ಲೇಖಕ: admin

ಮಡಿಕೇರಿ ಆ.16 NEWS DESK : ಶನಿವಾರಸಂತೆ ಪೊಲೀಸ್ ಠಾಣಾ ವೃತ್ತ ನಿರೀಕ್ಷಕ ಪ್ರೀತಮ್ ಡಿ.ಶ್ರೇಯಕರ್ ಅವರು ಕರ್ನಾಟಕ ಮುಖ್ಯಮಂತ್ರಿ ಪದಕಕ್ಕೆ ಆಯ್ಕೆಯಾಗಿದ್ದಾರೆ. ವೃತ್ತನಿರೀಕ್ಷಕ ಪ್ರೀತಮ್ ಡಿ.ಶ್ರೇಯಕರ್ ಅವರು ಸಿಐಡಿ ವಿಭಾಗದಲ್ಲಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಮುಖ್ಯಮಂತ್ರಿ ಪದಕಕ್ಕೆ ಆಯ್ಕೆ ಮಾಡಲಾಗಿದ್ದು, ಬೆಂಗಳೂರಿನ ರಾಜಭವನದಲ್ಲಿ ಪದಕ ಪ್ರಧಾನ ಮಾಡಲಾಗುವುದು.

Read More

ನಾಪೋಕ್ಲು ಆ.16 NEWS DESK : ಬೆಟ್ಟಗೇರಿ ಗ್ರಾ.ಪಂ ವ್ಯಾಪ್ತಿಯ ಬಕ್ಕದಲ್ಲಿ ವಿವಿಧ ಸ್ವಸಹಾಯ ಸಂಘ, ಸ್ತ್ರೀಶಕ್ತಿ ಸಂಘ ಹಾಗೂ ಸಾರ್ವಜನಿಕರ ಸಹಯೋಗದಲ್ಲಿ 78ನೇ ಸ್ವಾತಂತ್ರ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಊರಿನ ಹಿರಿಯರಾದ ನೆಯ್ಯಣಿರ ಕಮಲ ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಪಂಚಾಯತ್ ಉಪಾಧ್ಯಕ್ಷ ಬೈತಡ್ಕ ಡೆಲ್ವಿ ದೇವಯ್ಯ, ಮಾಜಿ ಯೋಧ ಹೊಸೊಕ್ಲು ಮೊಣ್ಣಪ್ಪ, ಅಂಗನವಾಡಿ ಕಾರ್ಯಕರ್ತೆ ಶೈಲಜಾ, ಊರಿನ ಪ್ರಮುಖರು, ಅಂಗನವಾಡಿ ಮಕ್ಕಳು ಭಾಗವಹಿಸಿ ಪರಸ್ಪರ ಸಿಹಿ ಹಂಚಿ ಸ್ವಾತಂತ್ರ್ಯ ಹಬ್ಬವನ್ನು ಸಂಭ್ರಮಿಸಿದರು. ವರದಿ : ದುಗ್ಗಳ ಸದಾನಂದ. 

