Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಪ್ರಾಥಮಿಕ ವಲಯ ಮಟ್ಟದ ಕ್ರೀಡಾಕೂಟ : ಖೋ ಖೋ ಪಂದ್ಯಾವಳಿಯಲ್ಲಿ ಕಾವೇರಿ ಶಾಲೆಯ ಬಾಲಕ ಮತ್ತು ಬಾಲಕಿಯರ ತಂಡ ದ್ವಿತೀಯ*
  • *ವಲಯ ಮಟ್ಟದ ಅಥ್ಲೆಟಿಕ್ಸ್‌ : ಕಾವೇರಿ ಶಾಲಾ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ*
  • *ವಲಯ ಮಟ್ಟದ ಕ್ರೀಡಾ ಕೂಟ : ಖೋ ಖೋ ಪಂದ್ಯಾವಳಿಯಲ್ಲಿ ಪ್ರೌಢಶಾಲಾ ವಿಭಾಗದಲ್ಲಿ ರನ್ನರ್ಸ್ ಆದ ಕಾವೇರಿ ಶಾಲಾ ತಂಡ* 
  • *ವಲಯ ಮಟ್ಟದ ವಾಲಿಬಾಲ್ ಪಂದ್ಯಾವಳಿ : ವಿಜೇತರಾದ ಕಾವೇರಿ ಶಾಲಾ ತಂಡ* 
  • *ಸೆ.5 ರಂದು ಪ್ರಜಾಸೇವಾ ಆಂದೋಲನಾ ಸಭೆ*
  • *ಸೆ.5 ಮತ್ತು 6 ರಂದು ಮಡಿಕೇರಿಯಲ್ಲಿ ‘KOA-MYCON’ ಮಧ್ಯವಾರ್ಷಿಕ ಸಮ್ಮೇಳನ*
  • *ಕೈಕೇರಿಯಲ್ಲಿ 19ನೇ ಕೊಡವ ಪುಸ್ತಕ ಪತ್ತಾಯ : ಸಂಸ್ಕೃತಿ-ಸಂಸ್ಕಾರದಿಂದ ಮನುಷ್ಯತ್ವ ರೂಢಿಸಿಕೊಳ್ಳಲು ಸಾಧ್ಯ : ಮಹೇಶ್ ನಾಚಯ್ಯ*
  • *ಗ್ಯಾರಂಟಿ ಯೋಜನೆಗಳ ಮೂರು ವರ್ಷದ ಸಾಧನೆ : ಗೃಹಲಕ್ಷ್ಮಿಯಿಂದ ಆರ್ಥಿಕ ಭದ್ರತೆ, ಶಕ್ತಿ ಯೋಜನೆಯಿಂದ ಸ್ವತಂತ್ರ ಸಂಚಾರ*
  • *48ನೇ ರಾಷ್ಟ್ರ ಮಟ್ಟದ ಬ್ರೈನೋಬ್ರೈನ್ ಸ್ಪರ್ಧೆಯಲ್ಲಿ ಮಡಿಕೇರಿ ಮಕ್ಕಳ ಅಮೋಘ ಸಾಧನೆ*
  • *ಮುಂಗಾರು ಬೆಳೆ ಸಮೀಕ್ಷೆ: ಕೊಡಗಿನಲ್ಲಿ 2.60 ಲಕ್ಷಕ್ಕೂ ಅಧಿಕ ತಾಕುಗಳ(ಕೃಷಿ ಜಾಗ) ಸಮೀಕ್ಷೆ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಕೈಕೇರಿಯಲ್ಲಿ 19ನೇ ಕೊಡವ ಪುಸ್ತಕ ಪತ್ತಾಯ : ಸಂಸ್ಕೃತಿ-ಸಂಸ್ಕಾರದಿಂದ ಮನುಷ್ಯತ್ವ ರೂಢಿಸಿಕೊಳ್ಳಲು ಸಾಧ್ಯ : ಮಹೇಶ್ ನಾಚಯ್ಯ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಕೈಕೇರಿಯಲ್ಲಿ 19ನೇ ಕೊಡವ ಪುಸ್ತಕ ಪತ್ತಾಯ : ಸಂಸ್ಕೃತಿ-ಸಂಸ್ಕಾರದಿಂದ ಮನುಷ್ಯತ್ವ ರೂಢಿಸಿಕೊಳ್ಳಲು ಸಾಧ್ಯ : ಮಹೇಶ್ ನಾಚಯ್ಯ*

