ಮಡಿಕೇರಿ ಆ.17 NEWS DESK : ಅಪ್ಪಂಗಳ ಶ್ರೀ ವಿಜಯ ವಿನಾಯಕ ಸೇವಾ ಸಮಿತಿ ವತಿಯಿಂದ 78ನೇ ಸ್ವಾತಂತ್ರ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಸಮಿತಿಯ ಅಧ್ಯಕ್ಷ ಕೆ.ಎಂ.ಮಣಿಕಂಠ, ಮುಂದಿನ ದಿನಗಳಲ್ಲಿ ಎಲ್ಲಾ ಗ್ರಾಮಸ್ಥರು ಮತ್ತು ಸದಸ್ಯರು ಎಂದಿನಂತೆ ಒಟ್ಟುಗೂಡಿ ಕಾರ್ಯಕ್ರಮವನ್ನು ನಡೆಸುವಂತೆ ಮನವಿ ಮಾಡಿಕೊಂಡರು.
ಲೇಖಕ: admin
ಮಡಿಕೇರಿ ಆ.17 NEWS DESK : ವಿರಾಜಪೇಟೆ ಕಾವೇರಿ ಪದವಿ ಪೂರ್ವ ಕಾಲೇಜಿನಲ್ಲಿ 78ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಜೈ ಭಾರತ್ ಟ್ರೈನಿಂಗ್ ಸೆಂಟರ್ ಅಂಡ್ ಆರ್ಮಿ ಅಕಾಡೆಮಿ ಮುಖ್ಯಸ್ಥ ಲವ ಪೊನ್ನಪ್ಪ ಧ್ವಜಾರೋಹಣ ನೆರವೇರಿಸಿ, ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ದಿನದ ಮಹತ್ವ, ದೇಶಕ್ಕಾಗಿ ಉತ್ತಮ ರೀತಿಯ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಹೋಗಬೇಕು. ಉತ್ತಮ ಮಾನವೀಯ ಮೌಲ್ಯಗಳನ್ನು ಮತ್ತು ದೇಶ, ಸಮಾಜ, ಕುಟುಂಬಕ್ಕೆ ಉತ್ತಮ ಪ್ರಜೆಯಾಗಬೇಕೆಂದು ಕಿವಿ ಮಾತು ಹೇಳಿದರು. ಕಾರ್ಯಕ್ರಮದಲ್ಲಿ ಪದವಿ ಕಾಲೇಜಿನ ಪ್ರಾಂಶುಪಾಲ ಬೆನಾಡಿಟ್ ಸಾಲ್ಡಾನ ಮಾತನಾಡಿ, ಸಮಾಜದ ಪ್ರತಿಯೊಂದು ರಂಗದಲ್ಲಿಯೂ ಸ್ವಯಂ ಸೇವಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು, ಇಂದಿನ ಯುವಕರು ಹೆಚ್ಚಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳುವoತೆ ಕರೆ ನೀಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಎನ್.ಎಂ.ನಾಣಯ್ಯ, ವಿದ್ಯಾರ್ಥಿಗಳು, ಎನ್.ಎಸ್.ಎಸ್., ಎನ್.ಸಿ.ಸಿ ವಿದ್ಯಾರ್ಥಿಗಳು ಹಾಗೂ ಅಧಿಕಾರಿಗಳು, ಉಪನ್ಯಾಸಕ ವೃಂದದವರು ಪಾಲ್ಗೊಂಡಿದ್ದರು. ಕೊನೆಯಲ್ಲಿ ಎಲ್ಲರಿಗೂ ಸಿಹಿ ಹಂಚಲಾಯಿತು.