Read More

ನಾಪೋಕ್ಲು ಆ.16 NEWS DESK : ವಿವಿಧ ಶಾಲಾ ಕಾಲೇಜುಗಳಲ್ಲಿ, ಸಂಘ ಸಂಸ್ಥೆಗಳಲ್ಲಿ ,ಅಂಗನವಾಡಿಗಳಲ್ಲಿ ಸ್ವಾತಂತ್ರ್ಯ ದಿನೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಶ್ರೀ ರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಸ್ಥೆಯ ಅಧ್ಯಕ್ಷ ಕಲಿಯಂಡ ಹ್ಯಾರಿ ಮಂಡಣ್ಣ ಅಧ್ಯಕ್ಷತೆ ವಹಿಸಿ ಧ್ವಜಾರೋಹಣ ನೆರವೇರಿಸಿ ಕೊಟ್ಟರು. ಸಂಸ್ಥೆಯ ನಿರ್ದೇಶಕರಾದ ಕಲ್ಯಾಟಂಡ ಪೂಣಚ್ಚ, ಮಕ್ಕಿ ಸುಬ್ರಹ್ಮಣ್ಯ, ಪ್ರಾಂಶುಪಾಲರಾದ ಬಿ.ಎಂ. ಶಾರದ. ದಿನದ ಮಹತ್ವದ ಬಗ್ಗೆ ಮಾತನಾಡಿ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ಗುಣಗಾನ ಮಾಡಿ ವಿದ್ಯಾರ್ಥಿಗಳಿಗೆ ಕಿವಿ ಮಾತನ್ನ ಹೇಳಿದರು. ಈ ಸಂದರ್ಭ ಉಪಾಧ್ಯಕ್ಷ ನೆರವಂಡ ಸುನಿಲ್ ದೇವಯ್ಯ ,ನಿರ್ದೇಶಕರಾದ ಬೊಪ್ಪಂಡ ಕುಶಾಲಪ್ಪ,ಅಪ್ಪಾರಂಡ ಅಪ್ಪಯ್ಯ, ಅಪ್ಪಚೆಟ್ಟೊಳಂಡ ನವೀನ್ ಅಪ್ಪಯ್ಯ,ಚೌರೀರ ಮಂದಣ್ಣ ಶಾಲಾ ಶಿಕ್ಷಕ ಮತ್ತು ಸಿಬ್ಬಂದಿಗಳು, ಪೋಷಕರು ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳಿಗೆ ದೇಶಭಕ್ತಿ ಗೀತೆ ಗಾಯನ ಸ್ಪರ್ಧೆ, ಭಾಷಣ ಸ್ಪರ್ಧೆ, ಛದ್ಮವೇಷ ಸ್ಪರ್ಧೆ ನಡೆಯಿತು. ವರದಿ : ದುಗ್ಗಳ ಸದಾನಂದ. 

Read More

ಮಡಿಕೇರಿ ಆ.16 NEWS DESK : ಸ್ವಾತಂತ್ರ್ಯ ದಿನಾಚರಣೆ  ಕಂಡಕರೆ ಸರ್ಕಾರಿ ಹಿರಿಯ ಪ್ರಾಥಮ ಶಾಲೆಯ ವಿದ್ಯಾರ್ಥಿಗಳಿಗೆ ಕಂಡಕರೆ ಗಾಂಧಿ ಯುವಕ ಸಂಘದಿಂದ ಉಚಿತ ಸಮವಸ್ತ್ರ (ಟ್ರ್ಯಾಕ್ ಪ್ಯಾಂಟ್ ಮತ್ತು ಟೀ ಶರ್ಟ್) ದಿನಾಚರಣೆ ಮಾಡಲಾಯಿತು.  ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ರತೀಶ್ ಸಮವಸ್ತ್ರ ವಿತರಣೆ ಮಾಡಿ ಮಾತನಾಡಿ,  ಕಂಡಕರೆಯ ಗಾಂಧಿ ಯುವಕ ಸಂಘವು ಶಾಲೆಗೆ ನಿರಂತರವಾಗಿ ಸಹಕಾರ, ಬೆಂಬಲ ನೀಡುತ್ತಾ ಬಂದಿದೆ. ಇತ್ತೀಚೆಗಷ್ಟೇ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಪುಸ್ತಕವನ್ನು ವಿತರಿಸಿದ್ದರು. ಅದಲ್ಲದೇ ಕಳೆದ ವರ್ಷ ಶಾಲೆಗೆ 25 ಕುರ್ಚಿಗಳನ್ನು ನೀಡಿದ್ದಾರೆ. ಟ್ರ್ಯಾಕ್ ಪ್ಯಾಂಟ್ ಮತ್ತು ಟೀ ಶರ್ಟ್ ಬಗ್ಗೆ ಗಾಂಧಿ ಯುವಕ ಸಂಘದ ಅಧ್ಯಕ್ಷ ಇಸ್ಮಾಯಿಲ್ ಕಂಡಕರೆ ಅವರೊಂದಿಗೆ ಕೇಳಿಕೊಂಡಾಗ ತಕ್ಷಣ ಸ್ಪಂದಿಸಿ, ಇದೀಗ 50 ಸಾವಿರ ಬೆಲೆ ಬಾಳುವ ಉತ್ತಮ ಗುಣಮಟ್ಟದ ಟೀ ಶರ್ಟ್ ನೀಡಿದ್ದಾರೆ ಎಂದರು. ಸರ್ಕಾರಿ ಶಾಲೆಯ ಉಳಿವಿಗೆ ಗಾಂಧಿ ಯುವಕ ಸಂಘವು ಪ್ರಯತ್ನಿಸುತ್ತಿರುವುದು ಶ್ಲಾಘನೀಯ ಕೆಲಸವಾಗಿದೆ ಎಂದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ…

