
ಸೋಮವಾರಪೇಟೆ ಮೇ 14 NEWS DESK : ಬೆಂಗಳೂರು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಿಗಳ ವಿಶ್ವವಿದ್ಯಾಲಯ 2026ರಲ್ಲಿ ಪ್ರಕಟಿಸಿರುವ ಎಂ.ಡಿ ಸ್ನಾತಕೋತ್ತರ ಆಯುರ್ವೇದ ಪದವಿ ಪರೀಕ್ಷೆಯ ಫಲಿತಾಂಶದಲ್ಲಿ ಹಾಸನದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ವಿದ್ಯಾರ್ಥಿನಿ ಡಾ. ಎಂ.ಪಿ.ಸೋನಿಯಾ ಅಗದ ತಂತ್ರ ವಿಭಾಗದಲ್ಲಿ ರಾಜ್ಯಮಟ್ಟದಲ್ಲಿ ಪ್ರಥಮ ರ‍್ಯಾಂಕ್ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಡಾ. ಎಂ.ಪಿ.ಸೋನಿಯಾ ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆಯ ಸುಬ್ರಾಯಿಗೌಡರ ಮೊಮ್ಮಗಳಾಗಿದ್ದು, ಮೂದರವಳ್ಳಿ ಗ್ರಾಮದ ಎಂ.ಎಸ್ ಪುಟ್ಟೇಗೌಡ ಹಾಗೂ ಶಿಕ್ಷಕಿ ಎ.ಎಸ್.ಸೌಭಾಗ್ಯ ದಂಪತಿಯ ಪುತ್ರಿ.









