ಲೇಖಕ: admin

ಮಡಿಕೇರಿ ಅ.8 NEWS DESK : ಕೊಡಗು ಜಿಲ್ಲೆ ಕೃಷಿ ಇಲಾಖೆಯ ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆ(ಎಟಿಎಂಎ) ಯೋಜನೆಯಡಿ ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕರ 1 ಹುದ್ದೆಗೆ ಒಪ್ಪಂದದ ಆಧಾರದ ಮೇಲೆ 2024-25 ನೇ ಸಾಲಿನ ಸೀಮಿತ ಅವಧಿಗೆ ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ವಿರಾಜಪೇಟೆ ತಾಲ್ಲೂಕಿನಲ್ಲಿ ಖಾಲಿ ಇರುವ ಹುದ್ದೆಗೆ ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕರ ಹುದ್ದೆಗೆ ಎಂಎಸ್ಸಿ(ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಅರಣ್ಯ, ರೇಷ್ಮೆ), ಕನಿಷ್ಠ 2 ವರ್ಷ ಕೃಷಿ ವಿಸ್ತರಣಾ ಮತ್ತು ಸಂಬಂಧಿತ ಚಟುವಟಿಕೆಯಲ್ಲಿ ಅನುಭವ ಹಾಗೂ ಎಂಎಸ್ ಆಫೀಸ್‍ನಲ್ಲಿ ಪರಿಣಿತಿ ಹೊಂದಿರಬೇಕು. ಗರಿಷ್ಠ 45 ವರ್ಷದೊಳಗಿರಬೇಕು. ಮಾಸಿಕ ರೂ. 30 ಸಾವಿರ ಗೌರವ ಧನ ನೀಡಲಾಗುವುದು. ಈ ಹುದ್ದೆಗೆ ಅರ್ಹರಿರುವ ಅಭ್ಯರ್ಥಿಗಳು ಅಕ್ಟೋಬರ್, 21 ರೊಳಗೆ ಕಚೇರಿ ವೇಳೆಯಲ್ಲಿ ಜಂಟಿ ಕೃಷಿ ನಿರ್ದೇಶಕರ ಕಚೇರಿ, ಕೊಡಗು ಜಿಲ್ಲೆ, ಮಡಿಕೇರಿ ಇಲ್ಲಿ ಅರ್ಜಿ ಸಲ್ಲಿಸುವಂತೆ ತಿಳಿಸಿದೆ. ಹೆಚ್ಚಿನ ಮಾಹಿತಿಗೆ ಜಂಟಿ ಕೃಷಿ ನಿರ್ದೇಶಕರ ಕಚೇರಿ(ಆತ್ಮ ವಿಭಾಗ),…

Read More

ಮಡಿಕೇರಿ ಅ.8 NEWS DESK : ಕೊಡವ ಕ್ರಿಕೆಟ್ ಅಕಾಡೆಮಿ ವತಿಯಿಂದ ಅ.31 ರಿಂದ ನ.4ರ ವರೆಗೆ ಎರಡನೇ ವರ್ಷದ ಅಂತರ ಕೊಡವ ಸಮಾಜಗಳ ನಡುವಿನ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಯು ಬಾಳಲೆಯಲ್ಲಿ ನಡೆಯಲಿದೆ ಎಂದು ಅಕಾಡೆಮಿಯ ಖಜಾಂಚಿ ಕೊಕ್ಕೆಂಗಡ ರಂಜನ್ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಳಲೆಯ ವಿಜಯಲಕ್ಷ್ಮಿ ಜೂನಿಯರ್ ಕಾಲೇಜಿನ ಮೈದಾನದಲ್ಲಿ ಐದು ದಿನಗಳ ಕಾಲ ನಾಕೌಟ್ ಮಾದರಿಯ ಪಂದ್ಯಾವಳಿ ನಡೆಯಲಿದ್ದು, ವಿಜೇತರಿಗೆ ಆಕರ್ಷಕ ಟ್ರೋಫಿ ಹಾಗೂ ನಗದು ಬಹುಮಾನ ನೀಡಲಾಗುವುದೆಂದರು. ಪಂದ್ಯಾವಳಿಯಲ್ಲಿ ಕೊಡವ ಜನಾಂಗದ ಆಟಗಾರರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಸುಮಾರು 14 ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ. ಒಂದು ತಂಡಕ್ಕೆ ಎರಡು ಹೊರ ಜಿಲ್ಲೆಯ ಕೊಡವ ಆಟಗಾರರಿಗೆ ಅವಕಾಶ ಕಲ್ಪಿಸಲಾಗಿದೆ ಎಂದರು. ಆಟಗಾರರು ಅ.20ರ ಒಳಗಾಗಿ ರೂ.5,000 ರೂಪಾಯಿಗಳನ್ನು ಪಾವತಿಸಿ ತಂಡಗಳ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಮನವಿ ಮಾಡಿದ ಅವರು, ಆಟಗಾರರು ಕಡ್ಡಾಯವಾಗಿ ಆಧಾರ್ ಕಾರ್ಡ್ ತರಬೇಕು. ಹೆಚ್ಚಿನ ಮಾಹಿತಿಗೆ ಹಾಗೂ ತಂಡದ ನೊಂದಾಣಿಗಾಗಿ 9343856877,…