Read More

ವಿರಾಜಪೇಟೆ ಆ.16 NEWS DESK : ಶ್ರೀ ಅರಮೇರಿಯ ಎಸ್ಎಂಎಸ್ ವಿದ್ಯಾಪೀಠದ ವಿದ್ಯಾರ್ಥಿಗಳ ಕೆಸರುಗದ್ದೆ ಕ್ರೀಡಾಕೂಟ ಸಂಭ್ರಮದಿಂದ ನಡೆಯಿತು. ಕಳಂಚೇರಿ ಮಠದ ಗದ್ದೆಯಲ್ಲಿ ವಾಡಿಕೆಯಂತೆ ಈ ಬಾರಿಯೂ ಕೂಡ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಮಕ್ಕಳು ಅತ್ಯುತ್ಸಾಹದಿಂದ ಪಾಲ್ಗೊಂಡಿದ್ದರು. ಪ್ರಗತಿಪರ ರೈತ, ಉದ್ಯಮಿ ಉದಿಯಂಡ ಚಂಗಪ್ಪಕ್ರೀಡೋತ್ಸವಕ್ಕೆ ಚಾಲನೆ ನೀಡಿದರು. ಕೃ ಷಿ ಭೂಮಿಯೊಡನೆ ತಮಗಿರುವ ಸಂಬಂಧ, ಕೃಷಿಯಿಂದ ರೈತ ಎದುರಿಸುವ ಸವಾಲುಗಳನ್ನು ವಿವರಿಸಿದ ಅವರು, ಅನ್ನದ ಒಂದೊಂದು ಅಗುಳು ಕೂಡ ಎಷ್ಟೊಂದು ಮುಖ್ಯವಾಗಿದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ವಿದ್ಯಾರ್ಥಿಗಳಿಗೆ ಕ್ರೀಡೆ ಯಂತಹ ಸಹಪಠ್ಯದಲ್ಲಿ ತೊಡಗಿಸಿಕೊಳ್ಳಲು ಅವಕಾಶ ಕಲ್ಪಿಸಿರುವುದನ್ನು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಕಳಂಚೇರಿ ಮಠದ ಪೀಠಾಧಿಪತಿ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿಗಳು ಹೆಸರುಗದ್ದೆ ಕ್ರೀಡಾಕೂಟ ಕೇವಲ ಮನಸ್ಸಿನ ಮನರಂಜನೆಗಾಗಿ ಮಾತ್ರವಲ್ಲ, ಮಣ್ಣಿನಿಂದ ಹೇಗೆ ನಮ್ಮ ಬದುಕನ್ನು ಕಟ್ಟಿಕೊಳ್ಳಬೇಕೆಂಬುದನ್ನು ಇಂದಿನ ಮಕ್ಕಳು ಆಲೋಚನೆ ಮಾಡಬೇಕಿದೆ ಎಂದರು. ವಿದ್ಯಾರ್ಥಿಗಳು ಮಣ್ಣಿನ ಮೇಲೆ ಪ್ರೀತಿಯನ್ನು ಬೆಳೆಸಿಕೊಂಡರೆ ಕೆಸರುಗದ್ದೆಯಂತಹ ಕ್ರೀಡೋತ್ಸವಕ್ಕೆ ಮೌಲ್ಯ ಬರುತ್ತದೆ. ಕೆಸರುಗದ್ದೆಯ ಮಣ್ಣಿನ ಸುಗಂಧದ ಸೊಗಡು ಬೇರೆ ಯಾವುದರಿಂದಲೂ…