ಸೆಪ್ಟೆಂಬರ್ 2, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ, ಸೆ.2 NEWS DESK : ಸಂಸ್ಕೃತಿಯೊಂದಿಗೆ ಉತ್ತಮ ಸಂಸ್ಕಾರವನ್ನು ರೂಢಿಸಿಕೊಂಡಾಗ ಮಾತ್ರ ಉತ್ತಮ ಮನುಷ್ಯತ್ವ ರೂಪುಗೊಳ್ಳಲು ಸಾಧ್ಯ ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ಹೇಳಿದರು. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ 19ನೇ ‘ಕೊಡವ ಪುಸ್ತಕ ಪತ್ತಾಯ’ವನ್ನು ಕೈಕೇರಿಯ ಸವಿತಾ ಸಮಾಜ ಕಟ್ಟಡದಲ್ಲಿ ಅನಾವರಣಗೊಳಿಸಿ ಅವರು ಮಾತನಾಡಿದರು.
ವಿದ್ಯೆ ಮತ್ತು ಬುದ್ಧಿಯೊಂದಿಗೆ ಉತ್ತಮ ನಡೆ-ನುಡಿ ಹಾಗೂ ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕು. ಸಮಾಜದಲ್ಲಿನ ಜಾತಿ ವ್ಯವಸ್ಥೆಯಿಂದ ದೂರ ಸರಿಯಲು ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಉತ್ತಮ ಪುಸ್ತಕಗಳನ್ನು ಓದುವ ಅಭ್ಯಾಸವನ್ನು ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕು ಎಂದು ಹೇಳಿದರು. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ನೂತನ ಯೋಜನೆಯಾದ ‘ಕೊಡವ ಪುಸ್ತಕ ಪತ್ತಾಯ’ವನ್ನು ನಾಡಿನಾದ್ಯಂತ ಸಂಘ-ಸಂಸ್ಥೆಗಳು, ಸಮಾಜಗಳು, ದೇವನೆಲೆಗಳು ಹಾಗೂ ಐನ್‌ಮನೆಗಳಲ್ಲಿ ಸ್ಥಾಪಿಸಲಾಗುತ್ತಿದೆ. ಸಾರ್ವಜನಿಕರು ಈ ಯೋಜನೆಯ ಪ್ರಯೋಜನವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಸಂಘ-ಸಂಸ್ಥೆಗಳು, ಸಮಾಜಗಳು ಹಾಗೂ ಐನ್‌ಮನೆಗಳಿಗೆ ಅಕಾಡೆಮಿ ವತಿಯಿಂದ ನೀಡಲಾಗುತ್ತಿರುವ ದುಡಿ, ತಾಳ ಸೇರಿದಂತೆ ವಿವಿಧ ಪರಿಕರಗಳನ್ನು ಕೊಡವ ಸಂಸ್ಕೃತಿಯ ಉನ್ನತಿಗೆ ಪೂರಕವಾಗಿ ಬಳಸಿಕೊಳ್ಳಬೇಕು ಎಂದರು. ಆಯಾ ಪ್ರದೇಶಗಳಲ್ಲಿ ಬಾಳೋಪಾಟ್, ಉಮ್ಮತ್ತಾಟ್ ಹಾಗೂ ಕೋಲಾಟ್ ಕಲೆಯಲ್ಲಿ ಪರಿಣತಿ ಹೊಂದಿರುವವರು ಯುವ ಪೀಳಿಗೆಗೆ ‘ಆಟ್-ಪಾಟ್’ ಕಲಿಸಿಕೊಡಲು ಮುಂದಾದರೆ ಅಕಾಡೆಮಿಯಿಂದ ಅಗತ್ಯ ನೆರವು