Read More

ಮಡಿಕೇರಿ ಅ.8 NEWS DESK : ದಕ್ಷಿಣ ಭಾರತದ ಸುಮಾರು ಎಂಟು ಕೋಟಿ ಜನರಿಗೆ ಕುಡಿಯುವ ನೀರು ಒದಗಿಸುವ ಕಾವೇರಿ ನದಿ ತನ್ನ ತವರು ಜಿಲ್ಲೆ ಕೊಡಗಿನಲ್ಲೇ ನಿರ0ತರವಾಗಿ ಕಲುಷಿಗೊಳ್ಳುತ್ತಿದೆ. ನದಿ ಮಾಲಿನ್ಯವನ್ನು ತಡೆಯುವಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ವಿಫಲವಾಗಿರುವ ಹಿನ್ನೆಲೆ ವಿವಿಧ ಹಂತದ ಹೋರಾಟದೊಂದಿಗೆ ಕಾನೂನಿನ ಮೊರೆ ಹೋಗಲು ನಿರ್ಧರಿಸಿರುವುದಾಗಿ ಕೂರ್ಗ್ ವೈಲ್ಡ್ ಲೈಫ್ ಸೊಸೈಟಿಯ ಮಾಜಿ ಅಧ್ಯಕ್ಷ ಹಾಗೂ ಕೊಡಗು ಮೋಡೆಲ್ ಫಾರೆಸ್ಟ್ ಟ್ರಸ್ಟ್ ನ ಉಪಾಧ್ಯಕ್ಷ ಕರ್ನಲ್ ಸಿ.ಪಿ.ಮುತ್ತಣ್ಣ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನದಿ ಮತ್ತು ಪರಿಸರ ಸ್ನೇಹಿ ಸಂಘಟನೆಗಳ ಸಹಕಾರದೊಂದಿಗೆ ಕಾವೇರಿಯನ್ನು ಉಳಿಸಿಕೊಳ್ಳಲು ಹೋರಾಟ ರೂಪಿಸುವುದಾಗಿ ಹೇಳಿದರು. ಕಾವೇರಿ ನದಿ ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಹುಟ್ಟಿ ಸುಮಾರು 810 ಕಿ.ಲೋ ಮೀಟರ್ ಹರಿದು ಬಂಗಾಳಕೊಲ್ಲಿ ಸಮುದ್ರಕ್ಕೆ ಸೇರುತ್ತದೆ. ದುರಾದೃಷ್ಟವಶಾತ್ ಭಾಗಮಂಡಲದಿಂದಲೇ ನದಿ ಕಲುಷಿತಗೊಳ್ಳುತ್ತಿದೆ. ತ್ಯಾಜ್ಯದ ನೀರು ನೇರವಾಗಿ ಚರಂಡಿ ಮೂಲಕ ಕಾವೇರಿ ನದಿಗೆ ಸೇರ್ಪಡೆಗೊಳ್ಳುತ್ತಿದೆ. ಇದೇ ರೀತಿ ನಾಪೋಕ್ಲು, ಬೇತ್ರಿ, ಕೊಂಡಂಗೇರಿ, ನೆಲ್ಲಿಹುದಿಕೇರಿ,…

Read More

ಮಡಿಕೇರಿ ಅ.8 NEWS DESK : ಸರ್ಕಾರ ಮಹಿಳೆಯರ ಸಬಲೀಕರಣಕ್ಕೆ ಗೃಹಲಕ್ಷ್ಮಿ, ಶಕ್ತಿ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು, ಇವುಗಳನ್ನು ಬಳಸಿಕೊಂಡು ಅಭಿವೃದ್ಧಿಯತ್ತ ಮುನ್ನಡೆಯಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯರಾದ ಶಾಂತೆಯಂಡ ವೀಣಾ ಅಚ್ಚಯ್ಯ  ತಿಳಿಸಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಕಾರದಲ್ಲಿ ನಗರ ದಸರಾ ಸಮಿತಿ ವತಿಯಿಂದ ಗಾಂಧಿ ಮೈದಾನದಲ್ಲಿ ಮಂಗಳವಾರ ನಡೆದ ‘ಮಹಿಳಾ ದಸರಾ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಮಹಿಳೆಯರು ರಾಜಕೀಯ, ಆರ್ಥಿಕ, ವಾಣಿಜ್ಯ, ಆಡಳಿತ, ಬಾಹ್ಯಾಕಾಶ, ಕ್ರೀಡೆ, ಸಿನಿಮಾ, ಹೀಗೆ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ ಎಂದು ವೀಣಾ ಅಚ್ಚಯ್ಯ  ಬಣ್ಣಿಸಿದರು. ಪಟ್ಟಣ, ನಗರ ಮತ್ತು ಬೃಹತ್ ನಗರಗಳಲ್ಲಿ ಮಹಿಳೆಯರು ಮುಂಚೂಣಿಯಲ್ಲಿದ್ದು, ಗ್ರಾಮೀಣ ಪ್ರದೇಶದ ಮಹಿಳೆಯರಿಗೂ ಅವಕಾಶಗಳು ಒದಗಬೇಕು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಮಹಿಳಾ ದಸರಾವು ಮಹಿಳೆಯರ ಪ್ರತಿಭೆ ಅನಾವರಣಕ್ಕೆ ಉತ್ತಮ ವೇದಿಕೆಯಾಗಿದೆ. ಆ ನಿಟ್ಟಿನಲ್ಲಿ ಅವಕಾಶಗಳನ್ನು ಸರಿಯಾಗಿ ಸದ್ಬಳಕೆ ಮಾಡಿಕೊಂಡು ಸಮಾಜದಲ್ಲಿ ಉತ್ತಮ ಸ್ಥಾನ ಪಡೆಯುವಂತಾಗಬೇಕು ಎಂದು…

Read More

ಮಡಿಕೇರಿ NEWS DESK ಅ.9 : ಮಡಿಕೇರಿ ದಸರಾ ಅಂಗವಾಗಿ ಸಾಂಸ್ಕೃತಿಕ ಸಮಿತಿ  ವತಿಯಿಂದ ಅ.9 ರಂದು ಸಂಜೆ 6 ಗಂಟೆಗೆ ವಿವಿಧ ನೃತ್ಯ ವೈಭವ ಗಮನ ಸೆಳೆಯಲಿದೆ. ರಾಷ್ಟ್ರೀಯ ಖ್ಯಾತಿಯ ಕೋಟೆರ ಯಾಮಿನಿ ಮುತ್ತಣ್ಣ ಮತ್ತು ಶಿಷ್ಯೆಯರಿಂದ “ದೇವಿ ಮಾರ್ಗಂ ನೃತ್ಯರೂಪಕ”, ವಿಂಗ್ಸ್ ಆಫ್ ಫ್ಯಾಷನ್ ತಂಡದಿಂದ ನೃತ್ಯ ಸೌರಭ, ನಾದ ವಿದ್ಯಾಲಯ ಮೈಸೂರು ತಂಡದಿಂದ ನೃತ್ಯರೂಪಕ-ಮಹಿಷಾಸುರ ಮರ್ದಿನಿ, ಕೂರ್ಗ್ ಮೆಲೋಡೀಸ್ ಮಡಿಕೇರಿ ತಂಡದಿಂದ ಸಂಗೀತ ರಸಮಂಜರಿ, ಯಶಸ್ವಿ ಡ್ಯಾನ್ಸ್ ಗ್ರೂಪ್ ಮಂಗಳೂರು ತಂಡದಿಂದ ಕಡಲ ಹಬ್ಬ ನೃತ್ಯ ಸಂಭ್ರಮ, ನಿತ್ಯ ನಿರಂತರ ಮೈಸೂರು ವಿಶೇಷ ಚೇತನ ಮಕ್ಕಳಿಂದ ಕರ್ನಾಟಕ ವೈಭವ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಅನಿಲ್ ಹೆಚ್.ಟಿ ಮಾಹಿತಿ ನೀಡಿದ್ದಾರೆ.

