಅವರು ಹೇಳಿದರು. ಹೋಂಸ್ಟೆ/ ರೇಸಾರ್ಟ್ ಯಾವುದೇ ಅಕ್ರಮ ಚಟುವಟಿಕೆಗಳು ಕಂಡು ಬಂದಲ್ಲಿ ತಕ್ಷಣ ಪೊಲೀಸ್ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಗೆ ಮಾಹಿತಿ ನೀಡಬೇಕು, 1 ರಿಂದ 6 ಕೊಠಡಿಗಳು ಮಾತ್ರ ಇರಬೇಕು, ಗರಿಷ್ಠ 12 ಹಾಸಿಗೆಗಳು, ಒಂದು ಕೊಠಡಿಯಲ್ಲಿ ಗರಿಷ್ಠ ಮೂರು ಹಾಸಿಗೆಗಳು ಮಾತ್ರ ಇರಬೇಕು, ಕೊಠಡಿಗಳು ಮಾಲೀಕರ ಮನೆಯಲ್ಲಿಯೇ ಅಥವಾ ಅದೇ ಆಸ್ತಿಯಲ್ಲಿರುವ ಪ್ರತ್ಯೇಕ ಕಾಟೇಜ್‍ನಲ್ಲಿ ಇರಬೇಕು, ಬಾಡಿಗೆಗೆ ಅಥವಾ ಲೀಸ್ ಪಡೆದ ಆಸ್ತಿಗಳಲ್ಲಿ ಹೋಂಸ್ಟೇ ನಡೆಸಲು ಅವಕಾಶ ಇರುವುದಿಲ್ಲ ಎಂದು ನಿತಿನ್ ಚಕ್ಕಿ ಅವರು ಮಾಹಿತಿ ನೀಡಿದರು. ಪ್ರತಿಯೊಂದು ಅತಿಥಿ ಕೊಠಡಿಗೂ ಶೌಚಾಲಯ ಇರಬೇಕು, ಟೈಮ್ ಶೇರ್ ಆಧಾರದಲ್ಲಿ ಕೊಠಡಿಗಳನ್ನು ಬಾಡಿಗೆಗೆ ನೀಡಬಾರದು, ಸೌಲಭ್ಯಗಳು, ಶುಲ್ಕಗಳು, ಚಟುವಟಿಕೆಗಳು ಮತ್ತು ಸೇವೆಗಳ ವಿವರಗಳನ್ನು ಸ್ಪಷ್ಟವಾಗಿ ತಿಳಿಸಬೇಕು, ಮುದ್ರಿತ ದರಪಟ್ಟಿ ಇರಬೇಕು, ಬೆಳಗಿನ ಉಪಹಾರ ಕಡ್ಡಾಯವಾಗಿ ನೀಡಬೇಕು, ಹೆಚ್ಚುವರಿ ಊಟಗಳಿಗೆ ಶುಲ್ಕ ಪಡೆಯಬಹುದು, ಉಪಹಾರ ವೆಚ್ಚ, ರೂಮ್ ದರದಲ್ಲಿ ಸೇರಿಸಬೇಕು, ಸ್ಥಳೀಯ ಆಹಾರಕ್ಕೆ ಉತ್ತೇಜನ ನೀಡಬೇಕು ಎಂದು ಉಪ ವಿಭಾಧಿಕಾರಿ ಅವರು ಸಲಹೆ ಮಾಡಿದರು. ಹೋಂಸ್ಟೇಯನ್ನು ಸ್ವಚ್ಛವಾಗಿ, ಸುರಕ್ಷಿತವಾಗಿ ಮತ್ತು ಉತ್ತಮವಾಗಿ ನಿರ್ವಹಿಸಬೇಕು, ಆರೋಗ್ಯ ಸ್ವಚ್ಛತೆ, ಗುಣಮಟ್ಟ ಮತ್ತು ಅಗ್ನಿ ಸುರಕ್ಷತಾ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು, ರಿಸೆಷ್ಪನಲ್ಲಿ ಸಿಸಿಟಿವಿ ಕ್ಯಾಮೆರಾ ಇರಬೇಕು, ಕನಿಷ್ಠ 30 ದಿನಗಳ ಕಾಲ ದೃಶ್ಯ ಸಂಗ್ರಹಿಸಬೇಕು, ಅತಿಥಿಗಳ ದಾಖಲೆಗಳನ್ನು ನಿರ್ವಹಿಸಬೇಕು, ಚೆಕ್ ಇನ್-ಚೆಕ್ ಔಟ್, ಗುರುತಿನ ಚೀಟಿ ವಿವರಗಳು, ವಿದೇಶಿ ಅತಿಥಿಗಳ ಪಾಸ್‍ಪೋರ್ಟ್ ವಿವರಗಳನ್ನು ಪೊಲೀಸ್ ಇಲಾಖೆಗೆ ಕಳುಹಿಸಬೇಕು ಎಂದರು. ಹೋಂಸ್ಟೇಗಳಲ್ಲಿ ಕಡ್ಡಾಯವಾಗಿ ಅಭಿಪ್ರಾಯ ಮತ್ತು ದೂರು ದಾಖಲಾತಿ ಪುಸ್ತಕ ಇರಬೇಕು ಹಾಗೂ ತೆಗೆದುಕೊಂಡ ಕ್ರಮವನ್ನು ದಾಖಲಿಸಬೇಕು, ಅತಿಥಿಗಳು ನೆರೆಹೊರೆಯವರಿಗೆ ತೊಂದರೆ ಕೊಡದಂತೆ ನೋಡಿಕೊಳ್ಳಬೇಕು, ಸ್ಥಳೀಯ ಅಲಂಕಾರ, ಆಹಾರ, ಚಟುವಟಿಕೆಗಳು ಇರಬೇಕು ಎಂದರು.
ಸ್ಥಳೀಯ ಪ್ರವಾಸಿ ಸ್ಥಳಗಳಿಗೆ ಸಾರಿಗೆ-ಸಂಪರ್ಕ ಒದಗಿಸುವಂತಾಗಬೇಕು. ಸೂರ್ಯಾಸ್ತದ ನಂತರ ಹೊರಗಿನ ಚಟುವಟಿಕೆಗಳಿಗೆ ಅಗತ್ಯ ಅನುಮತಿ ಎನ್‍ಓಸಿ ಮತ್ತು ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು, ಮೊಬೈಲ್ ನೆಟ್‍ವರ್ಕ್ ದುರ್ಬಲವಾಗಿದ್ದರೆ ಲ್ಯಾಂಡ್ ಲೈನ್, ವೈ-ಫೈ, ಫೋನ್ ಸೌಲಭ್ಯ ಒದಗಿಸಬೇಕು ಎದು ಉಪ ವಿಭಾಗಾಧಿಕಾರಿ ಅವರು ಹೇಳಿದರು. ಎಲ್ಲಾ ಸಿಬ್ಬಂದಿಯ ಹಿನ್ನೆಲೆಯನ್ನು ಸ್ಥಳೀಯ ಪೊಲೀಸ್ ಮೂಲಕ ಪರಿಶೀಲಿಸಬೇಕು ಮತ್ತು ದಾಖಲೆ ಜತನವಾಗಿರಬೇಕು. ತುರ್ತು ಸಹಾಯ ಸಂಖ್ಯೆಗಳನ್ನು ಪ್ರದರ್ಶಿಸಬೇಕು, ಪ್ರತಿಯೊಂದು ಹೋಂಸ್ಟೇಯೂ ದಾಖಲಾತಿ ಪುಸ್ತಕಗಳನ್ನು ನಿರ್ವಹಿಸಬೇಕು, ಕರ್ನಾಟಕ ರಾಜ್ಯ ಪೊಲೀಸ್ ಎಸ್‍ಒಎಸ್ ಆಪ್‍ನ ಕ್ಯೂಆರ್ ಕೋಡ್ ಪ್ರದರ್ಶಿಸಬೇಕು ಮತ್ತು ಅತಿಥಿಗಳಿಗೆ ಆಪ್ ಬಳಸಲು ತಿಳಿಸುವುದು, ಮಾಲೀಕರು ಮತ್ತು ಸಿಬ್ಬಂದಿ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ನಡೆಸುವ ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು.