Read More

ಮಡಿಕೇರಿ ಆ.16 NEWS DESK : ಕೆದಮುಳ್ಳೂರು ಗ್ರಾ.ಪಂ ವ್ಯಾಪ್ತಿಯಲ್ಲಿರುವ ಕಲ್ಲುಮೊಟ್ಟೆ ಕ್ರಿಶ್ಚಿಯನ್‌ ಕಾಲೋನಿ ಅಂಗನವಾಡಿಯಲ್ಲಿ 78 ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಕೆದಮುಳ್ಳೂರು ಗ್ರಾ.ಪಂ ಸದಸ್ಯೆ ವೀಣಾ ವಿಮಲ ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆ ಕೆ.ಎಂ.ಉಷಾ ಸುರೇಶ್, ಸಹಾಯಕಿ ರೊಶಿನಿ ವಿಲ್ಮಾ, ಆಶಾ ಕಾರ್ಯಕರ್ತೆ ಸವಿತಾ ಸುಬ್ರಮಣಿ, ಮಕ್ಕಳು ಹಾಗೂ ಪೋಷಕರು ಹಾಜರಿದ್ದರು.

Read More

ನೆಲ್ಲೂರು (ಆಂಧ್ರಪ್ರದೇಶ) ಆ.16 NEWS DESK : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ((ISRO) ಶುಕ್ರವಾರ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಭೂಮಿಯ ವೀಕ್ಷಣಾ ಉಪಗ್ರಹ-8 (EOS-8) ನ್ನು ಉಡಾವಣೆ ಮಾಡಿದೆ. ಈ ಬಗ್ಗೆ ಎಕ್ಸ್ ಪೋಸ್ಟ್ ನಲ್ಲಿ “ಎಸ್ ಎಸ್ ಎಲ್ ವಿ ಯ ಮೂರನೇ ಅಭಿವೃದ್ಧಿ ವಾಹಕ ಹಾರಾಟ ಯಶಸ್ವಿಯಾಗಿದೆ. SSLV-D3 ನಿಖರವಾಗಿ EOS-08 ನ್ನು ಕಕ್ಷೆಗೆ ಸೇರಿಸಿತು. ಇದು ISRO/DOS  ನ SSLV ಅಭಿವೃದ್ಧಿ ಯೋಜನೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ತಂತ್ರಜ್ಞಾನ ವರ್ಗಾವಣೆಯೊಂದಿಗೆ, ಭಾರತೀಯ ಉದ್ಯಮ ಮತ್ತು ಎನ್ ಎಸ್ ಐಎಲ್ ಇಂಡಿಯಾ ಈಗ ಎಸ್ ಎಸ್ ಎಲ್ ವಿಯನ್ನು ವಾಣಿಜ್ಯ ಕಾರ್ಯಾಚರಣೆಗಳಿಗಾಗಿ ಉತ್ಪಾದಿಸುತ್ತದೆ ಎಂದಿದ್ದಾರೆ.

Read More

ಮಡಿಕೇರಿ ಆ.16 NEWS DESK : ಜಿಲ್ಲೆಯ ಡಿಸಿಆರ್‍ಬಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಹೆಡ್‌ಕಾನ್ಸ್‌ಟೇಬಲ್ ಸಿ.ಕೆ.ರಾಜೇಶ್ ಅವರಿಗೆ ಮುಖ್ಯಮಂತ್ರಿ ಪದಕ ಲಭಿಸಿದೆ. ಭಾಗಮಂಡಲ ಸಮೀಪದ ತಣ್ಣಿಮಾನಿ ಗ್ರಾಮದ ಕರಿಯಚ್ಚನ್ ಮತ್ತು ತೆರೆಸಾ ದಂಪತಿಯ ಪುತ್ರರಾದ ಇವರು, 2002ರಲ್ಲಿ ಪೊಲೀಸ್ ಇಲಾಖೆಗೆ ಸೇರಿದ್ದು, ಸಿಡಿಆರ್ ಘಟಕದಲ್ಲಿ ತೋರಿರುವ ತಾಂತ್ರಿಕ ಪರಿಣತಿಯನ್ನು ಆಧರಿಸಿ ಇವರಿಗೆ ಪದಕ ಘೋಷಿಸಲಾಗಿದೆ

