ಮಡಿಕೇರಿ ಜು.11 NEWS DESK : ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ವಿರಾಜಪೇಟೆಯಲ್ಲಿ 2024-25ರ ಸಾಲಿನ ಪ್ರಥಮ ವರ್ಷದ ಬಿ.ಎ(ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಕನ್ನಡ ಐಚ್ಛಿಕ), ಬಿ.ಕಾಂ ಮತ್ತು ಬಿಬಿಎ ಪದವಿ ತರಗತಿಗಳಿಗೆ ಪ್ರವೇಶಾತಿ ಪ್ರಾರಂಭವಾಗಿದ್ದು, ಕಾಲೇಜು ಸುಸಜ್ಜಿತವಾದ ತರಗತಿ ಕೊಠಡಿಗಳನ್ನು ಮತ್ತು ನುರಿತ ಬೋಧಕರನ್ನು ಒಳಗೊಂಡಿದೆ. ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಅವಶ್ಯಕತೆ ಇರುವ 14,000 ಪುಸ್ತಕಗಳನ್ನು ಹೊಂದಿರುವ ವಿಶಾಲವಾದ ಗ್ರಂಥಾಲಯ, ಇ-ಗ್ರಂಥಾಲಯ, ಸ್ಮಾರ್ಟ್ ಕ್ಲಾಸ್ ಸೌಲಭ್ಯ, ವೈಫೈ ಸೌಲಭ್ಯ, ಸಿ.ಸಿ.ಕ್ಯಾಮರಾ ಕಣ್ಗಾವಲಿನಲ್ಲಿರುವ ಸುಸಜ್ಜಿತ ಕಟ್ಟಡ, ಮಾದಕ ವಸ್ತು ನಿರ್ಮೂಲನಾ ಸಮಿತಿ, ಸುಸಜ್ಜಿತ ಕಂಪ್ಯೂಟರ್ ಲ್ಯಾಬ್, ಆಧುನಿಕ ರೀತಿಯ ಬೋಧನಾ ಕ್ರಮ, ಉದ್ಯೋಗ ಮಾರ್ಗ ದರ್ಶನ ಕೇಂದ್ರ, ವಿದ್ಯಾರ್ಥಿ ನಿಲಯ, ಕ್ಯಾಂಟೀನ್ ವ್ಯವಸ್ಥೆ, ಇಕೋಕ್ಲಬ್,ವಿದ್ಯಾರ್ಥಿ ಭ್ರಾತೃತ್ವ ವೇದಿಕೆ, ವಾಣಿಜ್ಯ ಮತ್ತು ನಿರ್ವಹಣಾಶಾಸ್ತ್ರ ಸಂಘ,ಅಂತರ ಕಾಲೇಜು ವಿದ್ಯಾರ್ಥಿಗಳ ಕಲಿಕಾ ವಿನಿಮಯ ಕಾರ್ಯಕ್ರಮಗಳು, ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಾದ ಕ್ರೀಡೆ, ಸಾಂಸ್ಕøತಿಕ, ಎನ್.ಎಸ್.ಎಸ್.,ರೋವರ್ಸ್, ರೇಂಜರ್ಸ್, ರೆಡ್‍ಕ್ರಾಸ್ ಮುಂತಾದ ಘಟಕಗಳ ಕಾರ್ಯನಿರತವಾಗಿದೆ. ಎಲ್ಲಾ ವರ್ಗದ ವಿದ್ಯಾರ್ಥಿನಿಯರಿಗೆ ಶುಲ್ಕ…
ಲೇಖಕ: admin
ಸುಂಟಿಕೊಪ್ಪ ಜು.11 NEWS DESK : ಯಾವುದೇ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಮಕ್ಕಳಿಗೆ ಪುಸ್ತಕ ವಿತರಣೆ ಮಾಡಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಹರಪಳ್ಳಿ ರವೀಂದ್ರ ಹೇಳಿದರು. ಕೊಡಗರಹಳ್ಳಿ, ಸುಂಟಿಕೊಪ್ಪ ನಾಡು ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಕೊಡುಗೆಯಾಗಿ ನೋಟ್ ಪುಸ್ತಕಗಳನ್ನು ವಿತರಣೆ ಮಾಡಿ ಅವರು ಮಾತನಾಡಿದರು. ಸಮಾಜದಲ್ಲಿ ಒಬ್ಬ ಮನುಷ್ಯನ ಉನ್ನತೀಕರಣ ಆಗಬೇಕಾದರೆ ಅವನ ಜೀವನದಲ್ಲಿ ಶಿಕ್ಷಣ ಬಹುಮುಖ್ಯ ಪಾತ್ರ ವಹಿಸುತ್ತದೆ. ಆದ್ದರಿಂದ ತನ್ನಿಂದಾದ ಸಹಾಯ ಮಾಡಿರುವುದಾಗಿ ತಿಳಿಸಿದರು. ಶಿಕ್ಷಣ ಎಲ್ಲಾ ಮಕ್ಕಳ ಹಕ್ಕು, ಈ ಹಿಂದೆ ನಾನು ಶಾಲೆಯಲ್ಲಿ ಕಲಿಯುವ ಸಂದರ್ಭದಲ್ಲಿ ಶಿಕ್ಷಣ ಕಲಿಯಲು ತೊಂದರೆಯಾಗುತ್ತಿತ್ತು, ಆದರೆ ಇಂದಿನ ಮಕ್ಕಳಿಗೆ ಆ ತೊಂದರೆಯಾಗಬಾರದು ಎಂದರು. ನಾಡು ಪ್ರೌಢಶಾಲೆ ಗೌರವ ಕಾರ್ಯದರ್ಶಿ ಕೆ.ಎಸ್.ಮಂಜುನಾಥ್ ಮಾತನಾಡಿ, ವಿದ್ಯೆ ಬಹಳ ಮುಖ್ಯವಾದದ್ದು. ಈ ವಿದ್ಯೆಯಿಂದ ಏನು ಬೇಕಾದರೂ ಜೀವನದಲ್ಲಿ ಸಾಧಿಸಬಹುದು. ಸೃಜನಶೀಲತೆ, ಸಂಸ್ಕಾರ, ಒಳ್ಳೆಯ ನಡತೆ, ಒಳ್ಳೆಯ ಗುಣಗಳನ್ನು ಬೆಳಸುತ್ತಾರೆ ಎಂದರು. ನಿವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಚಂಗಪ್ಪ ಮಾತನಾಡಿ, ಹಣ ಆಸ್ತಿಯನ್ನು…
ಮಡಿಕೇರಿ ಜು.11 NEWS DESK : ಮನೆಯೊಂದರಲ್ಲಿ ಕಳ್ಳತನ ನಡೆಸಿದ್ದ ಆರೋಪಿಯೋರ್ವನನ್ನು ಜಿಲ್ಲಾ ಶ್ವಾನದಳದ ‘ಬ್ರೂನೋ’ ಪತ್ತೆ ಮಾಡಿ ಪೊಲೀಸರಿಗೆ ನೆರವಾಗಿರುವ ಪ್ರಕರಣ ನಡೆದಿದೆ. ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮುತ್ತಾರ್ಮುಡಿ ಗ್ರಾಮದ ಪಿ.ಎಂ.ಮೋಹನ್ ಕುಮಾರ್ ಎಂಬವರ ಮನೆಯಲ್ಲಿ ಕಳ್ಳತನವಾಗಿತ್ತು. ಮನೆಗೆ ನುಗ್ಗಿದ ಕಳ್ಳರು ಚಿನ್ನ ಹಾಗೂ ನಗದು ಅಪಹರಿಸಿದ್ದ ಕುರಿತು ದೂರು ದಾಖಲಾಗಿತ್ತು. ಇದರಂತೆ ಶ್ವಾನದಳದೊಂದಿಗೆ ಕಾರ್ಯಾಚರಣೆ ನಡೆಸಲಾಗಿದ್ದು, ಬ್ರೂನೋ ಇವರ ಮನೆಯ ಸನಿಹದ ಲೈನ್‍ಮನೆಯಲ್ಲಿದ್ದ ವ್ಯಕ್ತಿಯೋರ್ವನನ್ನು ಗುರುತಿಸಿದೆ. ಈ ಶಂಕಿತ ವ್ಯಕ್ತಿಯ ವಿಚಾರಣೆ ನಡೆಸಿದಾಗ ಕಳವು ನಡೆಸಿರುವುದು ಬೆಳಕಿಗೆ ಬಂದಿದೆ. ಆರೋಪಿ ಮಂಜು ಎಂಬಾತನನ್ನು ಬಂಧಿಸಲಾಗಿದ್ದು, ಬಂಧಿತನಿಂದ ಕಳವು ಮಾಡಲಾಗಿದ್ದ 5 ಗ್ರಾಂ ಚಿನ್ನ ಹಾಗೂ ರೂ.2 ಸಾವಿರ ನಗದು ವಶಪಡಿಸಿಕೊಳ್ಳಲಾಗಿದೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಲಾಖೆಯ ಈ ಹೆಮ್ಮೆಯ ಶ್ವಾನ ಎ.ಆರ್.ಎಸ್.ಐ ಜಿತೇಂದ್ರ ರೈ, ಮನಮೋಹನ್, ಸಿದ್ಧನಗೌಡ ಪಾಟೀಲ್ ಅವರ ಗರಡಿಯಲ್ಲಿ ಪಳಗಿದೆ. ಈ ಬಗ್ಗೆ ಎಸ್.ಪಿ.ರಾಮರಾಜನ್ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಮಡಿಕೇರಿ ಜು.11 NEWS DESK : ಕೊಡಗು ಜಿ.ಪಂ.ಮುಖ್ಯ ಕಾರ್ಯನಿರ್ವಣಾಧಿಕಾರಿಯಾಗಿ ಆನಂದ್ ಪ್ರಕಾಶ್ ಮೀನಾ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ನೂತನ ಸಿಇಒ ಅವರು ಈ ಹಿಂದೆ ಚಾಮರಾಜನಗರ ಜಿಲ್ಲೆಯಲ್ಲಿ ಜಿ.ಪಂ.ಸಿಇಒ ಆಗಿ ಕಾರ್ಯನಿರ್ವಹಿಸಿದ್ದಾರೆ.
ಮಡಿಕೇರಿ ಜು.11 NEWS DESK : ಭಾರತೀಯ ವಾಯುಪಡೆಯಿಂದ ಅಗ್ನಿಪತ್ ಯೋಜನೆಯಡಿಯಲ್ಲಿ ಅಗ್ನಿವೀರ್ ವಾಯು ಪ್ರವೇಶ ಆಯ್ಕೆ ಪರೀಕ್ಷೆಗಾಗಿ ಅವಿವಾಹಿತ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ.50 ರಷ್ಟು ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು. ಅಥವಾ ಡಿಪ್ಲೋಮಾ ವಿಭಾಗದ ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಷ್, ಆಟೋಮೊಬೈಲ್, ಕಂಪ್ಯೂಟರ್ ಸೈನ್ಸ್, ಇನ್‍ಸ್ಟ್ರುಮೆಂಟ್ ಟೆಕ್ನಾಲಜಿ, ಇನ್ಪಾರ್ಮೇಶನ್ ಟೆಕ್ನಾಲಜಿಯಲ್ಲಿ ಶೇ,50 ರಷ್ಟು ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು. ಇಲ್ಲವೇ 02 ವರ್ಷದ ವೃತ್ತಿಪರ ಕೋರ್ಸ್‍ಗಳಲ್ಲಿ ಭೌತಶಾಸ್ತ್ರ ಮತ್ತು ಗಣಿತ ವಿಷಯಗಳಲ್ಲಿ ವ್ಯಾಸಂಗ ಮಾಡಿ ಶೇ.50ರಷ್ಟು ಅಥವಾ ಯಾವುದೇ ಪಿ.ಯು.ಸಿ ವಿಭಾಗದಲ್ಲಿ ಶೇ,50ರಷ್ಟು ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು. ಅಭ್ಯರ್ಥಿಯು 03 ಜುಲೈ 2004 ರಿಂದ 03 ಜನವರಿ 2008ರ ನಡುವೆ ಜನಿಸಿರಬೇಕು.(ಎರಡೂ ದಿನಾಂಕಗಳು ಸೇರಿದಂತೆ) ಅರ್ಜಿ ಶುಲ್ಕ 550 ರೂ.ಗಳಾಗಿದೆ. ಆಸಕ್ತ ಅಭ್ಯರ್ಥಿಗಳು ಸಂಪೂರ್ಣ ವಿವರ ಮತ್ತು ಸೂಚನೆಗಳಿಗೆ ವೆಬ್‍ಸೈಟ್ https://agnipathvayu.cdac.in ನೋಡಬಹುದು. ವೆಬ್‍ಸೈಟ್‍ನಲ್ಲಿ 08 ಜುಲೈ 2024ರಿಂದ 28 ಜುಲೈ 2024ರೊಳಗೆ ಅರ್ಜಿ…
ಬೆಂಗಳೂರು ಜು.11 NEWS DESK : ವಿಶ್ವದ ಅಗ್ರ ಉತ್ಪಾದಕ ವಿಯೆಟ್ನಾಂನಿಂದ ಸಾಗಣೆಯಲ್ಲಿನ ನಿಧಾನಗತಿಯಿಂದ ಜಾಗತಿಕ ಮಾರುಕಟ್ಟೆ ಬಿಗಿಯಾಗಿ ರೋಬಸ್ಟಾ ಕಾಫಿ ಬೆಲೆಗಳು ಮಂಗಳವಾರ ದಾಖಲೆಯ ಗರಿಷ್ಠ ಮಟ್ಟಕ್ಕೆ ಏರಿ ಹೊಸ ದಾಖಲೆಯೇ ನಿರ್ಮಾಣವಾಗಿದೆ. ಅರೇಬಿಕಾ ಮತ್ತು ರೊಬಸ್ಟಾ ಪಾರ್ಚ್‌ಮೆಂಟ್ ಕಾಫಿಗಳೆರಡೂ ಚೀಲಕ್ಕೆ 300 ರಿಂದ 500 ರೂಪಾಯಿಗಳವರೆಗೆ ಏರಿಕೆ ದಾಖಲಿಸಿವೆ. ಬುಧವಾರ ದೇಶೀ ಮಾರುಕಟ್ಟೆಯಲ್ಲಿ ಅರೆಬಿಕಾ ಪಾರ್ಚ್‌ಮೆಂಟ್ ದರ 50 ಕೆಜಿಗೆ ಚೀಲವೊಂದಕ್ಕೆ 16,4೦೦ ರೂಪಾಯಿಗಳಿಗೂ ರೊಬಸ್ಟಾ ಪಾರ್ಚ್‌ಮೆಂಟ್ ಬೆಲೆ 17,500 ರೂಪಾಯಿಗಳವರೆಗೂ ಏರಿಕೆ ದಾಖಲಿಸಿತು. ರೊಬಸ್ಟಾ ಚೆರಿ ದರ ಚೀಲಕ್ಕೆ 10 ಸಾವಿರ ತಲುಪಿದ್ದು ಅರೇಬಿಕಾ ಚೆರಿ ೯ ಸಾವಿರ ತಲುಪಿದೆ. ಮೂಡಿಗೆರೆಯ ಮುದ್ರೆಮನೆ ಕಾಫಿ ಸಂಸ್ಥೆಯ ಖರೀದಿ ದರದ ಪ್ರಕಾರ ಅರೇಬಿಕಾ ಪಾರ್ಚ್‌ಮೆಂಟ್ ದರ ಚೀಲಕ್ಕೆ 18 ಸಾವಿರ ಮತ್ತು ರೊಬಸ್ಟಾ ಪಾರ್ಚ್ ಮೆಂಟ್ ದರ ಚೀಲಕ್ಕೆ 19,200 ರೂಪಾಯಿ ಇದ್ದು ಇದ್ದು ಅರೆಬಿಕಾ ಚೆರಿ ಕಿಲೋಗೆ 355 ರಂತೆ ಮತ್ತು ರೊಬಸ್ಟಾ ಚೆರಿ ದರ ಕಿಲೋಗೆ…