ಪರಿಸರ ಸ್ನೇಹಿ ಮತ್ತು ಜವಾಬ್ದಾರಿಯುತ ಪ್ರವಾಸೋದ್ಯಮ ಪದ್ಧತಿಗಳನ್ನು ಅನುಸರಿಸಬೇಕು, ಸರಿಯಾದ ಕಸದ ನಿರ್ವಹಣೆ, ವಿಂಗಡಣೆ, ಮರುಬಳಕೆ, ನವೀಕರಿಸಬಹುದಾದ ಇಂಧನ ಬಳಕೆ ಮತ್ತು ಸುರಕ್ಷಿತ ತ್ಯಾಜ್ಯ ವಿಲೇವಾರಿ ಮಾಡಬೇಕು, ಮಾಲೀಕರು ತೋಟಗಾರಿಗೆ, ಜೇನುಸಾಕಣೆ, ಹಾಲು ಉತ್ಪಾದನೆ ಮತ್ತಿತರ ಚಟುವಟಿಕೆ ನಡೆಸಿದರೆ, ಅವು ಅತಿಥಿಗಳ ವಾಸ ಮತ್ತು ಆತಿಥ್ಯಕ್ಕೆ ತೊಂದರೆ ಉಂಟುಮಾಡದಂತೆ ಎಚ್ಚರ ವಹಿಸಬೇಕು ಎಂದರು.
ಆಸ್ತಿ ದಾಖಲೆಗಳು, ವಾಸಸ್ಥಳ ದೃಢೀಕರಣ ಪತ್ರ, ಮಾಲೀಕರ ಆಧಾರ್ ಕಾರ್ಡ್, ಹೋಂಸ್ಟೇಗಳ ಒಳಾಂಗಣ ಮತ್ತು ಹೋರಂಗಣದ ಸ್ಪಷ್ಟ ಚಿತ್ರಗಳನ್ನು ಅಳವಡಿಸಬೇಕು, ಹೋಂಸ್ಟೇಗಳಲ್ಲಿ 24 ಗಂಟೆ ಕಾರ್ಯನಿರ್ವಹಿಸುವ ಮತ್ತು 30 ದಿನಗಳ ಬ್ಯಾಕಪ್ ಹೊಂದಿರುವ ಸಿಸಿಟಿವಿ ಅವಡಿಸಿರಬೇಕು ಎಂದು ನಿತಿನ್ ಚಕ್ಕಿ ಅವರು ಸಲಹೆ ನೀಡಿದರು. ಹೋಂಸ್ಟೇ ಮಾಲೀಕರು ಎನ್‍ಒಸಿ ಗಳ ಜೊತೆಗೆ ಆನ್‍ಲೈನ್‍ಗಳ ಅರ್ಜಿಯೊಂದಿಗೆ ಅಗತ್ಯ ದಾಖಲೆಗಳನ್ನು ದಾಖಲಿಸುವಂತೆ ಸೂಚಿಸಿದರು. ಅನಧಿಕೃತ ಹೋಂಸ್ಟೇಗಳ ಮಾಹಿತಿ ನೀಡಿ: ಅನಧಿಕೃತವಾಗಿ ನಡೆಸುತ್ತಿರುವಂತಹ ಹೋಂ-ಸ್ಟೇಗಳ ಬಗ್ಗೆ ಹಾಗೂ ಹೋಂ-ಸ್ಟೇ ನೋಂದಣಿ ಮಾಡಿಕೊಳ್ಳುವ ಬಗ್ಗೆ ಸಾರ್ವಜನಿಕರು ದೂರು, ಮಾಹಿತಿ ಇದ್ದಲ್ಲಿ ಅವುಗಳ ವಿವರಗಳನ್ನು ಪತ್ರ ಮುಖೇನ ಉಪ ನಿರ್ದೇಶಕರ ಕಚೇರಿ, ಪ್ರವಾಸೋದ್ಯಮ ಇಲಾಖೆ, ಸ್ಟುವರ್ಟ್ ಹಿಲ್ ರಸ್ತೆ, ಮಡಿಕೇರಿ, ಕೊಡಗು ಜಿಲ್ಲೆ-571201 ದೂ: 08272-200519 ಇ-ಮೇಲ್: ddkodagutourism@gmail.com ಅಥವಾ ಜಿಲ್ಲಾ ಪೊಲೀಸ್  ವರಿಷ್ಠಾಧಿಕಾರಿಗಳ ಕಚೇರಿ ದೂರವಾಣಿ ಸಂಖ್ಯೆ : 08272-229000- ಇ-ಮೇಲ್ : dcmcr@ksp. gov.in ಅಥವಾ spmcr@ksp.gov.in ಗೆ ತಿಳಿಸಬಹುದು. ಜಿಲ್ಲೆಯಲ್ಲಿ ಅನಧಿಕೃತ ಹೋಂ-ಸ್ಟೇಗಳಿಗೆ ಕಡಿವಾಣ ಹಾಕಲು ಜಿಲ್ಲೆಯ ಜನತೆ ಕೈ ಜೋಡಿಸಿ ತಮ್ಮ ಅಕ್ಕ ಪಕ್ಕದಲ್ಲಿ ಯಾವುದೇ ಪರವಾನಿಗೆ ಪಡೆಯದೇ ಅನಧಿಕೃತವಾಗಿ ನಡೆಸುತ್ತಿರುವ ಹೋಂ-ಸ್ಟೇಗಳ ವಿವರಗಳನ್ನು ನೀಡಿ ಅತೀ ಅಗತ್ಯ ಸಹಕಾರವನ್ನು ನೀಡುವಂತೆ ಪ್ರವಾಸೋದ್ಯಮ ಇಲಾಖೆಯ ಪ್ರಭಾರ ಉಪ ನಿರ್ದೇಶಕ ಹಾಗೂ ಉಪವಿಭಾಗಾಧಿಕಾರಿ ನಿತಿನ್ ಚಕ್ಕಿ ಮನವಿ ಮಾಡಿದ್ದಾರೆ. ಸಭೆಯಲ್ಲಿ ಡಿವೈಎಸ್‍ಪಿಗಳಾದ ಸೂರಜ್, ಮಹೇಶ್ ಕುಮಾರ್, ಅಬಕಾರಿ ಉಪ ಆಯುಕ್ತಾರಾದ ನಾಗೇಶ್ ಕುಮಾರ್, ತಾ.ಪಂ.ಇಒ ಶೇಖರ್, ತಹಶೀಲ್ದಾರ್ ಶ್ರೀಧರ್, ಸಂಜನಾ, ಹೋಂಸ್ಟೇ ಅಸೋಸಿಯೇಷನ್ ಅಧ್ಯಕ್ಷರಾದ ಮೋಂತಿ ಗಣೇಶ್, ಕೂರ್ಗ್ ಹೋಂಸ್ಟೆ ಸಂಸ್ಥೆಯ ಉಪಾಧ್ಯಕ್ಷರಾದ ಅಬೆಕಲ್ಲು ನವೀನ್, ಟೂರ್ ಮತ್ತು ಟ್ರಾವೆಲ್ ಸಂಸ್ಥೆಯ ವಸಂತ್, ಪ್ರಥಮ ದರ್ಜೆ ಸಹಾಯಕರಾದ ಎಂ.ಡಿ.ಸಂದೇಶ್, ಪ್ರವಾಸೋದ್ಯಮ ಇಲಾಖೆಯ ಸಮಾಲೋಚಕರಾದ ಜತಿನ್ ಬೋಪಣ್ಣ, ಇತರರು ಇದ್ದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಮೇ 15 ರಂದು ಕೊಡಗಿನ ವಿವಿಧೆಡೆ ವಿದ್ಯುತ್ ವ್ಯತ್ಯಯ*