Read More

ಮಡಿಕೇರಿ ಆ.16 NEWS DESK : ಕೊಡಗು ಜಿಲ್ಲಾ ಕಾರ್ಯಾಲಯ ಮಧುಕೃಪಾದಲ್ಲಿ 78 ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಜಿಲ್ಲಾ ಕಾರ್ಯವಾಹ  ರವಿ ಕುಶಾಲಪ್ಪ “ಶತಾಬ್ದಿಯ ಹೊಸ್ತಿಲಲ್ಲಿ ಆರ್.ಎಸ್.ಎಸ್. ಇದ್ದು, “ಸಾಮಾಜಿಕ ಪರಿವರ್ತನೆಗಾಗಿ ಪಂಚಕಾರ್ಯಗಳು” ಎಂಬ ಅಭಿಯಾನವನ್ನು ಕೈಗೊಂಡಿದೆ ಎಂದರು. ಪರಿಸರ ಸಂರಕ್ಷಣೆ, ಕುಟುಂಬ ಪ್ರಬೋಧನ್, ಸಾಮಾಜಿಕ ಸಾಮರಸ್ಯ, ಸ್ವದೇಶಿ ಜೀವನಶೈಲಿ, ನಾಗರಿಕ ಶಿಷ್ಟಾಚಾರದ ಮೂಲಕ ಸದೃಢ ಸಮಾಜವನ್ನು ನಿರ್ಮಿಸುವ ಕಾರ್ಯ ನಿರಂತರವಾಗಿ ಆಗುತ್ತಿದೆ. ಇಡೀ ಸಮಾಜವನ್ನು ಒಟ್ಟಿಗೆ ಕೊಂಡೊಯ್ಯುವ ಮೂಲಕ ಸದೃಢ ಸಮಾಜವನ್ನು ನಿರ್ಮಿಸುವ ಸಂಘದ ಧ್ಯೇಯದಂತೆ ಪ್ರಯತ್ನಗಳಾಗುತ್ತಿವೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ವಿಭಾಗ ಪ್ರಚಾರಕರು, ಜಿಲ್ಲಾ ಪ್ರಚಾರಕರು, ಕಾರ್ಯಕರ್ತರು ಹಾಗೂ ಸ್ವಯಂ ಸೇವಕರು ಹಾಜರಿದ್ದರು.

Read More

ಸುಂಟಿಕೊಪ್ಪ ಆ.16 NEWS DESK : ಗರಗಂದೂರು, ಮೊರಾರ್ಜಿ ದೇಸಾಯಿ ವಸತಿ ವಿಜ್ಞಾನ ಪಿಯು ಕಾಲೇಜಿನಲ್ಲಿ 78ನೇ ಸ್ವಾತಂತ್ರ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಸುಂಟಿಕೊಪ್ಪ ಜೆಸಿಐ ಸಂಸ್ಥೆಯ ಅಧ್ಯಕ್ಷ ಸಂಪತ್ ಕುಮಾರ್ ಧ್ವಜಾರೋಹಣ ನೆರವೇರಿಸಿದರು. ಸಮಾರಂಭದಲ್ಲಿ ಕಾಲೇಜಿನ ಪ್ರಾಂಶುಪಾಲ ಮಹೇಂದ್ರ, ಉಪನ್ಯಾಸಕ ಪಾಪಣ್ಣ, ಜೆಸಿಐ ಸಂಸ್ಥೆಯ ಡೆನಿಸ್ ಡಿಸೋಜಾ, ಫೆಲ್ಸಿ ಡಿಸೋಜಾ, ಹರೀಶ್, ವಸಂತ ಕುಮಾರ್ ಇತರರು ಇದ್ದರು.

Read More