Read More

ಮಡಿಕೇರಿ NEWS DESK ಅ.8 : ಸುಂಟಿಕೊಪ್ಪದ ಪನ್ಯ ಗ್ರಾಮ ಮಾರಿಗುಡಿ ಸಮೀಪದ ಕಾಫಿ ತೋಟವೊಂದರಲ್ಲಿ ಸುಟ್ಟು ಕರಕಲಾಗಿರುವ ಮೃತದೇಹ ಮತ್ತು ಅಂಗಾಂಗಗಳು ಪತ್ತೆಯಾಗಿದೆ. ಇದು ಅಪರಿಚಿತ ಪುರುಷನ ಶವವಾಗಿದ್ದು, 45 ರಿಂದ 50ವರ್ಷದ ವ್ಯಕ್ತಿ ಎಂದು ಅಂದಾಜಿಸಲಾಗಿದೆ. ಕರಕಲಾದ ದೇಹದ ಪಕ್ಕದಲ್ಲಿ ಕಾಲು ಮತ್ತಿತರ ಅಂಗಗಳು ಗೋಚರಿಸಿದೆ. ತೋಟದ ಮಾಲೀಕರು ಮಾಹಿತಿ ನೀಡಿದ ಹಿನ್ನೆಲೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸುಮಾರು 4 ದಿನಗಳ ಹಿಂದೆ ದೇಹವನ್ನು ಸುಟ್ಟಿರುವ ಶಂಕೆ ಇದ್ದು, ಇದೊಂದು ಕೊಲೆ ಪ್ರಕರಣವಾಗಿದೆ ಎಂದು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ತಿಳಿಸಿದರು. ಡಿವೈಎಸ್‌ಪಿ ಗಂಗಾಧರಪ್ಪ, ಕುಶಾಲನಗರ ಗ್ರಾಮಾಂತರ ವೃತ್ತ ನಿರೀಕ್ಷಕ ರಾಜೇಶ್ ಕೋಟ್ಯಾನ್, ಸುಂಟಿಕೊಪ್ಪ ಠಾಣಾಧಿಕಾರಿ ಚಂದ್ರಶೇಖರ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.

Read More

ಸಿದ್ದಾಪುರ ಅ.8 NEWS DESK : ನವಪಲ್ಲವ ಸಾಹಿತ್ಯ ವೇದಿಕೆ ಹಾಗೂ ನೆಲ್ಲಿಹುದಿಕೇರಿ ಕೆ.ಪಿ.ಎಸ್ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಲೇಖಕಿ ಎಂ.ಬಿ.ಜಯಲಕ್ಷ್ಮಿ ವಸಂತ್ ಹೊಸಮನೆ ಅವರು ರಚಿಸಿರುವ “ಸಾಂಚವ್ಯ” ಕವನ ಸಂಕಲನವನ್ನು ಬಿಡುಗಡೆಗೊಳಿಸಲಾಯಿತು. ನೆಲ್ಲಿಹುದಿಕೇರಿ ಪ್ರೌಢ ಶಾಲಾ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ ದಾಸ್ ಪುಸ್ತಕ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಮಡಿಕೇರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೋರನ ಸರಸ್ವತಿ ಪ್ರಕಾಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜನಶಕ್ತಿ ವಾರಪತ್ರಿಕೆಯ ಸಂಪಾದಕ ಡಾ.ಎಸ್.ವೈ.ಗುರುಶಾಂತ ಪುಸ್ತಕ ಪರಿಚಯ ಮಾಡಿದರು. ಮುಖ್ಯ ಅತಿಥಿಗಳಾಗಿ ಕುಶಾಲನಗರ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್, ಕೊಡಗು ಸಾಹಿತ್ಯ ಪರಿಷತ್ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೇಶವ ಕಾಮತ್, ಸೋಮವಾರಪೇಟೆ ನಿವೃತ್ತ ಉಪನ್ಯಾಸಕಿ ತಿಲೋತ್ತಮೆ ನಂದಕುಮಾರ್, ಕನ್ನಡ ಸಾಹಿತ್ಯ ಪರಿಷತ್ ನಿಕಟ ಪೂರ್ವ ಅಧ್ಯಕ್ಷ ಲೋಕೇಶ್ ಸಾಗರ್, ಗೋಣಿಕೊಪ್ಪಲಿನ ಸಂಗನಗೌಡ ಪಾಟೀಲ್ ಪಾಲ್ಗೊಂಡಿದ್ದರು. ವಸಂತ್ ಕುಮಾರ್ ಹೊಸಮನೆ ಸ್ವಾಗತಿಸಿ,…

Read More

ಪುತ್ತೂರು ಅ.8 NEWS DESK : ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯಲ್ಲಿ ಪೂಲ್ ಕ್ಯಾಂಪಸ್ ನೇಮಕಾತಿ ಅಭಿಯಾನವು ಯಶಸ್ವಿಯಾಗಿ ಸಂಪನ್ನಗೊಂಡಿತು. ಎರಡು ದಿನಗಳ ಕಾಲ ನಡೆದ ಈ ಅಭಿಯಾನದಲ್ಲಿ ಸುಮಾರು 30 ವರ್ಷಗಳಿಂದ ಕಂಪ್ಯೂಟೇಶನಲ್ ಪರಿಣತಿಯನ್ನು ಹೊಂದಿರುವ ಎಲೆಕ್ಟ್ರಾನಿಕ್ಸ್ ಸಿಸ್ಟಮ್ ಡಿಸೈನ್ ಕ್ಷೇತ್ರದ ದಿಗ್ಗಜ ಸಂಸ್ಥೆ ಕೆಡೆನ್ಸ್ ಸಿಸ್ಟಮ್ಸ್ ಕಾಲೇಜಿಗೆ ಭೇಟಿ ನೀಡಿತು. ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಗಳ 12 ಇಂಜಿನಿಯರಿಂಗ್ ಕಾಲೇಜುಗಳ ಇಲೆಕ್ಟ್ರಾನಿಕ್ಸ್ ಎಂಡ್ ಕಮ್ಯುನಿಕೇಶನ್ ವಿಭಾಗದ 623 ಅರ್ಹ ವಿದ್ಯಾರ್ಥಿಗಳು ಈ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು. ವಾರ್ಷಿಕ 15 ಲಕ್ಷ ರೂಪಾಯಿಗಳ ಸಂಬಳವನ್ನು ನೀಡುವ ಒಪ್ಪಂದದೊಂದಿಗೆ ನೇಮಕಾತಿ ಪ್ರಕ್ರಿಯೆಯು ನಡೆಯಿತು. ಪ್ರಥಮ ಸುತ್ತಿನ ಪರೀಕ್ಷೆಯ ನಂತರ 102 ವಿದ್ಯಾರ್ಥಿಗಳನ್ನು ಮುಂದಿನ ಸುತ್ತಿಗೆ ಆಯ್ಕೆ ಮಾಡಲಾಗಿತ್ತು. ದ್ವಿತೀಯ ತಾಂತ್ರಿಕ ಸುತ್ತಿನ ಬಳಿಕ ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನ 5 ವಿದ್ಯಾರ್ಥಿಗಳ ಸಹಿತ 20 ವಿದ್ಯಾರ್ಥಿಗಳನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಯಿತು. ನಂತರ ಪ್ರತಿ ವಿದ್ಯಾರ್ಥಿಗಳ ಜತೆಗೆ ಮುಖಾ ಮುಖಿ…

Read More

ಮಡಿಕೇರಿ ಅ.8 NEWS DESK : ಮಾಯಮುಡಿಯ ಕೋಲುಬಾಣೆ ಕಾವೇರಿ ಅಸೋಸಿಯೇಷನ್ ವತಿಯಿಂದ ವಿವಿಧ ಕ್ರೀಡಾಕೂಟ ಸಂಭ್ರಮದಿಂದ ನಡೆಯಿತು. ಕೋಲುಬಾಣೆ ಮೈದಾನದಲ್ಲಿ ನಡೆದ ಕ್ರೀಡಾಕೂಟದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಕಾಳಪಂಡ ಟಿ.ಟಿಪ್ಪು ಬಿದ್ದಪ್ಪ ಅವರು, ಯುವ ಸಮೂಹ ಕ್ರೀಡೆಗೆ ಹೆಚ್ಚು ಮಹತ್ವ ನೀಡಬೇಕು. ಮೊಬೈಲ್ ಹವ್ಯಾಸದಿಂದಾಗಿ ಕ್ರೀಡೆ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಯುವಕರು ದುಶ್ಚಟಗಳಿಗೆ ಮಾರು ಹೋಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಯುವಕರು ಕ್ರೀಡೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡು ಒಳ್ಳೆಯ ಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು. ಸಂಸ್ಥೆಯ ಹಿರಿಯ ಸದಸ್ಯ ಚೆಪ್ಪುಡಿರ ಕಿಟ್ಟು ಅಯ್ಯಪ್ಪ ಅವರು ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ ಕ್ರೀಡೆಯಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯ ವೃದ್ಧಿಯಾಗುತ್ತದೆ. ಪರಸ್ಪರ ಸ್ನೇಹ, ಸೌಹಾರ್ಧತೆ ಬೆಳೆಯುತ್ತದೆ ಎಂದರು. ಕ್ರೀಡಾ ಕಾರ್ಯದರ್ಶಿ ಆಪಟ್ಟೀರ ಎಸ್.ಟಾಟು ಮೊಣಪ್ಪ, ಉಪಾಧ್ಯಕ್ಷ ನಾಮೇರ ರವಿ ದೇವಯ್ಯ, ಕಾರ್ಯದರ್ಶಿ ಎಸ್.ಎಸ್.ಸುರೇಶ್, ಕಾಳಪಂಡ ಸಿ.ನರೇಂದ್ರ, ಆಪಟ್ಟೀರ ಎ.ಬೋಪಣ್ಣ, ಎಸ್.ವಿ.ಮಂಜುನಾಥ್ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.…

Read More

ಮಡಿಕೇರಿ ಅ.8 NEWS DESK : ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥ ಪ್ರೊ.ಡಾ.ಶ್ರೀಧರ ಹೆಗಡೆ ಅವರಿಗೆ ಲಾಲ್ ಬಹದ್ದೂರ್ ಶಾಸ್ತ್ರಿ ಹಿಂದಿ ಅನುವಾದ ಪುರಸ್ಕಾರ ಲಭಿಸಿದೆ. ರಾಜ್ಯ ಮಟ್ಟದ ಈ ಪುರಸ್ಕಾರವನ್ನು ಬೆಂಗಳೂರು ವಿಶ್ವ ವಿದ್ಯಾಲಯದ ಹಿಂದಿ ವಿಭಾಗ ನೀಡಿ ಗೌರವಿಸಿದೆ. ಪ್ರೊ.ಡಾ.ಶ್ರೀಧರ ಹೆಗಡೆ ಅವರು ಕುವೆಂಪು ಅವರ ನಾಟಕ “ಬಲಿದಾನ” ವನ್ನು ಹಿಂದಿ ಭಾಷೆಗೆ ಅನುವಾದ ಮಾಡಿದ್ದಾರೆ. ಈ ಕೃತಿಗೆ ಲಾಲ್ ಬಹದ್ದೂರ್ ಶಾಸ್ತ್ರಿ ಹಿಂದಿ ಅನುವಾದ ಪುರಸ್ಕಾರ ಸಿಕ್ಕಿರುವುದರಿಂದ ಕನ್ನಡ ಮತ್ತು ಹಿಂದಿ ಭಾಷೆ ಬಾಂಧವ್ಯವೂ ಹೆಚ್ಚಿದಂತ್ತಾಗಿದೆ. ರಾಷ್ಟ್ರ ಪ್ರಶಸ್ತಿ ವಿಜೇತರಾದ ಡಾ.ಶ್ರೀಧರ ಹೆಗಡೆ ಅವರು 22 ಕ್ಕಿಂತ ಹೆಚ್ಚು ಕೃತಿಗಳನ್ನು ಕನ್ನಡದಲ್ಲಿ ಮತ್ತು 15 ಕ್ಕಿಂತ ಹೆಚ್ಚು ಕೃತಿಗಳನ್ನು ಹಿಂದಿ ಭಾಷೆಯಲ್ಲಿ ರಚಿಸಿದ್ದಾರೆ. ಅಲ್ಲದೆ ಕನ್ನಡದಿಂದ ಹಿಂದಿ ಭಾಷೆಗೆ 10ಕ್ಕಿಂತ ಅಧಿಕ ಹಾಗೂ ಹಿಂದಿಯಿಂದ ಕನ್ನಡಕ್ಕೆ 5 ಕ್ಕಿಂತ ಹೆಚ್ಚು ಕೃತಿಗಳನ್ನು ಅನುವಾದಿಸಿ ಕನ್ನಡ ಮತ್ತು ಹಿಂದಿ ಸಾಹಿತ್ಯದ ಪರಿಚಯ ಮಾಡಿ…

Read More