ಮಡಿಕೇರಿ ಆ.17 NEWS DESK : 78ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕೊಣಂಜಗೇರಿ ಪಂಚಾಯತಿ ವ್ಯಾಪ್ತಿಯ ಪಾರಾಣೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಬೆಲ್ಟ್, ಟೈ ಮತ್ತು ಗುರುತಿನ ಚೀಟಿಗಳನ್ನು ವಿತರಿಸಲಾಯಿತು. ಕೊಣಂಜಗೇರಿ ಗ್ರಾ.ಪಂ ಅಧ್ಯಕ್ಷ ಪಾಡೆಯಂಡ ಕಟ್ಟಿಕುಶಾಲಪ್ಪ ಶಾಲಾ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಿ, ವಿದ್ಯಾರ್ಥಿಗಳಿಗೆ ಬೆಲ್ಟ್, ಟೈ ಮತ್ತು ಗುರುತಿನ ಚೀಟಿ ವಿತರಿಸಿದರು. ನಂತರ ಮಾತನಾಡಿದ ಅವರು, ಈ ದೇಶದ ಮಣ್ಣು, ಪ್ರಕೃತಿ ನಮಗೆ ಎಲ್ಲವನ್ನು ಕೊಟ್ಟಿದೆ. ಇಂತಹ ಸುಂದರ ಪರಿಸರವನ್ನು ಉಳಿಸಿ ಬೆಳೆಸುವ ಕಾರ್ಯಕ್ಕೆ ಪ್ರತಿಯೊಬ್ಬ ಪ್ರಜೆಯೂ ಯೋಧರಂತೆ ದುಡಿಯಬೇಕು. ಮಕ್ಕಳಿಗೆ ಈಗಿನಿಂದಲೇ ರಾಷ್ಟ್ರೀಯತೆಯ ಅರಿವು ಮತ್ತು ಆಸಕ್ತಿ ಮೂಡಿಸಬೇಕು ಎಂದರು. ಶಾಲಾ ಸಹ ಶಿಕ್ಷಕ ಕಿಶೋರ್ ಕುಮಾರ್ ಮಾತನಾಡಿ, ಲಕ್ಷಾಂತರ ತ್ಯಾಗಮಯಿಗಳ ಬಲಿದಾನದ ಫಲವಾಗಿ ನಾವಿಂದು ಸ್ವತಂತ್ರ ಬದುಕನ್ನು ನಡೆಸುತ್ತಿದ್ದೇವೆ. ಹಿರಿಯರ ತ್ಯಾಗ ಬಲಿದಾನ ವ್ಯರ್ಥವಾಗಬಾರದೆಂದರು. ನಾವೆಲ್ಲರೂ ಇಂದಿನಿಂದಲೇ ದೇಶ ಬೆಳೆಸುವ ಕಾರ್ಯದಲ್ಲಿ ತೊಡಗಬೇಕು ಎಂದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೇಶವ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾ.ಪಂ ಅಭಿವೃದ್ಧಿ…
ಮಡಿಕೇರಿ ಆ.17 NEWS DESK : ಗಾಳಿಬೀಡು ಮಹಿಳಾ ಸಮಾಜದ ವತಿಯಿಂದ 78ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಮಾಜಿ ಸೈನಿಕ ಕೋಚನ ಮನು ಧ್ವಜಾರೋಹಣ ನೆರವೇರಿಸಿ ದಿನದ ಮಹತ್ವವನ್ನು ವಿವರಿಸಿದರು. ಈ ಸಂದರ್ಭ ಮಹಿಳಾ ಸಮಾಜದ ಅಧ್ಯಕ್ಷ ಅಚ್ಚಪಟ್ಟಿರ ಕವಿತಾ ಹಾಗೂ ಜಿ.ಪಂ ಮಾಜಿ ಸದಸ್ಯ ಯಾಳದಾಲು ಪದ್ಮಾವತಿ, ಗ್ರಾಮಸ್ಥರಾದ ನಿಧಿ ಶೆಟ್ಟಿ, ದಿಶಾಂತ್ ಕೋಚನ , ವಿಶಾಲಾಕ್ಷಿ, ಜಾನಕಿ, ಸುಮಿ ಹಾಜರಿದ್ದರು.
ಚೆಟ್ಟಳ್ಳಿ ಆ.17 NEWS DESK : ಚೆಟ್ಟಳ್ಳಿ ಕಾಫಿಬೋರ್ಡ್ ಸಂಶೋಧನಾ ಕೇಂದ್ರದಲ್ಲಿ ಹಂಗಾಮಿ ದಿನ ಕೂಲಿ ಕಾರ್ಮಿಕರು ವಯನಾಡಿನ ಭೂಕುಸಿತ ಸಂತ್ರಸ್ತರಿಗೆ ಆರ್ಥಿಕ ನೆರವು ನೀಡಿದ್ದಾರೆ. ಸಂಶೋಧನಾ ಕೇಂದ್ರದ ಸುಮಾರು 20 ಮಂದಿ ಕೂಲಿ ಕಾರ್ಮಿಕರು ಕಾರ್ಮಿಕರಾದ ಪ್ರೀತಿ ಎಂಬವರ ನೇತೃತ್ವದಲ್ಲಿ ತಮ್ಮ ಒಂದು ದಿನದ ವೇತನವನ್ನು ಸಂಗ್ರಹಿಸಿ ಸಂಶೋಧನಾ ಕೇಂದ್ರದ ಮುಖ್ಯಸ್ಥರಾದ ಜಯನ್ ಮತ್ತು ವಿಪಿನ್ ಅವರ ಮುಖಾಂತರ ವಯನಾಡಿನ ಭೂಕುಸಿತದಲ್ಲಿ ಸಂತ್ರಸ್ತರಾದ ಕುಟುಂಬಕ್ಕೆ ಮುಖ್ಯಮಂತ್ರಿಗಳ ನಿಧಿಗೆ ಹಸ್ತಾಂತರಿಸಿದರು.
ಸುಂಟಿಕೊಪ್ಪ ಆ.17 NEWS DESK : ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನ ಮಾಡಿದವರನ್ನು ವರ್ಷಕ್ಕೆ ಒಂದು ಬಾರಿ ರಚನಾತ್ಮಕ ಮತ್ತು ಸಮಾಜವನ್ನು ಕಟ್ಟುವ ರೀತಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ಅತ್ಯಂತ ಶ್ಲಾಘನೀಯ ಕೆಲಸ ಎಂದು ಮಡಿಕೇರಿ ಕ್ಷೇತ್ರ ಶಾಸಕರಾದ ಡಾ.ಮಂತರ್ ಗೌಡ ಹೇಳಿದರು. ಗದ್ದೆಹಳ್ಳದ ಎಸ್‍ಎಸ್ ಇಂಟರ್ ನ್ಯಾಷಲ್ ಸಭಾಂಗಣದಲ್ಲಿ ಆಯೋಜಿಸಲಾದ ಎಸ್‍ವೈಎಸ್ ಕೊಡಗು ಜಿಲ್ಲಾ ಶಾಖಾ ವತಿಯಿಂದ 78ನೇ ಸ್ವಾತಂತ್ರ್ಯೋತ್ಸವ ಪ್ರಯುಕ್ತ ರಾಷ್ಟ್ರ ರಕ್ಷಾ ಸಂಗಮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ, ಮಾತನಾಡಿದ ಅವರು, ದೇಶದ ಸಂವಿಧಾನದ ಅಡಿಯಲ್ಲಿ ನಾವೆಲ್ಲಾರೂ ಒಂದೇ ಪ್ರತಿಯಬ್ಬನ ಸಮಸ್ಯೆಯು ನನ್ನ ಸಮಸ್ಯೆ ಎಂದು ತಿಳಿದು ನಾವು ಪರಸ್ಪರ ಪ್ರೀತಿ ಸೌರ್ಹದತೆಯಿಂದ ಬಾಳಬೇಕು. ಸಮಸ್ಯೆಗಳ ರಾಜಕಾರಣಿಗಳ ಜವಬ್ದಾರಿಯಲ್ಲಾ ಸಮಾಜದ ಪ್ರತಿಯೊಬ್ಬರು ಸಮಸ್ಯೆಗಳ ಪರಿಹಾರಕ್ಕೆ ಕೈಜೋಡಿಸಬೇಕೆಂದು ಕರೆ ನೀಡಿದರು. ಸಮಾಜದಲ್ಲಿ ಉಳ್ಳವರು ಇಲ್ಲದಿರುವವರ ಬಗ್ಗೆ ಸಹಾಯ ಮಾಡುವ ಮನೋಭಾವವನ್ನು ಹೆಚ್ಚು ಹೆಚ್ಚು ಹೊಂದಬೇಕೆಂದು ಕರೆ ನೀಡಿದ ಅವರು, ಪ್ರತಿಯೊಬ್ಬರು ಉನ್ನತ ಶಿಕ್ಷಣವನ್ನು ಪಡೆದು ಉತ್ತಮ ನಾಗರೀಕರಾಗಿ ದೇಶವನ್ನು ಕಟ್ಟಬೇಕೆಂದು…