ನೀಡಲಾಗುವುದು ಎಂದು ತಿಳಿಸಿದರು. ಸವಿತಾ ಸಮಾಜದ ಅಧ್ಯಕ್ಷ ನಾಯಂದಿರ ಆರ್. ಶಿವಾಜಿ ಮಾತನಾಡಿ, ಕಲಿಯಲು ಸಾಕಷ್ಟು ಅವಕಾಶಗಳಿದ್ದು, ಕಲಿತ ಜ್ಞಾನ ಶಾಶ್ವತವಾಗಿ ಉಳಿಯುತ್ತದೆ. ಅಕಾಡೆಮಿ ವತಿಯಿಂದ ಸವಿತಾ ಸಮಾಜದಲ್ಲಿ ಕೊಡವ ಪುಸ್ತಕ ಪತ್ತಾಯ ಸ್ಥಾಪಿಸಿರುವುದು ಹೆಮ್ಮೆಯ ಸಂಗತಿಯಾಗಿದೆ. ಸಮಾಜದ ಬಾಂಧವರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಅಲ್ಲದೆ, ಅಕಾಡೆಮಿ ವತಿಯಿಂದ ಸಮಾಜಕ್ಕೆ ಒಡಿಕತ್ತಿ ಹಾಗೂ ದುಡಿ-ತಾಳ ನೀಡಿರುವುದು ಕೊಡವ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಸಹಕಾರಿಯಾಗಲಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಅಕಾಡೆಮಿ ವತಿಯಿಂದ ಸವಿತಾ ಸಮಾಜಕ್ಕೆ ಪುಸ್ತಕ ಪತ್ತಾಯದ ನೋಂದಣಿ ಪತ್ರವನ್ನು ಹಸ್ತಾಂತರಿಸಲಾಯಿತು. ಇದೇ ವೇಳೆ ಸವಿತಾ ಸಮಾಜದ ವತಿಯಿಂದ ಅಕಾಡೆಮಿ ಅಧ್ಯಕ್ಷರಿಗೆ ರೂ.10 ಸಾವಿರ ಮೊತ್ತದ ಚೆಕ್ ನೀಡಲಾಯಿತು.
ವೇದಪಂಡ, ಚೋಂದುವಂಡ ಹಾಗೂ ಮುಡುವಂಡ ಕುಟುಂಬಸ್ಥರಿಗೆ ದುಡಿ ವಿತರಿಸಲಾಯಿತು. ಸಮಾಜಕ್ಕೆ ಒಡಿಕತ್ತಿಯನ್ನೂ ನೀಡಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ವೇದಪಂಡ ವಿನುತ ಲವ ಪ್ರಾರ್ಥಿಸಿದರು. ತಾಪನೆರ ಸುಷ್ಮಿ ವಿಠಲ ಸ್ವಾಗತಿಸಿ, ನಿರೂಪಿಸಿದರು. ಸಮಾಜದ ಉಪಾಧ್ಯಕ್ಷ ಮುಡುವಂಡ ಎಸ್. ರಮೇಶ್, ನಿರ್ದೇಶಕ ಹಾಗೂ ನಿವೃತ್ತ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ತಾಪನೆರ ಎಂ. ಸುರೇಶ್, ಅಕಾಡೆಮಿ ಸದಸ್ಯರಾದ ಚೆಪ್ಪುಡಿರ ಉತ್ತಪ್ಪ, ಕಂಬೆಯಂಡ ಡೀನಾ ಬೋಜಣ್ಣ, ಪೊನ್ನಿರ ಗಗನ್, ಚೊಟ್ಟೆಯಂಡ ಸಂಜು ಕಾವೇರಪ್ಪ, ಪಾನಿಕುಟ್ಟಿರ ಕುಟ್ಟಪ್ಪ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಪ್ರಾಥಮಿಕ ವಲಯ ಮಟ್ಟದ ಕ್ರೀಡಾಕೂಟ : ಖೋ ಖೋ ಪಂದ್ಯಾವಳಿಯಲ್ಲಿ ಕಾವೇರಿ ಶಾಲೆಯ ಬಾಲಕ ಮತ್ತು ಬಾಲಕಿಯರ ತಂಡ ದ್ವಿತೀಯ*

