
ಮಡಿಕೇರಿ ಮೇ 13 NEWS DESK : ಸೌತ್ ಏಷ್ಯಾ ಬೋಡಿ ಬಿಲ್ಡಿಂಗ್ ಅಸೋಸಿಯೇಷನ್ ಹಾಗೂ ಶ್ರೀ ರಾಮ ವ್ಯಾಯಾಮ ಶಾಲೆ ಸಂಯುಕ್ತ ಆಶ್ರಯದಲ್ಲಿ ಬೆಂಗಳೂರಿನ ವಿಜಯನಗರದಲ್ಲಿ ಆಯೋಜಿಸಲಾದ ಸೌತ್ ಇಂಡಿಯಾ ಗರಡಿ ಕ್ಲಾಸಿಕ್ಸ್ -2026 ದೇಹದಾರ್ಢ್ಯ ಸ್ಪರ್ಧೆ ಯಲ್ಲಿ ಮೊಹಮ್ಮದ್ ನಬ್ ಹಾನ್ ಭಾಗವಹಿಸಿ ಪ್ರಶಸ್ತಿ ಪತ್ರ ಹಾಗೂ ಬಹುಮಾನವನ್ನು ತನ್ನದಾಗಿಸಿಕೊಂಡಿದ್ದಾರೆ. ಮೊಹಮ್ಮದ್ ನಬ್ ಹಾನ್ ಕುಶಾಲನಗರದ ನೆಲ್ಲಿಹುದಿಕೇರಿ ಗ್ರಾಮದ ನೌಫಲ್ -ನಸೀಮ ದಂಪತಿಗಳ ಪುತ್ರ. ಇವರ ಸಾಧನೆಗೆ ಸ್ಥಳೀಯ ಡೋಮಿನೋಸ್ ಕಲಾ ಮತ್ತು ಕ್ರೀಡಾ ಯುವಜನ ಸಂಘ ಅಭಿನಂದಿಸಿದೆ.