ಸುಂಟಿಕೊಪ್ಪ ಆ.17 NEWS DESK : ಸ್ವಾತಂತ್ರ್ಯ ಎಂದರೆ ದೇಶ ಕಟ್ಟುವ ಕಾರ್ಯದ ನಿಮಿತ್ತ ಕೊಟ್ಟಿರುವ ಜವಾಬ್ದಾರಿ ಎಂದು ಸುಂಟಿಕೊಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಶ್ರೀಲತಾ ಅಭಿಪ್ರಾಯ ವ್ಯಕ್ತಪಡಿಸಿದರು. ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನಡೆದ 78ನೇ ಸ್ವಾತಂತ್ರ್ಯೋತ್ಸವ ಧ್ವಜಾರೋಹಣವನ್ನು ನೆರವೇರಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ದೇಶದ ಭವಿಷ್ಯವಾಗಿದ್ದು, ದೇಶಭಕ್ತಿಯೇ ನಮ್ಮಗಳ ಶಕ್ತಿಯಾಗಬೇಕೆಂದರು. ಇತಿಹಾಸ ಉಪನ್ಯಾಸಕಿ ಕೆ.ಸಿ.ಕವಿತಾ ಮಾತನಾಡಿ ನಮ್ಮ ದೇಶದ ಭದ್ರತೆಗೆ ಯುವ ಜನಾಂಗ ಕೈಜೋಡಿಸಬೇಕು. ಈ ಹಿಂದಿನ ಹಿರಿಯ ಹೋರಾಟಗಾರರು ಹಾಕಿಕೊಟ್ಟ ಈ ಭದ್ರ ಸ್ವಾತಂತ್ರ್ಯವನ್ನು ಉಳಿಸಿ ಬೆಳೆಸಬೇಕಾದರೆ ಯುವ ಜನಾಂಗ ತಮ್ಮದೇ ಆದ ಕೊಡುಗೆಯನ್ನು ಕೊಡಬೇಕು. ಆ ನಿಟ್ಟಿನಲ್ಲಿ ಎಲ್ಲರೂ ಶಾಂತಿ, ಸೌಹಾರ್ದ, ಸಹೋದರತೆ ಮೂಲಕ ಬದುಕಬೇಕು ಎಂದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಈಶ, ಕವಿತಾ ಭಕ್ತಾ, ಸುನಿತ, ಸುಚಿತ್ರ, ಕನಕ ಇತರರು ಇದ್ದರು. ವಿದ್ಯಾರ್ಥಿಗಳಿಂದ ನಡೆದ ಸಾಂಸ್ಕøತಿಕ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು.
ಸುಂಟಿಕೊಪ್ಪ ಆ.17 NEWS DESK : ಸುಂಟಿಕೊಪ್ಪ ಪೊಲೀಸ್ ಠಾಣೆಯ ನೂತನ ಠಾಣಾಧಿಕಾರಿಯಾಗಿ ಚಂದ್ರಶೇಖರ್ ಮತ್ತು ಅಪರಾಧ ವಿಭಾಗದ ಸಬ್‍ಇನ್ಸ್‍ಪೇಕ್ಟರ್ ಆಗಿ ಭಾರತಿ ಅಧಿಕಾರ ವಹಿಸಿಕೊಂಡರು. ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಎಂ.ಸಿ.ಶ್ರೀಧರ್ ಅವರು ಜಿಲ್ಲಾ ಪೊಲೀಸ್ ಕೇಂದ್ರ ಸ್ಥಾನಕ್ಕೆ ವರ್ಗಾವಣೆಗೊಂಡಿದ್ದು, ತೆರವಾದ ಸ್ಥಾನಕ್ಕೆ ಕುಶಾಲನಗರ ಪಟ್ಟಣ ಠಾಣಾಧಿಕಾರಿಯಾಗಿ ಸೇವೆಸಲ್ಲಿಸುತ್ತಿದ್ದ ಚಂದ್ರಶೇಖರ್ ಅವರಿಗೆ ಠಾಣಾಧಿಕಾರಿ ಎಂ.ಸಿ.ಶ್ರೀಧರ್ ಅಧಿಕಾರ ವಹಿಸಿಕೊಂಡರು. ಅಪರಾಧ ವಿಭಾಗದ ಸಬ್‍ಇನ್ಸ್‍ಪೇಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದ ಸ್ವಾಮಿ ಅವರು ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದು, ತೆರವಾದ ಸ್ಥಾನಕ್ಕೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಭಾರತಿ ಅಧಿಕಾರ ವಹಿಸಿಕೊಂಡರು.