ಸೆಪ್ಟೆಂಬರ್ 2, 2026

*ವಲಯ ಮಟ್ಟದ ಅಥ್ಲೆಟಿಕ್ಸ್‌ : ಕಾವೇರಿ ಶಾಲಾ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ*

ಸೆಪ್ಟೆಂಬರ್ 2, 2026

*ವಲಯ ಮಟ್ಟದ ಕ್ರೀಡಾ ಕೂಟ : ಖೋ ಖೋ ಪಂದ್ಯಾವಳಿಯಲ್ಲಿ ಪ್ರೌಢಶಾಲಾ ವಿಭಾಗದಲ್ಲಿ ರನ್ನರ್ಸ್ ಆದ ಕಾವೇರಿ ಶಾಲಾ ತಂಡ* 

ಸೆಪ್ಟೆಂಬರ್ 2, 2026

*ವಲಯ ಮಟ್ಟದ ಅಥ್ಲೆಟಿಕ್ಸ್‌ : ಕಾವೇರಿ ಶಾಲಾ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ*

ಸೆಪ್ಟೆಂಬರ್ 2, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ವಿರಾಜಪೇಟೆ ಸೆ.2 NEWS DESK : ಅಮ್ಮತಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ವಲಯ ಮಟ್ಟದ ಪ್ರಾಥಮಿಕ ಶಾಲಾ ಕ್ರೀಡಾಕೂಟದ ಅಥ್ಲೆಟಿಕ್ಸ್…

*ವಲಯ ಮಟ್ಟದ ಕ್ರೀಡಾ ಕೂಟ : ಖೋ ಖೋ ಪಂದ್ಯಾವಳಿಯಲ್ಲಿ ಪ್ರೌಢಶಾಲಾ ವಿಭಾಗದಲ್ಲಿ ರನ್ನರ್ಸ್ ಆದ ಕಾವೇರಿ ಶಾಲಾ ತಂಡ* 

ಸೆಪ್ಟೆಂಬರ್ 2, 2026

*ವಲಯ ಮಟ್ಟದ ವಾಲಿಬಾಲ್ ಪಂದ್ಯಾವಳಿ : ವಿಜೇತರಾದ ಕಾವೇರಿ ಶಾಲಾ ತಂಡ* 

ಸೆಪ್ಟೆಂಬರ್ 2, 2026

*ಸೆ.5 ರಂದು ಪ್ರಜಾಸೇವಾ ಆಂದೋಲನಾ ಸಭೆ*

ಸೆಪ್ಟೆಂಬರ್ 2, 2026

*ಸೆ.5 ಮತ್ತು 6 ರಂದು ಮಡಿಕೇರಿಯಲ್ಲಿ ‘KOA-MYCON’ ಮಧ್ಯವಾರ್ಷಿಕ ಸಮ್ಮೇಳನ*

ಸೆಪ್ಟೆಂಬರ್ 2, 2026

*ಕೈಕೇರಿಯಲ್ಲಿ 19ನೇ ಕೊಡವ ಪುಸ್ತಕ ಪತ್ತಾಯ : ಸಂಸ್ಕೃತಿ-ಸಂಸ್ಕಾರದಿಂದ ಮನುಷ್ಯತ್ವ ರೂಢಿಸಿಕೊಳ್ಳಲು ಸಾಧ್ಯ : ಮಹೇಶ್ ನಾಚಯ್ಯ*

ಸೆಪ್ಟೆಂಬರ್ 2, 2026

*ಗ್ಯಾರಂಟಿ ಯೋಜನೆಗಳ ಮೂರು ವರ್ಷದ ಸಾಧನೆ : ಗೃಹಲಕ್ಷ್ಮಿಯಿಂದ ಆರ್ಥಿಕ ಭದ್ರತೆ, ಶಕ್ತಿ ಯೋಜನೆಯಿಂದ ಸ್ವತಂತ್ರ ಸಂಚಾರ*

ಸೆಪ್ಟೆಂಬರ್ 2, 2026

*48ನೇ ರಾಷ್ಟ್ರ ಮಟ್ಟದ ಬ್ರೈನೋಬ್ರೈನ್ ಸ್ಪರ್ಧೆಯಲ್ಲಿ ಮಡಿಕೇರಿ ಮಕ್ಕಳ ಅಮೋಘ ಸಾಧನೆ*

ಸೆಪ್ಟೆಂಬರ್ 2, 2026

*ಮುಂಗಾರು ಬೆಳೆ ಸಮೀಕ್ಷೆ: ಕೊಡಗಿನಲ್ಲಿ 2.60 ಲಕ್ಷಕ್ಕೂ ಅಧಿಕ ತಾಕುಗಳ(ಕೃಷಿ ಜಾಗ) ಸಮೀಕ್ಷೆ*

ಸೆಪ್ಟೆಂಬರ್ 2, 2026

*ಕೊಡಗು ವಿದ್ಯಾಲಯದ ವಿದ್ಯಾಥಿ೯ಗಳಿಂದ ನಾಟಿ ಸಂಭ್ರಮ*

ಸೆಪ್ಟೆಂಬರ್ 2, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.