ಮಡಿಕೇರಿ ಜು.11 NEWS DESK : ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮ ಕೊಡಗು ವತಿಯಿಂದ 2024-25ನೇ ಸಾಲಿಗೆ ಮತೀಯ ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ಖ್, ಪಾರ್ಸಿ ಜನಾಂಗದವರಿಗೆ ಅರಿವು ಯೋಜನೆಯಡಿಯಲ್ಲಿ ನಿಗಮದಿಂದ ಸಾಲ ಸೌಲಭ್ಯಗಳನ್ನು ನೀಡಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ ಅರಿವು ವಿಧ್ಯಾಭ್ಯಾಸ ಯೋಜನೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ (ಕೆಇಎ/ಸಿಇಟಿ/ನೀಟ್ ಮುಖಾಂತರ) ಎಂಬಿಬಿಎಸ್, ಬಿಡಿಎಸ್, ಬಿ.ಇ/ಬಿಟೆಕ್, ಬ್ಯಾಚುಲರ್ ಆಫ್ ಆರ್ಕಿಟೆಕ್ಚರ್, ಆಯುಷ್, ಫಾರ್ಮಸಿ, ಕೃಷಿ ವಿಜ್ಞಾನ ಮತ್ತು ಪಶು ವೈದ್ಯಕೀಯ ವ್ಯಾಸಂಗಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸಾಲ ನೀಡಲಾಗುತ್ತದೆ. ಸಿಇಟಿ/ನೀಟ್ ಮೂಲಕ ಪ್ರವೇಶ ಪಡೆಯ ಬಯಸುವ ವಿದ್ಯಾರ್ಥಿಗಳಿಗೆ “ಅರಿವು” ಯೋಜನೆಯಡಿ ಶೈಕ್ಷಣಿಕ ಸಾಲ ಪಡೆಯಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ನಿಗಮದ ವೆಬ್ ಸೈಟ್ https://kmdconline.karnataka.gov.in/ಮೂಲಕ ಆನ್‍ಲೈನ್ ಅರ್ಜಿ ಸಲ್ಲಿಸಬಹುದು. ವಿದ್ಯಾರ್ಥಿಗಳು ಆನ್‍ಲೈನ್ ಮೂಲಕ ಅರ್ಜಿಯನ್ನು ಕಂಪ್ಯೂಟರ್‍ನಲ್ಲಿ ಭರ್ತಿ ಮಾಡಿದ ಕೂಡಲೇ ಅರ್ಜಿ ಪ್ರಿಂಟೌಟ್ ಪಡೆದು ಕ್ಯೂಆರ್ ಕೋಡ್ ಹೊಂದಿದ ಅರ್ಜಿಯೊಂದಿಗೆ…
ಮಡಿಕೇರಿ ಜು.10 NEWS DESK : ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಇಬ್ಬರು ಹಾಗೂ ಮತ್ತೋರ್ವ ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರ ಮಾಡಲು ಯತ್ನಿಸಿದ ಮೂವರು ಆರೋಪಿಗಳನ್ನು ಕೊಡಗು ಜಿಲ್ಲೆಯ ಕುಟ್ಟ ಪೊಲೀಸರು ಬಂಧಿಸಿದ್ದಾರೆ. ಘಟನೆ ನಡೆದ 12 ಗಂಟೆಯೊಳಗೆ ಪ್ರಕರಣದ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪೊನ್ನಂಪೇಟೆ ತಾಲ್ಲೂಕಿನ ಕುಟ್ಟ ನಾಥಂಗಾಲ ನಿವಾಸಿ ನವೀಂದ್ರ(24), ಅಕ್ಷಯ್(27), ಕೇರಳ ರಾಜ್ಯ ತೋಲ್ಪಟ್ಟಿ ನಡುಂದನ ಕಾಲೋನಿ ನಿವಾಸಿಗಳಾದ ರಾಹುಲ್(21), ಮನು(25) ಹಾಗೂ ಸಂದೀಪ್(27) ಬಂಧಿತ ಆರೋಪಗಳಾಗಿದ್ದಾರೆ. ::: ಪ್ರಕರಣ ಹಿನ್ನೆಲೆ ::: ಜು.9ರ ಮಧ್ಯಾಹ್ನ 3.15 ಗಂಟೆಗೆ ಕುಟ್ಟದಿಂದ ನಾಗರಹೊಳೆ ಕಡೆ ಹೋಗುವ ಮಾರ್ಗದಲ್ಲಿ ಇಬ್ಬರು ಅಪ್ರಾಪ್ತ ಬಾಲಕಿಯರು ಹಾಗೂ ಮೂರು ಮಂದಿ ಯುವಕರು ತೆರಳುತ್ತಿದ್ದರು. ಈ ವೇಳೆ ಕುಟ್ಟ ಕಡೆಯಿಂದ ಬರುತ್ತಿದ್ದ ಕಾರನ್ನು ತಡೆದು ಕಾರಿನಲ್ಲಿದ್ದ ಇಬ್ಬರು ಅಪರಿಚಿತರೊಂದಿಗೆ ತಮ್ಮನ್ನು ನಾಗರಹೊಳೆ ಕಡೆ ಬಿಡುವಂತೆ ಕೇಳಿ, ಕಾರಿನಲ್ಲಿ 5 ಮಂದಿ ಪ್ರಯಾಣಿಸಿದ್ದಾರೆ. ಸ್ವಲ್ಪ ದೂರ ತೆರಳಿದ ನಂತರ ರಸ್ತೆ ಬದಿಯ…
ಮಡಿಕೇರಿ ಜು.10 NEWS DESK : ಸಿದ್ದಾಪುರ ಸಮೀಪದ ಗುಹ್ಯ ಗ್ರಾಮ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಬೀಡು ಬಿಟ್ಟು ವ್ಯಾಪಕ ಉಪಟಳ ನೀಡುತ್ತಿದ್ದ ನಾಲ್ಕು ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವ ಕಾರ್ಯಾಚರಣೆ ನಡೆಯಿತು. ಕಾಡಾನೆಗಳು ಕೃಷಿ ಫಸಲು ನಾಶ ಮಾಡುವುದರೊಂದಿಗೆ, ಮನೆಯಂಗಳದಲ್ಲು ಕಾಣಿಸಿಕೊಂಡು ಹೂ ಕುಂಡಗಳನ್ನು ಕಿತ್ತೆಸೆದು ನಾಶ ಮಾಡುವ ಮೂಲಕ ಬೆಳೆೆಗಾರರಲ್ಲಿ ಆತಂಕ ಮೂಡಿಸಿತ್ತು. ಶಾಲಾ ಮಕ್ಕಳು, ಕಾರ್ಮಿಕರು, ಬೆಳೆಗಾರರು ಗ್ರಾಮ ವ್ಯಾಪ್ತಿಯಲ್ಲಿ ಸಂಚರಿಸಲು ಭಯಪಡುವ ಸ್ಥಿತಿ ನಿರ್ಮಾಣವಾಗಿತ್ತು. ಗ್ರಾಮಸ್ಥರ ಒತ್ತಾಯದ ಹಿನ್ನೆಲೆ ಅರಣ್ಯ ಇಲಾಖೆ ಸಿಬ್ಬಂದಿಗಳು ಮಳೆಯ ನಡುವೆ ಕಾರ್ಯಾಚರಣೆ ನಡೆಸಿ ಕಾಡಾನೆಗಳನ್ನು ಕಾಡಿಗಟ್ಟುವ ಪ್ರಯತ್ನ ಮಾಡಿದರು. ಅರಣ್ಯ ಇಲಾಖೆಯ ಆರ್‌ಆರ್‌ಟಿ ತಂಡದ ಅಚ್ಚಯ್ಯ, ವಿನೋದ್, ಪ್ರವೀಣ್, ಸಚಿನ್, ವಿನೋದ್ ಮತ್ತಿತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ನೆಲ್ಲಿಹುದಿಕೇರಿ ಬೆಟ್ಟದಕಾಡು, ನಲ್ವತ್ತೆಕರೆ, ವಾಲ್ನೂರು, ಅತ್ತಿಮಂಗಲ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲೂ ಕಾಡಾನೆಗಳ ಹಿಂಡು ಕೃಷಿ ಫಸಲನ್ನು ತಿಂದು ಧ್ವಂಸಗೊಳಿಸಿದೆ. ಅರಣ್ಯ ಇಲಾಖೆ ಎಷ್ಟೇ ಕಾರ್ಯಾಚರಣೆ ನಡೆಸಿದರೂ ಕಾಡಾನೆಗಳ ಹಿಂಡು ತೋಟಗಳಲ್ಲಿಯೇ ಆಶ್ರಯ ಪಡೆದುಕೊಳ್ಳುತ್ತಿವೆ. ಈ…
ಮಡಿಕೇರಿ ಜು.10 NEWS DESK : ಸರ್ಕಾರದ ಯೋಜನೆಯ ಯಶಸ್ವಿ ಅನುಷ್ಠಾನದಲ್ಲಿ ಸಾಮಾಜಿಕ ಪರಿಶೋಧನೆ ಗ್ರಾಮಸಭೆ ಅತ್ಯವಶ್ಯಕ ಎಂದು ಕೊಡಗು ಜಿ.ಪಂ. ಉಪ ಕಾರ್ಯದರ್ಶಿ ಧನರಾಜು ತಿಳಿಸಿದರು. ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಾಮಾಜಿಕ ಪರಿಶೋಧನೆ ಗ್ರಾಮಸಭೆಯ ನೋಡಲ್ ಅಧಿಕಾರಿಗಳ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಮೀಣ ಅಭಿವೃದ್ಧಿಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಅನುಷ್ಠಾನ ಗೊಳಿಸಿದೆ. ಇಂತಹ ಯೋಜನೆಗಳು ಮತ್ತು ಅದಕ್ಕೆ ವಿನಿಯೋಗಿಸಿದ ಹಣವು ಸೂಕ್ತವಾಗಿ ಬಳಕೆಯಾಗಿರುವ ಬಗ್ಗೆ ಪರಿಶೀಲಿಸಿ ಮಾಹಿತಿ ನೀಡುವುದು ಸಾಮಾಜಿಕ ಪರಿಶೋಧನೆಯ ಆದ್ಯ ಕರ್ತವ್ಯವಾಗಿದೆ. ಇಂತಹ ವರದಿಗಳನ್ನು ಗ್ರಾಮಸಭೆಯ ಮೂಲಕ ಪರಿಶೀಲಿಸುವುದು ತಾಲೂಕು ನೋಡಲ್ ಅಧಿಕಾರಿಗಳ ಕರ್ತವ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಸಾಮಾಜಿಕ ಗ್ರಾಮಸಭೆಯನ್ನು ಕೈಗೊಳ್ಳುವ ಬಗೆ ಮತ್ತು ವರದಿಗಳನ್ನು ಪರಿಶೀಲಿಸುವ ಕುರಿತು ತರಬೇತಿ ಹಮ್ಮಿಕೊಂಡಿದ್ದು, ಇದರ ಉಪಯೋಗವನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲ್ಪಟ್ಟ ತಾಲೂಕು ಮಟ್ಟದ ಅಧಿಕಾರಿಗಳು ಪಡೆದುಕೊಳ್ಳಬೇಕು ಎಂದರು. ಇದೇ ವೇಳೆ 15 ನೇ ಹಣಕಾಸು ಯೋಜನೆಯ ಬಗ್ಗೆ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಅಬ್ದುಲ್ಲಾ, ಮಹಾತ್ಮಗಾಂಧಿ…