ಸುಂಟಿಕೊಪ್ಪ,ಆ.17 NEWS DESK : ಸುಂಟಿಕೊಪ್ಪ ಸೇರಿದಂತೆ ಹೋಬಳಿ ವ್ಯಾಪ್ತಿಯಲ್ಲಿ ಶ್ರಾವಣ ಮಾಸದ ಹುಣ್ಣಿಮೆಯ ಹಿಂದಿನ ಶುಕ್ರವಾರ ವರಮಹಾಲಕ್ಷ್ಮಿ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಹಲವು ಮನೆಗಳಲ್ಲಿ ಮುತ್ತೈದೆಯರು ಮುಂಜಾನೆ ದೇವರಿಗೆ ನೈವೇದ್ಯವನ್ನು ತಯಾರಿಸಿ ಕಳಸ ವಿಶೇಷ ಪೂಜೆ ಸಲ್ಲಿಸಿದರು. ನೆರೆಹೊರೆಯವರಿಗೆ ಅರಶಿನ, ಕುಂಕುಮ, ಹೂ ನೀಡಿ ಪ್ರಸಾದವನ್ನು ನೀಡುವುದರ ಜೊತೆಯಲ್ಲಿ ಕೆಲವು ಮನೆಗಳಲ್ಲಿ ಅನ್ನದಾನದ ವ್ಯವಸ್ಥೆಯನ್ನು ಕೂಡ ಕಲ್ಪಿಸಲಾಗಿತ್ತು.
ಮಡಿಕೇರಿ ಆ.17 NEWS DESK : ನಗರದ ಶ್ರೀಕೋಟೆ ಮಾರಿಯಮ್ಮ ದೇವಾಲಯದಲ್ಲಿ ಕಳ್ಳತನ ನಡೆದಿದ್ದು, ಚೋರರು ಚಿನ್ನಾಭರಣ ಮತ್ತು ಕಾಣಿಕೆ ಹಣವನ್ನು ದೋಚಿದ್ದಾರೆ. ದೇವಾಲಯದ ಬಾಗಿಲಿನ ಬೀಗ ಮುರಿದು ಒಳ ಪ್ರವೇಶಿಸಿರುವ ಕಳ್ಳರು ಮಾರಿಯಮ್ಮ ದೇವಿಯ ಮೂರ್ತಿ ಮೇಲಿನ ಲಕ್ಷಾಂತರ ರೂ.ಮೌಲ್ಯದ ಆಭರಣ ಮತ್ತು ಕಾಣಿಕೆ ಹುಂಡಿಯಲ್ಲಿದ್ದ ಹಣವನ್ನು ಕದ್ದೊಯ್ದಿದ್ದಾರೆ. ಕೆಲವು ಆಭರಣಗಳನ್ನು ಅಲ್ಲೇ ಬಿಟ್ಟು ಹೋಗಿದ್ದಾರೆ. ದೇವಾಲಯದಲ್ಲಿರುವ ಸಿಸಿ ಕ್ಯಾಮರಾದ ದಿಕ್ಕನ್ನು ಬದಲಿಸಿ ಈ ಕೃತ್ಯ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಸ್ಥಳಕ್ಕೆ ಮಡಿಕೇರಿ ನಗರ ಠಾಣಾ ಪೋಲಿಸರು ಹಾಗೂ ಶ್ವಾನದಳ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಚೋರರ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.