ಮೇ 13, 2026

*ವಿರಾಜಪೇಟೆ ತಾ.ಪಂ ಪ್ರಭಾರ ಕಾರ್ಯ ನಿರ್ವಹಣಾಧಿಕಾರಿಗಳಾಗಿ ಕೆ.ಆರ್‌.ರಾಜೇಶ್ ನೇಮಕ*

ಮೇ 13, 2026

*ದೇಹದಾರ್ಢ್ಯ ಸ್ಪರ್ಧೆ ಯಲ್ಲಿ ಕುಶಾಲನಗರದ ಮೊಹಮ್ಮದ್ ನಬ್ ಹಾನ್ ಸಾಧನೆ*

ಮೇ 13, 2026

*ವಿರಾಜಪೇಟೆ ತಾ.ಪಂ ಪ್ರಭಾರ ಕಾರ್ಯ ನಿರ್ವಹಣಾಧಿಕಾರಿಗಳಾಗಿ ಕೆ.ಆರ್‌.ರಾಜೇಶ್ ನೇಮಕ*

ಮೇ 13, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಗೋಣಿಕೊಪ್ಪಲು ಮೇ 13 NEWS DESK : ಪೊನ್ನಂಪೇಟೆ ಮತ್ತು ವಿರಾಜಪೇಟೆ ತಾಲ್ಲೂಕು ಪಂಚಾಯಿತಿಯ ಪ್ರಭಾರ ಕಾರ್ಯ ನಿರ್ವಹಣಾಧಿಕಾರಿಗಳಾಗಿ ಕೆ.ಆರ್‌.ರಾಜೇಶ್…

*ದೇಹದಾರ್ಢ್ಯ ಸ್ಪರ್ಧೆ ಯಲ್ಲಿ ಕುಶಾಲನಗರದ ಮೊಹಮ್ಮದ್ ನಬ್ ಹಾನ್ ಸಾಧನೆ*

ಮೇ 13, 2026

*ತೋರ ಗ್ರಾಮದಲ್ಲಿ ‘ಅರೆಭಾಷೆ ಗಡಿನಾಡ ಉತ್ಸವ’ : ಕುಗ್ರಾಮಗಳಿಗೂ ಅಕಾಡೆಮಿ ಕಾರ್ಯಕ್ರಮ ತಲುಪುತ್ತಿರುವುದು ಅರೆಭಾಷೆ ಬೆಳವಣಿಗೆಗೆ ಸಹಕಾರಿ :  ಶಾಸಕ ಎ.ಎಸ್.ಪೊನ್ನಣ್ಣ*

ಮೇ 13, 2026

*ಕೊಡಗು : ಹೋಂಸ್ಟೇಗಳ ಸರ್ವೆ ಕಾರ್ಯ ಆರಂಭ : ಹೋಂಸ್ಟೇ ಗಳ ನೋಂದಣಿಗೆ ಅವಕಾಶ : ನಿತಿನ್ ಚಕ್ಕಿ*

ಮೇ 13, 2026

*ಲಾರಿ ಮಾಲೀಕರ ಸಮಸ್ಯೆಗೆ ಪರಿಹಾರ : ಮೈಸೂರು ನ್ಯೂ ಗೂಡ್ಸ್‌ ಟರ್ಮಿನಲ್‌ ರಸ್ತೆ ಸಂಚಾರಕ್ಕೆ ಮುಕ್ತಗೊಳಿಸಿದ ಸಂಸದ ಯದುವೀರ್‌ ಒಡೆಯರ್‌*

ಮೇ 13, 2026

*ಬಾರಿಕಾಡು ಗ್ರಾಮದಲ್ಲಿ ನೂತನ ರಸ್ತೆ ಉದ್ಘಾಟನೆ*

ಮೇ 13, 2026

*ಪಾಲಂಗಾಲ : ಹ್ಯಾಂಗಿಂಗ್ ಸೋಲಾರ್ ಪೆನ್ಸಿಂಗ್ ಕಾಮಗಾರಿಗೆ ಶಾಸಕ ಎ.ಎಸ್.ಪೊನ್ನಣ್ಣ ಚಾಲನೆ*

ಮೇ 13, 2026

*ಕೊಡಗು : ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ*

ಮೇ 13, 2026

*ಮೇ 15 ರಂದು “ಕೋವಿ ಮತ್ತು ಕೊಳಲು” ಸಿನಿಮಾದ ಮುಹೂರ್ತ*

ಮೇ 13, 2026

*ನಿವೇಶನ ರಹಿತರ ಹೋರಾಟವನ್ನು ದಾರಿ ತಪ್ಪಿಸುವ ಯತ್ನ : ಜೆ.ಶಿವಪ್ಪ ಆರೋಪ*

ಮೇ 13, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.